Latest Updates
-
ಮಳೆಗಾಲದ ಪ್ರಯಾಣ: ಟ್ರಾಫಿಕ್ ಮತ್ತು ಕ್ಯಾಬ್ ಸಮಸ್ಯೆಗಳ ನಡುವೆ ದಂಪತಿಗಳು ನೆಮ್ಮದಿ ಕಾಪಾಡಿಕೊಳ್ಳುವುದು ಹೇಗೆ? -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ಇಂದಿನ ಪರಿಷ್ಕೃತ ಪಟ್ಟಿ ಮತ್ತು ನಿಮ್ಮ ಪ್ರಕರಣದ ಸ್ಥಿತಿ ಪರಿಶೀಲಿಸಿ -
ಓಣಂ ಹಬ್ಬ: ಮಳೆಗೆ ಹಾಳಾಗದ, ₹500ರೊಳಗೆ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್! -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಜಾಗ ಉಳಿಸುವ ಸುಂದರ ಪೂಕಳಂ ಐಡಿಯಾಗಳು -
ಓಣಂ ಸದ್ಯದ ಸಂಭ್ರಮ: ಡಯಾಬಿಟಿಸ್ ಇದ್ದರೂ ಆರೋಗ್ಯಕರವಾಗಿ ಸವಿಯುವುದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ಮೊಟ್ಟೆ ದರ ಏರಿಕೆ ಚಿಂತೆಯೇ? ಕಡಿಮೆ ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಸ್ಮಾರ್ಟ್ ಟಿಪ್ಸ್ ಫಾಲೋ ಮಾಡಿ -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ಕುಟುಂಬದೊಂದಿಗೆ ಸಂಭ್ರಮಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಪ್ಲಾನ್! -
ವರ್ಕ್ ಫ್ರಮ್ ಹೋಮ್ ಜೊತೆ ಭಾರತ-ಶ್ರೀಲಂಕಾ ಟೆಸ್ಟ್ ಮ್ಯಾಚ್: ಲೈವ್ ಸ್ಕೋರ್ ಮತ್ತು ಸ್ಮಾರ್ಟ್ ಟಿಪ್ಸ್ ಇಲ್ಲಿದೆ! -
ದೆಹಲಿ ಟಫ್ಮನ್ ಹಾಫ್ ಮ್ಯಾರಥಾನ್: ತೇವಾಂಶದ ನಡುವೆಯೂ ಓಟದಲ್ಲಿ ಮಿಂಚಲು ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರು ರನ್ನಿಂಗ್ ಡೇ: ಮಳೆಗಾಲದಲ್ಲಿ ಓಡುವಾಗ ಈ ತಪ್ಪುಗಳನ್ನು ಮಾಡಬೇಡಿ, ಸುರಕ್ಷಿತವಾಗಿರಿ!
1ನೇ ತರಗತಿ ಮಗುವಿನ ಫೀಸ್ ₹4.27 ಲಕ್ಷ..! ಮಧ್ಯಮ ವರ್ಗದವರಿಗೆ ಗಗನಕುಸುಮ.!
ಶಿಕ್ಷಣ ಎಂಬುದು ಉದ್ಯಮವಾಗಿ ಬದಲಾಗಿ ಬಿಟ್ಟಿದೆ. ಅದರಲ್ಲೂ ನಗರ ಪ್ರದೇಶದಲ್ಲಿ ಬೇಬಿ ಸಿಟ್ಟಿಂಗ್‌ನಿಂದ ಹಿಡಿದು ಎಲ್‌ಕೆಜಿ, ಯುಕೆಜಿ ಹಂತದಲ್ಲೇ ಅವರ ಫೀಸ್‌ಗಳು ಲಕ್ಷ ತಲುಪಿದೆ. ಹೀಗಾಗಿ ಈಗ ಮಕ್ಕಳನ್ನು ಓದಿಸುವುದು ಬಹಳ ಕಷ್ಟದ ಹಾಗೂ ವೆಚ್ಚದಾಯಕ ಸಂಗತಿಯಾಗಿ ಬದಲಾಗಿದೆ. ಅದ್ರಲ್ಲೂ ಉನ್ನತ ಶಿಕ್ಷಣಕ್ಕೆ ಖರ್ಚು ಮಾಡುತ್ತಿದ್ದ ಹಣ ಈಗ 1ನೇ ತರಗತಿ ಪೂರೈಸುವ ಮೊದಲೇ ಮುಗಿಯುತ್ತಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣವನ್ನೇ ಉದ್ಯಮವಾಗಿಸಿ ಲಕ್ಷ ಲಕ್ಷ ಫೀಸ್ ಕಟ್ಟಿಸಿಕೊಳ್ಳುತ್ತಿರುವುದನ್ನು ನಾವು ನಿತ್ಯ ನೋಡುತ್ತಿದ್ದೇವೆ. ಬೆಂಗಳೂರು, ದೆಹಲಿ, ಮುಂಬೈ ಸೇರಿ ಬೃಹತ್ ನಗರಗಳಲ್ಲಿ ಲಕ್ಷಕ್ಕಿಂತ ಕಡಿಮೆ ಫೀಸ್‌ಗಳು ಇರುವ ಶಾಲೆಗಳು ಇಲ್ಲವೇ ಇಲ್ಲ ಎನ್ನಬಹುದು. ಅಷ್ಟೊಂದು ದುಬಾರಿಯಾಗಿದೆ ಈ ಶಿಕ್ಷಣ.

