Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತೀರಿ ಹೋದವರು ಕನಸಿನಲ್ಲಿ ಬಂದರೆ ಏನರ್ಥ? ಅವರು ಅತ್ತಂತೆ ಕಂಡರೆ ಅಥವಾ ಅವರು ಇನ್ನೂ ಬದುಕಿರುವಂತೆ ಕನಸು ಬಿದ್ದರೆ ಏನರ್ಥ?
ಹಲವು ಕನಸುಗಳು ನಮಗೆ ಬೀಳುತ್ತದೆ, ಅದರಲ್ಲಿ ಕೆಲವೊಂದು ಸುಂದರ ಕನಸುಗಳು, ಇನ್ನು ಕೆಲ ಕನಸುಗಳು ಭಯಾನಕವಾಗಿರುತ್ತದೆ, ಇನ್ನು ಕೆಲವೊಮ್ಮೆ ಸತ್ತು ಹೋದವರು ನಮ್ಮ ಕನಸಿನಲ್ಲಿ ಬರುತ್ತಾರೆ, ಅವರ ಜೊತೆ ಮಾತನಾಡುವಂತೆ, ಅವರೇನೋ ನಮಗೆ ಹೇಳುವಂತೆ, ಅವರು ಇನ್ನೂ ಜೀವಂತವಾಗಿರುವಂತೆ ಕನಸು ಬೀಳುವುದು, ಕನಸಿನಿಂದ ಎಚ್ಚರವಾದಾಗ ಸತ್ತು ಹೋದವರು ನಮ್ಮ ಕನಸಿನಲ್ಲಿ ಬಂದಿರುವುದೇಕೆ? ಅವರು ಏನಾದರು ಹೇಳಿದರೆ ಏಕೆ ಹಾಗೆ ಹೇಳಿದರು ಎಂದೆಲ್ಲಾ ಯೋಚಿಸುತ್ತೇವೆ. ಸ್ವಪ್ನ ಶಾಸ್ತ್ರವು ಸತ್ತವರು ನಮ್ಮ ಬದುಕಿನಲ್ಲಿ ಬರುವುದೇಕೆ ಎಂಬುವುದರ ಬಗ್ಗೆ ಹೇಳುತ್ತದೆ ಅದರ ಬಗ್ಗೆ ನೋಡೋಣ:

ತೀರಿ ಹೋದವರು ನಿಮ್ಮ ಜೊತೆ ಮಾತನಾಡುತ್ತಿರುವಂತೆ ಕನಸು ಕಂಡರೆ
ನಿಮ್ಮ ಕನಸಿನಲ್ಲಿ ತೀರಿ ಹೋದವರು ಬಂದು ಅವರು ನಿಮ್ಮ ಜೊತೆ ಮಾತನಾಡುತ್ತಿರುವಂತೆ ಕನಸು ಕಂಡರೆ ಏನರ್ಥ ಎಂದು ಯೋಚಿಸಿರಬಹುದು ಅಲ್ಲವೇ? ತುಂಬಾ ಜನರಿಗೆ ಈ ರೀತಿಯ ಕನಸು ಬಿದ್ದಿರುತ್ತದೆ, ಅವರ ಜೊತೆ ಹರಟೆ ಹೊಡೆದಂತೆ, ಅವರು ಇನ್ನೂ ಜೀವಂತವಾಗಿ ಇರುವಂತೆ ಕನಸು ಬಿದ್ದಿರುತ್ತದೆ., ಈ ಬಗೆಯ ಕನಸು ಅವರನ್ನು ನಿಮ್ಮ ಸುಪ್ತ ಮನಸ್ಸು ನೆನೆಸುತ್ತಿರಬಹುದು, ಅವರನ್ನುನೀವೂ ತುಂಬಾ ಮಿಸ್ ಮಾಡುತ್ತಿರಬಹುದು, ಆವಾಗ ಈ ರೀತಿಯ ಕನಸು ಬೀಳುತ್ತದೆ.ಅವರು ತೀರಿ ಹೋಗಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ಒಪ್ಪಿಕೊಳ್ಳದೇ ಇದ್ದಾಗ ಅವರ ಕನಸು ಬೀಳುವ ಸಾಧ್ಯತೆ ಇದೆ.
