Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
2026ರಲ್ಲಿ ಶನಿ ಸೂರ್ಯನಿಂದ ವಿಶೇಷ ಯೋಗ; ಬಾಕಿ ಉಳಿದ ಕೆಲಸ ಪೂರ್ಣ, ಸಾಲದ ಸಮಸ್ಯೆ ನಿವಾರಣೆ!
ಜ್ಯೋತಿಷ್ಯದ ಪ್ರಕಾರ 2026 ರ ಆರಂಭದಲ್ಲಿ ಗ್ರಹಗಳ ಸ್ಥಾನಗಳಿಂದಾಗಿ ವಿವಿಧ ಶುಭ ಯೋಗಗಳು ರೂಪುಗೊಳ್ಳುತ್ತವೆ. ಅದ್ರಲ್ಲು ಹಲವು ಗ್ರಹಗಳು ಈ ವರ್ಷದಲ್ಲಿ ಹಲವು ರೀತಿಯ ಶುಭಗಳಿಗೆ, ಅಪರೂಪದ ಯೋಗಗಳಿಗೆ ಕಾರಣವಾಗುತ್ತಿರುವುದು ನೋಡಬಹುದು. ಹಾಗೆ ಶನಿ ಈ ವರ್ಷದ ಆರಂಭದಿಂದಲೂ ಒಂದಲ್ಲಾ ಒಂದು ಗ್ರಹದೊಂದಿಗೆ ಸಂಯೋಗವಾಗುವುದು ನೋಡಬಹುದು.
ಶನಿ ಕರ್ಮಫಲ ನೀಡುವ ಗ್ರಹವೆಂದು ಪರಿಗಣಿಸಲಾಗಿದೆ. ಹಾಗೆ ಆತನ ಚಲನೆಯಿಂದ ಎಲ್ಲಾ ರಾಶಿಗಳ ಮೇಲೆಯೂ ಶುಭ ಹಾಗೂ ಅಶುಭ ಪರಿಣಾಮಗಳ ನೋಡಬಹುದು. ಹೀಗೆ 2026ರ ಆರಂಭದಲ್ಲಿ ಶನಿಯ ಚಲನೆಯು ಅಪರೂಪದ ಯೋಗವೊಂದಕ್ಕೆ ಕಾರಣವಾಗುತ್ತಿದೆ. ಶನಿ ಮೀನ ರಾಶಿಯಲ್ಲಿ ಚಲಿಸುವಾಗ ಸೂರ್ಯನ ಸಂಯೋಗದಿಂದಾಗಿ ವಿಶೇಷ ಯೋಗ ರೂಪುಗೊಳ್ಳಲಿದೆ.

ಶನಿಯು ಸೂರ್ಯನೊಂದಿಗೆ ಪಂಚಾಂಕ ಯೋಗವನ್ನು ರೂಪಿಸುತ್ತಾನೆ. ಹೊಸ ವರ್ಷದ ಆರಂಭದಲ್ಲಿ ಸೂರ್ಯ ಧನು ರಾಶಿಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಜನವರಿ 04 ರಂದು ಶನಿ ಮತ್ತು ಸೂರ್ಯ ಪರಸ್ಪರ 72 ಡಿಗ್ರಿಯ ಚಲನೆ ನೋಡಬಹುದು. ಇದು ಪಂಚಾಂಕ ಯೋಗಕ್ಕೆ ಕಾರಣವಾಗಲಿದೆ. ಇದು ಹಲವು ರಾಶಿಗಳಿಗೆ ಶುಭತರಲಿದೆ.
ಹಾಗಾದ್ರೆ ಶನಿ ಹಾಗೂ ಸೂರ್ಯನ ಈ ಅಪರೂಪದ ಚಲನೆಯಿಂದಾಗಿ ಹೊಸ ವರ್ಷದಲ್ಲಿ ಯಾರಿಗೆ ಶುಭದಾಯಕ ಯಾರಿಗೆ ಅನುಕೂಲಕರ ದಿನಗಳಿವೆ ಎಂಬುದನ್ನು ಹೇಳಲಿದ್ದೇವೆ.
ಧನು ರಾಶಿ
ಶನಿ ಮತ್ತು ಸೂರ್ಯ ರಚಿಸಿದ ಪಂಚಾಂಕ ಯೋಗದಿಂದಾಗಿ ಧನು ರಾಶಿಯವರಿಗೆ ತಮ್ಮ ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯ ಸಾಧ್ಯತೆಗಳಿವೆ. ಕೆಲಸ ಮಾಡುವವರಿಗೆ ಉತ್ತಮ ಲಾಭಗಳು ಸಿಗುತ್ತವೆ. ಉನ್ನತ ಅಧಿಕಾರಿಗಳೊಂದಿಗಿನ ಸಂಬಂಧಗಳು ಸುಧಾರಿಸುತ್ತವೆ. ನೀವು ನಿಮ್ಮ ಗುರಿಗಳನ್ನು ಸಾಧಿಸುವಿರಿ ಮತ್ತು ಯಶಸ್ವಿಯಾಗುತ್ತೀರಿ. ಜಂಟಿ ವ್ಯವಹಾರ ಮಾಡುವವರಿಗೆ ಉತ್ತಮ ಲಾಭ ಸಿಗುತ್ತದೆ. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಮಾಧುರ್ಯ ಹೆಚ್ಚಾಗುತ್ತದೆ. ನಿಮ್ಮ ಹಲವು ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಿದ್ದರೆ ಪೂರ್ಣ ಮಾಡುವಿರಿ. ನಿಮ್ಮ ದಾಂಪತ್ಯದಲ್ಲಿದ್ದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಶುಭ ಸಮಯ ಆಗಿರಲಿದೆ.
