Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸ್ಟಂಟ್ ಮಾಡಿ ವೈರಲ್ ಆದ ಯುವಕ: ಬಂಧಿಸಲು ಹೋದಾಗ ಪೊಲೀಸರು ಶಾಕ್..!!
ನೀವು ಸಾಮಾಜಿಕ ಜಾಲತಾಣದಲ್ಲಿ ರೈಲಿನ ಮೇಲೆ ನಿಂತು ಅಥವಾ ರೈಲಿನ ಬಾಗಿಲ ಬಳಿ ಸ್ಟಂಟ್ ಮಾಡುವುದನ್ನು ನೋಡಿರುತ್ತೀರಿ. ರೈಲ್ವೆ ಇಲಾಖೆ ಈ ರೀತಿಯ ಸ್ಟಂಟ್‌ಗಳ ಮಾಡಬೇಡಿ ಎಂದು ಹೇಳುತ್ತಲೇ ಇರುತ್ತದೆ. ಇದರಿಂದ ನಿಮ್ಮ ನೀವಕ್ಕೆ ಆಪತ್ತು ಬರಲಿದೆ ಎಂದು ಜಾಗೃತಿ ಮೂಡಿಸುತ್ತಿದೆ. ಆದರೆ ಹಲವು ವಾರಿ ನಾವು ಯುವಕರು ರೀಲ್ಸ್‌ಗಾಗಿ, ವಿಡಿಯೋಗಾಗಿ ಹುಚ್ಚಾಟ ಮೆರೆಯುತ್ತಾರೆ.
ರೈಲಿನ ಕಂಬಿಗಳ ಮೇಲೆ ನಿಂತು ಹುಚ್ಚಾಟವಾಡುವುದು, ಬಾಗಿಲಿಂದ ಜಿಗಿಯುವುದು, ಬಾಗಿಲಲ್ಲಿ ಕುಳಿತುಕೊಳ್ಳುವುದು ಹೀಗೆ ಈ ಸಾಲುಗಳು ಬೆಳೆಯುತ್ತಲೇ ಹೋಗುತ್ತದೆ. ಆದ್ರೆ ಇದರಿಂದ ಯಾರಿಗೂ ಒಳಿತಾಗಿದ್ದು ನೋಡೋದು ಕಷ್ಟವೆ. ಈ ಹಿಂದೆ ಬಹಳ ವರ್ಷದಿಂದ ವೈರಲ್ ಆಗುತ್ತಿದ್ದ ಯುವಕನ ವಿಡಿಯೋ ಇತ್ತೀಚಿಗೆ ಮತ್ತೆ ವೈರಲ್ ಆಗಿತ್ತು. ಆದ್ರೆ ಆತನ ಕಥೆ ಈಗ ಕಣ್ಣೀರು ತರಿಸುತ್ತಿದೆ.

ಯುವಕನೊಬ್ಬ ಚಲಿಸುತ್ತಿರುವ ರೈಲಿನ ಬಾಗಿಲು ಹಿಡಿದು ಫ್ಲಾಟ್‌ಫಾರ್ಮ್ ಮೇಲೆ ಜಾರಿಕೊಂಡು ಹೋಗುತ್ತಾ ಅದನ್ನು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಎರಡು ವರ್ಷಗಳ ಹಿಂದೆ ಆತ ಈ ಸ್ಟಂಟ್ ಮಾಡಿ ಭಾರೀ ಸುದ್ದಿಯಾಗಿದ್ದ, ಆದ್ರೆ ಆ ವೇಳೆಗೆಲ್ಲ ರೈಲ್ವೆ ಉಂತಹ ವಿಡಿಯೋಗಳಿಗೆ ಎಚ್ಚರಿಕೆ ನೀಡುತ್ತಿತ್ತು ಆದ್ರೆ ಯಾವುದೇ ಕ್ರಮಕ್ಕೆ ಮುಂದಾಗುತ್ತಿರಲಿಲ್ಲ.
ಆದ್ರೆ ಇತ್ತೀಚಿಗೆ ರೈಲ್ವೆ ಇಂತಹ ಸ್ಟಂಟ್‌ಗಳ ತಡೆಯುವ ಉದ್ದೇಶದಿಂದ ಕಠಿಣ ಕ್ರಮಕ್ಕೆ ಮುಂದಾಗುತ್ತೆ. ಇಂತಹ ಹುಚ್ಚಾಟಕ್ಕೆ ಮುಂದಾಗುವ ವ್ಯಕ್ತಿಗಳ ಪತ್ತೆ ಮಾಡಿ ಅವರ ಬಾಯಲ್ಲೇ ಕ್ಷಮೆಯಾಚಿಸುವಂತೆ ಮಾಡಿ ವಿಡಿಯೋ ಸಹ ಪೋಸ್ಟ್ ಮಾಡುತ್ತಾ ಬಂದಿದೆ. ಈ ಕ್ರಮದ ಬಳಿಕ ಈ ರೈಲ್ವೆ ಅಪಘಾತಗಳು, ಸ್ಟಂಟ್‌ಗಳ ವಿಡಿಯೋಗಳು ಸ್ವಲ್ಪ ಮಟ್ಟಿಗೆ ಕಡಿಮೆಯಾಗಿವೆ.
