Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಾರಕ್ಕೆ 40 ಗಂಟೆ ಕೆಲಸ..! ₹1.5 ಕೋಟಿ ಸಂಬಳ..! ಎಲ್ಲಿದೆ ಈ ಉದ್ಯೋಗ..?
ನೀವು ಅತೀ ಹೆಚ್ಚು ಸಂಬಳ ಬರುವ ಕೆಲಸ ಯಾವುದು ಅಂದ್ರೆ ಇಂಜಿನಿಯರ್ ಅಥವಾ ಡಾಕ್ಟರ್ ಎನ್ನಬಹುದು. ಇದು ಅತ್ಯವು ಹೌದು, ವಿಶ್ವದ ಯಾವುದೇ ಭಾಗಕ್ಕೆ ಹೋದರು ವೈದರು ಪಡೆಯುವಷ್ಟು ವೇತನ ಬೇರಾವ ಕೆಲಸಕ್ಕೂ ಸಿಗುವುದಿಲ್ಲ. ಅಲ್ಲದೆ ವೈದ್ಯರಿಗೆ ಎಲ್ಲಾ ದೇಶದಲ್ಲೂ ಅಷ್ಟೇ ಬೇಡಿಕೆ ಇದೆ. ಬೇಡಿಕೆ ಇರುವಷ್ಟು ವೈದರು ಈಗ ಸಿಗುತ್ತಿಲ್ಲ. ಕೆಲವು ದೇಶದಲ್ಲಂತೂ ವೈದ್ಯರೇ ಇಲ್ಲ.
ಇನ್ನು ಅತೀ ಹೆಚ್ಚು ಸಂಬಳ ಬೇಕು ಅಂದರೆ ನೀವು ಅಮೆರಿಕ, ಇಂಗ್ಲೆಂಡ್ ಇಲ್ಲವೆ ಕೆನಡಾ, ದುಬೈ ಹೀಗೆ ಮುಂದುವರೆದ ರಾಷ್ಟ್ರಗಳತ್ತ ಹೋಗಬೇಕು. ಅಲ್ಲಿ ಮಾನವ ಸಂಪನ್ಮೂಲ ಕಡಿಮೆ ಇರುವುದರಿಂದ ವೃತ್ತೀಪರರಿಗೆ ಬಹಳಷ್ಟು ವೇತನವಿದೆ. ಅದರಲ್ಲೂ ಸೇವಾ ವಲಯದಲ್ಲಿ ಅತೀ ಹೆಚ್ಚು ವೇತನ ಪಡೆಯಬಹುದು.

ಆದರೆ ಇಲ್ಲೊಂದು ದ್ವೀಪ ರಾಷ್ಟ್ರ ವೈದ್ಯರಿಗೆ ಬೇರೆ ಯಾವ ದೇಶವೂ ನೀಡಷ್ಟು ವೇತನ ನೀಡಲು ಮುಂದಾಗಿದೆ. ಹೌದು ವರ್ಷಕ್ಕೆ 1.5 ಕೋಟಿ ರೂಪಾಯಿ ವೇತನ ನೀಡುವುದಾಗಿ ಘೋಷಿಸಲಾಗಿದೆ. ಸ್ಕಾಟಿಷ್ ದ್ವೀಪದಲ್ಲಿ ವೈದ್ಯರ ಪೋಸ್ಟ್‌ಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತಿದ್ದು, ಓರ್ವ ವೈದ್ಯರಿಗೆ ವರ್ಷಕ್ಕೆ 1.5 ಕೋಟಿ ವೇತನ ನಿಗದಿ ಮಾಡಲಾಗಿದೆ.
ಇದು ಇಂಗ್ಲೆಂಡ್‌ನಲ್ಲಿ ವೈದ್ಯರೊಬ್ಬರು ಪಡೆಯುವ ವೇತನಕ್ಕಿಂತ ಬರೋಬ್ಬರಿ ಶೇ.40ರಷ್ಟು ಅಧಿಕ ಎಂದು ವರದಿಯಾಗಿದೆ. ಸ್ಕಾಟ್‌ಲ್ಯಾಂಡ್‌ನ ದ್ವೀಪದಲ್ಲಿ ಅತ್ಯಂತ ಕಡಿಮೆ ಜನಸಂಖ್ಯೆ ಇದ್ದರೂ ಇಲ್ಲಿ ವೈದ್ಯರೇ ಇಲ್ಲ. ಬೇಸಿಗೆಯಲ್ಲಿ ಈ ದ್ವೀಪದ ಸೌಂದರ್ಯ ಸವಿಯಲು ಲಕ್ಷ ಲಕ್ಷ ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಹೀಗಿದ್ದರೂ ಅಲ್ಲಿನ ಸರ್ಕಾರಿ ನಿಯೋಜಿತ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ.
