Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಕುಂಭ ರಾಶಿಯಲ್ಲಿರುವ ಶನಿ: 2026ರವರೆಗೆ ದ್ವಾದಶ ರಾಶಿಗಳ ವೃತ್ತಿ ಜೀವನದ ಮೇಲೆ ಬೀರಲಿದೆ ಈ ಪ್ರಭಾವ
ಇದೀಗ ಶನಿಯು ಕುಂಭ ರಾಶಿಯಲ್ಲಿದೆ, ಶನಿಯು ಕುಂಭ ರಾಶಿಯಿಂದ ಮೀನ ರಾಶಿಗೆ ಪ್ರವೇಶಿಸಲು 2026ರವರೆಗೆ ಕಾಯಬೇಕು. ಶನಿಯು ಕುಂಭ ರಾಶಿಯಲ್ಲಿರುವಾಗ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತಿದ್ದು, ಇದರ ಪ್ರಭಾವ 2026ರವರೆಗೆ ಹಾಗೆಯೇ ಇರಲಿದೆ. ಈಗಾಗಲೆ ಶನಿಯು ನಿಮ್ಮ ರಾಶಿಯ ಮೇಲೆ ಬೀರಿರುವ ಪ್ರಭಾವ ಅನುಭವ ಬಂದಿರಬಹುದು. ಕುಂಭ ರಾಶಿಯಲ್ಲಿದ್ದಾಗ ದ್ವಾದಶ ರಾಶಿಗಳ ವೃತ್ತಿ ಜೀವನದ ಮೇಲೆ 2026ರವರೆಗೆ ಈ ಪ್ರಭಾವ ಬೀರಲಿದೆ:

ಮೇಷ ರಾಶಿ
ಶನಿಯು ನಿಮ್ಮ 11ನೇ ಮನೆಯಲ್ಲಿ ಇರಲಿದೆ, ಇದರಿಂದ ನಿಮ್ಮ ವೃತ್ತಿ ಜೀವನಕ್ಕೆ, ಉದ್ಯಮಕ್ಕೆ ಒಳಿತಾಗಲಿದೆ. ನೀವು ಬಡ್ತಿ ಪಡೆಯುತ್ತೀರಿ, ಈ ಅವಧಿಯಲ್ಲಿ ಆರ್ಥಿಕವಾಗಿ ಬೆಳವಣಿಗೆಯಾಗಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವವರು ಅನುಕೂಲಕರ ಪಳಿತಾಂಶ ಪಡೆಯುತ್ತೀರಿ.
ವೃಷಭ ರಾಶಿ
ಶನಿಯು ನಿಮ್ಮ ರಾಶಿಯಲ್ಲಿ 10ನೇ ಮನೆಯಲ್ಲಿದೆ. ಈ ಅವಧಿಯಲ್ಲಿ ನೀವು ಹೊಸ ಕೆಲಸಕ್ಕೆ ಕೈ ಹಾಕುತ್ತೀರಿ, ಆದರೆ ರಿಸ್ಕಿ ಫೀಲ್ಡ್ ಟ್ರೈ ಮಾಡದಂತೆ ಸೂಚಿಸಲಾಗಿದೆ. ನಿಮ್ಮ ಕೆಲಸದ ಜಾಗದಲ್ಲಿ ಕೆಲ ಬದಲಾವಣೆಯ ಸಾಧ್ಯತೆ ಇದೆ. ಉನ್ನತ ಶಿಕ್ಷಣ ಮಾಡುತ್ತಿರುವ ವಿದ್ಯಾರ್ಥಿಗಳು ಉತ್ತಮ ಅವಕಾಶ ಪಡೆಯುವಿರಿ.
