Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಹಳೆ ಪೇಪರ್, ಬಾಟಲಿ ಮಾರಿ ಮಗನಿಗಾಗಿ ಐಫೋನ್ 16 ಖರೀದಿಸಿದ ತಂದೆ..! ಕಾರಣ ಏನ್ ಗೊತ್ತಾ?
ಸ್ಮಾರ್ಟ್‌ಫೋನ್ ಕ್ರೇಜ್ ಅಂದ್ರೆ ಯಾರಿಗಿಲ್ಲ ಹೇಳಿ. ಹೊಸ ಮೊಬೈಲ್ ಖರೀದಬೇಕು. ವರ್ಷಕ್ಕೊಂದು ಫೋನ್ ಬದಲಾಯಿಸಬೇಕು ಎಂದುಕೊಳ್ಳುವವರು ನಮಗೂ ಸಿಗುತ್ತಾರೆ. ಆದ್ರೆ ಇತ್ತೀಚಿಗೆ ಐಫೋನ್ ಕ್ರೇಜ್ ಎಷ್ಟು ಹೆಚ್ಚಾಗಿದೆ. ಅಂದ್ರೆ ಹೊಸ ಆವೃತ್ತಿ ಬಿಡುಗಡೆಯಾಗಿ ಜನರು ಕಾದು ಕುಳಿತಿರುತ್ತಾರೆ.
ಇತ್ತೀಚಿಗೆ ಭಾರತದಲ್ಲೂ ಬಿಡುಗಡೆ ಆಗಿರುವ ಐಫೋನ್ 16 ಆವೃತ್ತಿಯೂ ಎಲ್ಲರ ಮನಗೆದ್ದಿದೆ. ದರವೂ ಕೂಡ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಾಗಿದೆ. ಇಷ್ಟಾದರು ಈ ಫೋನ್ ಖರೀದಿಗೆ ಜನ ಸರದಿ ಸಾಲಿನಲ್ಲಿ ನಿಂತಿರುವುದನ್ನು ನಾವು ನೋಡಿದ್ದೆವು. ವಿದೇಶದಲ್ಲಿ ಇದ್ದಂತೆ ಭಾರತದಲ್ಲೂ ಐಫೋನ್ ಕ್ರೇಜ್ ಆಗಸಕ್ಕೆ ಏರಿತ್ತು.

ಐಫೋನ್‌ಗಳು ಇಷ್ಟು ಫೇಮಸ್ ಆಗಲು ಕಾರಣ ಅವುಗಳ ಡ್ಯೂರೆಬಲಿಟಿ. ಕ್ಯಾಮರಾದಿಂದಲೇ ಯುವ ಜನರ ಗಮನ ಸೆಳೆಯುತ್ತದೆ. ಇನ್ನು ಭಾರತ ಇಗ ಐಫೋನ್ ಸಂಸ್ಥೆಗೂ ಅತೀ ಹೆಚ್ಚು ಲಾಭ ತರುತ್ತಿರುವ ದೇಶ. ಇಲ್ಲಿನ ಯುವಜನತೆ ಐಫೋನ್ ಖರೀದಿಸುವ ಕನಸು ಕಾಣುವುದು ಸಾಮಾನ್ಯ, ಹೀಗಾಗಿ ಐಫೋನ್ ಖರೀದಿಸಲು ಏನೆಲ್ಲಾ ಮಾಡುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ.
ಕೆಲವರು ತಮ್ಮ ಉಳಿತಾಯವನ್ನೆಲ್ಲಾ ಬಳಸಿ ಐಫೋನ್ ಖರೀದಿಸುತ್ತಾರೆ. ಐಫೋನ್‌ಗಾಗಿ ಮನೆಯಲ್ಲಿ ಗಲಾಟೆ ಮಾಡುತ್ತಾರೆ ಎಂಬುದೆಲ್ಲ ನಾವು ಕೇಳಿದ್ದೇವೆ. ಆಧ್ರೆ ಇಲ್ಲೊಬ್ಬ ವ್ಯಕ್ತಿ ಈಗ ತನ್ನ ಮಗ ಒಳ್ಳೆಯ ಅಂಕ ಗಳಿಸಿ ಪಾಸ್ ಆಗಿದ್ದ ಎಂದು ಐಫೋನ್ ಖರೀದಿಸಿ ನೀಡಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗದೆ.
