Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
141 ದಿನಗಳವರೆಗೆ ಶನಿಯ ವಕ್ರೀಯ ಚಲನೆ: ದೇಶ, ವಿದೇಶ, ಜೀವನದ ಮೇಲೆ ಇದರ ಪ್ರಭಾವ ಹೇಗಿರಲಿದೆ ಗೊತ್ತಾ?
ಶನಿದೇವ ನ್ಯಾಯದ ದೇವರು. ಶನಿ ದೇವನು ನಮ್ಮ ಕರ್ಮಕ್ಕೆ ತಕ್ಕ ಫಲ ನೀಡುತ್ತಾನೆ. ಶನಿಯ ಕೆಟ್ಟ ದೃಷ್ಟಿ ತಾಗಿದರೆ ತುಂಬಾನೇ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಎಲ್ಲಾ ಗ್ರಹಗಳಿಗಿಂತ ಶನಿಯು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹವಾಗಿದೆ. ಆದ್ದರಿಂದ ಇದರ ಫಲ ಕೂಡ ದೀರ್ಘ ಸಮಯದವರೆಗೆ ಅನುಭವಿಸಬೇಕಾಗುತ್ತದೆ. ಇದೀಗ ಶನಿಯು ಕುಂಭ ರಾಶಿಯಲ್ಲಿದೆ. ಕುಂಭ ರಾಶಿಯಲ್ಲಿರುವ ಶನಿಯು ಜೂನ್ 17ರಿಂದ ವಕ್ರೀಯವಾಗಿ ಚಲಿಸಲಿದೆ. 141 ದಿನಗಳವರೆಗೆ ಶನಿಯು ವಕ್ರೀಯವಾಗಿ ಚಲಿಸಲಿದೆ.
ಶನಿಯು ವಕ್ರೀಯ ಚಲನೆ ದ್ವಾದಶ ರಾಶಿಗಳ ಮೇಲಷ್ಟೇ ಅಲ್ಲ ದೇಶ, ವಿದೇಶಗಳ ಮೇಲೂ ಪ್ರಭಾವ ಬೀರಲಿದೆ ಎಂಬುವುದಾಗಿ ವೈದಿಕ ಶಾಸ್ತ್ರ ಹೇಳುತ್ತದೆ. ಶನಿಯು ನವೆಂಬರ್ 4ರವರೆಗೆ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಕುಂಭದಲ್ಲಿ ಶನಿ ಇರುವುದರಿಂದ ಮಕರ, ಕುಂಭ , ಮೀನ ರಾಶಿಯವರಿಗೆ ಶನಿ ಸಾಡೇಸಾತಿ ನಡೆಯುತ್ತಿದೆ. ಇದೀಗ ಶನಿಯ ಹಿಮ್ಮುಖ ಚಲನೆ ಈ ಬಗೆಯ ಪ್ರಭಾವ ಬೀರಲಿದೆ ಎಂಬುವುದಾಗಿ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ನೋಡಿ:

ದೇಶ ಮತ್ತು ಪ್ರಪಂಚದ ಮೇಲೆ ಶನಿ ವಕ್ರಿಯ ಪ್ರಭಾವ ಹೇಗಿರಲಿದೆ?
- ಶನಿಯು ಕುಂಭದಲ್ಲಿ ಎರಡೂವರೆ ವರ್ಷಗಳ ಕಾಲ ಇರುತ್ತಾನೆ. ಈ ಬದಲಾವಣೆಯಿಂದ ದೇಶಕ್ಕೆ ಅನುಕೂಲವಾಗಲಿದೆ.
- ಧಾನ್ಯಗಳ ಉತ್ತಮ ಇಳುವರಿಯೊಂದಿಗೆ ಮಾರುಕಟ್ಟೆಯಲ್ಲಿ ಉತ್ಕರ್ಷದ ಸಾಧ್ಯತೆಯಿದೆ.
- ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ ಸಾಧಿಸುತ್ತದೆ, ಆದರೆ ನೈಸರ್ಗಿಕ ವಿಕೋಪಗಳು ಅದರ ಮೇಲೆ ಪರಿಣಾಮ ಬೀರಬಹುದು.
- ಭಯೋತ್ಪಾದಕ ಘಟನೆಗಳು ಹೆಚ್ಚಾಗಬಹುದು.