ಮಿಥುನ ರಾಶಿ
ಮಿಥುನ ರಾಶಿಯಲ್ಲಿ ಶನಿ 9ನೇ ಮನೆಯಲ್ಲಿ ಇರಲಿದೆ. ವೃತ್ತಿ ಜೀವನದ ದೃಷ್ಟಿಯಿಂದ ಈ ಅವಧಿ ಅನುಕೂಲಕರವಾಗಿದೆ. ಹೊಸ ಕೆಲಸಕ್ಕಾಗಿ ಹುಡುಕಾಟ ನಡೆಸುವವರು ಒಳ್ಳೆಯ ಅವಕಾಶ ಪಡೆಯುತ್ತೀರಿ. ವಿದೇಶಕ್ಕೆ ಹೋಗಲು ಬಯಸುವವರು ಉತ್ತಮ ಅವಕಾಶ ಪಡೆಯುವಿರಿ.
ಕರ್ಕ ರಾಶಿ
ಕರ್ಕ ರಾಶಿಯಲ್ಲಿ ಶನಿ 8ನೇ ಮನೆಯಲ್ಲಿ ಇರಲಿದೆ. ವೃತ್ತಿ ಜೀವನದಲ್ಲಿ ಸವಾಲುಗಳು ಎದುರಾಗುವುದು, ನೀವು 2026ರವರೆಗೆ ಎಚ್ಚರದಿಂದ ಕೆಲಸ ಮಾಡುವುದು ಒಳ್ಳೆಯದು. ಒಂದು ಕೆಲಸ ಸಿಗದೆ ಇರುವ ಕೆಲಸವನ್ನು ಬಿಡಬೇಡಿ.
ಸಿಂಹ ರಾಶಿ
ಶನಿಯು ಸಿಂಹ ರಾಶಿಯವರಲ್ಲಿ 7ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಪ್ರಮೋಷನ್ ಸಿಗಲಿದೆ. ಹೊಸ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಒಳ್ಳೆಯ ಅವಕಾಶಗಳು ದೊರೆಯಲಿದೆ. ಉದ್ಯಮಿಗಳು, ಸ್ವಂತ ಉದ್ಯೋಗ ಮಾಡುವವರು ಈ ಈ ಅವಧಿಯಲ್ಲಿ ಪ್ರಗತಿ ಕಾಣುವಿರಿ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಶನಿ 6ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ಕೆಲಸದ ಜಾಗದಲ್ಲಿ ಹಲವು ಬದಲಾವಣೆಗಳು ಕಂಡು ಬರಲಿದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆ ಇದೆ. ಕೆಲಸದಲ್ಲಿ ಒತ್ತಡ ಅಧಿಕವಿರಲಿದೆ, ಈ ಸಮಯದಲ್ಲಿ ಮಾನಸಿಕ ಒತ್ತಡ ಹೆಚ್ಚಿರಲಿದೆ.
ತುಲಾ ರಾಶಿ
ತುಲಾ ರಾಶಿಯವರಲ್ಲಿ ಶನಿ 5ನೇ ಮನೆಯಲ್ಲಿ ಇರಲಿದೆ. ಈ ಅವಧಿ ವೃತ್ತಿ ಜೀವನಕ್ಕೆ ಹಾಗೂ ಉದ್ಯಮಕ್ಕೆ ತುಂಬಾನೇ ಅನುಕೂಲಕರವಾಗಿದೆ.ಕೆಲಸದಲ್ಲಿ ಬದಲಾವಣೆಗಳು ಕಂಡು ಬರುವುದು. ಯಾವುದೇ ಹೊಸ ಒಪ್ಪಂದ ಮಾಡುವ ಮುನ್ನ ಎರಡು ಬಾರಿ ಆಲೋಚಿಸಿ ಮಾಡುವುದು ಒಳ್ಳೆಯದು.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಶನಿ 4ನೇ ಮನೆಯಲ್ಲಿ ಇರಲಿದೆ. ಈ ಸಮಯ ನಿಮಗೆ ಸ್ವಲ್ಪ ಸವಾಲಿನಿಂದ ಕೂಡಿದೆ. ಕೆಲಸದಲ್ಲಿ ವರ್ಗಾವಣೆಯಾಗುವ ಸಾಧ್ಯತೆ ಇದೆ. ಕೆಲವರು ಕೆಲಸವನ್ನು ಕಳೆದುಕೊಳ್ಳಬಹುದು. ಸ್ವಂತ ವ್ಯವಹಾರ ಮಾಡುವವರು ಕೂಡ ನಷ್ಟ ಉಂಟಾಗದಿರಲು ತುಂಬಾನೇ ಎಚ್ಚರವಹಿಸಬೇಕಾಗಿದೆ.
