Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಭೂಮಿಯಿಂದ ದೂರಾಗುತ್ತಿದ್ದಾನೆ ಚಂದ್ರ..! ಮುಂದೊಂದು ದಿನ ಚಿಕ್ಕದಾಗುತ್ತಾನಂತೆ.!
ಗ್ರಹ, ಸೌರ ಮಂಡಲ, ಚಂದ್ರ, ಸೂರ್ಯ ಹೀಗೆ ಖಗೋಳದ ಮೇಲಿನ ಆಸಕ್ತಿ ಮಾನವರುಗೆ ಕಡಿಮೆಯಾಗುವುದೇ ಇಲ್ಲ. ಆತ ನಿತ್ಯ ಏನಾದರು ಹೊಸದಂದು ಕಂಡುಕೊಳ್ಳುವ ಉತ್ಸಾಹ ಕಡಿಮೆಯಾಗಿಯೇ ಇಲ್ಲ. ಆತ ಹೊಸ ಹೊಸ ವಿಚಾರ ತಿಳಿಯುತ್ತಲೇ ಇರುತ್ತಾನೆ. ಅದರಲ್ಲೂ ಚಂದ್ರ ಅಂದರೆ ಮಾನವನಿಗೆ ವಿಶೇಷ ಪ್ರೀತಿ.
ಆದ್ರೆ ಈ ಚಂದ್ರನ ಕುರಿತು ಹೊರಬಿದ್ದಿರುವ ಈ ವಿಚಾರ ಆತಂಕಕ್ಕೆ ಕಾರಣವಾಗಿದೆ. ಚಂದ್ರ ಹಾಗೂ ಭೂಮಿಯ ನಡುವೆ ವರ್ಣನಾತೀತ ಸಂಬಂಧವಿದೆ. ಚಂದ್ರ ಭೂಮಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಒಂದು ಉಪಗ್ರಹ ಆಗಿದೆ. ಆದರೆ ಈ ಚಂದ್ರ ಈಗ ಕುಸಿಯುತ್ತಿದ್ದಾನೆ ಎಂದು ವಿಜ್ಞಾನಿಗಳ ತಂಡವೊಂದು ಶಾಕಿಂಗ್ ಮಾಹಿತಿ ಹೊರಹಾಕಿದೆ.

ಚಂದ್ರನು ಭೂಮಿಯ ಮೇಲಿನ ಜೀವನದ ಮೇಲೆ ಪ್ರಭಾವ ಬೀರುತ್ತಾನೆ. ಭೂಕಂಪನ ಚಟುವಟಿಕೆಗಳಿಂದ ಚಂದ್ರ ಕುಗ್ಗುತ್ತಿದ್ದಾನೆ ಎಂದು ಹೇಳಿಕೊಳ್ಳಲಾಗುತ್ತಿದೆ. ಚಂದ್ರನ ಮೇಲ್ಮೈಯಲ್ಲಿ ಥ್ರಸ್ಟ್ ದೋಷಗಳ ಫೋಟೋಗಳನ್ನು ಪರೀಕ್ಷಿಸುವ ಮೂಲಕ ಇದನ್ನು ಕಂಡುಹಿಡಿಯಲಾಗಿದೆಯಂತೆ. ಚಂದ್ರನ ಮೇಲ್ಮೈಯಲ್ಲಿ ಉಂಟಾಗುತ್ತಿರುವ ಭೂಕಂಪನವು ಚಂದ್ರನ ಗಾತ್ರ ಕುಗ್ಗುವಿಕೆಗೆ ಕಾರಣವಾಗಿದೆ ಎಂದು ಅಧ್ಯಯನದಲ್ಲಿ ತಿಳಿದುಬಂದಿದೆ.
ಬಿಬಿಸಿ ಪ್ರಕಾರ, ಕಳೆದ ನೂರಾರು ಮಿಲಿಯನ್ ವರ್ಷಗಳಿಂದ ಚಂದ್ರನು ತ್ರಿಜ್ಯದಲ್ಲಿ ಕುಗ್ಗುತ್ತಿದ್ದಾನೆ. ಪ್ರಸ್ತುತ, ಅದರ ಮಧ್ಯಭಾಗವು ಸುಮಾರು 50 ಮೀಟರ್ ನಷ್ಟು ಗಾತ್ರದಲ್ಲಿ ಕುಗ್ಗಿದೆಯಂತೆ. ಅಂದರೆ ಬರೋಬ್ಬರಿ 164 ಅಡಿಗಳಷ್ಟು ಚಂದ್ರ ಗಾತ್ರದಲ್ಲಿ ಚಿಕ್ಕವನಾಗಿದ್ದಾನೆ. ಈ ಚಿತ್ರಗಳನ್ನು ನಾಸಾದ ಗಗನಯಾನ ಯೋಜನೆಯಾಗಿರುವ ಅಪೋಲೊ ಗಗನಯಾತ್ರಿಗಳು ಮತ್ತು ಇತ್ತೀಚೆಗೆ ಲೂನಾರ್ ರೀಕಾನೈಸೆನ್ಸ್ ಆರ್ಬಿಟರ್‌ನಿಂದ ಸೆರೆ ಹಿಡಿದಿದ್ದಾರೆ. ಅಪೋಲೊ ಯುಗದಲ್ಲಿ ಚಂದ್ರನ ಮೇಲೆ ಉಳಿದಿರುವ ಸೀಸ್ಮೋಮೀಟರ್‌ಗಳಲ್ಲಿ ಕೆಲವು ನ್ಯೂನತೆಗಳನ್ನು ತಜ್ಞರು ಕಂಡುಕೊಂಡಿದ್ದಾರೆ.