- ಪ್ರಮುಖ ಸ್ಥಾನಗಳನ್ನು ಹೊಂದಿರುವವರು ತಮ್ಮ ಸುರಕ್ಷತೆ ಮತ್ತು ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ.
- ಈ ಅವಧಿಯಲ್ಲಿ ಗೊಂದಲ ಹೆಚ್ಚಾಗಬಹುದು
- ಕಾಯಿಲೆಗಳ ಚಿಕಿತ್ಸೆಯಲ್ಲಿಯೂ ಹೊಸ ಆವಿಷ್ಕಾರಗಳು ಆಗಲಿವೆ. ಹೊಸ ಔಷಧಗಳು ಮತ್ತು ತಂತ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.
- ಪ್ರಪಂಚದಾದ್ಯಂತ ಗಡಿಗಳಲ್ಲಿ ಉದ್ವಿಗ್ನತೆ ಪ್ರಾರಂಭವಾಗುತ್ತದೆ.
ದೇಶದಲ್ಲಿ ಹೋರಾಟ, ಹಿಂಸಾಚಾರ, ಬ್ಯಾಂಕ್ ಹಗರಣ, ವಿಮಾನ ಅಪಘಾತ, ವಿಮಾನ ಅಸಮರ್ಪಕ, ಗೊಂದಲ ಮತ್ತು ಅಗ್ನಿಸ್ಪರ್ಶದ ಸನ್ನಿವೇಶಗಳು ಸೃಷ್ಟಿಯಾಗಬಹುದು.
ನೈಸರ್ಗಿಕ ವಿಕೋಪದ ಜೊತೆಗೆ ಬೆಂಕಿ, ಭೂಕಂಪ, ಅನಿಲ ಅಪಘಾತ, ವಿಮಾನ ಅಪಘಾತದ ಸಾಧ್ಯತೆಗಳಿವೆ.
ಹಿಮ್ಮುಖ ಶನಿಯ ಪರಿಣಾಮ
ಶನಿಗ್ರಹದ ಸ್ಥಾನ ಅನುಕೂಲಕರವಾಗಿದ್ದರೆ ಶುಭ ಪ್ರಭಾವದಿಂದಸ್ಥಗಿತಗೊಂಡ ಕೆಲಸಗಳು ಪೂರ್ಣಗೊಳ್ಳಲಿವೆ. ಆಸ್ತಿಗೆ ಸಂಬಂಧಿಸಿದ ವಿಷಯಗಳು ಮುನ್ನೆಲೆಗೆ ಬರುತ್ತವೆ. ಕೆಲವು ಉದ್ಯೋಗಿಗಳಿಗೆ ಬಯಸಿದ ವರ್ಗಾವಣೆ ಯಾಗಬಹುದು. ವ್ಯಾಪಾರಸ್ಥರ ಕೆಲಸದ ಸ್ಥಳದಲ್ಲಿ ಬದಲಾವಣೆ ಇರುತ್ತದೆ. ವಾಸಿಸುವ ಸ್ಥಳವೂ ಬದಲಾಗಬಹುದು. ಅದೇ ಶನಿಯ ಸ್ಥಾನ ಅನುಕೂಲಕರವಾದ ಸ್ಥಾನದಲ್ಲಿ ಇರದಿದ್ದರೆ ಈ ಸಮಯದಲ್ಲಿ ಅಶುಭ ಪರಿಣಾಮದಿಂದಾಗಿ, ಕೆಲವರಿಗೆ ಕಾಲು ಅಥವಾ ಮೂಳೆಗೆ ಗಾಯವಾಗಬಹುದು. ಶನಿ ಸಾಡೇಸಾತಿ ಇರುವವರು ಹೆಚ್ಚು ಸಾಲ ಮಾಡಬೇಕಾಗುತ್ತದೆ. ಕೆಲಸದಲ್ಲಿ ಆಗಾಗ್ಗೆ ಬದಲಾವಣೆಯಾಗುವುದು.
ನಿಮ್ಮ ರಾಶಿಯಲ್ಲಿ ಶನಿಯ ಸ್ಥಾನಕ್ಕೆ ತಕ್ಕಂತೆ ಅದರ ಫಲ ಸಿಗಲಿದೆ:
1. ಶನಿಯು ಮೊದಲ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದರೆ ಅದು ಅದೃಷ್ಟವನ್ನು ತರಲಿದೆ. ಶನಿಯು ಕುಂಭ ರಾಶಿಯಲ್ಲಿ ಮೊದಲನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ.
2. ಶನಿಯು ಎರಡನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿದ್ದರೆ ನೀವು ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ತೋರಿಸುತ್ತೀರಿ. ಮಕರ ರಾಶಿಯಲ್ಲಿ ಎರಡನೇ ಮನೆಯಲ್ಲಿ ವಕ್ರೀಯವಾಗಿ ಚಲಿಸಲಿದೆ.
3. ಧನು ರಾಶಿಯವರಲ್ಲಿ ಮೂರನೇ ಮನೆಯಲ್ಲಿ ಶನಿಯು ಹಿಮ್ಮುಖ ಚಲನೆಯಲ್ಲಿದೆ. ಈ ಅವಧಿಯಲ್ಲಿ ವೃತ್ತಿ ಬದುಕಿನಲ್ಲಿ ಪ್ರಗತಿ ಉಂಟಾಗಲಿದೆ.
4. ವೃಶ್ಚಿಕ ರಾಶಿಯಲ್ಲಿ 4ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುವುದರಿಂದ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಆರೋಗ್ಯದ ಮೇಲೂ ಪ್ರಭಾವ ಬೀರುವುದು.
5. ಶನಿಯು ತುಲಾ ರಾಶಿಯಲ್ಲಿ 5ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸುತ್ತದೆ. ಈ ಸಮಯದಲ್ಲಿ ಪ್ರೇಮ ಜೀವನದಲ್ಲಿ ಮೋಸ ಹೀಗುವ ಸಾಧ್ಯತೆ ಇದೆ.
6. ಶನಿಯು ಕನ್ಯಾ ರಾಶಿಯಲ್ಲಿ 6ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಈ ಸಮಯ ಕನ್ಯಾ ರಾಶಿಯವರಿಗೆ ಅನುಕೂಲಕರವಾಗಿದೆ.
7. ಶನಿಯು ಸಿಂಹ ರಾಶಿಯವರಲ್ಲಿ 7ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿ ಚಲಿಸಲಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಉಂಟಾಗಲಿದೆ.
8. ಶನಿಯು ಕರ್ಕ ರಾಶಿಯವರಲ್ಲಿ 8ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ಒಡಹುಟ್ಟಿದವರ ಜೊತೆಗೆ ತಪ್ಪು ಕಲ್ಪನೆ ಉಂಟಾಗಬಹುದು.
9. ಶನಿಯು ಮಿಥುನ ರಾಶಿಯವರಲ್ಲಿ 9ನೇ ಮನೆಯಲ್ಲಿ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಸಮಾಜ ಸೇವೆ ಮಾಡುವವರಿಗೆ ಈ ಸಮಯದಲ್ಲಿ ಕೀರ್ತಿ ಹೆಚ್ಚಾಗಲಿದೆ. ಅಲ್ಲದೆ ವೃತ್ತಿ ಜೀವನದಲ್ಲಿ ಬೆಳವಣಿಗೆಯಾಗಲು ಸಹಾಯ ಮಾಡುತ್ತದೆ.
10. ಶನಿಯು ವೃಷಭ ರಾಶಿಯವರಲ್ಲಿ 10ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಈ ಸಮಯದಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ, ಮನೆ ಅಥವಾ ಗಾಡಿ ಖರೀದಿಸುವ ಆಸೆ ಈಡೇರಲಿದೆ.
11. ಶನಿಯು ಮೇಷ ರಾಶಿಯವರಲ್ಲಿ 11ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಈ ಸ್ಥಾನದಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯುವಿರಿ.
12. ಮೀನ ರಾಶಿಯವರಲ್ಲಿ ಶನಿಯು 12ನೇ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದೆ. ಈ ಸ್ಥಾನ ನಿಮಗೆ ಅನುಕೂಲಕರವಾಗಿದೆ. ಆದರೆ ಈ ಅವಧಿಯಲ್ಲಿ ನೀವು ಸ್ವಲ್ಪ ಕಠೋರವಾಗಿ ವರ್ತಿಸಬಹುದು. ವೃತ್ತಿ ಹಾಗೂ ಉದ್ಯಮದಲ್ಲಿ ಪ್ರಗತಿ ಕಾಣುವಿರಿ.



Click it and Unblock the Notifications
