Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಶತಾಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ ಶನಿ : ಈ ಆರು ರಾಶಿಯವರಿಗೆ ಉದ್ಯೋಗದಲ್ಲಿ ಪ್ರಗತಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 15, 2023 ರಂದು ಬೆಳಗ್ಗೆ 11:40ಕ್ಕೆ ಶನಿಯು ಶತಾಭಿಷಾ ನಕ್ಷತ್ರದ ಮೊದಲ ಪಾದವನ್ನು ಪ್ರವೇಶಿಸಲಿದೆ. ಅಕ್ಟೋಬರ್ 17 ರ ಮಧ್ಯಾಹ್ನ 01:37ರವರೆಗೆ ಇಲ್ಲಿಯೇ ಇರಲಿದೆ. ಶನಿಯು ಶತಾಭಿಷಾ ನಕ್ಷತ್ರವನ್ನು ಪ್ರವೇಶಿಸುವುದರಿಂದ ಈ ಆರು ರಾಶಿಯವರಿಗೆ ಶುಭಫಲವನ್ನು ಕರುಣಿಸಲಿದ್ದಾನೆ.
ಶನಿಯು ಶತಭಿಷಾ ನಕ್ಷತ್ರದಲ್ಲಿ ಇರೋದ್ರಿಂದ ಕೆಲ ರಾಶಿಯವರಿಗೆ ಶುಭ ಫಲವನ್ನು ನೀಡಲಿದ್ದಾನೆ. ಹಾಗಾದ್ರೆ ಯಾವ ರಾಶಿಯವರಿಗೆ ಶುಭ ಫಲವನ್ನು ಹೊತ್ತು ತರಲಿದ್ದಾನೆ ಅನ್ನೋದನ್ನ ನೋಡೋಣ.

ಮೇಷ ರಾಶಿ
ಶತಭಿಷಾ ನಕ್ಷತ್ರಕ್ಕೆ ಶನಿಯ ಪ್ರವೇಶ ಪಡೆದಿರೋದ್ರಿಂದ ಹೊಸ ವ್ಯವಹಾರವನ್ನು ಸ್ಥಾಪಿಸಲು ಇಚ್ಛಿಸುವವರಿಗೆ ಉತ್ತಮ ಕಾಲ. ಖಾಸಗಿ ಉದ್ಯಮದಲ್ಲಿ ಕೆಲಸ ಹುಡುಕುತ್ತಿರುವ ಜನರು ಈ ಸಮಯದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿದೆ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಆರ್ಥಿಕವಾಗಿ ಒಳ್ಳೆಯದಾಗಲಿದೆ.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಸಮಯದಲ್ಲಿ ಶುಭ ಫಲಗಳಿದೆ. ವ್ಯಾಪಾರ ಅಥವಾ ಕೆಲವು ಅಗತ್ಯ ಕೆಲಸಗಳಿಗೆ ಸಂಬಂಧಿಸಿದಂತೆ ನೀವು ವಿದೇಶಕ್ಕೆ ಪ್ರಯಾಣಿಸಬೇಕಾದ ಸಂದರ್ಭ ಎದುರಾಗುವ ಸಾಧ್ಯತೆಗಳಿದೆ. ಇನ್ನೂ ಆರ್ಥಿಕ ಲಾಭ ಪಡೆಯುತ್ತೀರಿ. ಶಿಕ್ಷಣದ ವಿಷಯದಲ್ಲಿ ಯಶಸ್ವಿಯಾಗುತ್ತೀರಿ. ವಿದ್ಯಾರ್ಥಿಗಳಿಗೆ ಇದು ಉತ್ತಮ ಕಾಲ.
ಸಿಂಹ ರಾಶಿ
ಶನಿಯು ಈ ಸಮಯದಲ್ಲಿ ಸಿಂಹ ರಾಶಿಯವರ ಏಳನೇ ಮನೆಯಲ್ಲಿರೋದ್ರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ ಫಲಗಳನ್ನು ನಿರೀಕ್ಷಿಸಬಹುದು. ಕೆಲಸ ಹುಡುಕುತ್ತಿರುವ ಜನರು ತಮ್ಮ ಕನಸಿನ ಉದ್ಯೋಗವನ್ನು ಪಡೆಯಬಹುದು. ಉದ್ಯಮಿಗಳು ಹೆಚ್ಚಿನ ಲಾಭವನ್ನು ಗಳಿಸುವ ಸಾಧ್ಯತೆಗಳಿದೆ.
ತುಲಾ ರಾಶಿ
ತುಲಾ ರಾಶಿಯ ಉದ್ಯೋಗಿಗಳಿಗೆ ಉತ್ತಮ ಉದ್ಯೋಗವಕಾಶಗಳು ಹುಡುಕಿಕೊಂಡು ಬರಲಿದೆ. ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯುವ ಅವಕಾಶಗಳಿದೆ. ಉದ್ಯಮಿಗಳು ಈ ಸಮಯದಲ್ಲಿ ಅಂದುಕೊಂಡ ಕೆಲಸಗಳೆಲ್ಲಾ ನೆರವೇರುತ್ತದೆ. ಆದರೆ ತಾಳ್ಮೆ ತುಂಬಾನೇ ಮುಖ್ಯ. ಆತುರ ಪಡಲು ಹೋಗಬೇಡಿ.
ಧನು ರಾಶಿ
ಧನು ರಾಶಿ ಉದ್ಯೋಗಿಗಳು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಾರೆ. ಹೊಸ ಉದ್ಯೋಗವನ್ನು ಹುಡುಕುತ್ತಿರುವ ಜನರನ್ನು ಅತ್ಯುತ್ತಮ ಅವಕಾಶಗಳು ಹುಡುಕಿಕೊಂಡು ಬರಲಿದೆ. ಸ್ವಂತ ವ್ಯವಹಾರವನ್ನು ಹೊಂದಿರುವವರು ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತಾರೆ. ಇನ್ನೂ ಹೊಸ ಉದ್ಯೋಗ ಆರಂಭಿಸುವವರಿಗೂ ಕೂಡ ಇದು ಉತ್ತಮ ಕಾಲ.
ಮಕರ ಸಂಕ್ರಾಂತಿ
ಈ ಸಮಯದಲ್ಲಿ ಶನಿಯು ನಿಮ್ಮ ಎರಡನೇ ಮನೆಯಲ್ಲಿ ಇರೋದ್ರಿಂದ ನಿಮ್ಮ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ವಿಯಾಗುತ್ತೀರಿ. ಬಡ್ತಿ ಸಿಗುವ ಸಾಧ್ಯತೆ ಕೂಡ ಇದೆ. ವ್ಯಾಪಾರ ಮಾಡುವ ಜನರು ಲಾಭದಾಯಕ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆ ಇದೆ. ಆದರೆ ಮಾತು ಕೊಂಚ ನಿಯಂತ್ರಣದಲ್ಲಿರುವಂತೆ ಎಚ್ಚರಿಕೆ ವಹಿಸಿ.



Click it and Unblock the Notifications