ತೀರಿ ಹೋದವರು ಅಳುತ್ತಿರುವವರಂತೆ ಕನಸು ಕಂಡರೆ
ಕೆಲವೊಮ್ಮೆ ತೀರಿಹೋದವರು ಕನಸಿನಲ್ಲಿ ಬಂದು ಅಳುತ್ತಿರುವವರಂತೆ ಕನಸು ಬೀಳುತ್ತದೆ. ಈ ರೀತಿ ಕನಸು ಬಿದ್ದರೆ ಅವರ ಬಗ್ಗೆ ನಮ್ಮ ಮನಸ್ಸಿನಲ್ಲಿ ಯಾವುದೋ ಅಪರಾಧಿ ಭಾವನೆ ಅಥವಾ ಪಶ್ಚಾತಾಪವಿರುತ್ತದೆ, ನನ್ನಿಂದ ಈ ರೀತಿ ಆಯ್ತು ಅಥವಾ ನಾನು ಅವರ ಬೆಂಬಲವಾಗಿದ್ದರೆ ಅವರಿಗೆ ಈ ರೀತಿಯಾಗುತ್ತಿರಲಿಲ್ಲ ಅಥವಾ ಅವರು ಪಟ್ಟು ಕಷ್ಟಗಳ ಬಗ್ಗೆ ಸ್ಪಷ್ಟ ಅರಿವು ನಿಮಗಿದ್ದು ಅವರು ತೀರಿ ಹೋದ ಮೇಲೆ ಕೂಡ ಅವರು ಬಯಸಿದ್ದು ಇನ್ನೂ ನೆರವೇರಿಲ್ಲ ಎಂಬ ಭಾವನೆ ನಿಮ್ಮಲ್ಲಿದ್ದರೆ ಅವರು ಅಳುತ್ತಿರುವವಂತೆ ಕನಸು ಬೀಳುವುದು.
ತೀರಿ ಹೋದವರು ಇನ್ನೂ ಬದುಕಿರುವಂತೆ ಕನಸು ಬಿದ್ದರೆ
ಅವರು ನನ್ನ ಕನಸಿನಲ್ಲಿ ಬಂದು ನನಗೇನೂ ಆಗಿಲ್ಲ, ನಾನೂ ಇನ್ನೂ ಬದುಕಿದ್ದೇನೆ ಎಂದು ತುಂಬಾ ಜನ ಹೇಳುವುದನ್ನು ಕೇಳಿದ್ದೇವೆ, ಈ ರೀತಿಯ ಕನಸು ಬಿದ್ದರೆ ಅವರ ವ್ಯಕ್ತಿತ್ವ ಅಥವಾ ಗುಣ ನಿಮ್ಮನ್ನು ತುಂಬಾ ಆಕರ್ಷಿಸರುತ್ತದೆ ಅಲ್ಲದೆ ಅವರು ಕಂಡ ಕನಸು ನೀವು ನನಸು ಮಾಡಬೇಕೆಂದು ಬಯಸಿದಾಗ ಈ ರೀತಿಯ ಕನಸು ಬೀಳುವುದು ಸಹಜ.
ಮನಶಾಸ್ತ್ರ ಪ್ರಕಾರ ವ್ಯಕ್ತಿ ತೀರಿ ಹೋದರೂ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ಸಿದ್ಧವಾಗದೇ ಇದ್ದಾಗ, ಅವರು ಖಂಡಿತ ನಮ್ಮ ಜೊತೆಇದ್ದೇ ಇರುತ್ತಾರೆ ಎಂದು ನಂಬಿದಾಗ ಈ ರೀತಿಯ ಕನಸು ಬೀಳುತ್ತದೆ. ಅವರ ಮನಸ್ಸು ತೀರಿ ಹೋದವರು ಹಿಂತಿರುಗಿ ಬರಲಿ ಎಂದು ಬಯಸಿದಾಗ ಈ ರೀತಿಯ ಕನಸು ಬೀಳುವುದು.
ನಾನು ಅವರ ಬಗ್ಗೆ ಆಲೋಚನೆ ಮಾಡಿಯೇ ಇರಲಿಲ್ಲ, ಆದರೂ ಕನಸು ಬಿತ್ತು ಎಂದು ಹೇಳುವುದನ್ನು ಕೇಳುತ್ತೇವೆ, ಆದರೆ ನಮ್ಮ ಒಳ ಮನಸ್ಸಿನಲ್ಲಿ ಅವರು ನೆನಪುಗಳಿರುತ್ತದೆ, ನಾವು ಅವರನ್ನು ಮರೆತ್ತಿದ್ದೇವೆ ಅಥವಾ ಮರೆಯಲು ಯತ್ನಿಸುತ್ತಿದ್ದೇವೆ ಎಂದು ಅಂದುಕೊಂಡಿರುತ್ತೇವೆ, ಆದರೆ ಅದನ್ನು ನಮ್ಮ ಮನಸ್ಸು ಒಪ್ಪಿಕೊಂಡಿರಲ್ಲ, ಆವಾಗ ಈ ಬಗೆಯ ಕನಸು ಬೀಳುತ್ತದೆ ಎಂದು ಮನಶಾಸ್ತ್ರ ಹೇಳುತ್ತದೆ.



Click it and Unblock the Notifications


