Latest Updates
-
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ!
ಮಾಲಿಕ ಮೃತಪಟ್ಟಿದ್ದರೂ 4 ದಿನದಿಂದ ಬರುವಿಕೆಗೆ ಕಾಯುತ್ತಿದೆ ನಾಯಿ..!
ನಾಯಿಗಳು ಎಷ್ಟು ಪ್ರಾಮಾಣಿಕ ಪ್ರಾಣಿಗಳು ಎಂಬುದು ನಮಗೆಲ್ಲಾ ಗೊತ್ತಿದೆ. ನಾಯಿಗಳು ಮನುಷ್ಯರಿಗಿಂತ ಪ್ರಾಮಾಣಿಕ ಪ್ರಾಣಿಗಳು ಎಂಬುದು ಹಲವು ಬಾರಿ ಸಾಬೀತಾಗಿದೆ. ನಾಯಿಗಳು ಮನುಷ್ಯರನ್ನು ಎಷ್ಟೊಂದು ಪ್ರೀತಿ ಕಾಳಜಿಯಿಂದ ನೋಡುತ್ತವೆ ಅನ್ನೋದನ್ನು ಕೂಡ ನಾವು ನೋಡಿದ್ದೇವೆ. ಹಾಗೆ ನಾಯಿಗಳು ಅಂದರೆ ಈಗ ಮನೆ ಕಾಯುವ ಕೆಲಸ ಮಾಡುವ ಪ್ರಾಣಿಗಳಾಗಿ ಉಳಿದಿಲ್ಲ, ಅವು ಮನೆಯ, ಕುಟುಂಬದ ಸದಸ್ಯರಾಗಿಬಟ್ಟಿವೆ.
ಹೀಗಾಗಿ ಈಗ ನಾಯಿಗಳನ್ನು ಮನೆಯ ಸದಸ್ಯರಂತೆಯೇ ನೋಡಿಕೊಳ್ಳುತ್ತಾರೆ. ಮನೆ ಸದಸ್ಯರಿಗೆ ನೀಡುವಷ್ಟೇ ಪ್ರಾಮುಖ್ಯತೆ ನೀಡುತ್ತಾರೆ. ಹಾಗೆ ನಾಯಿಗಳು ಕೂಡ ಈಗ ಮನೆ ಕಾಯುವ ಕೆಲಸ ಮಾಡದೆ ಮನೆ ಸದಸ್ಯರಂತೆ ಎಲ್ಲಾ ಸ್ವತಂತ್ರದೊಂದಿಗೆ ಓಡಾಡಿಕೊಂಡಿರುತ್ತವೆ. ಹಾಗೆ ನಾಯಿಗಳು ತಮ್ಮ ಮಾಲಿಕನ ಕಳೆದುಕೊಂಡರೆ ಎಷ್ಟು ದುಃಖಿಸುತ್ತವೆ ಅನ್ನುವುದು ಕೂಡ ನಾವು ನೋಡಿದ್ದೇವೆ.

ಈಗ ಇಲ್ಲೊಂದು ಘಟನೆಯಲ್ಲೂ ಕೂಡ ನಾಯಿಯಿಂದು ತನ್ನ ಮಾಲಿಕನಿಗಾಗಿ ಊಟ ತಿಂಡಿ ಬಿಟ್ಟು ಚಳಿಯಲ್ಲಿ ಕಾಯುತ್ತಿದೆ. ನಿಮಗಿದು ಹಚಿಕೋ ಎಂಬ ನಾಯಿಯ ಕಥೆ ನೆನಪಿಸಬಹುದು. ಇಲ್ಲೂ ಕೂಡ ಮೃತಪಟ್ಟ ಮಾಲೀಕನಿಗಾಗಿ ಆ ನಾಯಿ ಕಾಯುತ್ತಲೇ ಇದೆ. ರಷ್ಯಾದಲ್ಲಿ ನೀವು ಅಂದುಕೊಂಡಿದ್ದಕ್ಕಿಂತ ಕಡಿಮೆ ತಾಪಮಾನ ಇರುತ್ತದೆ. ಅದರಲ್ಲೂ ರಾತ್ರಿ ವೇಳೆ ರಕ್ತ ಹೆಪ್ಪುಗಟ್ಟುವಷ್ಟು ಚಳಿ ಇರುತ್ತದೆ.
ರಷ್ಯಾದ ಉಫಾ ಪ್ರದೇಶದಲ್ಲಿ 59 ವರ್ಷದ ವ್ಯಕ್ತಿಯೊಬ್ಬರು ಹೆಪ್ಪುಗಟ್ಟಿದ ನದಿಯ ಬಳಿ ಸೈಕಲ್ ಸವಾರಿ ಹೊರಟಾಗ ಈ ನಾಯಿ ಅಲ್ಲಿರುವುದು ಕಂಡುಬಂದಿದೆ. ಅಲ್ಲೇ ನಾಯಿ ಮಾಲಿಕನ ಮೃತದೇಹ ಸಹ ಪತ್ತೆಯಾಗಿತ್ತು, ಆತ ನದಿಯಲ್ಲಿ ಮುಳುಗಿ ಮೃತಪಟ್ಟಿರುವುದು ತಿಳಿದುಬಂದಿದೆ. ಆದ್ರೆ ನಾಯಿ ಆ ಜಾಗವನ್ನು ಬಿಡದೆ ಮಾಲಿಕನಿಗಾಗಿ ಕಾದು ಕುಳಿತಿದೆ.
