Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Saina Nehwal: ಆಟದಲ್ಲಿ 'ಸಿಂಹಿಣಿ', ಸಂಪತ್ತಿನಲ್ಲಿ 'ಅರಗಿಣಿ'! ಸೈನಾ ನೆಹ್ವಾಲ್ ಆಸ್ತಿ ಎಷ್ಟು ಗೊತ್ತಾ?
ಸೈನಾ ನೆಹ್ವಾಲ್ ಎಂದರೆ ಬರೀ ಆಟವಲ್ಲ. ಕೋಟಿ ಕೋಟಿ ಹಣ ಗಳಿಸಿದ ಶಟ್ಲರ್. ಇವರ ಒಟ್ಟು ಆಸ್ತಿ ಎಷ್ಟು ಗೊತ್ತಾ? ಹೌದು, ಭಾರತದ ಬ್ಯಾಡ್ಮಿಂಟನ್ ರಾಣಿ ಸೈನಾ ನೆಹ್ವಾಲ್ (Saina Nehwal) ಭಾರತದ ಅತ್ಯಂತ ಶ್ರೀಮಂತ ಮಹಿಳಾ ಕ್ರೀಡಾಪಟುಗಳಲ್ಲಿ ಒಬ್ಬರು. ಕೇವಲ ಆಟಗಾರ್ತಿಯಲ್ಲ, ಐಕಾನ್ ಕೂಡ. ಈ ಬ್ಯಾಡ್ಮಿಂಟನ್ ತಾರೆ ತಮ್ಮ ವಿಚ್ಛೇದನದ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಸೈನಾ ವಿವಾಹದ 7 ವರ್ಷಗಳ ನಂತರ ಪಾರುಪಳ್ಳಿ ಕಶ್ಯಪ್ (Parupalli Kashyap) ಅವರಿಂದ ವಿಚ್ಛೇದನವನ್ನು ಘೋಷಿಸಿದ್ದಾರೆ. ಸ್ವತಃ ಸೈನಾ ನೆಹ್ವಾಲ್ ಅವರೇ ಈ ವಿಷಯವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.
ಸೈನಾ ನೆಹ್ವಾಲ್ ವಿಚ್ಛೇದನ ಘೋಷಣೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಸೈನಾ ಅವರ ಈ ನಿರ್ಧಾರದ ಬಳಿಕ, ಇದರ ಹಿಂದಿನ ಕಾರಣವೇನು ಎಂದು ಎಲ್ಲರೂ ತಿಳಿಯಲು ಬಯಸುತ್ತಿದ್ದಾರೆ. ಆದರೆ, ವಿಚ್ಛೇದನಕ್ಕೆ ಕಾರಣವೇನೆಂದು ಇನ್ನೂ ಸ್ಪಷ್ಟವಾಗಿಲ್ಲ. ಈ ನಡುವೆ, ಸೈನಾ ನೆಹ್ವಾಲ್ ಎಷ್ಟು ಕೋಟಿ ಒಡತಿ ಎಂದು ತಿಳಿಯುವ ಕುತೂಹಲ ಹಲವರಿಗೆ ಇದೆ. ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ (Saina Nehwal Net Worth) ಅವರ ಆಸ್ತಿ ಎಷ್ಟು? ಸೈನಾ ಬಳಿ ಯಾವೆಲ್ಲಾ ಕಾರುಗಳಿವೆ ಮತ್ತು ಸೈನಾ ಐಷಾರಾಮಿ ಮನೆ ಹಾಗೂ ಜೀವನಶೈಲಿಯ ಬಗ್ಗೆ ಇಲ್ಲಿದೆ ಮಾಹಿತಿ.

ಸೈನಾ ನೆಹ್ವಾಲ್ ಎಷ್ಟು ಕೋಟಿ ಒಡತಿ?