ಮಕರ ರಾಶಿ
ಶನಿ ಮತ್ತು ಸೂರ್ಯ ರಚಿಸಿದ ಪಂಚಾಂಕ ಯೋಗದಿಂದಾಗಿ ಮಕರ ರಾಶಿಯವರಿಗೆ ಅನೇಕ ವಿಧಗಳಲ್ಲಿ ಉತ್ತಮ ಪ್ರಯೋಜನಗಳು ಸಿಗುತ್ತವೆ. ಈ ಯೋಗವು ನಿಮ್ಮನ್ನು ಕೆಲವು ಪ್ರವಾಸಗಳನ್ನು ಕೈಗೊಳ್ಳುವಂತೆ ಮಾಡುತ್ತದೆ. ಉತ್ತಮ ಯೋಜನೆ ರೂಪಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಉದ್ಯೋಗ ಕ್ಷೇತ್ರದಲ್ಲಿನ ನಿಮ್ಮ ಒತ್ತಡಗಳು ನಿವಾರಣೆಯಾಗುತ್ತಿದೆ. ಅನಿರೀಕ್ಷಿತ ಆರ್ಥಿಕ ಬೆಳವಣಿಗೆಯು ನಿಮ್ಮಲ್ಲಿ ನೆಮ್ಮದಿ ತರಲು ಕಾರಣವಾಗಲಿದೆ. 2026ರಲ್ಲಿ ನಿಮ್ಮ ಸಾಲದ ಪ್ರಮಾಣ ಕಡಿಮೆಯಾಗುವುದು ನೋಡಬಹುದು. ನಿಮ್ಮ ಜೀವನ ಸಂಗಾತಿಯೊಂದಿಗೆ ನೀವು ನಿಮ್ಮ ಹೃದಯವನ್ನು ತೆರೆಯುತ್ತೀರಿ. ಇದು ನಿಮ್ಮ ಸಂಬಂಧದಲ್ಲಿ ಮಾಧುರ್ಯವನ್ನು ತರುತ್ತದೆ ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ.
ಮೀನ ರಾಶಿ
ಹೊಸ ವರ್ಷದ ಆರಂಭದಲ್ಲಿ ರೂಪುಗೊಳ್ಳುವ ಪಂಚಾಂಕ ಯೋಗದಿಂದಾಗಿ ಮೀನ ರಾಶಿಯವರಿಗೆ ಪ್ರತಿಯೊಂದು ಪ್ರಯತ್ನದಲ್ಲೂ ಉತ್ತಮ ಯಶಸ್ಸು ಸಿಗುತ್ತದೆ. ನೀವು ಅನೇಕ ಸಾಧನೆಗಳ ಮಾಡುವುದು ನೋಡಬಹುದು. ವ್ಯಾಪಾರ ಸಂಬಂಧಿತ ವಿಚಾರದಲ್ಲಿ ಶುಭವಿದೆ. ಹೊಸದಾಗಿ ಉದ್ಯೋಗ ಹುಡುಕುತ್ತಿದ್ದರೆ ಈ ಸಮಯದಲ್ಲಿ ನೀವು ಬಯಸಿದಂತಹ ಫಲಿತಾಂಶ ಪಡೆಯಬಹುದು, ಪಾಲುದಾರಿಕೆ ವ್ಯವಹಾರವು ಲಾಭದಾಯಕವಾಗುತ್ತದೆ. ಬಹು ವರ್ಷದಿಂದ ಮುಗಿಸದೆ ಇದ್ದಂತಹ ಕೆಲಸಗಳು ಈಗ ಮುಗಿಸಬಹುದು. ಬಡ್ತಿ, ವರ್ಗಾವಣೆ, ವೇತನ ಹೆಚ್ಚಳದಂತಹ ವಿಚಾರದಲ್ಲಿ ನಿಮಗೆ ಶುಭವಾಗಲಿದೆ. ಉದ್ಯಮಿಗಳು ಅಥವಾ ಸ್ವಂತ ಉದ್ಯೋಗಕ್ಕೆ ನೀವು ಸಾಲ ಪಡೆಯುವ ಪ್ರಯತ್ನದಲ್ಲಿದ್ದರೆ ಆ ಕುರಿತಾದ ಶುಭ ದಿನಗಳನ್ನು ಎದುರು ನೋಡಬಹುದು. ನಿಮ್ಮ ಹೊಸ ಆದಾಯ ಮೂಲ ನಿಮಗೆ ನೆಮ್ಮದಿ ತರಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದರ ವಿಶ್ವಾಸಾರ್ಹತೆಗೆ ಖಾತರಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications











