ಕುಂಭದಲ್ಲಿ ಶನಿಯ ವಕ್ರೀಯ ಚಲನೆ: ನಿಮ್ಮ ರಾಶಿಯ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ?

ಜನವರಿ 17ಕ್ಕೆ ಕುಂಭ ರಾಶಿಗೆ ಸಂಚರಿಸಿದ ಶನಿಯು ಜೂನ್ 17ಕ್ಕೆ ಕುಂಭ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಜ್ಯೋತಿಷ್ಯ ಶಾಸ್ತ್ರವು ಗ್ರಹದ ಹಿಮ್ಮುಖ ಚಲನೆ ಶುಭ ಫಲಿತಾಂಶ ನೀಡುವುದಿಲ್ಲ ಎಂದು ಹೇಳಲಾಗುವುದು. ಶನಿಯು ಕರ್ಮದ ಫಲ ನೀಡುವ ದೇವರು.

ಶನಿಯ ಹಿಮ್ಮುಖ ಚಲನೆ ಪ್ರತಿಯೊಂದು ರಾಶಿಯ ಮೇಲೆ ಪ್ರಭಾವ ಬೀರಲಿದೆ. ಶನಿಯ ಹಿಮ್ಮುಖ ಚಲನೆ ಕೆಲವೊಂದು ರಾಶಿಗಳ ಮೇಲೆ ಒಳ್ಳೆಯ ಪ್ರಭಾವ ಕೂಡ ಬೀರಿದೆ. ಕುಂಭ ರಾಶಿಯಲ್ಲಿ ಶನಿಯ ವಕ್ರೀಯ ಚಲನೆ ನಿಮ್ಮ ರಾಶಿಯ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ ಬನ್ನಿ:

Saturn Retrograde In Aquarius on 17 June 2023 Effects and Remedies on 12 Zodiac Signs in Kannada

ಮೇಷ ರಾಶಿ
ಕುಂಭದಲ್ಲಿ ಹಿಮ್ಮುಖ ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಲಿದೆ. ನಿಮ್ಮ ಕೆಲಸದಲ್ಲಿ ಅಧಿಕಶ್ರಮ ಹಾಕಬೇಕಾಗುತ್ತದೆ. ಕೆಲಸದಲ್ಲಿ ಅತೃಪ್ತಿ ಉಂಟಾಗಬಹುದು. ಈ ಅವಧಿಯಲ್ಲಿ ಕೆಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು . ಆದರೆ ಈ ಅವಧಿಯಲ್ಲಿ ಶನಿ ನಿಮ್ಮನ್ನು ಪರೀಕ್ಷಿಸುತ್ತಿರುತ್ತಾನೆ, ನೀವು ಶ್ರಮಪಟ್ಟು ಕೆಲಸ ಮಾಡಿದರೆ ಶನಿಯು ನೇರ ಚಲನೆಗೆ ಬಂದಾಗ ಖಂಡಿತ ಒಳ್ಳೆಯ ಫಲ ಪಡೆಯುವಿರಿ. ವ್ಯಾಪಾರಸ್ಥರಿಗೆ ಈ ಅವಧಿ ಅನುಕೂಲಕರ. ಆರ್ಥಿಕವಾಗಿ ಈ ಸಮಯ ಚೆನ್ನಾಗಿರಲಿದೆ. ಸಂಗಾತಿಯ ಮನಸ್ಸಿಗೆ ನೀವಾಗದಂತೆ ನಡೆದುಕೊಳ್ಳಲು ಪ್ರಯತ್ನಿಸಿ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರ
ಪರಿಹಾರ: ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಿ.