ಈಗ ಇಂತಹದ್ದೆ ಒಂದು ಫೀಸ್ ಸಂಬಂಧಿ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿದೆ ಮಗುವೊಂದರ ಶಾಲೆಯ ಫೀಸ್ ನೋಡಿ ಜನರು ಶಾಕ್‌ಗೆ ಒಳಗಾಗಿದ್ದಾರೆ. ರಾಜಸ್ಥಾನದ ಜೈಪುರದ ಶಾಲೆಯೊಂದರಲ್ಲಿ 1ನೇ ತರಗತಿ ಮಗುವಿನ ಫೀಸ್ ಬರೋಬ್ಬರಿ 4.27 ಲಕ್ಷ ರೂಪಾಯಿ ಆಗಿದೆ.
ಇದು ಒಂದು ವರ್ಷದ ಸಂಪೂರ್ಣ ಫೀಸ್ ಅಂತೆ. ಕೆಲ ವರ್ಷದ ಹಿಂದೇ ಈ 4.27 ಲಕ್ಷ ರೂಪಾಯಿಯಲ್ಲಿ ಇಡೀ ಶಿಕ್ಷಣವೆ ಮುಗಿಸು ಹೋಗಿರುತ್ತಿತ್ತು, ಆದರೆ ಈಗ ಶಿಕ್ಷಣ ಎಂಬುದು ಜ್ಞಾನಾರ್ಜನೆಯ ಕೇಂದ್ರವಾಗಿ ಉಳಿಯದೆ ಅದೊಂದು ವ್ಯವಹಾರಿಕಾ ಕೇಂದ್ರವಾಗಿ ಬದಲಾಗಿರುವುದಕ್ಕೆ ಇದೊಂದು ಉದಾಹರಣೆಯಾಗಿದೆ.
ನನ್ನ ಮಗಳು ಮುಂದಿನ ವರ್ಷ ಗ್ರೇಡ್ 1 ಅನ್ನು ಪ್ರಾರಂಭಿಸುತ್ತಾಳೆ ಮತ್ತು ಇದು ನಮ್ಮ ನಗರದಲ್ಲಿ ನಾವು ಪರಿಗಣಿಸುತ್ತಿರುವ ಶಾಲೆಯೊಂದರ ಶುಲ್ಕ ಇದುಇತರ ಉತ್ತಮ ಶಾಲೆಗಳು ಸಹ ಇದೇ ರೀತಿಯ ಶುಲ್ಕವನ್ನು ಹೊಂದಿವೆ ಎಂಬುದನ್ನು ಗಮನಿಸಿ' ಎಂದು ಜೈನ್ ಎಂಬಾತ ತಮ್ಮ ಎಕ್ಸ್ ಖಾತೆಯಲ್ಲಿ ಫೀಸ್ ಕುರಿತಂತೆ ಒಂದು ಫೋಟೋ ಹಂಚಿಕೊಂಡಿದ್ದಾರೆ.
ನೋಂದಣಿ ಶುಲ್ಕಗಳು: ₹2,000; ಪ್ರವೇಶ ಶುಲ್ಕ: ₹ 40,000; ಎಚ್ಚರಿಕೆಯ ಹಣ (ಮರುಪಾವತಿಸಬಹುದಾದ): ₹5,000; ವಾರ್ಷಿಕ ಶಾಲಾ ಶುಲ್ಕ: ₹2,52,000; ಬಸ್ ಶುಲ್ಕಗಳು: ₹1,08,000; ಪುಸ್ತಕಗಳು ಮತ್ತು ಸಮವಸ್ತ್ರ: ₹20,000. ಒಟ್ಟು: ವರ್ಷಕ್ಕೆ ₹4,27,000!" ಎಂದು ಬರೆದಿರುವುದನ್ನು ಅವರು ಹಂಚಿಕೊಂಡಿದ್ದಾರೆ.
ಈ ಫೋಟೊ ನೋಡಿದ ಮಂದಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಇಷ್ಟೊಂದು ದುಬಾರಿ ಹಣ ನೀಡಿ ಕೇವಲ 8 ತಿಂಗಳ ಕಾಲ ನಡೆಯುವ ಶಾಲೆಯಲ್ಲಿ ಮಕ್ಕಳಿಗೆ ಅವರು ಏನು ಕಲಿಸುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ, ಅವರು ಕಲಿಸುವ ಒಂದೊಂದು ಅಕ್ಷರಕ್ಕೂ ಸಾವಿರ ರೂಪಾಯಿ ಆದಂತಾಯಿತು, ಇದು ಮಧ್ಯಮ ವರ್ಗದ ಜನರ ಪಾಲಿಗೆ ಬಹುದೊಡ್ಡ ಹೊರೆ ಎಂದು ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ವರ್ಷಕ್ಕೆ ರೂ 20 ಲಕ್ಷ ಗಳಿಸುವ ವ್ಯಕ್ತಿ ತಮ್ಮ ಮಕ್ಕಳನ್ನು ಉತ್ತಮ ಶಾಲೆಗೆ ಕಳುಹಿಸಲು ಅಸಂಭವ. ನಿಮ್ಮ 20 ಸಾವಿರ ರೂ ಆದಾಯದ ಶೇ.50 ರಷ್ಟನ್ನು ಸರ್ಕಾರವು ಆದಾಯ ತೆರಿಗೆ, ಜಿಎಸ್ಟಿ, ಪೆಟ್ರೋಲ್ ಮೇಲಿನ ವ್ಯಾಟ್ ರೂಪದಲ್ಲಿ ಸುಲಿಗೆ ಮಾಡುತ್ತದೆ. ರಸ್ತೆ ತೆರಿಗೆ, ಟೋಲ್ ತೆರಿಗೆ, ವೃತ್ತಿಪರ ತೆರಿಗೆ, ಬಂಡವಾಳ ಲಾಭ, ಭೂ ನೋಂದಣಿ ಶುಲ್ಕಗಳು ಮತ್ತು ಹೀಗೆ. ನಂತರ ನೀವು ಇನ್ನೂ ಟರ್ಮ್ ಇನ್ಶೂರೆನ್ಸ್, ಆರೋಗ್ಯ ವಿಮಾ ಕಂತುಗಳು ಮತ್ತು ವೃದ್ಧಾಪ್ಯ ಪಿಂಚಣಿಗಾಗಿ PF, NPS ಗೆ ಪಾವತಿಸಬೇಕಾಗುತ್ತದೆ. 20L ಆದಾಯದಲ್ಲಿ ನೀವು ಅತ್ಯಧಿಕ 30% + CESS ತೆರಿಗೆ ಬ್ರಾಕೆಟ್‌ನಲ್ಲಿ ಬೀಳುತ್ತೀರಿ ಎಂದಿದ್ದಾರೆ.
ಇಷ್ಟೊಂದು ಹಣ 1ನೆ ತರಗತಿ ಮಕ್ಕಳಿಗೆ ನೀಡುವುದು ಈಗಿನ ಶಿಕ್ಷಣ ಉದ್ಯಮವಾಗಿರುವುದಕ್ಕೆ ಕನ್ನಡಿ ಅಲ್ಲದೆ ಮತ್ತೇನು? ಮುಂದೆ ಮಕ್ಕಳನ್ನು ಶಾಲೆಗೆ ಕಳುಹಿಸಿ ಓದು ಬರಹ ಕಲಿಸುವ ಪರಿಪಾಠ ನಿಂತು ಪೋಷಕರೇ ಶಿಕ್ಷಕರಾಗುವ ಕಾಲ ದೂರ ಉಳಿದಿಲ್ಲ.!



Click it and Unblock the Notifications