ಧನು ರಾಶಿ
ಧನು ರಾಶಿಯವರಲ್ಲಿ ಶನಿಯು 3ನೇ ಮನೆಯಲ್ಲಿ ಇರಲಿದೆ. ಉದ್ಯೋಗಿಗಳಿಗೆ , ಉದ್ಯಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ. ಬಡ್ತಿ ಸಿಗುವ ಸಾಧ್ಯತೆ ಇದೆ. ಹೊಸ ಕೆಲಸ ಕೂಡ ಸಿಗುವ ಸಾಧ್ಯತೆ ಇದೆ. ವಿದೇಶಕ್ಕೆ ಹೋಗಲು ಪ್ರಯತ್ನಿಸುತ್ತಿದ್ದರೆ ಉತ್ತಮ ಅವಕಾಶಗಳು ದೊರೆಯಲಿದೆ.
ಮಕರ ರಾಶಿ
ಮಕರ ರಾಶಿಯವರಲ್ಲಿ ಶನಿಯು 2ನೇ ಮನೆಯಲ್ಲಿ ಇರಲಿದೆ. ಉದ್ಯಮಿಗಳಿಗೆ ಈ ಅವಧಿ ಅನುಕೂಲಕರವಾಗಿದೆ, ವೃತ್ತಿ ಜೀವನದಲ್ಲಿ ಯಶಸ್ಸು ಸಿಗಲಿದೆ. ಬಡ್ತಿ ನಿರೀಕ್ಷೆಯಲ್ಲಿ ಇರುವವರಿಗೆ ಈ ಸಮಯ ಉತ್ತಮವಾಗಿದೆ.
ಕುಂಭ ರಾಶಿ
ಶನಿಯು ಕುಂಭ ರಾಶಿಯ ಲಗ್ನ ಮನೆಯಲ್ಲಿದೆ. ಶನಿ ಸಾಡೇಸಾತಿ ಪ್ರಬಾವ ಇರುವುದರಿಂದ ಕೆಲಸದಲ್ಲಿ ಒತ್ತಡ ಹೆಚ್ಚಿರಲಿದೆ, ಹಲವು ಸವಾಲುಗಳು ಎದುರಾಗುವುದು, ಇರುವ ಕೆಲಸವನ್ನು ಕಳೆದುಕೊಳ್ಳಬೇಡಿ, ನಿಮ್ಮ ಕೆಲಸದಲ್ಲಿ ಹೆಚ್ಚಿನ ಶ್ರಮ ಹಾಕಿ.
ಮೀನ ರಾಶಿ
ಶನಿಯು ಮೀನ ರಾಶಿಯವರಲ್ಲಿ 12ನೇ ಮನೆಯಲ್ಲಿ ಇರಲಿದೆ. ಈ ಅವಧಿಯಲ್ಲಿ ಕೆಲಸದಲ್ಲಿ ಅಸಮಧಾನ ಇರಲಿದೆ. ಕೆಲಸ ಬದಲಾಯಿಸಲು ಬಯಸುತ್ತೀರಿ, ಆದರೆ ಕೆಲಸವನ್ನು ಬಿಟ್ಟು ಹುಡುಕುವ ಪ್ರಯತ್ನ ಮಾಡದಿರಿ.



Click it and Unblock the Notifications