ವೃಷಭ ರಾಶಿ
ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದಾಗ ವಿದೇಶ ಪ್ರವಾಸಗಳಲ್ಲಿ ಅಡೆತಡೆಗಳು ಉಂಟಾಗಬಹುದು. ಕೆಲಸಕ್ಕಾಗಿ ಸಾಕಷ್ಟು ಓಡಾಟ ಮಾಡಬೇಕಾಗುತ್ತದೆ. ನೀವು ಕೆಲಸವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಅವಸರ ಪಡಬೇಡಿ. ಶನಿಯ ಹಿಮ್ಮುಖ ಸ್ಥಿತಿಯಲ್ಲಿ ಕೆಲಸವನ್ನು ಬದಲಾಯಿಸಿದರೆ ಮತ್ತೆ ಮತ್ತೆ ಉದ್ಯೋಗವನ್ನು ಬದಲಾಯಿಸಬೇಕಾಗುವುದು. ನಿಮ್ಮ ಕೆಲಸದಲ್ಲಿ ಅಧಿಕ ಗಮನಹರಿಸಿ. ಶನಿಯು ಹಿಮ್ಮೆಟ್ಟುವ ಈ ಅವಧಿಯಲ್ಲಿ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳು ಉಂಟಾಗಬಹುದು, ಆದರೆ ಫಲಿತಾಂಶ ಸ್ವಲ್ಪ ತಡವಾದರೂ ಖಂಡಿತ ಒಳ್ಳೆಯ ಫಲ ಸಿಗಲಿದೆ. ಕೌಟುಂಬಿಕ ಜೀವನದಲ್ಲಿ ಸ್ವಲ್ಪ ಒತ್ತಡದ ಸಾಧ್ಯತೆ ಇದೆ.ಈ ಅವಧಿಯಲ್ಲಿ ಪೋಷಕರ ಆರೋಗ್ಯದ ಕಡೆಗೆ ಗಮನಹರಿಸಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಪಾಲುದಾರರೊಂದಿಗಿನ ಸಂಬಂಧದ ಬಗ್ಗೆ ಸ್ವಲ್ಪ ಗಮನ ಹರಿಸಬೇಕು. ವೈವಾಹಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆಗಳಿರಬಹುದು. ನೀವು ನಿಮ್ಮ ಕೆಲಸವನ್ನು ಶ್ರದ್ಧೆ ಮಾಡುವತ್ತ ಗಮನಹರಿಸಿ, ಆರ್ಥಿಕವಾಗಿ, ಈ ಸಮಯವು ಒಳ್ಳೆಯದಿದೆ
ಪರಿಹಾರ: ಶನಿವಾರ ಸಂಜೆ ಆಲದ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ.

ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಅವಧಿಯಲ್ಲಿ ಕೆಲಸ ಕಾರ್ಯಗಳಲ್ಲಿ ವಿಳಂಬವಾಗಲಿದೆ. ಮಾನಸಿಕ ಒತ್ತಡ ಉಂಟಾಗಬಹುದು. ಈ ಅವಧಿಯಲ್ಲಿ ಕೆಲಸಕ್ಕೆ ಸಂಬಂಧಿಸಿದ ಪ್ರಯಾಣ ಶುಭವಾಗಿದೆ. ನಿಮ್ಮ ಆರ್ಥಿಕ ಸ್ಥಿತಿಯು ಬಲಗೊಳ್ಳಲು ಪ್ರಾರಂಭಿಸುತ್ತದೆ ಆದರೆ ತಂದೆಯ ಆರೋಗ್ಯವು ಸ್ವಲ್ಪ ತೊಂದರೆಗೊಳಗಾಗಬಹುದು. ಅವರ ಆರೋಗ್ಯದ ಕ್ಷೀಣತೆಯು ನಿಮ್ಮ ಚಿಂತೆಗೆ ಕಾರಣವಾಗಬಹುದು. ಆರ್ಥಿಕವಾಗಿ ಈ ಅವಧಿ ಒಳ್ಳೆಯದಿದೆ. ಒಡಹುಟ್ಟಿದವರೊಂದಿಗಿನ ಸಂಬಂಧದಲ್ಲಿ ಏರಿಳಿತದ ಪರಿಸ್ಥಿತಿ ಉಂಟಾಗಬಹುದು, ನೀವು ಪೂರ್ವಜರ ಆಸ್ತಿ ಪಡೆಯಬಹುದು. ಉನ್ನತ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಹೆಚ್ಚು ಶ್ರಮಪಡಬೇಕಾಗುತ್ತದೆ. ಉದ್ಯೋಗದಲ್ಲಿ ವರ್ಗಾವಣೆ ಆಗಬಹುದು.
ಪರಿಹಾರ: ನೀವು ಶನಿವಾರದಂದು ಶ್ರೀ ಶನಿ ಚಾಲೀಸವನ್ನು ಪಠಿಸಬೇಕು.

