ಶನಿಯ ಹಿಮ್ಮೆಟ್ಟುವಿಕೆ : ಈ 7 ರಾಶಿಯವರು 141 ದಿನ ಸ್ವಲ್ಪ ಜಾಗ್ರತೆ

ಕರ್ಮಫಲಕನಾದ ಶನಿಯು ಸದ್ಯ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. ಶನಿಯು ಜೂನ್ 17 ರಂದು ಶನಿವಾರ ರಾತ್ರಿ 10.56 ಕ್ಕೆ ಕುಂಭ ರಾಶಿಯಲ್ಲಿ ಹಿಮ್ಮೆಟ್ಟುತ್ತಾನೆ. ಈ ದಿನದಿಂದ ಶನಿಯ ಹಿಮ್ಮುಖ ಚಲನೆ ಪ್ರಾರಂಭವಾಗುತ್ತದೆ. 5 ತಿಂಗಳವರೆಗೆ ಶನಿಯು ಹಿಮ್ಮುಖ ದಿಕ್ಕಿನಲ್ಲಿ ಚಲಿಸುತ್ತದೆ. ನಂತರ ನವೆಂಬರ್ 04, ಶನಿವಾರ ಮಧ್ಯಾಹ್ನ 12.31 ಕ್ಕೆ ಮತ್ತೆ ನೇರ ಚಲನೆಯನ್ನು ಪ್ರಾರಂಭಿಸುತ್ತಾನೆ.

ಈ ಸಮಯದಲ್ಲಿ ಶನಿಯು ಹಿಮ್ಮುಖವಾಗಿ ಚಲಿಸುತ್ತಿರೋದ್ರಿಂದ ಅನೇಕ ರಾಶಿಯವರ ಮೇಲೆ ಇದು ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ಜೂನ್ 17 ರಿಂದ ಶನಿಯ ಹಿನ್ನಡೆಯಿಂದಾಗಿ 7 ರಾಶಿಯವರು ತುಂಬಾನೇ ಜಾಗರೂಕರಾಗಿರಬೇಕು. ಈ ಸಂದರ್ಭದಲ್ಲಿ ಧನಹಾನಿ, ಶತ್ರುಗಳ ಭಯ ಮತ್ತು ಅಪಘಾತಗಳು ನಡೆಯುವ ಸಾಧ್ಯತೆಯಿದೆ. ಅಷ್ಟಕ್ಕು ಶನಿಯ ಹಿಮ್ಮೆಟ್ಟುವಿಕೆಯಿಂದ ಯಾವ ಏಳು ರಾಶಿಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಅನ್ನೋದನ್ನು ತಿಳಿಯೋಣ.

Saturn Retrograde in Aquarius June 2023: Causes Destruction In the Life These Zodiac Signs in Kannada

ವೃಷಭ ರಾಶಿ

ಶನಿಯ ಹಿಮ್ಮೆಟ್ಟುವಿಕೆಯು ವೃಷಭ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ಕೆಲಸದ ಸ್ಥಳದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಕೆಲಸ ಸ್ಥಗಿತಗೊಳ್ಳಬಹುದು. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಹಣದ ಕೊರತೆ ಉಂಟಾಗಬಹುದು. ಯೋಚಿಸದೆ ಹೂಡಿಕೆ ಮಾಡುವುದರಿಂದ ನಷ್ಟ ಉಂಟಾಗಬಹುದು. ಕುಟುಂಬದ ಸದಸ್ಯರು ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಯಿದೆ.

ಮಿಥುನ ರಾಶಿ

ಶನಿಯ ಹಿಮ್ಮೆಟ್ಟುವಿಕೆಯು ಮಿಥುನ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ನಿಮ್ಮ ತಂದೆಯೊಂದಿಗಿನ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಕೆಲಸದಲ್ಲಿ ವಿಳಂಬವು ನಿಮ್ಮನ್ನು ಅಸಮಾಧಾನಗೊಳಿಸಬಹುದು. ಆರ್ಥಿಕ ಲಾಭದ ಕೊರತೆಯು ಒತ್ತಡಕ್ಕೆ ಕಾರಣವಾಗಬಹುದು. ವ್ಯಾಪಾರಸ್ಥರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಈ ಸಮಯದಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು.

