Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಲಂಡನ್ ನಗರದಿಂದ ರೌಡಿ ಹಂಸ ಬ್ಯಾನ್! ಈ ಟರ್ಮಿನೇಟರ್ ಹಂಸದ ಕಥೆ ಗೊತ್ತಾ?
ಪ್ರಾಣಿ ಪಕ್ಷಿಗಳು ಮಾನವರೊಂದಿಗೆ ಕೆಲವೊಮ್ಮೆ ಘರ್ಷಣೆಯಲ್ಲಿ ತೊಡಗುವುದು ಹಾಗೆ ಪ್ರಾಣಿ, ಪಕ್ಷಿಗಳಿಂದ ಸಮಸ್ಯೆಗಳ ಎದುರಿಸುವುದು ಕೇಳಿರಬಹುದು. ಇದೆಲ್ಲವು ದೊಡ್ಡ ಪ್ರಾಣಿಗಳು ಹಾಗೆ ದೊಡ್ಡ ಗಾತ್ರದ ಪಕ್ಷಿಗಳಿಂದ ದೂರ ಇರುವುದು ಬಹಳ ಉತ್ತಮವಾಗುತ್ತದೆ. ಆದ್ರೆ ಇಲ್ಲೊಂದು ಕಡೆ ಹಂಸವೊಂದನ್ನು ನಗರದಿಂದಲೇ ