Latest Updates
-
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ
ಅತೀ ಹೆಚ್ಚು ದೇಣಿಗೆ ನೀಡಿದ ಈ 'ಲಾಟರಿ ಕಿಂಗ್' ಯಾರು.? ಆತನ ಕಂಪನಿ ಯಾವುದು?
ಚುನಾವಣಾ ಆಯೋಗ ಎಸ್‌ಬಿಐ ನೀಡಿರುವ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಿಡುಗಡೆ ಮಾಡಿದೆ. ದೇಶದ ಪ್ರತಿಯೊಂದು ಪಕ್ಷಗಳು ಎಷ್ಟು ದೇಣಿಗೆ ಪಡೆದಿವೆ ಎಂಬ ಮಾಹಿತಿ ಇದರಲ್ಲಿದ್ದು, 20 ದಾನಿಗಳು ಶೇ.44.59ರಷ್ಟು ಚುನಾವಣಾ ಬಾಂಡ್ ಹೊಂದಿದ್ದಾರೆ. ಇದು ಬರೋಬ್ಬರಿ 5,42ಒ ಕೋಟಿ ರೂಪಾಯಿ ಆಗಿದೆ.
ಇದರಲ್ಲಿ ಪ್ರಮುಖವಾಗಿ ಫ್ಯೂಚರ್ ಗೇಮಿಂಗ್, ಮೇಘಾ ಇಂಜಿನಿಯರಿಂಗ್ ಮತ್ತು ಕ್ವಿಕ್‌ಸಪ್ಲೈಚೈನ್ ಪ್ರೈವೇಟ್ ಲಿಮಿಟೆಡ್ ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿವೆ. ಫ್ಯೂಚರ್ ಗೇಮಿಂಗ್ ದಕ್ಷಿಣ ಭಾರತದ ಲಾಟರಿ ಕಿಂಗ್ ಸ್ಯಾಂಟಿಯಾಗೊ ಮಾರ್ಟಿನ್ ಅವರ ಮಾಲೀಕತ್ವದಲ್ಲಿದೆ.

ಅಣೆಕಟ್ಟುಗಳು ಮತ್ತು ವಿದ್ಯುತ್ ಯೋಜನೆಗಳನ್ನು ನಿರ್ಮಿಸುವ ಮೇಘಾ ಇಂಜಿನಿಯರಿಂಗ್, ಪಿವಿ ಕೃಷ್ಣಾ ರೆಡ್ಡಿ ಮತ್ತು ಪಿಪಿ ರೆಡ್ಡಿ ಒಡೆತನದಲ್ಲಿದೆ. ವೇದಾಂತ ಲಿಮಿಟೆಡ್, ಟಾಪ್ 20 ರಲ್ಲಿ ಸ್ಥಾನ ಪಡೆದುಕೊಂಡಿದೆ. ಅನಿಲ್ ಅಗರ್ವಾಲ್ ಅವರು ಪ್ರಚಾರ ಮಾಡಿದ ವಿಶ್ವದ ಅತಿದೊಡ್ಡ ಗಣಿಗಾರಿಕೆ ಸಂಘಟಿತ ಸಂಸ್ಥೆಗಳಲ್ಲಿ ಒಂದಾಗಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಭಾರತೀಯ ಚುನಾವಣಾ ಆಯೋಗವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಗುರುವಾರ ಚುನಾವಣಾ ಬಾಂಡ್‌ಗಳ ಡೇಟಾವನ್ನು ಬಿಡುಗಡೆ ಮಾಡಿದೆ. ಅತೀ ಹೆಚ್ಚು ದೇಣಿಗೆ ನೀಡಿರುವ ಈ ಮಾರ್ಟಿನ್ ಕಂಪನಿ ಯಾವುದು? ಆತನಿಗೆ ಲಾಟರಿ ಮ್ಯಾನ್ ಎಂದು ಕರೆಯುವುದು ಏಕೆ ಗೊತ್ತಾ?
ಮಾರ್ಟಿನ್ ಕಂಪನಿಯು ಎರಡು ವಿಭಿನ್ನ ಕಂಪನಿಗಳ ಮೂಲಕ ₹1,350 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಖರೀದಿಸಿದೆ ಎಂದು ಡೇಟಾ ಬಹಿರಂಗಪಡಿಸಿದೆ. ಜೊತೆಗೆ ಈ ಕಂಪನಿಯು ಇಡಿ ಬಲೆಗೂ ಸಿಕ್ಕಿದೆ.
ಸ್ಯಾಂಟಿಯಾಗೊ ಮಾರ್ಟಿನ್ ಯಾರು.?
ಸ್ಯಾಂಟಿಯಾಗೊ ಮಾರ್ಟಿನ್ ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಕಾರ್ಮಿಕನಾಗಿ ಕಂಪನಿ ಆರಂಭಿಸಿದ್ದ. ಅವರು ಭಾರತಕ್ಕೆ ಹಿಂದಿರುಗಿದ ನಂತರ 1988 ರಲ್ಲಿ ತಮಿಳುನಾಡಿನಲ್ಲಿ ತಮ್ಮ ಲಾಟರಿ ವ್ಯವಹಾರವನ್ನು ಪ್ರಾರಂಭಿಸಿದರು. ನಂತರ ಕರ್ನಾಟಕ, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ಈಶಾನ್ಯ ರಾಜ್ಯಗಳಿಗೆ ವಿಸ್ತರಿಸಿದರು.