ವಡಾಲಾದ ಫರ್ಹತ್ ಅಜಮ್ ಶೇಖ್ ಎಂಬ ಈ ಯುವಕ ತಿಂಗಳ ಹಿಂದೆ ಮಾಡಿದ್ದ ಈ ಸ್ಟಂಟ್‌ಗೆ ಈಗ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದರು. ಈ ವಿಡಿಯೋದಲ್ಲಿರುವ ಯುವಕ ಯಾರು ಎಂಬ ಪತ್ತೆಗೆ ಮುಂದಾಗಿತ್ತು. ತನಿಖೆಯಲ್ಲಿ ಆತನ ಗುರುತು ಪತ್ತೆಯಾಗಿ ಆತನ ಕರೆತರಲೆಂದು ಆತನ ಮನೆಗೂ ತೆರಳಿತ್ತು.
ಮನೆಗೆ ತೆರಳಿದ ಪೋಲೀಸ್‌ಗ ಶಾಕ್
ಹೌದು ಯುವಕನನ್ನು ವಿಚಾರಣೆಗೆ ಒಳಪಡಿಸಲೆಂದು ಆತನ ಮನೆಗೆ ತೆರಳಿದ್ದ ಪೊಲೀಸರಿಗೆ ಶಾಕ್ ಕಾದಿತ್ತು. ಫರ್ಹತ್ ಅಜಮ್ ಶೇಖ್ ಮತ್ತೊಂದು ಸ್ಟಂಟ್ ಮಾಡಲು ಹೋಗಿ ತನ್ನ ಒಂದು ಕಾಲು ಹಾಗೂ ಒಂದು ಕೈ ಕಳೆದುಕೊಂಡಿರುವುದು ತಿಳಿದುಬಂದಿದೆ. ಈ ವರ್ಷದ ಮಾರ್ಚ್ 7 ರಂದು ಮಾಡಿದ ಸ್ಟಂಟ್ ವಿಡಿಯೋ ಬಳಿಕ ಆತ ಎಪ್ರಿಲ್ 14 ರಂದು ಮತ್ತೊಂದು ಸ್ಟಂಟ್ ಮಾಡಲು ಯತ್ನಿಸುತ್ತಿದ್ದಾಗ ಕೈ ಕಾಲು ಕಳೆದುಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಈ ಘಟನೆಯೇ ಈವರೆಗೆ ವರದಿಯಾಗದಿರುವುದು ಅಚ್ಚರಿ ಮೂಡಿಸಿದೆ.
ಆತ ಕೈ ಕಾಲು ಕಳೆದುಕೊಳ್ಳಲು ಕಾರಣವಾಗಿದ್ದ ಸ್ಟಂಟ್‌ನ ವಿಡಿಯೋ ಲಭ್ಯವಾಗಿಲ್ಲ. ಈ ವೇಳೆ ಪೊಲೀಸರು ಆತನ ಹೇಳಿಕೆಯ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ, ಯಾರು ಸಹ ಈ ರೈಲ್ವೆ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟಂಟ್ ಮಾಡಬೇಡಿ ಎಂದು ಮನವಿ ಮಾಡಲಾಗಿದೆ.
ಆರೋಪಿ ಫರ್ಹತ್ ಏಪ್ರಿಲ್ 14 ರಂದು ಮಸೀದಿ ನಿಲ್ದಾಣದಲ್ಲಿ ಮತ್ತೊಂದು ಸ್ಟಂಟ್ ಪ್ರದರ್ಶನ ಮಾಡುವಾಗ ಅಪಾಯಕಾರಿ ಅಪಘಾತಕ್ಕೆ ಒಳಗಾಗಿ ತನ್ನ ಎಡಗೈ ಮತ್ತು ಕಾಲು ಕಳೆದುಕೊಂಡಿದ್ದಾನೆ. ರೈಲ್ವೇ ಆಡಳಿತವು ಅವರನ್ನು ಚಿಕಿತ್ಸೆಗಾಗಿ ಸೇಂಟ್ ಜಾರ್ಜ್ ಆಸ್ಪತ್ರೆಗೆ, CSMT ಗೆ ರವಾನಿಸಿತ್ತು. ಅವರು ದೈನಂದಿನ ಕೆಲಸಗಳನ್ನು ನಿರ್ವಹಿಸಲು ತೀವ್ರ ತೊಂದರೆ ಎದುರಿಸುತ್ತಿದ್ದಾರೆ ಮತ್ತು ಕಾನೂನುಬಾಹಿರ ಮಾತ್ರವಲ್ಲದೆ ಜೀವಕ್ಕೆ ಅಪಾಯಕಾರಿಯಾದ ಇಂತಹ ಅಪಾಯಕಾರಿ ಕೃತ್ಯಗಳಿಂದ ದೂರವಿರಿ ಎಂದು ವಿಡಿಯೋದಲ್ಲಿ ಮನವಿ ಮಾಡಲಾಗಿದೆ.
ಜೊತೆಗೆ ಈ ರೀತಿ ಅಪಾಯಕಾರಿ ಸ್ಟಂಟ್ ಮಾಡುವವರಿಗೆ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ.



Click it and Unblock the Notifications
