Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಕ್ಕಳ ಪ್ರಶ್ನೆಗೆ ಪಟಾಪಟ್ ಉತ್ತರ ನೀಡುವ ಐರಿಸ್..! ಎಐ ಶಿಕ್ಷಕಿಯ ಕರಾಮತ್ತು..!
ಇತ್ತೀಚಿಗೆ ಎಲ್ಲಾ ರಂಗದಲ್ಲೂ AI (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಆವರಿಸಿಕೊಳ್ಳಲು ಆರಂಭಿಸಿದೆ. ಟೆಕ್ ಕ್ಷೇತ್ರದಲ್ಲಿ ಎಐ ಒಂದು ಹೆಜ್ಜೆ ಮುಂದೆ ಸಾಗಿದೆ. ನಾವು ಬಳಸುವ ಎಲ್ಲಾ ಗ್ಯಾಜೆಟ್‌ಗಳಲ್ಲೂ ಎಐ ಇನ್ಮುಂದೆ ಕೆಲಸ ಮಾಡಲಿದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮತ್ತಷ್ಟು ಚುರುಕುಗೊಂಡು ಈ ಎಐ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಎಐ ಈಗ ಹಲವು ಕ್ಷೇತ್ರಗಳಲ್ಲಿ ಆವರಿಸಿಕೊಳ್ಳುತ್ತವೆ ಎಂಬ ಮಾತು ಹರಿದಾಡುತ್ತದೆ. ಇದಕ್ಕೆ ಪೂರಕವಾಗಿ ಕೆಲವು ಕ್ಷೇತ್ರದಲ್ಲಿ ಎಐ ಕಾಲಿಟ್ಟಿದೆ.
ಈಗ ಶಾಲೆಗಳಲ್ಲಿ ಪಾಠ ಮಾಡಲು ಸಹ ಎಐ ಮಾಡಲ್‌ಗಳು ಬಂದಿವೆ. ನಾವು ಮೊದಲು ಟಿವಿಯಲ್ಲಿ ನ್ಯೂಸ್ ಓದುವ ಆಂಕರ್‌ಗಳ ನೋಡಿದ್ದೆವು. ಮಾನವರಂತೆ ಅವು ಸಹ ನ್ಯೂಸ್ ಓದುವುದನ್ನು ಕಂಡು ಜನ ಶಾಕ್ ಆಗಿದ್ದರು. ಈಗ ಶಾಲೆಗೂ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಾಲಿಟ್ಟಿದೆ. ಹೌದು ಶಾಲೆಯಲ್ಲಿ ಪಾಠ ಮಾಡಲು ಸಹ ಎಐ ಬಂದುಬಿಟ್ಟಿದೆ.

ಶಿಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯನ್ನು (AI) ಪ್ರಯೋಗಿಸುವ ನಿಟ್ಟಿನಲ್ಲಿ ಅಸ್ಸಾಂ ಗುವಾಹಟಿಯ ರಾಯಲ್ ಗ್ಲೋಬಲ್ ಶಾಲೆಯು ಮೊದಲ AI ಶಿಕ್ಷಕರಾಗಿರುವ 'ಐರಿಸ್' ಅನ್ನು ಪರಿಚಯಿಸಿದೆ. ಸಾಂಪ್ರದಾಯಿಕ ಉಡುಗೆಯಾದ ಸೀರೆಯಲ್ಲಿ ಐರಿಸ್ ಈಗ ಪಾಠ ಮಾಡುತ್ತಿರುವ ವಿಡಿಯೋ ಹರಿದಾಡುತ್ತಿದ್ದು, ಜನರು ಅಚ್ಚರಿಗೆ ಒಳಗಾಗಿದ್ದಾರೆ.
ಈ ವಿಡಿಯೋದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಗೆ ಎಐ ಟೀಚರ್ ಉತ್ತರ ಸಹ ನೀಡುತ್ತಿರುವುದು ನೋಡಬಹುದು. ರಾಯಲ್ ಗ್ಲೋಬಲ್ ಸ್ಕೂಲ್‌ನ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮತ್ತು ಶಿಕ್ಷಣ ನೀಡುವ ಐರಿಸ್‌ನ ಸಾಮರ್ಥ್ಯದಿಂದ ಆಕರ್ಷಿತರಾದರು. ಹಿಮೋಗ್ಲೋಬಿನ್ ಬಗ್ಗೆ ವಿದ್ಯಾರ್ಥಿಯ ಪ್ರಶ್ನೆಗೆ ಅದು ಉತ್ತರಿಸುತ್ತಿರುವುದು ನೋಡಬಹುದು. ಇಷ್ಟೇ ಅಲ್ಲ ಹ್ಯಾಂಡ್ ಶೇಕ್ ನೀಡುವುದು. ಮಕ್ಕಳ ಜೊತೆ ಸಾಮಾನ್ಯ ಶಿಕ್ಷಕಿಯಾಗಿ ಬೆರೆಯುವುದು ಸಹ ಈ ಐರಿಸ್ ಮಾಡಲಿದೆ.