ನಾಯಿಯನ್ನು ಬೆಲ್ಕಾ ಎಂದು ಕರೆಯಲಾಗಿದೆ. ಮಾಲಿಕನ ದೇಹ ಸಿಕ್ಕಿ 4 ದಿನ ಕಳೆದರು ಕೂಡ ನಾಯಿ ಆ ಜಾಗ ಬಿಟ್ಟು ಕದಲದೆ ಅಲ್ಲಿಯೇ ಕಾಯುತ್ತಿದೆ. ಘಟನೆ ಇಡೀ ವಿಶ್ವದ ಗಮನ ಸೆಳೆದಿದೆ. ನಾಯಿಯ ಈ ಕಥೆ ನೋಡಿ ಹಲವು ಭಾವುಕರಾಗಿದ್ದಾರೆ. ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿ ಈ ನಾಯಿ ಮಾಲೀಕನಿಗಾಗಿ ಕಾಯುತ್ತಲೇ ಇದೆ. ಅಲ್ಲಿ ಚಳಿಯಲ್ಲಿ ನಡುಗುತ್ತಾ ಆಹಾರವನ್ನೂ ಸವಿಯದೆ ಮಾಲಿಕ ಬರುತ್ತಾನೆಂದು ಕಾಯುತ್ತಿದೆ.
ಈಗ ಈ ನಾಯಿಯ ಫೋಟೋ ಹಾಗೂ ಅದರ ಕಥೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ನಾಯಿಯ ಕಥೆಯನ್ನು ಜನರು ಹಚಿಕೋ ನಾಯಿಯ ಕತೆಗೆ ಹೋಲಿಸಿದ್ದಾರೆ. ಹಚಿಕೋ ನಾಯಿ ಕೂಡ ಇದೇ ರೀತಿ ಮಾಲಿಕನಿಗಾಗಿ ವರ್ಷಗಳ ಕಾದು ಪ್ರಾಣ ಬಿಟ್ಟ ನಾಯಿಯಾಗಿದೆ.
ಹಚಿಕೋ ನಾಯಿ ಬಗ್ಗೆ ಗೊತ್ತಾ?
ಹಚಿಕೋ ನಾಯಿ ಕಥೆ ನಡೆಯೋದು ಜಪಾನ್‌ನಲ್ಲಿ ಅದೊಂದು ಅನಾಥ ನಾಯಿ ಆದ್ರೆ ಪ್ರೊಫೆಸರ್ ಒಬ್ಬರು ಅದನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಹಚಿಕೋ ನಿತ್ಯ ಪ್ರೊಫೆಸರ್ ಅನ್ನು ರೈಲು ಹತ್ತಿಸಿ ಅದೇ ನಿಲ್ದಾಣದ ಮುಂದೆ ಕಾದು ಕುಳಿತಿರುತ್ತಿತ್ತು, ಪ್ರೊಫೆಸರ್ ಸಂಜೆ ಬಂದಾಗ ಅವರ ಜೊತೆಗೆ ಮನೆಗೆ ವಾಪಾಸಾಗುತ್ತಿತ್ತು.
ಆದ್ರೆ ಒಂದು ದಿನ ಫ್ರೊಫೆಸರ್ ಅನ್ನು ರೈಲಿಗೆ ಹತ್ತಿಸಿದ ಹಚಿಕೋ ಕಾಯುತ್ತಾ ಕುಳಿತ್ತಿತ್ತು, ಆದ್ರೆ ಸಂಜೆ ಎಷ್ಟು ಹೊತ್ತಾದರು ಅವರು ವಾಪಾಸು ಬರಲಿಲ್ಲ. ಫ್ರೊಫೆಸರ್ ಕಾಲೇಜಿನಲ್ಲೇ ಮೃತಪಟ್ಟರು. ಆದ್ರೆ ಈ ವಿಚಾರ ನಾಯಿಗೆ ಹೇಳೋದು ಹೇಗೆ? ಹಚಿಕೋ ಪ್ರೊಫೆಸರ್ ಬರುತ್ತಾರೆ ಎಂದು ಚಳಿ, ಗಾಳಿ, ಮಳೆ ಯಾವುದನ್ನೂ ಲೆಕ್ಕಿಸದೆ ಮಾಲಿಕನಿಗೆ ಕಾಯುತ್ತಿತ್ತು. ಆದ್ರೆ ವರ್ಷ ಕಳೆದರು ಪ್ರೊಫೆಸರ್ ಬರಲಿಲ್ಲ. ಹಚಿಕೋ ನಿಲ್ದಾಣದ ಮುಂದೆ ಕುಳಿತು ಅಲ್ಲಿಯೇ ಪ್ರಾಣ ಬಿಟ್ಟಿತು. ಈಗ ಅದೇ ನಿಲ್ದಾಣದ ಮುಂದೆ ಈ ಹಚಿಕೋ ನಾಯಿಯ ಪ್ರತಿಮೆ ಇದೆ. ಹಾಗೆ ಸಿನಿಮಾ ಕೂಡ ಮಾಡಿ ಸೂಪರ್ ಹಿಟ್ ಆಗಿತ್ತು.



Click it and Unblock the Notifications