ಮಾರ್ಟಿನ್ ಆರಂಭದಲ್ಲಿ ಈಶಾನ್ಯದಲ್ಲಿ ಸರ್ಕಾರಿ ಲಾಟರಿ ಯೋಜನೆಗಳನ್ನು ನಿರ್ವಹಿಸುವತ್ತ ಗಮನಹರಿಸಿದರು. ನಂತರ ಅವರು, ರಿಯಲ್ ಎಸ್ಟೇಟ್, ಜವಳಿ ಮತ್ತು ಹೋಟೆಲ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಅವರ ಕಂಪನಿ, ಫ್ಯೂಚರ್ ಗೇಮಿಂಗ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅವರ ನಾಯಕತ್ವದಲ್ಲಿ ಪ್ರತಿಷ್ಠಿತ ವಿಶ್ವ ಲಾಟರಿ ಅಸೋಸಿಯೇಷನ್‌ನಲ್ಲಿ ಸದಸ್ಯತ್ವವನ್ನು ಪಡೆದಿದೆ.
ಮಾರ್ಟಿನ್ ಈಗ ಆನ್‌ಲೈನ್ ಗೇಮಿಂಗ್ ಮತ್ತು ಕ್ಯಾಸಿನೊಗಳು ಮತ್ತು ಕ್ರೀಡಾ ಬೆಟ್ಟಿಂಗ್‌ನಲ್ಲೂ ಹೂಡಿಕೆ ಮಾಡಿದ್ದಾರೆ. 2011ರಿಂದ ಮಾರ್ಟಿನ್ ಮತ್ತು ಅವರ ಕಂಪನಿಯ ಮೇಲೆ ತೆರಿಗೆ ವಂಚನೆ ಸೇರಿ ಕೆಲ ಪ್ರಕರಣ ಸಂಬಂಧ ತನಿಖೆಯು ನಡೆಯುತ್ತಿದೆ.
ಅಗ್ರ 20 ದಾನಿಗಳ ಪಟ್ಟಿ
1)ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವಿಸಸ್ PR - ₹ 1,368 ಕೋಟಿ
2) ಮೇಘಾ ಇಂಜಿನಿಯರಿಂಗ್ & ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ - ₹ 966 ಕೋಟಿ
3) ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ - ₹ 410 ಕೋಟಿ
4) ವೇದಾಂತ ಲಿಮಿಟೆಡ್ - ₹ 400 ಕೋಟಿ
5) ಹಲ್ದಿಯಾ ಎನರ್ಜಿ ಲಿಮಿಟೆಡ್ - ₹ 377 ಕೋಟಿ
6) ಭಾರ್ತಿ ಗ್ರೂಪ್ - ₹ 247 ಕೋಟಿ
7) ಎಸ್ಸೆಲ್ ಮೈನಿಂಗ್ & ಇಂಡಸ್ಟ್ರೀಸ್ ಲಿಮಿಟೆಡ್ - ₹ 224 ಕೋಟಿ
8) ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ ಕಂಪನಿ ಲಿಮಿಟೆಡ್ - ₹ 220 ಕೋಟಿ
9) ಕೆವೆಂಟರ್ ಫುಡ್ ಪಾರ್ಕ್ ಇನ್ಫ್ರಾ ಲಿಮಿಟೆಡ್ - ₹ 195 ಕೋಟಿ
10) ಮದನ್‌ಲಾಲ್ ಲಿಮಿಟೆಡ್ - ₹ 185 ಕೋಟಿ
11) ಯಶೋದಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ - ₹ 162 ಕೋಟಿ
12) ಉತ್ಕಲ್ ಅಲ್ಯುಮಿನಾ ಇಂಟರ್ನ್ಯಾಷನಲ್ ಲಿಮಿಟೆಡ್ - ₹ 135.3 ಕೋಟಿ
13) DLF ಕಮರ್ಷಿಯಲ್ ಡೆವಲಪರ್ಸ್ ಲಿಮಿಟೆಡ್- ₹ 130 ಕೋಟಿ
14) MKJ ಎಂಟರ್‌ಪ್ರೈಸಸ್ ಲಿಮಿಟೆಡ್- ₹ 128.35 ಕೋಟಿ
15) ಜಿಂದಾಲ್ ಸ್ಟೀಲ್ ಮತ್ತು ಪವರ್ ಲಿಮಿಟೆಡ್- ₹ 123 ಕೋಟಿ
16) ಬಿ ಜಿ ಶಿರ್ಕೆ ಕನ್ಸ್ಟ್ರಕ್ಷನ್ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್- ₹ 117 ಕೋಟಿ
17) ಧಾರಿವಾಲ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್- ₹ 115 ಕೋಟಿ
18) ಚೆನ್ನೈ ಗ್ರೀನ್ ವುಡ್ಸ್ ಪ್ರೈವೇಟ್ ಲಿಮಿಟೆಡ್- ₹ 105 ಕೋಟಿ
19) ಬಿರ್ಲಾಕಾರ್ಬನ್- ₹ 105 ಕೋಟಿ
20) RUNGTA ಸನ್ಸ್ ಪ್ರೈ. ಲಿಮಿಟೆಡ್ - ₹ 100 ಕೋಟಿ



Click it and Unblock the Notifications











