Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಶಾಲೆಗೂ ಎಂಟ್ರಿಕೊಟ್ಟ ಎಐ..! ಇನ್ಮುಂದೆ ಮಕ್ಕಳಿಗೆ ಐರಿಸ್ ಪಾಠ..!
ಇತ್ತೀಚಿಗೆ ಎಲ್ಲಾ ರಂಗದಲ್ಲೂ AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಯಂತ್ರಗಳು ಕಾಲಿಡುತ್ತಿವೆ. ಅದರಲ್ಲೂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮತ್ತಷ್ಟು ಚುರುಕುಗೊಂಡು ಈ ಎಐ ಅಭಿವೃದ್ಧಿಗೆ ಶ್ರಮಿಸುತ್ತಿವೆ. ನಾವು ಈ ಹಿಂದೆಯೇ ಕೇಳಿದ್ದೆವು ರೋಬಾಟ್‌ಗಳು ನಮ್ಮ ಬದಲು ಹಲವು ಕ್ಷೇತ್ರಗಳಲ್ಲಿ ಆವರಿಸಿಕೊಳ್ಳುತ್ತವೆ ಎಂಬ ಮಾತು ಹರಿದಾಡುತ್ತದೆ. ಇದಕ್ಕೆ ಪೂರಕವಾಗಿ ಕೆಲವು ಕ್ಷೇತ್ರದಲ್ಲಿ ಎಐ ಕಾಲಿಟ್ಟಿದೆ.
ಈ ಮೊದಲು ನಾವು ಟಿವಿಗಳಲ್ಲಿ ಆಂಕರಿಂಗ್ ಮಾಡುವ ಎಐ ಮಾಡಲ್‌ಗಳನ್ನು ನೋಡಿದ್ದೇವು. ಮಾನವರಂತೆ ಅವು ಸಹ ನ್ಯೂಸ್ ಓದುವುದನ್ನು ಕಂಡು ಜನ ಶಾಕ್ ಆಗಿದ್ದರು. ಈಗ ಶಾಲೆಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಾಲಿಟ್ಟಿದೆ. ಹೌದು ಶಾಲೆಯಲ್ಲಿ ಪಾಠ ಮಾಡಲು ಸಹ ಎಐ ಬಂದುಬಿಟ್ಟಿದೆ. ಹಾಗಾದರೆ ಏನಿದು ಹೊಸ ಟೀಚರ್ ಎಐ? ಇಲ್ಲಿದೆ ನೋಡಿ ಉತ್ತರ.

ಕೇರಳದ ತಿರುವನಂತಪುರಂನಲ್ಲಿರುವ ಶಾಲೆಯೊಂದು AI ಶಿಕ್ಷಕಿ ಐರಿಸ್ ಪರಿಚಯಿಸಿದೆ. ಶಿಕ್ಷಣ ಕ್ಷೇತ್ರದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ ಇಡಲು ಮುಂದಾಗಿದೆ. Makerlabs Edutech ಎಂಬ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ, ಇದು ದೇಶದ ಮೊದಲ ಎಐ ಟೀಚರ್ ಆಗಿದೆ. ಕಡುವಾಯಿಲ್ ತಂಗಳ್ ಚಾರಿಟೇಬಲ್ ಟ್ರಸ್ಟ್‌ನ ಉಪಕ್ರಮವಾದ KTCT ಹೈಯರ್ ಸೆಕೆಂಡರಿ ಶಾಲೆಯಿಂದ ಈ ಎಐ ಶಿಕ್ಷಕಿಯ ಪರಿಚಯಿಸಲಾಗಿದೆ.
ಈ ಎಐ ಪಠ್ಯೇತರ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ಪರಿಚಯಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತ ವಿಡಿಯೋವೊಂದನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಬಹುಭಾಷಾ AI ಶಿಕ್ಷಕರ ಸಾಮರ್ಥ್ಯಗಳನ್ನು ತೋರಿಸುತ್ತದೆ. ಐರಿಸ್ ವಿವಿಧ ವಿಷಯಗಳಾದ್ಯಂತ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸುವುದು, ವೈಯಕ್ತೀಕರಿಸಿದ ಧ್ವನಿ ಸಹಾಯವನ್ನು ಒದಗಿಸುತ್ತದೆ.
ಇನ್ನು ಈ ವಿಡಿಯೋದಲ್ಲಿ ಎಐ ಶಿಕ್ಷಕಿ ಐರಿಸ್ ಹೇಗಿದೆ ಎಂಬುದನ್ನು ನೋಡಬಹುದು. ಇದರಲ್ಲಿ ವಿದ್ಯಾರ್ಥಿಗಳ ಜೊತೆ ಐರಿಸ್ ಮಾತುಕತೆ ನಡೆಸುತ್ತಿರುವುದು, ಕೈ ಕುಲುಕುತ್ತಿರುವುದನ್ನು ನೋಡಬಹುದು. ಮುಂದೆ ಈ ಎಐ ಶಿಕ್ಷಕಿಯ ಮೂಲಕ ಪಠ್ಯೇತರ ಚಟುವಟಿಕೆ ನಡೆಸಲು ಶಾಲೆ ಬಳಸಿಕೊಳ್ಳಲಿದೆಯಂತೆ.