ಚಂದ್ರನ ಒಳಭಾಗವು ಸುಮಾರು 500 ಕಿಲೋ ಮೀಟರ್ ತ್ರಿಜ್ಯ ಒಳಗೊಂಡಿದೆ. ಇದು ಭೂಮಿ ಹೋಲಿಸಿದರೆ ತುಂಬಾ ಚಿಕ್ಕದಾದ ಗಾತ್ರ. ಆದರೆ ಚಂದ್ರನ ಒಳಮೈ ತಂಪಾಗಿದ್ದು ಅಲ್ಲಿ ಉಂಟಾಗುತ್ತಿರುವ ಕಂಪನಗಳು ಈ ತ್ರಿಜ್ಯ ಕುಸಿಯುವಂತೆ ಮಾಡುತ್ತಿದೆ. ಜೊತೆಗೆ ಚಂದ್ರನ ಕ್ರಸ್ಟ್ ಪಾಯಿಂಟ್ ಅಂದರೆ ಹೊರ ಮೇಲ್ಮೈ ಸಹ ಅತ್ಯಂತ ದುರ್ಬಲವಾಗಿದೆ. ಇವು ನೂರಾರು ಬಿರುಕುಗಳಿಂದ ಕೂಡಿದೆ. ಅಲ್ಲದೆ ಆಗಾಗ ಸಂಭವಿಸುವ ಕಂಪನಗಳು ಈ ಬಿರುಕುಗಳ ಗಾತ್ರ ಹೆಚ್ಚಾಗಲು ಮತ್ತಷ್ಟು ಬಿರುಕು ಮೂಡಲು ಕಾರಣವಾಗಿದೆ. ಅಲ್ಲದೆ ಭೂಮಿ ಗುರುತ್ವಾಕರ್ಷಣಾ ಬಲವು ಸಹ ಚಂದ್ರನ ಮೇಲೆ ಹೆಚ್ಚಿನ ಒತ್ತಡ ಉಂಟುಮಾಡುತ್ತಿದೆ.
ಈಗ ಎದ್ದಿರುವ ಪ್ರಶ್ನೆ ಎಂದರೆ ಚಂದ್ರನ ಮೇಲಿನ ಈ ವಿದ್ಯಮಾನ ಭೂಮಿಗೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದಾಗಿದೆ. ಚಂದ್ರನ ಕುಗ್ಗುವಿಕೆಯ ಪ್ರಮಾಣವು ದೀರ್ಘಕಾಲದವರೆಗೆ ಇರುತ್ತದೆ. ಇದು ಹಲವು ರ್ಷದಿಂದಲೂ ನಡೆಯುತ್ತಲೇ ಇದೆ. ಸದ್ಯಕ್ಕೆ, ಚಂದ್ರನ ಕುಗ್ಗುವಿಕೆಯಿಂದಾಗಿ, ಆಕಾಶದಲ್ಲಿ ಚಂದ್ರನ ಗೋಚರಿಸುವ ಗಾತ್ರವು ತುಂಬಾ ಬದಲಾಗುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.
ಆದರೆ ಚಂದ್ರನ ಕಕ್ಷೆಯೂ ವರ್ಷದಿಂದ ವರ್ಷಕ್ಕೆ ಸುಮಾರು 3.8 ಸೆಂ.ಮೀ ಹೆಚ್ಚಾಗುತ್ತಿದೆ. ಹೀಗಾಗಿ ಚಂದ್ರ ಭೂಮಿಯಿಂದ ನಿಧಾನವಾಗಿ ದೂರ ಸರಿಯುತ್ತಿದ್ದಾನೆ. ಸಾವಿರ ವರ್ಷಗಳ ಬಳಿಕ ನಮಗೆ ಚಂದ್ರ ಚಿಕ್ಕದಾಗಿ ಕಾಣಬಹುದು. ಆದರೆ ಈ ಪ್ರಕ್ರಿಯೆ ವೇಗವಾಗಿ ನಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಈ ರೀತಿ ಚಂದ್ರ ದೂರ ಸರಿಯುವುದು ಭೂಮಿ ತಿರುಗುವಿಕೆಯ ವೇಗದ ಮೇಲೆ ಪರಿಣಾಮ ಬೀರಲಿದೆ.
ಆದರೆ ಚಂದ್ರ ಭೂಮಿಯಿಂದ ಮುಂದೊಂದು ದಿನ ಮರೆಯಾಗಬಹುದು. ಇದು ಭೂಮಿಯಲ್ಲಿ ಏರುಪೇರಿಗೆ ಖಂಡಿತವಾಗಿ ಕಾರಣವಾಗಲಿದೆ. ಆದರೆ ನಾವೀಗ ಚಂದ್ರನ ಮೇಲೆ ಇಳಿದು ಅಧ್ಯಯನಕ್ಕೆ ಮುಂದಾಗಿದ್ದು, ಅಲ್ಲಿ ನೆಲೆಸುವ ಕನಸು ಕಾಣುತ್ತಿದ್ದೇವೆ.



Click it and Unblock the Notifications
