Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅವಳ ಹಲ್ಲು.. ಈ ರೀತಿಯ ಹಲ್ಲುಗಳಿದ್ದರೆ ನಿಮ್ಮ ಗರ್ಲ್ ಫ್ರೆಂಡ್ ಲಕ್ಕಿ! ನಿಮ್ಮ ಅದೃಷ್ಟ ಬದಲಾಗುತ್ತೆ
'ಅವಳ ಹಲ್ಲು' ಹೇಳ್ತದೆ ಅವಳು ಲಕ್ಕಿಯೇ ಇಲ್ಲವೇ ಅನ್ನೋದನ್ನು! ಈ ರೀತಿಯ ಹಲ್ಲುಗಳಿದ್ದರೆ ನಿಮ್ಮ ಗೆಳತಿ ಅದೃಷ್ಟವಂತೆ. ಸಾಮುದ್ರಿಕಾ ಶಾಸ್ತ್ರ ಏನು ಹೇಳುತ್ತದೆ ಗೊತ್ತೇ? ಮಾನವ ದೇಹವನ್ನು ನೋಡಿದರೇ ವ್ಯಕ್ತಿಯ ಗುಣ, ಸ್ವಭಾವ, ಭಾಗ್ಯ ಮತ್ತು ಭವಿಷ್ಯದ ಕುರಿತು ತಿಳಿಯಬಹುದು ಎಂಬ ನಂಬಿಕೆ ಸಾಮುದ್ರಿಕ ಶಾಸ್ತ್ರದಲ್ಲಿ (Samudrik Shastra) ಇದೆ. ಕಣ್ಣು, ಮುಖ, ಕೈ, ಕಾಲುಗಳ ಜೊತೆಗೆ ಹಲ್ಲುಗಳ ಆಕಾರ, ಬಣ್ಣ ಮತ್ತು ಹೊಂದಾಣಿಕೆ ಕೂಡ ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ವಿಶೇಷವಾಗಿ, ಮಹಿಳೆಯರ ದಂತ ರಚನೆ teeth) ಅವರ ಜೀವನ, ಸ್ವಭಾವ ಹಾಗೂ ಪತಿಯ ಭಾಗ್ಯಕ್ಕೂ ಪ್ರಭಾವ ಬೀರುತ್ತದೆ.
ಹೌದು, ಸಾಮುದ್ರಿಕಾ ಶಾಸ್ತ್ರವು, ಪ್ರಾಚೀನ ಭಾರತೀಯ ಜ್ಞಾನದ ಒಂದು ಭಾಗ. ಇದು ದೇಹದ ಅಂಗಗಳನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಸ್ವಭಾವ, ನಡವಳಿಕೆ ಮತ್ತು ಭವಿಷ್ಯದ ಬಗ್ಗೆ ಹೇಳುತ್ತದೆ. ಈ ಶಾಸ್ತ್ರದ ಪ್ರಕಾರ, ವ್ಯಕ್ತಿಯ ಮುಖದ ವೈಶಿಷ್ಟ್ಯಗಳು, ಅದರಲ್ಲೂ ವಿಶೇಷವಾಗಿ ಅವರ ಹಲ್ಲುಗಳು, ಆ ವ್ಯಕ್ತಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ಬಹಿರಂಗಪಡಿಸಬಹುದು. ಹೆಣ್ಣುಮಕ್ಕಳ ಹಲ್ಲುಗಳು ಯಾವ ರೀತಿಯಲ್ಲಿವೆ ಎಂಬುದರ ಆಧಾರದ ಮೇಲೆ, ಅವರ ಅದೃಷ್ಟ ಮತ್ತು ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ನಿಮ್ಮ ಸಂಗಾತಿಯ ಹಲ್ಲುಗಳು ಹೇಗಿರಬೇಕು (girlfriend's teeth) ಎಂಬುದನ್ನು ತಿಳಿಯಲು ಮುಂದೆ ಓದಿ.