ಅಲ್ಲಿ ಆಸ್ಪತ್ರೆಗೆ ತೆರಳುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಈ ದ್ವೀಪ ಪ್ರದೇಶದಲ್ಲಿ ಅನಾರೋಗ್ಯದಿಂದ ಅಸುನೀಗುವವರ ಪ್ರಮಾಣ ಹೆಚ್ಚಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದು ಸಹ ಇದಕ್ಕೆ ಕಾರಣವಾಗಿದೆ. ಹೀಗಾಗಿ ದುಬಾರಿ ವೇತನ ನೀಡಿ ವೈದ್ಯರ ನೇಮಕಕ್ಕೆ ಮುಂದಾಗಲಾಗಿದೆ. ಸಂಬಳದ ಜೊತೆಯಲ್ಲಿ 8 ಲಕ್ಷ ರೂಪಾಯಿ ವರ್ಗಾವಣೆ ಭತ್ಯೆ, 13 ಲಕ್ಷ ರೂ. ಗ್ರಾಚ್ಯೂಟಿ ಮತ್ತು 11 ಲಕ್ಷ ರೂ. ಹೆಚ್ಚುವರಿ ಭತ್ಯೆಯನ್ನೂ ಸಹ ಸರ್ಕಾರ ನೀಡಲಿದೆ. ಅಂದರೆ ಒಬ್ಬ ವೈದ್ಯರಿಗೆ ವಾರ್ಷಿಕ 1.5 ಕೋಟಿ ರೂಪಾಯಿ ಸಿಗುತ್ತದೆ.
ಈ ಶಾಶ್ವತ ಕೆಲಸಕ್ಕೆ ವಾರಕ್ಕೆ 40 ಗಂಟೆ ಕೆಲಸ ಮಾಡಬೇಕಿದೆ. ಈ ಕೆಲಸಕ್ಕೆ ಮಾರ್ಚ್ 15ರ ಒಳಗೆ ಅರ್ಜಿ ಸಲ್ಲಿಸುವಂತೆ ಅಲ್ಲಿನ ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಅಲ್ಲಿ ಸೇವೆ ಸಲ್ಲಿಸಲು ವಿಶ್ವದ ಯಾವ ಮೂಲೆಯಿಂದ ಬೇಕಾದರು ಅರ್ಜಿ ಸಲ್ಲಿಸಬಹುದು. ಆದರೆ ಒಮ್ಮೆ ಅವರು ಸೇವೆಗೆ ಹಾಜರಾದ ಬಳಿಕ ಅಲ್ಲಿಯೇ ನೆಲೆಸಲು ಸಿದ್ಧರಿರಬೇಕು. ಅವರಿಗೆ ಸರ್ಕಾರದಿಂದ ಸಿಗುವ ಎಲ್ಲಾ ಸೌಕರ್ಯಗಳನ್ನು ಸರ್ಕಾರ ನೀಡಲಿದೆ.
4,700 ಜನರಿರುವ ದ್ವೀಪಕ್ಕೆ ಬೇಕಾಗಿದ್ದಾರೆ ವೈದ್ಯರು
ಸ್ಕಾಟಿಷ್‌ನಲ್ಲಿ ಸಣ್ಣ ಸಣ್ಣ ದ್ವೀಪಗಳು ನೆಲೆಗೊಂಡಿವೆ. ಅಲ್ಲಿನ ಗ್ರಾಮೀಣ ಭಾಗದಲ್ಲಿಯೇ ಹೆಚ್ಚಿ ವೈದ್ಯರ ಕೊರತೆ ಇದೆ ಎಂದು ಎನ್ಹೆಚ್ಎಸ್ ತಿಳಿಸಿದೆ. ಹೀಗಾಗಿ ಒಟ್ಟು 4700 ಜನರು ಇರುವ ಐದಾರು ದ್ವೀಪಗಳಿಗೆ ವೈದ್ಯರು ಸೇವೆ ಸಲ್ಲಿಸಬೇಕಾಗುತ್ತದೆ. ಈ ಎಲ್ಲಾ ದ್ವೀಪಗಳ ನಡುವೆ ಅವರು ಪ್ರಯಾಣಿಸಲು ಪ್ರಯಾಣ ಭತ್ಯೆಯನ್ನೂ ಸಹ ಪಡೆಯುತ್ತಾರೆ. ಹೀಗಾಗಿ ಸೇವೆ ಸಲ್ಲಿಸಲು ಸಿದ್ಧರಿರುವ ವೈದ್ಯರಿಗೆ ಸ್ವಾಗತ ಎಂದು ಎನ್ಹೆಚ್ಎಸ್ ತಿಳಿಸಿದೆ.
ಗ್ರಾಮೀಣ ಸೇವೆ ನೀಡಿ ಅನುಭವವಿದ್ದರೆ ಆಧ್ಯತೆ
ಇನ್ನು ಈ ವೈದ್ಯರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿ ಅನುಭವವಿದ್ದರೆ ಒಳ್ಳೆಯರು ಎಂದು ಎನ್ಹೆಚ್ಎಸ್ ತಿಳಿಸಿದೆ. ಕಡಲ ತೀರದ ಆರೋಗ್ಯ ಸೇವಾ ಕೇಂದ್ರದಲ್ಲಿ ಕೆಲಸ ಮಾಡಿರುವ ಅನುಭವವಿದ್ದರೆ ಅವರಿಗೆ ಇಲ್ಲಿ ಸುಲಭವಾಗಿ ಹೊಂದಿಕೊಳ್ಳಲು ನೆರವಾಗುತ್ತದೆ. ವಾರದಲ್ಲಿ 40 ಗಂಟೆಯ ಕೆಲಸ ಮಾಡಿದರೆ ಅವರ ನಿಸ್ಸಂದೇಹವಾಗಿ ದ್ವೀಪ ಸೌಂದರ್ಯ ಸವಿಯಲು ತೆರಳಬಹುದು ಎಂದು ಸಂಸ್ಥೆ ತಿಳಿಸಿದೆ.



Click it and Unblock the Notifications