ಕರ್ಕ ರಾಶಿ
ಎಂಟನೇ ಮನೆಯಲ್ಲಿ ಶನಿದೇವನ ಹಿಮ್ಮುಖ ಚಲನೆಯು ಕರ್ಕ ರಾಶಿಯವರಿಗೆ ತುಂಬಾ ಅನುಕೂಲಕರವಲ್ಲ ಏಕೆಂದರೆ ನೀವು ಈಗಾಗಲೇ ತೊಂದರೆಯಲ್ಲಿದ್ದೀರಿ. ಅಂತಹ ಪರಿಸ್ಥಿತಿಯಲ್ಲಿ, ನೀವು ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಮೊದಲನೆಯದಾಗಿ, ನೀವು ಯಾವುದೇ ರೀತಿಯ ಹೂಡಿಕೆಯನ್ನು ಈ ಅವಧಿಯಲ್ಲಿ ಮಾಡಲೇಬೇಡಿ. ಅಲ್ಲದೆ ಆರೋಗ್ಯದ ಕಡೆಯೂ ಗಮನಹರಿಸಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಅತ್ಯಧಿಕ ಮಾನಸಿಕ ಒತ್ತಡ ತೆಗೆದುಕೊಳ್ಳಬೇಡಿ. ಕೆಲಸದಲ್ಲಿ ಗಮನಹರಿಸಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಒತ್ತಡದ ನಂತರ, ಪರಿಸ್ಥಿತಿಗಳಿರುತ್ತದೆ. ವಿದೇಶಕ್ಕೆ ಹೋಗುವ ಆಸೆ ಈಡೇರಬಹುದು.
ಪರಿಹಾರ: ನೀವು ಇರುವೆಗಳಿಗೆ ಹಿಟ್ಟು ಅಥವಾ ಸಕ್ಕರೆ ಆಹಾರವನ್ನು ನೀಡಿದರೆ ಒಳ್ಳೆಯದು

ಸಿಂಹ ರಾಶಿ
ಶನಿಯು ಹಿಮ್ಮುಖ ಚಲನೆಯಲ್ಲಿದ್ದರೂ ಸಿಂಹರಾಶಿಯವರಿಗೆ ಈ ಅವಧಿ ಅನುಕೂಲಕರವಾಗಿದೆ. ಈ ಸಾಗಣೆಯ ಪರಿಣಾಮವಾಗಿ ವ್ಯಾಪಾರ ವ್ಯವಹಾರಗಳಲ್ಲಿ ಲಾಭವು ಕಂಡುಬರುತ್ತದೆ. ನಿಮ್ಮ ಸ್ಥಗಿತಗೊಂಡ ಯೋಜನೆಗಳು ಮತ್ತೆ ಶುರುವಾಗಲಿದೆ. ವ್ಯವಹಾರದಲ್ಲಿ ಲಾಭಗಳಿಸುವಿರಿ. ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು, ಸಂಗಾತಿಯೊಂದಿಗೆ ಮಾತನಾಡುವ ಮೂಲಕ ಬಗೆಹರಿಸಲು ಪ್ರಯತ್ನಿಸಿ. ದೂರದ ಪ್ರಯಾಣಕ್ಕೆ ಹೋಗುವ ಮುನ್ನ ಸ್ವಲ್ಪ ಕಾಳಜಿ ವಹಿಸಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಹಣವನ್ನು ಸಾಲ ನೀಡುವುದು ಅಥವಾ ಸಾಲ ಪಡೆಯುವುದು ಎರಡೂ ಮಾಡಬೇಡಿ.
ಪರಿಹಾರ: ನೀವು ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಿ

ಕನ್ಯಾ ರಾಶಿ
ಶನಿಯು ಹಿಮ್ಮುಖ ಚಲನೆಯಲ್ಲಿದ್ದಾಗ ಕ್ನಯಾ ರಾಶಿಯವರು ಆರೋಗ್ಯದ ಬಗ್ಗೆ ಗಮನಹರಿಸಬೇಕು, ಹಳೆಯ ಕಾಯಿಲೆಗಳು ಮರುಕಳಿಸಬಹುದು. ಆರೋಗ್ಯದ ಬಗ್ಗೆ ಸ್ವಲ್ಪವೂ ನಿರ್ಲಕ್ಷ್ಯ ಬೇಡ. ಈ ಸಮಯದಲ್ಲಿ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಈ ಅವಧಿಯಲ್ಲಿ ಷೇರು ಮಾರುಕಟ್ಟೆಯಿಂದ ದೂರವಿರಿ. ನೀವು ಈ ಹಿಂದೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರೆ, ಈ ಸಮಯದಲ್ಲಿ ನೀವು ಅದರಿಂದ ಉತ್ತಮ ಲಾಭವನ್ನು ಪಡೆಯಬಹುದು. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಹದಗೆಡಬಹುದು, ಸ್ವಲ್ಪ ಜಾಗರೂಕರಾಗಿರಿ, ಕಿಬ್ಬೊಟ್ಟೆಯ ಕಾಯಿಲೆ ಅಥವಾ ಎದೆಗೆ ಸಂಬಂಧಿಸಿದ ಸಮಸ್ಯೆಗಳು ನಿಮ್ಮನ್ನು ಹೆಚ್ಚು ಕಾಡಬಹುದು, ಅಸಿಡಿಟಿ ಸಮಸ್ಯೆಯೂ ಕಾಡಬಹುದು. ಹಳೆಯ ಸಾಲಗಳನ್ನು ಮರುಪಾವತಿ ಮಾಡುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಆಸ್ತಿ ವಿವಾದ ಕೋರ್ಟ್‌ನಲ್ಲಿದ್ದರೆ ತೀರ್ಪು ನಿಮ್ಮ ಪರ ಬರಬಹುದು.
ಪರಿಹಾರ: ನೀವು ಮೀನುಗಳಿಗೆ ಆಹಾರವನ್ನು ನೀಡಬೇಕು. ಶನಿವಾರ ಬಡವರಿಗೆ ದಾನ ಮಾಡಿ.