ಐರಿಸ್ ಧ್ವನಿ-ನಿಯಂತ್ರಿತ ಸಹಾಯಕವನ್ನು ಹೊಂದಿದ್ದು, ವಿದ್ಯಾರ್ಥಿಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಮತ್ತು ವೈಯಕ್ತಿಕ ಕಲಿಕೆಯ ಅಗತ್ಯಗಳಿಗೆ ಅನುಗುಣವಾಗಿ ವಿವರವಾದ ವಿವರಣೆಗಳನ್ನು ನೀಡಲು ಅನುವು ಮಾಡಿಕೊಡುತ್ತದೆ. NITI ಆಯೋಗ ಆರಂಭಿಸಿದ ಅಟಲ್ ಟಿಂಕರಿಂಗ್ ಲ್ಯಾಬ್ (ATL) ಯೋಜನೆಯ ಅಡಿಯಲ್ಲಿ Makerlabs Edu-tech ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗಿದೆ, Iris ಶಿಕ್ಷಣದಲ್ಲಿ AI ಏಕೀಕರಣದಲ್ಲಿ ಗಮನಾರ್ಹ ಪ್ರಗತಿಯನ್ನು ಪ್ರತಿನಿಧಿಸುತ್ತದೆ. ಇದಕ್ಕು ಮೊದಲು ಕೇರಳದ ಶಾಲೆಯಲ್ಲೂ ಈ ಐರಿಸ್ ಎಐ ಅನ್ನು ಪರಿಚಯಿಸಲಾಗಿತ್ತು.
ಈ ಐರಿಸ್ ಶಿಕ್ಷಕಿ ಧ್ವನಿ-ನಿಯಂತ್ರಿತ ಸಹಾಯಕವನ್ನು ಹೊಂದಿದ್ದು ಅದು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ. ಅವರು ಕೇಳುವ ಪ್ರಶ್ನೆಗೆ ಉತ್ತರದ ಜೊತೆಗೆ ವಿವರಣೆಯನ್ನು ಸಹ ನೀಡುತ್ತದೆ. ಮಕ್ಕಳು ಇದರಿಂದ ತುಂಬಾ ಉತ್ಸಾಹಿಗಳಾಗಿದ್ದಾರೆ. ಎಐ ಶಿಕ್ಷಕಿ ಎಲ್ಲದಕ್ಕೂ ಉತ್ತರ ನೀಡುತ್ತದೆ. ಇದು ಮಕ್ಕಳ ಕಲಿಕೆಯಲ್ಲಿ ಮಹತ್ತರ ಪಾತ್ರ ನಿರ್ವಹಿಸಲಿದೆ ಎಂದು ಶಿಕ್ಷಕರೊಬ್ಬರು ತಿಳಿಸಿದ್ದಾರೆ.
ಈ ಎಐ ಪಠ್ಯೇತರ ಚಟುವಟಿಕೆಯನ್ನು ಉತ್ತೇಜಿಸುವ ಸಲುವಾಗಿ ಪರಿಚಯಿಸಿರುವುದಾಗಿ ಆಡಳಿತ ಮಂಡಳಿ ತಿಳಿಸಿದೆ. ಈ ಕುರಿತ ವಿಡಿಯೋವೊಂದನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. . ಐರಿಸ್ ವಿವಿಧ ವಿಷಯಗಳಾದ್ಯಂತ ಸಂಕೀರ್ಣ ಪ್ರಶ್ನೆಗಳಿಗೆ ಉತ್ತರಿಸುವುದು, ವೈಯಕ್ತೀಕರಿಸಿದ ಧ್ವನಿ ಸಹಾಯವನ್ನು ಒದಗಿಸುತ್ತದೆ. ಜೊತೆಗೆ ಮಾಹಿತಿಗಳ ಸಂಗ್ರಹ ಹಾಗೂ ವಿಚಾರ ವಿನಿಮಯ ಸೇರಿದಂತೆ ಮಕ್ಕಳೊಂದಿಗೆ ಚರ್ಚೆಗೂ ಈ ಎಐ ಸಹಕಾರಿಯಂತೆ.
ಈ ಎಐ ಶಿಕ್ಷಕಿ ಕಂಡು ಶಾಲಾ ಮಕ್ಕಳಂತೂ ಉತ್ಸಾಹಿತರಾಗಿದ್ದರು. ಕೇಳಿದ ಪ್ರಶ್ನೆಗೆ ಥಟ್ ಅಂತ ಉತ್ತರಿಸುತ್ತಿದ್ದ ಐರಿಸ್ ನೋಡಿ ಮಕ್ಕಳು ಅಚ್ಚರಿಗೆ ಒಳಗಾಗಿದ್ರು. ಜೊತೆಗೆ ಭಾರತೀಯ ಸಂಪ್ರದಾಯದಂತೆ ಸೀರೆ ಉಟ್ಟು ಶಾಲೆಗೆ ಬಂದಿದ್ದ ಶಿಕ್ಷಕಿ ಎಲ್ಲರ ಗಮನ ಸೆಳೆದಿತ್ತು.



Click it and Unblock the Notifications