ವಿಶ್ವದ ಮೊಟ್ಟ ಮೊದಲ ಎಐಮಾಡೆಲ್
ಇದಕ್ಕೂ ಮೊದಲು ಸ್ಪೇನ್ ದೇಶದಲ್ಲಿ ಮೊಟ್ಟ ಮೊದಲ ಎಐ ಮಾಡೆಲ್ ಐತನಾ ಲೋಪೆಜ್ ಪರಿಚಯಿಸಲಾಗಿತ್ತು. ನೋಡಲು ಹುಡುಗಿ ರೀತಿಯಲ್ಲೇ ಇದ್ದ ಈ ಎಐ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು. ನೋಡಲು ತುಂಬಾ ಸುಂದರವಾಗಿದ್ದ ಈ ಎಐ ಮಾಡೆಲಿಂಗ್ ಕ್ಷೇತ್ರಕ್ಕೂ ಕಾಲಿಟ್ಟಿತ್ತು. ಅಲ್ಲದೆ ಅಲ್ಲಿಯೇ ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದೆ.
ಮಾಡೆಲಿಂಗ್ ಆಗಿ ಜಾಹೀರಾತಿನಲ್ಲಿ ನಟಿಸುವ ಮೂಲಕ ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ವೇತನ ಪಡೆಯುತ್ತಿತ್ತು. ಈ ಸುದ್ದಿ ಭಾರೀ ವೈರಲ್ ಆಗಿತ್ತು. ಈ ಮಾಡೆಲಿಂಗ್ ಬ್ಯೂಟಿಗೆ ಭಾರೀ ಬೇಡಿಕೆಯೂ ಇತ್ತು.
ಉದ್ಯೋಗಕ್ಕೂ ಕತ್ತರಿ ಹಾಕಿದ್ದ ಎಐ
ಇತ್ತೀಚಿಗೆ ಎಐ ಬಳಕೆ ಹೆಚ್ಚಾದಂತೆ ಉದ್ಯೋಗ ಕಡಿತದಂತಹ ಸುದ್ದಿ ಕೇಳಿಬರುತ್ತಿವೆ. ದೊಡ್ಡ ದೊಡ್ಡ ಕಂಪನಿಗಳು ಎಐ ತಂತ್ರಜ್ಞಾನ ಪರಿಚಯಿಸುವ ಮೂಲಕ ಉದ್ಯೋಗ ಕಡಿತಕ್ಕೆ ಮುಂದಾಗಿವೆ. ಇತ್ತೀಚಿಗೆ ಪೇಟಿಎಂ ಎಂಬ ದೊಡ್ಡ ಕಂಪನಿ ಇಂತಹ ಕಾರ್ಯಕ್ಕೆ ಮುಂದಾಗಿ ಶೇ.10ರಷ್ಟು ವೆಚ್ಚ ಉಳಿಸುವ ಉದ್ದೇಶದಿಂದ ಉದ್ಯೋಗಿಗಳ ಕಡಿತಗೊಳಿಸಿತ್ತು.
ಇನ್ನೊಂದೆಡೆ ಭಾರತದಲ್ಲಿ ಎಐ ತಂತ್ರಜ್ಞಾನ ಎಷ್ಟು ಮುಂದುವರೆದಿದೆ ಎಂದರೆ 2027ರ ವೇಳೆಗೆ ಈ ವಲಯದಲ್ಲಿ 17 ಬಿಲಿಯನ್ ಡಾಲರ್ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಜೊತೆಗೆ ಎಐ ಸಂಬಂಧಿತ ಕೆಸಲಗಳಲ್ಲಿ ಭಾರತವು 4 ಲಕ್ಷ ಉದ್ಯೋಗ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ವಿಶ್ವದ 2ನೇ ಅತೀ ದೊಡ್ಡ ಉದ್ಯೋಗ ವಲಯವಾಗಲಿದೆ. ಇತರೆ ದೇಶಗಳಿಗೆ ಹೋಲಿಸಿದರೆ ಭಾರತವು ಮೂರು ಪಟ್ಟು ಹೆಚ್ಚು ಎಐ ಪ್ರತಿಭೆಗಳ ಹೊಂದಿದೆ ಎಂದು ವರದಿಯೊಂದು ತಿಳಿಸಿದೆ.



Click it and Unblock the Notifications