ಹೌದು ಆತ ಗುಜರಿ ಪ್ಯಾಪಾರಿ ಮಾಡಿ ಐಫೋನ್ ಖರೀದಿಸಿದ್ದಾನೆ. ಆತ ನಿತ್ಯ ಹಳೆ ಬಾಟಲಿ, ಪೇಪರ್, ಮಾರಾಟ ಮಾಡಿ ಆತ 1.5 ಲಕ್ಷ ರೂಪಾಯಿಯ ಐಫೋನ್ 16 ಖರೀದಿಸಿ ನೀಡಿದ್ದಾನೆ. ಮಗ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಕ್ಕೆ ಆತ ಗಿಫ್ಟ್ ಆಗಿ ಈ ಐಫೋನ್ ನೀಡಿದ್ದಾನಂತೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ನೋಡುಗರು ಶಾಕ್ ಆಗಿದ್ದಾರೆ. ಆತ ಐಫೋನ್ ಕೈಯಲ್ಲಿ ಹಿಡಿದು ಮಗನಿಗೆ ಗಿಫ್ಟ್ ನೀಡಲು ಖರೀದಿಸಿರುವುದಾಗಿ ಹೇಳುತ್ತಿದ್ದಾನೆ. ಜೊತೆಗೆ ಸಂಪೂರ್ಣ ಹಣ ನೀಡಿರುವುದಾಗಿಯೂ ಆತ ಹೇಳುತ್ತಿದ್ದಾನೆ. ಈಗ ಬಹುತೇಕರು ಐಫೋನ್ ಅನ್ನು ಇಎಂಐ ಮೂಲಕ ಖರೀದಿಸುವುದೇ ಹೆಚ್ಚು ಆದ್ರೆ ಈತ ಹಣ ನೀಡಿ ಫೋನ್ ಖರೀದಿಸಿದ್ದಾನೆ.
ಈ ವಿಡಿಯೋ ನೋಡಿದವರು ಕಮೆಂಟ್‌ನಲ್ಲಿ ಅಚ್ಚರಿ ಹೊರಹಾಕಿದ್ದಾರೆ, ಭಾರತದಲ್ಲಿ ಐಫೋನ್ ಇಷ್ಟೊಂದು ಕಡಿಮೆ ದರಕ್ಕೆ ಯಾವಾಗ ಸಿಗುತ್ತಿವೆ. ಈತ ಐಫೋನ್ ಖರೀದಿಸಿದ್ದಾನೆ ಆದ್ರೆ ನಾನು ಕಳೆದ 5 ವರ್ಷದಿಂದ ಒಡೆದ ಗ್ಲಾಸ್‌ನ ವಿವೋ ಮೊಬೈಲ್ ಬಳಸುತ್ತಿದ್ದೇನೆ, ಬದಲಾಯಿಸಲು ಆಗುತ್ತಲೇ ಇಲ್ಲ ಎಂದು ಅಚ್ಚರಿಯಿಂದ ಕಮೆಂಟ್ ಮಾಡಿದ್ದಾನೆ.
ತಂದೆಯ ಮುಖದಲ್ಲಿ ಇಷ್ಟೊಂದು ಖುಷಿ ನೋಡಲು ಸಿಗುತ್ತಿದೆ ಅಂದ್ರೆ ಪುತ್ರನ ಮುಖದಲ್ಲಿ ಎಷ್ಟೊಂದು ಖುಷಿ ನೋಡಬಹುದು. ಆತನ ಪುತ್ರ ನಿಜವಾಗಲು ಅದೃಷ್ಟವಂತ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.



Click it and Unblock the Notifications