ತುಲಾ ರಾಶಿ
ಶನಿಯು ಹಿಮ್ಮುಖ ಚಲನೆಯಲ್ಲಿರುವಾಗ ಪ್ರೇಮ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉಂಟಾಗಬಹುದು. ಆದರೆ ಆರ್ಥಿಕವಾಗಿ ಈ ಅವಧಿ ತೊಂದರೆಯಿಲ್ಲ. ಈ ಅವಧಿಯಲ್ಲಿ ಕೆಲಸದಲ್ಲಿ ಸಮಸ್ಯೆ ಉಂಟಾಗುವುದು, ಆದರೆ ನಿಮಗೆ ಒಳ್ಳೆಯ ಕೆಲಸ ಸಿಗುತ್ತದೆ. ನೀವು ಕೆಲಸವನ್ನು ಬದಲಾಯಿಸಲು ಬಯಸಿದರೆ ಈ ಅವಧಿಯಲ್ಲಿ ಬದಲಾಯಿಸಬೇಡಿ. ಅವಾಹಿತರಿಗೆ ಮದುವೆಗೆ ಸಂಬಂಧ ಕೂಡಿ ಬರಲಿದೆ. ಈ ಸಮಯ ಆರ್ಥಿಕವಾಗಿ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಏಕಾಗ್ರತೆ ಕೊರತೆ ಉಂಟಾಗಬಹುದು. ಕುಟುಂಬದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ತಾಯಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕಾಗಿದೆ ಹಾಗೂ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಿ.
ಪರಿಹಾರ: ನೀವು ಶನಿವಾರದಂದು ರುದ್ರಾಭಿಷೇಕವನ್ನು ಮಾಡಬೇಕು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯಲ್ಲಿ ನಾಲ್ಕನೇ ಮನೆಯಲ್ಲಿ ಹಿಮ್ಮುಖ ಶನಿಯ ಪ್ರಭಾವದಿಂದಾಗಿ ಕುಟುಂಬ ಜೀವನದಲ್ಲಿ ಸ್ವಲ್ಪ ಗೊಂದಲ ಉಂಟಾಗಬಹುದು. ಈ ಅವಧಿಯಲ್ಲಿ ಕುಟುಂಬದ ಸದಸ್ಯರ ಆರೋಗ್ಯವು ಕಡೆ ವಿಶೇಷ ಗಮನಹರಿಸಿ. ಈ ಅವಧಿಯಲ್ಲಿ ನಿಮ್ಮ ತಾಯಿಯ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಆಸ್ತಿ ವಿವಾದವಿದ್ದರೆ ಅದು ಹೆಚ್ಚಾಗದಂತೆ ಜಾಗ್ರತೆವಹಿಸಿ. ವ್ಯವಹಾರದಲ್ಲಿ ಲಾಭ ಗಳಿಸುವಿರಿ. ಅವಾಹಿತರು ಕೆಲವು ಒತ್ತಡವನ್ನು ಎದುರಿಸಬೇಕಾಗಬಹುದು. ಈ ಅವಧಿಯಲ್ಲಿ ನೀವು ಸಂಬಂಧದಲ್ಲಿ ತೊಂದರೆಗಳನ್ನು ಎದುರಿಸಬೇಕಾಗಬಹುದು. ಆದರೆ ಪರಸ್ಪರ ತಿಳುವಳಿಕೆಯನ್ನು ತೋರಿಸುವ ಮೂಲಕ ಪ್ರತಿ ಸವಾಲನ್ನು ಎದುರಿಸಲು ಸಾಧ್ಯವಾಗುತ್ತದೆ.
ಪರಿಹಾರ: ಶನಿವಾರದಂದು ಶ್ರೀ ಹನುಮಂತನನ್ನು ಪೂಜಿಸಿ.