ಸೈನಾ ನೆಹ್ವಾಲ್ ಪ್ರಸಿದ್ಧ ಬ್ಯಾಡ್ಮಿಂಟನ್ ತಾರೆಯಾಗಿದ್ದು, ವಿದೇಶಗಳಲ್ಲಿಯೂ ಅವರ ಹೆಸರು ಚಾಲ್ತಿಯಲ್ಲಿದೆ. ಸೈನಾ ಆಟದೊಂದಿಗೆ ಗಳಿಕೆಯಲ್ಲಿಯೂ ಮುಂದಿದ್ದಾರೆ. ವರದಿಗಳ ಪ್ರಕಾರ, ಅವರು ವಾರ್ಷಿಕವಾಗಿ 5 ಕೋಟಿ ರೂ.ಗಳನ್ನು ಗಳಿಸುತ್ತಾರೆ. ಸೈನಾ ಅವರ ನಿವ್ವಳ ಮೌಲ್ಯ (ಒಟ್ಟು ಆಸ್ತಿ) ಅಂದಾಜು 36 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಸೈನಾ ಮಾಸಿಕ ಆದಾಯವು ಅಂದಾಜು 35 ರಿಂದ 40 ಲಕ್ಷ ರೂ. ಎಂದು ಹೇಳಲಾಗುತ್ತದೆ. ಸೈನಾ ಬಳಿ ಐಷಾರಾಮಿ ಮನೆ ಮತ್ತು ಹಲವು ಐಷಾರಾಮಿ ಕಾರುಗಳಿವೆ. ಸೈನಾ ಅವರ ಗಳಿಕೆಯ ಮೂಲ ಕೇವಲ ಆಟವಲ್ಲ, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್, ಜಾಹೀರಾತುಗಳು ಮತ್ತು ಹೂಡಿಕೆಗಳು ಸಹ ಸೇರಿವೆ.
ಮೂರನೇ ಶ್ರೀಮಂತ ಬ್ಯಾಡ್ಮಿಂಟನ್ ಆಟಗಾರ್ತಿ
ಜಾಗತಿಕವಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮೂವರು ಮಹಿಳಾ ಬ್ಯಾಡ್ಮಿಂಟನ್ ಆಟಗಾರರಲ್ಲಿ ಸೈನಾ ನೆಹ್ವಾಲ್ ಒಬ್ಬರು. ಬಹುತೇಕರಿಗೆ ಸೈನಾ ನೆಹ್ವಾಲ್ ಮೂರನೇ ಶ್ರೀಮಂತ ಬ್ಯಾಡ್ಮಿಂಟನ್ ಆಟಗಾರ್ತಿ ಎಂದು ತಿಳಿದಿಲ್ಲ. ಹೌದು, ಮೊದಲ ಸ್ಥಾನದಲ್ಲಿ ಲಿನ್ ಡಾನ್ ಮತ್ತು ಎರಡನೇ ಸ್ಥಾನದಲ್ಲಿ ಲೀ ಚೊಂಗ್ ವೀ ಇದ್ದಾರೆ. ಸೈನಾ ದೇಶ ವಿದೇಶಗಳಲ್ಲಿ ಭಾರತದ ಹೆಸರನ್ನು ಬೆಳಗಿಸಿದ್ದಾರೆ. ಆದರೆ, ಈಗ ಸೈನಾ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ.
ಸೈನಾ ನೆಹ್ವಾಲ್ ಮನೆ ಮತ್ತು ಐಷಾರಾಮಿ ಕಾರುಗಳು
ಸೈನಾ ನೆಹ್ವಾಲ್ ಹೈದರಾಬಾದ್ ಬಳಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಅಲ್ಟ್ರಾ ಲಕ್ಸುರಿ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಸೈನಾ ಮನೆಯಲ್ಲಿ ಆಧುನಿಕ ಸೌಲಭ್ಯಗಳು, ದೊಡ್ಡ ಉದ್ಯಾನ, ಜಿಮ್ ಮತ್ತು ಕ್ರೀಡಾ ಪ್ರದೇಶಗಳಿವೆ. ಸೈನಾ ಅವರ ಐಷಾರಾಮಿ ಕಾರು ಸಂಗ್ರಹದ ಬಗ್ಗೆ ಹೇಳುವುದಾದರೆ, ಅವರಿಗೆ ದುಬಾರಿ ಕಾರುಗಳೆಂದರೆ ತುಂಬಾ ಇಷ್ಟ. ಅವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಸಚಿನ್ ತೆಂಡೂಲ್ಕರ್ ಉಡುಗೊರೆಯಾಗಿ ನೀಡಿದ ಬಿಎಂಡಬ್ಲ್ಯು (BMW 7 ಸರಣಿ), ಮರ್ಸಿಡಿಸ್ ಬೆಂಝ್ (Mercedes-Benz GLC), Audi Q5 ಮತ್ತು Range Rover Evoque, ಮಿನಿ ಕೂಪರ್ ಕಾರುಗಳನ್ನು ಹೊಂದಿದ್ದಾರೆ. ಈ ಸೊಗಸಾದ ವಾಹನಗಳು ಅವರ ಐಷಾರಾಮಿ ಜೀವನಶೈಲಿಯ ಭಾಗವಾಗಿದೆ.
ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್ ಸಾಧನೆ
ಸೈನಾ ನೆಹ್ವಾಲ್ ಅವರು ಹೈದರಾಬಾದ್‌ನ ಪುಲ್ಲೆಲಾ ಗೋಪಿಚಂದ್ ಅಕಾಡೆಮಿಯಲ್ಲಿ ತಮ್ಮ ಬ್ಯಾಡ್ಮಿಂಟನ್ ಪ್ರಯಾಣವನ್ನು ಪ್ರಾರಂಭಿಸಿದರು. ಅಲ್ಲಿ ಪಾರುಪಳ್ಳಿ ಕಶ್ಯಪ್ ಅವರನ್ನು ಭೇಟಿಯಾದರು. 2008 ರಲ್ಲಿ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಗೆದ್ದ ಬಳಿಕ ಸ್ಟಾರ್ ಆದರು. ಅದೇ ವರ್ಷ ಅವರು ಒಲಿಂಪಿಕ್ಸ್‌ನಲ್ಲಿ ಪದಾರ್ಪಣೆ ಮಾಡಿದರು. ಕ್ವಾರ್ಟರ್ ಫೈನಲ್ ತಲುಪಿದರು. ಒಲಿಂಪಿಕ್ ಕ್ವಾರ್ಟರ್‌ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಕೇವಲ ನಾಲ್ಕು ವರ್ಷಗಳ ನಂತರ, 2012 ರ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಗೆದ್ದರು. ಅರ್ಜುನ ಪ್ರಶಸ್ತಿ (2009), ರಾಜೀವ್ ಗಾಂಧಿ ಖೇಲ್ ರತ್ನ (2010), ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳು ಸೈನಾ ನೆಹ್ವಾಲ್ ಅವರ ಸಾಧನೆಗಳಲ್ಲಿ ಸೇರಿವೆ. ಸೈನಾ ನೆಹ್ವಾಲ್ ಬ್ಯಾಡ್ಮಿಂಟನ್‌ನಲ್ಲಿ ವಿಶ್ವದ ನಂ.1 ಸ್ಥಾನಕ್ಕೇರಿದ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.
ಒಟ್ಟಾರೆಯಾಗಿ, ಗೋಪಿಚಂದ್ ಅಕಾಡೆಮಿಯಲ್ಲಿ ಪ್ರಾರಂಭದ ಸ್ನೇಹ, ಪ್ರೀತಿಯಾಗಿ ಚಿಗುರೊಡೆಯಿತು. ಬಳಿಕ ಇಬ್ಬರೂ ಮದುವೆಯಾದರು. ಈ ಸುಂದರ ಪ್ರಯಾಣದ ಹೊರತಾಗಿಯೂ, ಸೈನಾ ನೆಹ್ವಾಲ್ ಮತ್ತು ಪಾರುಪಳ್ಳಿ ಕಶ್ಯಪ್ ವಿಚ್ಛೇದನವನ್ನು ಖಚಿತಪಡಿಸಿದ್ದಾರೆ. ಸುಮಾರು ಏಳು ವರ್ಷಗಳ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದಾರೆ. ಅವರ ವೈಯಕ್ತಿಕ ಸಂಬಂಧವು ಕೊನೆಗೊಂಡರೂ, ಇಬ್ಬರೂ ತಮ್ಮ ವೈಯಕ್ತಿಕ ಸಾಧನೆಗಳೊಂದಿಗೆ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ.



Click it and Unblock the Notifications