ಯಾವ ಹಲ್ಲುಗಳಿರುವ ಹುಡುಗಿಯರು ಭಾಗ್ಯಶಾಲಿ?
ಭಾಗ್ಯಶಾಲಿ ಹುಡುಗಿಯರು: ಬಿಳಿ ಹಲ್ಲುಗಳು
ಸಾಮುದ್ರಿಕ ಶಾಸ್ತ್ರದ ಪ್ರಕಾರ, ಬಿಳಿ ಹಾಗೂ ಸರಿಯಾಗಿ ಹೊಂದಿಕೊಂಡ ಹಲ್ಲುಗಳಿರುವ ಹುಡುಗಿಯರು ಅತ್ಯಂತ ಭಾಗ್ಯಶಾಲಿ. ಇಂತಹ ಹುಡುಗಿಯರು ಸಾಮಾನ್ಯವಾಗಿ ಸುಂದರರೂ ಆಗಿ, ಉತ್ತಮ ಗುಣವಂತರೂ ಆಗಿರುತ್ತಾರೆ. ಇವರು ಮದುವೆಯಾದ ನಂತರ ತಮ್ಮ ಪತಿಯ ಭಾಗ್ಯವನ್ನೂ ಚುರುಕು ಮಾಡುತ್ತಾರೆ. ಇವರ ಜೀವನದಲ್ಲಿ ಸಂತೋಷ, ಐಶ್ವರ್ಯ ಹಾಗೂ ಪ್ರಗತಿ ಕಾಣಬಹುದು. ಇವರ ಆಗಮನದಿಂದ ಪತಿಯ ಜೀವನದಲ್ಲಿ ಸಂಪತ್ತು ಮತ್ತು ಸುಖ-ಸಮೃದ್ಧಿ ಹೆಚ್ಚುತ್ತದೆ.
ಅಹಂಕಾರಿ ಸ್ವಭಾವದ ಹುಡುಗಿಯರು: ಹಳದಿ ಹಲ್ಲು
ಹಲ್ಲುಗಳ ಎರಡೂ ಬದಿಗಳಲ್ಲಿ ಹಳದಿ ಬಣ್ಣ ಕಾಣುವ ಹುಡುಗಿಯರು ಅಹಂಕಾರಿ ಸ್ವಭಾವ ಹೊಂದಿರುತ್ತಾರೆ. ಇವರಲ್ಲಿ ಕೆಲವರು ಬಹಳ ಶ್ರೀಮಂತರಾಗಿರಬಹುದು. ಆದರೆ, ಸ್ನೇಹಿತರ ಕೊರತೆ ಇರುತ್ತದೆ. ಇವರು ಒಂಟಿತನವನ್ನು ಇಷ್ಟಪಡುತ್ತಾರೆ ಹಾಗೂ ತಮ್ಮದೇ ಜಗತ್ತಿನಲ್ಲಿ ಬದುಕುತ್ತಾರೆ. ಇತರರೊಂದಿಗೆ ಬೆರೆಯುವುದು ಇವರಿಗೆ ಕಷ್ಟವಾಗಬಹುದು.
ಅವಿಶ್ವಾಸಾರ್ಹರು: ಹಲ್ಲುಗಳ ನಡುವೆ ಅಂತರ
ಯಾರ ಮೇಲೆ ನಂಬಿಕೆ ಇಡಬಾರದು? ಹಲ್ಲುಗಳ ಮಧ್ಯೆ ಗ್ಯಾಪ್ ಅಥವಾ ಅಂತರ ಇರುವ ಹುಡುಗಿಯರ ಮೇಲೆ ಹೆಚ್ಚು ನಂಬಿಕೆ ಇಡಬಾರದು ಎಂದು ಶಾಸ್ತ್ರ ಹೇಳುತ್ತದೆ. ಇವರು ಇತರರ ಲಾಭಕ್ಕಾಗಿ ಕಾರ್ಯನಿರ್ವಹಿಸುವರು. ಕೆಲವೊಮ್ಮೆ ಮೋಸ ಮಾಡುವ ಸ್ವಭಾವವೂ ಇವರಲ್ಲಿ ಕಂಡುಬರುತ್ತದೆ. ಆದ್ದರಿಂದ, ಇವರು ಎಲ್ಲರೊಂದಿಗೆ ನಿಷ್ಠೆಯಿಂದ ವರ್ತಿಸುವರು ಎಂಬುದಿಲ್ಲ. ಇವರು ಯಾವುದೇ ಸಂದರ್ಭದಲ್ಲಿಯೂ ತಮ್ಮ ನಂಬಿಕೆಯನ್ನು ಮುರಿಯಬಹುದು.