ಕರ್ಕಾಟಕ ರಾಶಿ

ಶನಿಯ ಹಿಮ್ಮೆಟ್ಟುವಿಕೆಯು ಕರ್ಕಾಟಕ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ಶತ್ರುಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಬಹುದು. ನಿಮ್ಮ ನಡವಳಿಕೆ ಮತ್ತು ಮಾತಿನ ಮೇಲೆ ಸಂಯಮವನ್ನು ಇಟ್ಟುಕೊಳ್ಳಿ. ನಿಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿ. ಈ ಸಮಯದಲ್ಲಿ ನಿಮ್ಮ ಆರೋಗ್ಯವು ಹದಗೆಡಬಹುದು. ಹೀಗಾಗಿ ಆರೋಗ್ಯದ ಕಡೆಗೆ ಗಮನ ಕೊಡಿ. ನಿಮ್ಮ ಪ್ರೇಮ ಜೀವನದಲ್ಲಿ ಗೊಂದಲ ಉಂಟಾಗಬಹುದು. ಆತುರ ಪಟ್ಟು ಹೂಡಿಕೆ ಮಾಡೋದಕ್ಕೆ ಹೋದರೆ ನಷ್ಟಕ್ಕೆ ಕಾರಣವಾಗಬಹುದು.

ತುಲಾ ರಾಶಿ

ಶನಿಯ ಹಿಮ್ಮೆಟ್ಟುವಿಕೆಯು ತುಲಾ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಹಾಳಾಗುವ ಸಾಧ್ಯತೆಯಿದೆ. ವಾಹನ ಚಾಲನೆ ವೇಳೆ ಜಾಗರೂಕರಾಗಿರಿ ಇಲ್ಲದಿದ್ದರೆ ಅಪಘಾತ ಸಂಭವಿಸಬಹುದು. ಶಿಕ್ಷಣ ಕ್ಷೇತ್ರದಲ್ಲಿ ಯಶಸ್ಸಿಗೆ ತುಂಬಾನೇ ಶ್ರಮಿಸಬೇಕಾಗುತ್ತದೆ. ನಿಮ್ಮ ಅಜಾಗರೂಕತೆಯಿಂದ ನೀವು ಸಾಕಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಷೇರು ಮಾರುಕಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡೋದಕ್ಕೆ ಹೋಗಬೇಡಿ. ಈ ಸಮಯದಲ್ಲಿ ನಷ್ಟ ಉಂಟಾಗುವ ಸಾಧ್ಯತೆ ಹೆಚ್ಚು.

ಮಕರ ರಾಶಿ

ಶನಿಯ ಹಿಮ್ಮೆಟ್ಟುವಿಕೆಯು ಮಕರ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ನಿಮ್ಮ ಕುಟುಂಬದಲ್ಲಿ ಗೊಂದಲ ಉಂಟಾಗಬಹುದು. ನಿಮ್ಮ ಸಂಗಾತಿಯ ಮತ್ತು ತಾಯಿಯ ಆರೋಗ್ಯವು ಹದಗೆಡಬಹುದು. ಈ ಸಮಯದಲ್ಲಿ ಯಾರಿಗೂ ಸಾಲ ಕೊಡೋದಕ್ಕೆ ಹೋಗಬೇಡಿ. ಇದರಿಂದ ನೀವು ನಷ್ಟ ಅನುಭವಿಸುವ ಸಾಧ್ಯತೆಯಿದೆ.

ಕುಂಭ ರಾಶಿ

ಶನಿಯ ಹಿಮ್ಮೆಟ್ಟುವಿಕೆಯು ಕುಂಭ ರಾಶಿಯವರ ಮೇಲೆ ನಕಾರಾತ್ಮಕ ಪರಿಣಾಮಗಳನ್ನು ಬೀರಲಿದೆ. ಈ ಸಂದರ್ಭದಲ್ಲಿ ನೀವು ಪ್ರತಿಯೊಂದು ಹಂತದಲ್ಲಿ ಕಷ್ಟ ನೋವುಗಳನ್ನು ಅನುಭವಿಸುತ್ತೀರಿ. ಕೆಲಸದಲ್ಲಿ ಯಶಸ್ಸು ಸಿಗದೆ ಮನಸ್ಸಿಗೆ ಬೇಸರವಾಗಬಹುದು. ನಿಮ್ಮ ಸ್ನೇಹಿತರನ್ನು ನೀವು ಅತಿಯಾಗಿ ನಂಬೋದಕ್ಕೆ ಹೋಗಬೇಡಿ. ಅವರೇ ನಿಮ್ಮ ಬೆನ್ನಿಗೆ ಚೂರಿ ಹಾಕುವ ಸಾಧ್ಯತೆಯಿದೆ. ವ್ಯಾಪಾರ ಪಾಲುದಾರರೊಂದಿಗಿನ ಕೆಟ್ಟ ಸಂಬಂಧವು ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಗೊತ್ತಿರುವವರಿಂದ ಸಲಹೆ ಪಡೆಯಿರಿ.

English summary

Saturn Retrograde in Aquarius June 2023: Causes Destruction In the Life These Zodiac Signs in Kannada

Saturn Retrograde in Aquarius June 2023: Read More.
Story first published: Monday, June 5, 2023, 14:22 [IST]
X
Desktop Bottom Promotion