Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಸಪ್ತ ಮಾತೃಕೆಯರು ಎಂದರೆ ಯಾರು? ಅವರ ಮಹತ್ವ ಏನು ಗೊತ್ತಾ?
ಹಿಂದೂ ಪುರಾಣಗಳಲ್ಲಿ ಪುರುಷ ದೇವರಿಗೆ ಎಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆಯೋ ಅಷ್ಟೇ ಮಹತ್ವವನ್ನು ಮಹಿಳಾ ದೇವರಿಗೂ ನೀಡಲಾಗುತ್ತದೆ. ನಿಮಗೆಲ್ಲಾ ಸಪ್ತ ಮಾತೃಕೆಯರ ಬಗ್ಗೆ ಗೊತ್ತಿರಬಹುದು. ದುರ್ಗಾ ದೇವಿಯ ಏಳು ರೂಪವೇ ಸಪ್ತ ಮಾತೃತೆ ಅವತಾರ. ದುಷ್ಟರ ಸಂಹಾರಕ್ಕೆಂದು ದೇವಿಯು ಏಳು ರೂಪಗಳಲ್ಲಿ ಅವತರಿಸಿ ಬರುತ್ತಾಳೆ. ಕೆಲವೊಂದು ಧರ್ಮ ಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ಸಪ್ತ ಮಾತೃಕೆಯನ್ನು ಶೈವ ದೇವತೆ ಅಂತಾಲೂ ಕರೆಯುತ್ತಾರಂತೆ. ಹಾಗಾದ್ರೆ ದೇವಿಯ ಆ ಸಪ್ತ ರೂಪಗಳು ಯಾವುದು? ಅದರ ವಿಶೇಷತೆ ಏನು ಅನ್ನೋದನ್ನು ತಿಳಿಯೋಣ.
ಬ್ರಾಹ್ಮಿ ದೇವಿ
ಬ್ರಾಹ್ಮಿ ದೇವಿಯು ಬಿಳಿ ಹಂಸದ ಮೇಲೆ ಕುಳಿತಿದ್ದಾಳೆ. ನಾಲ್ಕು ಮುಖಗಳನ್ನು ಹೊಂದಿದ್ದಾಳೆ. ಜೊತೆಗೆ ನಾಲ್ಕು ಕೈಗಳನ್ನೂ ಹೊಂದಿರುವ ಬ್ರಾಹ್ಮಿ ದೇವಿಯೂ ಒಂದು ಕೈಯಲ್ಲಿ ನೀರಿನ ಕುಂಡವನ್ನು ಹಿಡಿದಿದ್ದಾಳೆ. ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು ಪೊರೆಯುತ್ತಿದ್ದಾಳೆ.

ವೈಷ್ಣವಿ
ವೈಷ್ಣವಿ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ವೈಷ್ಣವ ದೇವಿ ತನ್ನ ಕೈಯಲ್ಲಿ ಗದೆ, ತ್ರಿಶೂಲ, ಖಡ್ಗ, ಶಂಖ, ಚಕ್ರ, ಕಮಲದ ಹೂವನ್ನು ಹಿಡಿದುಕೊಂಡಿದ್ದಾಳೆ. ಸಕಲರನ್ನೂ ಬೆಳಗುವ ಅದ್ಭುತ ಶಕ್ತಿಯನ್ನು ಆಕೆ ಹೊಂದಿದ್ದಾಳೆ. ಉತ್ತರ ಭಾರತದಲ್ಲಿ ನಮಗೆ ವಿಶ್ವ ವಿಖ್ಯಾತ ವೈಷ್ಣವ ದೇವಿ ದೇವಾಲಯ ಕಾಣ ಸಿಗುತ್ತದೆ.
ಮಹೇಶ್ವರಿ
ಮಹೇಶ್ವರಿ ದೇವಿಯೂ ಈಶ್ವರನ ಪ್ರತಿರೂಪ. ಅವಳ ತಲೆಯ ಮೇಲೆ ಅರ್ಧ ಚಂದ್ರ. ಒಂದು ಕೈಯಲ್ಲಿ ಢಮರುಗ, ಮತ್ತೊಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ನಿಂತಿದ್ದಾಳೆ. ನಂದಿಯು ಮಹೇಶ್ವರಿಯ ವಾಹನ. ಇನ್ನೂ ಮಹೇಶ್ವರಿಯನ್ನು ಈಶ್ವರಿ, ಕಾಳಿ, ಚಂಡಿ, ಭಗವತಿ, ಅಂಬೆ, ಷೋಡಶಿ, ಮಹಾದೇವಿ, ತ್ರಿಪುರ ಸುಂದರಿ ಅಂತಲೂ ಕರೆಯಾಗುತ್ತದೆ.
ಇಂದ್ರಾಣಿ
ಇಂದ್ರಾಣಿಯು ದೇವತೆಗಳ ರಾಣಿ. ಹಾಗೂ ಈಕೆ ಇಂದ್ರನ ಪತ್ನಿ. ವೈದಿಕ ಶಾಸ್ತ್ರದ ಪ್ರಕಾರ ಇಂದ್ರಾಣಿ ಎಂದರೆ ಸ್ತ್ರೀಯ ನೆರಳು. ಇನ್ನೂ ಸಾವಿರ ಕಣ್ಣುಗಳನ್ನು ಹೊಂದಿದ ಸುಂದರಿಯಾಗಿದ್ದಾಳೆ. ಇಂದ್ರಾಣಿಯ ವಾಹನ ಐರಾವತ. ಇಂದ್ರಾಣಿ ಒಂದು ಕೈಯಲ್ಲಿ ವಜ್ರ ಹಾಗೂ ಮತ್ತೊಂದು ಕೈಯಲ್ಲಿ ಅಂಕುಶವನ್ನು ಹಿಡಿದಿದ್ದಾಳೆ. ಈಕೆ ಶೌರ್ಯ ಧಾತೆ ಹಾಗೂ ದುಷ್ಟರ ಸಂಹಾರ ಮಾಡುವ ಅಭೂತಪೂರ್ವ ಶಕ್ತಿ ಈಕೆಗಿದೆ.
ಕುಮಾರಿ
ಏಳು ಮಾತೃಕೆಯರಲ್ಲಿ ಒಬ್ಬಳಾದ ಕುಮಾರಿಯು ಶಿವನ ಮಗ ಕುಮಾರ ಕಾರ್ತಿಕೇಯ ಶಕ್ತಿನ ಶಕ್ತಿಯಾಗಿದ್ದಾಳೆ. ಈಕೆಯೂ ತನ್ನ ಕೊರಳಿನಲ್ಲಿ ಯಾವಾಗಲೂ ಕೆಂಪು ಹೂವಿನ ಹಾರವನ್ನು ಧರಿಸಿರುತ್ತಾಳೆ. ಈಕೆಯ ವಾಹನ ನವಿಲು.
ವಾರಾಹಿ
ವರಾಹಿ ದೇವಿಯು ವರಾಹ ಮುಖವನ್ನು ಹೊಂದಿದ್ದಾಳೆ. ವರಾಹಿ ಯಜ್ಞವು ವರಾಹ ದೇವರ ಶಕ್ತಿಯಾಗಿದೆ. ಕಡು ಬಣ್ಣವನ್ನು ಹೊಂದಿರುವ ಈಕೆ ತಲೆಯಲ್ಲಿ ಅರ್ಧ ಚಂದ್ರ ಜೊತೆಗೆ ಕೈಯಲ್ಲಿ ಶಂಖ, ಚಕ್ರ, ತ್ರಿಶೂಲವನ್ನು ಹಿಡಿದು ಕುಳಿತಿದ್ದಾಳೆ. ಈ ಸಪ್ತ ಮಾತೃಕೆಯರಲ್ಲಿ ವಿಶಿಷ್ಟವಾದ ಶಕ್ತಿಯನ್ನು ಹೊಂದಿದ್ದಾಳೆ. ಈಕೆ ದೇವತೆಗಳಿಗೆ ಹಾಗೂ ಮಾನವರಿಗೆ ಉತ್ತಮ ಹಾಗೂ ಯೋಗ್ಯ ಆಹಾರ ನೀಡುವ ಶಕ್ತಿ ಹೊಂದಿದ್ದಾಳೆ.
ಚಾಮುಂಡಿ ದೇವಿ
ಚಾಮುಂಡಿಯ ವಾಹನ ಸಿಂಹ. ಉಗ್ರ ರೂಪಿಯಾದ ತಾಯಿ ಚಾಮುಂಡಿಯು ಮಾನವರ ತಲೆ ಬುರುಡೆಯನ್ನು ಹಾರದಂತೆ ಹಾಕಿಕೊಂಡಿದ್ದಾಳೆ. ಕೈಯಲ್ಲಿ ಖಡ್ಗ, ಗದೆ, ತ್ರಿಶೂಲ, ಶಂಕ, ಚಕ್ರವನ್ನು ಹಿಡಿದಿದ್ದಾಳೆ. ಹುಲಿಯ ಚರ್ಮವನ್ನು ಧರಿಸಿಕೊಂಡಿರುವ ಉಗ್ರ ರೂಪಿ ಚಾಮುಂಡಿ. ರಾಕ್ಷಕರ ಅಟ್ಟಹಾಸವನ್ನು ನಿಲ್ಲಿಸಿ, ಅವರನ್ನು ಸಂಹಾರ ಮಾಡಿ. ನಂಬಿ ಬಂದ ಭಕ್ತರನ್ನು ಪೊರೆಯುತ್ತಿದ್ದಾಳೆ.
ಇತರ ದೇವತೆಗಳು
ನರಂಸಿಂಹ ಮಾತೃಕೆ, ವಿನಾಯಕ ಮಾತೃಕೆ ಸೇರಿದಂತೆ ಒಟ್ಟು ಒಂಬತ್ತು ಮಾತೃಕೆಯರು ಇದ್ದಾರೆ. ನೇಪಾಳದಲ್ಲಿ ಅಷ್ಟ ಮಾತೃಕೆ ದೇವಾಲಯವನ್ನೂ ನೀವು ಕಾಣಬಹುದು. ಆದರೆ ನಮ್ಮ ದಕ್ಷಿಣ ಭಾರತದಲ್ಲಿ ಕೇವಲ ಸಪ್ತ ಮಾತೃಕೆಯರನ್ನು ಪೂಜಿಸಲಾಗುತ್ತದೆ.



Click it and Unblock the Notifications

