Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ನಾಪತ್ತೆಯಾದ ವಿಮಾನಕ್ಕೆ 11 ವರ್ಷದ ಬಳಿಕ ಹುಡುಕಾಟ ಆರಂಭ..! MH370 ನಿಗೂಢ ವಿಮಾನದ ಕಥೆ ಏನು?
ಇತ್ತೀಚಿನ ದಿನಗಳಲ್ಲಿ ನೀವು ವಿಮಾನಯಾನ ಕ್ಷೇತ್ರದಲ್ಲಿ ಸಣ್ಣಪುಟ್ಟ ಅಪಘಾತಗಳು, ಪಥನದಂತಹ ಸುದ್ದಿ ಕೇಳುತ್ತಲೇ ಇರುತ್ತೀರಿ. ಹಾಗೆ ಕೆಲವೊಂದು ಎಲ್ಲರ ಅಚ್ಚರಿ ಹುಟ್ಟಿಸಿದರೆ ಮತ್ತೆ ಕೆಲವು ನಿಗೂಢವಾಗಿಯೂ ಉಳಿದಿವೆ. ಇಂತಹ ನಿಗೂಢ ಪ್ರಕರಣಗಳ ಪೈಕಿ ಅತ್ಯಂತ ದೊಡ್ಡ ಕುತೂಹಲ ತನ್ನಲ್ಲಿಟ್ಟುಕೊಂಡಿರುವುದು ಮಲೇಷ್ಯಾ ಏರ್‌ಲೈನ್ ನಾಪತ್ತೆಯಾದ ಘಟನೆ.
ಮಲೇಷ್ಯಾ ಏರ್‌ಲೈನ್ಸ್ ವಿಮಾನ MH370 ವಿಮಾನ ನಾಪತ್ತೆಯಾಗಿ ದಶಕಗಳೇ ಕಳೆದಿದೆ. ಆದ್ರೆ ಇಂದಿಗೂ ಈ ದಿಮಾನ ಎಲ್ಲಿ ಹೋಗಿದೆ. ಎಲ್ಲಿ ಪಥನಗೊಂಡಿದೆ ಎಂಬ ಕುರಿತು ಒಂದಿಷ್ಟು ಮಾಹಿತಿ ಲಭ್ಯವಾಗಿಲ್ಲ. ವಿಮಾನಯಾನ ಕ್ಷೇತ್ರದಲ್ಲೇ ಇದೊಂದು ನಿಗೂಢ ಪ್ರಕರಣ ಎಂದು ಪರಿಗಣಿಸಲಾಗಿದೆ. 2014ರಲ್ಲಿ ನಾಪತ್ತೆಯಾದ ವಿಮಾನದ ಹುಡುಕಾಟ ಬಹಳ ವರ್ಷಗಳ ಹಿಂದೆ ಕೊನೆಗೊಂಡಿತ್ತು. ಆದ್ರೆ ಈಗ ಮತ್ತೆ ವಿಮಾನದ ಹುಡುಕಾಟಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಸಾಗರ ಪರಿಶೋಧನಾ ಸಂಸ್ಥೆ 'ಓಷನ್ ಇನ್ಫಿನಿಟಿ' ಕಾಣೆಯಾದ ವಿಮಾನಕ್ಕಾಗಿ ಮತ್ತೆ ಹುಡುಕಾಟ ಆರಂಭಿಸಿದೆ ಎಂದು ಮಲೇಷ್ಯಾ ಸಾರಿಗೆ ಸಚಿವರು ತಿಳಿಸಿದ್ದಾರೆ. ವಿಮಾನ ನಾಪತ್ತೆಯಾಗಿ 11 ವರ್ಷದ ಬಳಿಕ ಮತ್ತೊಮ್ಮೆ ಶೋಧಕಾರ್ಯಕ್ಕೆ ಮುಂದಾಗುತ್ತಿರುವುದು ಇದೇ ಮೊದಲಾಗಿದೆ. ಈ ಸಂಸ್ಥೆ ಮತ್ತೆ ಯಾವಾಗ ಹುಡುಕಾಟ ಆರಂಭಿಸಲಿದೆ ಹಾಗೆ ಯಾವಾಗ ಅಂತಿಮಗೊಳಿಸಲಿದೆ ಎಂಬುದನ್ನು ಇನ್ನು ತಿಳಿಸಿಲ್ಲ.
ಮಲೇಷ್ಯಾ ಏರ್‌ಲೈನ್ಸ್ ವಿಮಾನ ಎಂಹೆಚ್ 370ಗೆ ಏನಾಯಿತು?
ಮಾರ್ಚ್ 2014 ಮಲೇಷ್ಯಾದಿಂದ ಚೀನಾ ಕಡೆ ಪ್ರಯಾಣಿಸಲಿತ್ತು. 227 ಮಂದಿ ಪ್ರಯಾಣಿಕರು ಹಾಗೆ 10 ಮಂದಿ ಸಿಬ್ಬಂದಿ ವಿಮಾಣದಲ್ಲಿದ್ದರು. ರಾತ್ರಿ 1:21ರ ಸುಮಾರಿಗೆ ರಡಾರ್‌ನಿಂದ ಕಣ್ಮರೆಯಾದ ಈ ವಿಮಾನ ಇಂದಿಗೂ ಪತ್ತೆಯಾಗಿಲ್ಲ. ಇದು ರಾತ್ರಿ 1:21ರ ವರೆಗೂ ಕೌಲಲಾಂಪೂರ್ ವಿಮಾನ ನಿಲ್ದಾಣದ ಸಿಬ್ಬಂದಿ ಕೊನೆಯ ಸಂದೇಶ ಪಡೆದಿದ್ದರು. ಆದ್ರೆ ಇದಾದ ಬಳಿಕ ವಿಯೇಟ್ನಾಂ ವಿಮಾನ ನಿಲ್ದಾಣ ಸಿಬ್ಬಂದಿ ವಿಮಾನದ ತಮ್ಮ ವಲಯದಲ್ಲಿರುವುದು ಕಂಡುಕೊಂಡಿದ್ದಾರೆ ಆದ್ರೆ ತಕ್ಷಣ ಅವರ ರಾಡಾರ್‌ನಿಂದ ಮರೆಯಾಗಿದೆ.
ಬೆಳಗ್ಗೆ 6:32ಕ್ಕೆ ಬೀಜಿಂಗ್‌ನಲ್ಲಿ ಈ ವಿಮಾನ ಇಳಿಯಬೇಕಿತ್ತು, ಆದ್ರೆ ಎಷ್ಟು ಸಮಯ ಆದರೂ ವಿಮಾನದ ಸುಳಿವೇ ಇರಲಿಲ್ಲ. ಸೌತ್ ಚೀನಾ ಸಮುದ್ರದ ಬಳಿಕ ಕೊನೆಯ ಬಾರಿಗೆ ಕಾಣಿಸಿಕೊಂಡ ವಿಮಾನ ಎಲ್ಲಿದೆ ಎಂಬುದು ಯಾರಿಗೂ ತಿಳಿಯಲಿಲ್ಲ. ಅನಂತರ ವಿಮಾನದ ಹುಡುಕಾಟಕ್ಕೆ ಕರೆ ನೀಡಲಾಗಿತ್ತು. 7 ದೇಶಗಳ ಸುಮಾರು 34 ಶಿಪ್‌ಗಳು, 28 ಏರ್‌ಕ್ರಾಫ್ಟ್‌ಗಳು ನೂರಾರು ಸಿಬ್ಬಂದಿ ಈ ವಿಮಾಣ ಹುಡುಕಾಟಕ್ಕೆ ಮುಂದಾದರು. ಆದರೂ ಸುಳಿವು ಸಿಗಲಿಲ್ಲ.
ಆದ್ರೆ ಈ ಘಟನೆ ನಡೆದು 4 ದಿನಗಳ ಬಳಿಕ ಅಚ್ಚರಿ ವಿದ್ಯಮಾನ ನಡೆದಿತ್ತು. ಈ ವಿಮಾನವನ್ನು ಕೊನೆಯಬಾರಿಗೆ ಮಿಲಿಟರಿ ರಾಡರ್‌ವೊಂದು ಪತ್ತೆ ಮಾಡಿತ್ತು. ಸುಮಾರು 2 ಗಂಟೆ ಸುಮಾರಿಗೆ ಅಂಡಮಾನ್ ನಿಕೋಬಾರ್ ವಲಯದಲ್ಲಿ ಈ ವಿಮಾನ ಪತ್ತೆಯಾಗಿತ್ತು. ಆದ್ರೆ ಈ ವಿಮಾನ ತನ್ನ ಮಾರ್ಗವನ್ನೇ ಬಿಟ್ಟು ವಿರುದ್ಧ ದಿಕ್ಕಿನಲ್ಲಿ ಚಲಿಸಿರುವುದು ಪತ್ತೆಯಾಗಿತ್ತು. ಆದ್ರೆ ಅಂದಿನಿಂದ ಇಂದಿನವರೆಗೂ ಇದರ ಹುಡುಕಾಟ ನಡೆಯುತ್ತಲೇ ಇದೆ.
ಆದ್ರೆ 2015ರಲ್ಲಿ ಮಡಾಗಾಸ್ಕರ್ ಹತ್ತಿರದ ಒಂದು ದ್ವೀಪದಲ್ಲಿ ಈ ವಿಮಾನದ ಬಲ ರೆಕ್ಕೆಯ ಒಂದು ಭಾಗ ಪತ್ತೆಯಾಗಿತ್ತು, ಈ ಒಂದು ಭಾಗ ಬಿಟ್ಟರೆ ಮತ್ತೇನು ಇರಲಿಲ್ಲ. ಈ ಭಾಗ ಎಲ್ಲಿಂದ ಬಂದಿದೆ ಎಂಬುದನ್ನು ಕೂಡ ಪತ್ತೆ ಮಾಡಲು ಆಗಲಿಲ್ಲ. 2018ರಲ್ಲಿ ಓಷನ್ ಇನ್ಫಿನಿಟಿ ತನ್ನ ಹುಡುಕಾಟ ನಿಲ್ಲಿಸಿತ್ತು. ಇದೊಂದು ವಿಫಲ ಶೋಧ ಕಾರ್ಯ ಎಂದಿತ್ತು, ಆದರೆ ಈಗ ಮತ್ತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಡುಕಾಟಕ್ಕೆ ಮುಂದಾಗಿದೆ.



Click it and Unblock the Notifications