ದುರದೃಷ್ಟವಂತರು: ಕೆಂಪು ವರ್ಣದ ಹಲ್ಲುಗಳು
ಇವರು ದುರ್ಭಾಗ್ಯ ಹೊಂದಿದ ಹುಡುಗಿಯರು. ಹಲ್ಲುಗಳಲ್ಲಿ ಕೆಂಪು ಬಣ್ಣದ ಛಾಯೆ ಇರುವ ಹುಡುಗಿಯರು ಸಾಮಾನ್ಯವಾಗಿ ದುರ್ಭಾಗ್ಯಕ್ಕೆ ಒಳಗಾಗುತ್ತಾರೆ. ಇವರಿಗೆ ಹಣವೂ ಸಿಗದು, ಪ್ರೀತಿ-ಪ್ರೀತಿಪಾತ್ರರ ಸಹಕಾರವೂ ದೊರೆಯದು. ಇವರು ಹೆಚ್ಚಾಗಿ ಜಗಳಗಂಟಿ ಸ್ವಭಾವವನ್ನು ಹೊಂದಿರುತ್ತಾರೆ. ಜನರು ಇವರೊಂದಿಗೆ ಬೆರೆತು ನಿಲ್ಲಲು ಅಥವಾ ಮಾತನಾಡಲು ಹಿಂಜರಿಯುತ್ತಾರೆ. ಇಂತಹ ಹಲ್ಲುಗಳುಳ್ಳವರು ತಮ್ಮ ಜೀವನದಲ್ಲಿ ಅನೇಕ ಸವಾಲುಗಳನ್ನು ಎದುರಿಸಬೇಕಾಗುತ್ತದೆ.
ನಿರ್ಲಕ್ಷ್ಯ ಸ್ವಭಾವ: ದೊಡ್ಡ ಗಾತ್ರದ ಹಲ್ಲುಗಳು
ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡ ಹಲ್ಲುಗಳಿರುವ ಹುಡುಗಿಯರು ನಿರ್ಲಕ್ಷ್ಯ ಪ್ರವೃತ್ತಿಯವರಾಗಿರುತ್ತಾರೆ. ಇವರು ಸಮಾಜ ಏನು ಹೇಳುತ್ತದೆ ಎಂದು ಪರಿಗಣಿಸದೇ ತಮ್ಮ ಮನಸ್ಸಿಗೆ ಬಂದಂತೆ ವರ್ತಿಸುತ್ತಾರೆ. ಕುಟುಂಬದೊಳಗೂ ಇವರ ಪ್ರಭಾವ ವಿಭಿನ್ನವಾಗಿರುತ್ತದೆ. ಇವರು ಸ್ವತಂತ್ರ ಸ್ವಭಾವವನ್ನು ಹೊಂದಿರುತ್ತಾರೆ. ಇವರು ಆತುರದಿಂದ ವರ್ತಿಸುವ ಸಾಧ್ಯತೆ ಇರುತ್ತದೆ.
ವಿಶೇಷ ಸೂಚನೆ: (ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹತೆಯ ಯಾವುದೇ ಗ್ಯಾರಂಟಿ ಇಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications
