Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ಶನಿಯು ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿರುವ 138 ದಿನ ಈ 4 ರಾಶಿಯವರಿಗೆ ಬಂಪರ್ ಲಾಟರಿ!
ಶನಿದೇವ ಕುಂಭ ರಾಶಿಯಲ್ಲಿ ಜೂನ್ 17ರಿಂದ ಹಿಮ್ಮುಖ ಚಲನೆಯಲ್ಲಿದೆ. ಶನಿಯೂ ನವೆಂಬರ್ ನಾಲ್ಕವರೆಗೆ ಹಿಮ್ಮುಖ ಚಲನೆಯಲ್ಲಿ ಇರಲಿದೆ. ಆದ್ದರಿಂದ 137 ದಿನಗಳವರೆಗೆ ಶನಿಯು ಹಿಮ್ಮುಖ ಚಲನೆಯಲ್ಲಿಯೇ ಇರಲಿದೆ. ಈ ಹಿಮ್ಮುಖ ಚಲನೆಯ ಅವಧಿಯು ಕೆಲವೊಂದು ರಾಶಿಯವರಿಗೆ ಬಂಪರ್ ಟಾಟರಿ ಎಂದೇ ಹೇಳಬಹುದು. ಹೌದು ಶನಿಯ ಕೃಪೆಯಿದ್ದರೆ ಇದೆಯೆಲ್ಲಾ ಭಾಗ್ಯದ ಬಾಗಿಲು ತೆರೆದುಕೊಳ್ಳುತ್ತದೆ. ಶನಿ ಕೋಪಗೊಂಡರೆ ಎಷ್ಟು ಅನಾಹುತಕಾರಿಯೋ ಶನಿಯ ಕೃಪೆಯಿದ್ದರೆ ಅಷ್ಟೇ ಒಳ್ಳೆಯದಾಗುತ್ತದೆ. ಈ ಅವಧಿ ಈ 4 ರಾಶಿಯವರಿಗೆ ಬಂಪರ್ ಲಾಟರಿಯಾಗಲಿದೆ ನೋಡಿ:\

ಮೇಷ ರಾಶಿ
ವೈದಿಕ ಶಾಸ್ತ್ರದ ಪ್ರಕಾರ ಕುಂಭ ರಾಶಿಯಲ್ಲಿ ಶನಿಯ ಹಿಮ್ಮುಖ ಚಲನೆ ಮೇಷ ರಾಶಿಯವರಿಗೆ ತುಂಬಾ ಒಳ್ಳೆಯದಿದೆ. ಈ ಸಮಯದಲ್ಲಿ ಉದ್ಯೋಗಿಗಳಿಗೆ ಬಡ್ತಿ ಸಿಗಲಿದೆ. ಆದಾಯಕ್ಕಾಗಿ ಹೊಸ ಅವಕಾಶಗಳು ತೆರೆಯದೇ ಇರಬಹುದು, ಆದರೂ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ, ಆರ್ಥಿಕವಾಗಿ ಯಾವುದೇ ಸಮಸ್ಯೆ ಇರಲ್ಲ. ಈ ಅವಧಿಯಲ್ಲಿ ನೀವು ರಿಲೋಕೇಷನ್ ಆಗುವ ಸಾಧ್ಯತೆ ಇದೆ. ಉದ್ಯೋಗಿಗಳು ಬಯಸಿದ ವರ್ಗಾವಣೆ ಪಡೆಯಬಹುದು.
ವೃಷಭ ರಾಶಿ
ಶನಿಯ ಹಿಮ್ಮುಖ ಚಲನೆಯು ವೃಷಭ ರಾಶಿಯವರಿಗೆ ವಿಶೇಷವಾಗಿರಲಿದೆ. ಈ ಅವಧಿ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ಈ ಅವಧಿಯಲ್ಲಿ ಆರ್ಥಿಕ ಸ್ಥಿತಿಯಲ್ಲಿ ತುಂಬಾನೇ ಪ್ರಗತಿ ಕಂಡು ಬರಲಿದೆ. ಕುಟುಂಬದ ಜೊತೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ಶನಿಯ ಹಿಮ್ಮುಖ ಚಲನೆಯಲ್ಲಿ ನಿಮಗೆ ಹಣಕಾಸಿನ ತೊಂದರೆಯೇ ಇರಲ್ಲ.
ಮಿಥುನ ರಾಶಿ
ಮಿಥುನ ರಾಶಿಯವರಿಗೂ ಈ ಅವಧಿ ಅನುಕೂಲಕರವಾಗಿದೆ. ಉದ್ಯಮಿಗಳು, ವ್ಯಾಪಾರಸ್ಥರು ಈ ಅವಧಿಯಲ್ಲಿ ಉತ್ತಮ ಆರ್ಥಿಕ ಲಾಭ ಪಡೆಯುತ್ತೀರಿ. ಕುಟುಂಬದ ಜೊತೆಗೆ ಉತ್ತಮ ಸಮಯ ಕಳೆಯಲು ಸಾಧ್ಯವಾಗುವುದು. ಈ ಅವಧಿಯಲ್ಲಿ ಕೆಲವರು ಪೂರ್ವಜರ ಆಸ್ಥಿಯಿಂದ ಲಾಭ ಪಡೆಯಬಹುದು.
ಸಿಂಹ ರಾಶಿ
ಶನಿಯ ಹಿಮ್ಮುಖ ಚಲನೆಯ ಈ ಅವಧಿ ಸಿಂಹ ರಾಶಿಯವರಿಗೆ ಆರ್ಥಿಕವಾಗಿ ತುಂಬಾ ಒಳ್ಳೆಯದಿದೆ. ಹೊಸ ಆದಾಯ ಮೂಲಗಳು ತೆರೆಯಲಿವೆ. ಉದ್ಯಮದಲ್ಲಿ ಒಳ್ಳೆಯ ಲಾಭಗಳಿಸಲು ಸಾಧ್ಯವಾಗುವುದು. ನೀವು ನಿರೀಕ್ಷೆ ಮಾಡದೇ ಇರುವ ಮೂಲಗಳಿಂದ ಕೂಡ ಲಾಭ ದೊರೆಯಲಿದೆ.
ಈ ಶನಿ ಪರಿಹಾರ ಮಾಡಿದರೆ ಇನ್ನೂ ಒಳ್ಳೆಯದು:
* ಶನಿವಾರ ಸಾಸಿವೆಯೆಣ್ಣೆ, ಉದ್ದಿನ ಬೇಳೆ, ಕಪ್ಪು ಎಳ್ಳು, ಕಪ್ಪು ಬಟ್ಟೆ, ಆಹಾರ ಇವುಗಳನ್ನು ದಾನ ಮಾಡಿ.
* ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ಅಥವಾ ಸಾಸಿವೆಯೆಣ್ಣೆಯ ದೀಪ ಹಚ್ಚಿ
* ಸುಂದರಕಾಂಡ ಪಠಿಸಿ.
* ಹಿರಿಯರನ್ನು ಗೌರವಿಸಿ
* ಕಾಗೆಗಳಿಗೆ ಹಾಗೂ ಕಪ್ಪು ನಾಯಿಗೆ ಆಹಾರ ಹಾಕಿ.



Click it and Unblock the Notifications