ಧನು ರಾಶಿ
ಶನಿಯ ಹಿಮ್ಮುಖ ಚಲನೆಯು ಧನು ರಾಶಿಯವರಿಗೆ ಒಳ್ಳೆಯ ಫಲಿತಾಂಶಗಳನ್ನು ನೀಡಲಿದೆ. ನೀವು ಊಹಿಸಿರದ ಕೆಲವು ಕ್ಷೇತ್ರಗಳಲ್ಲಿ ನೀವು ಅನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ನಿಮ್ಮ ಸಹೋದ್ಯೋಗಿಗಳು ಕ್ಷೇತ್ರದಲ್ಲಿ ನಿಮಗೆ ಸಂಪೂರ್ಣ ಬೆಂಬಲವನ್ನು ನೀಡುತ್ತಾರೆ, ಇದರಿಂದಾಗಿ ಕ್ಷೇತ್ರದಲ್ಲಿ ನಿಮ್ಮ ಸ್ಥಾನವು ಮೇಲುಗೈ ಸಾಧಿಸಲು ಪ್ರಾರಂಭಿಸಲಾಗುವುದು. ನಿಮ್ಮ ವ್ಯವಹಾರ ಮತ್ತು ಕೆಲಸದ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಮಾಡುವ ಪ್ರಯಾಣಗಳಿಂದ ಅನುಕೂಲ ಪಡೆಯುವಿರಿ. ವಿದ್ಯಾರ್ಥಿಗಳಿಗೆ ಈ ಅವಧಿ ಅನುಕೂಲಕರವಾಗಿದೆ
ಪರಿಹಾರ: ಶನಿಯ ದುಷ್ಪರಿಣಾಮಗಳನ್ನು ತಪ್ಪಿಸಲು ನೀವು ಈ ಅವಧಿಯಲ್ಲಿ ಶನಿ ಮಂತ್ರವನ್ನು ಪಠಿಸಬೇಕು.

ಮಕರ ರಾಶಿ
ಶನಿಯ ಹಿಮ್ಮುಖ ಚಲನೆಯ ಈ ಅವಧಿಯಲ್ಲಿನೀವು ನಿಮ್ಮ ಮಾತನ್ನು ನಿಯಂತ್ರಿಸಬೇಕು. ನಿಮ್ಮ ಮಾತು ಸಂಬಂಧಗಳ ಮೇಲೆ ಪರಿಣಾಮ ಬೀರಬಹುದು. ಆರ್ಥಿಕ ದೃಷ್ಟಿಯಿಂದ ನೋಡುವುದಾದರೆ ಈ ಸಾಗಣೆಯು ನಿಮಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು. ಆಸ್ತಿ ಮಾರಾಟ ಅಥವಾ ಖರೀದಿಗೆ ಪ್ರಯತ್ನಿಸುತ್ತಿದ್ದರೆ ಈ ಅವಧಿ ಅನುಕೂಲಕರವಾಗಿದೆ. ಕುಟುಂಬ ಸದಸ್ಯರಲ್ಲಿ ಹೊಂದಾಣಿಕೆಯ ಕೊರತೆ ಇರಬಹುದು. ಅದನ್ನು ತೆಗೆದುಹಾಕಲು ನೀವು ನಿರಂತರವಾಗಿ ಪ್ರಯತ್ನಿಸುತ್ತಿರಬೇಕು. ಸಂಗಾತಿಗೆ ಆರೋಗ್ಯ ಸಮಸ್ಯೆ ಇರಬಹುದು. ಕೌಟುಂಬಿಕ ಸೌಕರ್ಯಗಳು ಹೆಚ್ಚಾಗಲಿವೆ.
ಪರಿಹಾರ: ಶನಿವಾರ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿ.

ಕುಂಭ ರಾಶಿ
ಕುಂಭ ರಾಶಿಯಲ್ಲಿ ಶನಿಯು ಹಿಮ್ಮುಖ ಚಲನೆ ಪ್ರಾರಂಭಿಸಿದಾಗ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಕೆಲವು ಪ್ರಮುಖ ನಿರ್ಧಾರಗಳು ನಿಮ್ಮ ಕೈ ಮೀರಿದಂತೆ ಅನಿಸುವುದು. ಸ್ನೇಹಿತರಿಗೆ ನಿಮ್ಮ ಸಹಾಯ ಬೇಕಾಗಬಹುದು. ವ್ಯಾಪಾರದಲ್ಲಿ ಪ್ರಗತಿಯ ಸಾಧ್ಯತೆ ಇರುತ್ತದೆ. ವಿದೇಶಿ ಸಂಪರ್ಕಗಳಿಂದ ನಿಮಗೆ ಲಾಭವಾಗಲಿದೆ. ವೃತ್ತಿಯತ್ತ ಗಮನ ಹರಿಸಿ. ಈ ಸಮಯದಲ್ಲಿ ನೀವು ಹೆಚ್ಚು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಈ ಅವಧಿಯಲ್ಲಿ ಆರೋಗ್ಯದಲ್ಲಿ ಗಮನಹರಿಸಿ. ವೈವಾಹಿಕ ಜೀವನದಲ್ಲಿ ಸ್ವಲ್ಪ ಉದ್ವಿಗ್ನತೆ ಇರಬಹುದು ನಿಮ್ಮ ಪ್ರಬುದ್ಧತೆಯ ವರ್ತನೆಯಿಂದ ಸಮಸ್ಯೆಗಳನ್ನು ತಪ್ಪಿಸಬಹುದು.
ಪರಿಹಾರ: ನೀವು ಶ್ರೀ ರಾಮ ರಕ್ಷಾ ಸ್ತೋತ್ರವನ್ನು ಪಠಿಸಬೇಕು.

ಮೀನ ರಾಶಿ
ಕುಂಭ ರಾಶಿಯಲ್ಲಿ ಶನಿ ಹಿಮ್ಮುಖ ಚಲನೆಯಲ್ಲಿದ್ದಾಗ ವಿದೇಶ ಪ್ರವಾಸಕ್ಕೆ ಅನುಕೂಲಕರವಾಗಿದೆ. ನಿಮ್ಮ ವೆಚ್ಚಗಳು ಹೆಚ್ಚಾಗುತ್ತವೆ , ನೀವು ಆರೋಗ್ಯದ ಕಡೆಗೆ ಗಮನಹರಿಸಿ. ನೀವು ದೂರದ ರಾಜ್ಯಗಳು ಅಥವಾ ದೂರದ ದೇಶಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ಮಾಡಿದರೆ, ನಿಮ್ಮ ವ್ಯವಹಾರವು ಪ್ರಗತಿಯಾಗುತ್ತದೆ ಆದರೆ ಸಾಮಾನ್ಯ ವ್ಯಾಪಾರಸ್ಥರು ಹಣದ ಕೊರತೆಯನ್ನು ಅನುಭವಿಸಬಹುದು. ಅಂತಹ ಪರಿಸ್ಥಿತಿಯಲ್ಲಿ ಬಂಡವಾಳ ಹೂಡಿಕೆಯ ಅಗತ್ಯವಿರುತ್ತದೆ. ನೀವು ಎಲ್ಲಿಂದಲಾದರೂ ಸಾಲವನ್ನು ತೆಗೆದುಕೊಳ್ಳಬಹುದು, ಆದರೆ ಈ ಸಮಯದಲ್ಲಿ ಸಾಲವನ್ನು ತೆಗೆದುಕೊಂಡರೆ ಹಿಂದಿರುಗಿಸಲು ನೀವು ಸಾಕಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಆದ್ದರಿಂದ ಎಚ್ಚರಿಕೆಯಿಂದಿರಿ. ಅತಿಯಾದ ಖರ್ಚು ಮಾಡಬೇಡಿ.
ಪರಿಹಾರ: ಶನಿವಾರದಂದು ಆಲದ ಮರಕ್ಕೆ ನೀರನ್ನು ಅರ್ಪಿಸಿ ಮತ್ತು ಏಳು ಬಾರಿ ಪ್ರದಕ್ಷಿಣೆ ಹಾಕಿ.

English summary

Saturn Retrograde In Aquarius on 17 June 2023 Effects and Remedies on 12 Zodiac Signs in Kannada

Shani Vakri In June 2023 in Kumba Rashi ; Saturn Retrograde In Aquarius Effects on Zodiac Signs : The Saturn Retrograde In Aquarius will take place on 12 june 2023.
Story first published: Wednesday, May 10, 2023, 18:00 [IST]
X
Desktop Bottom Promotion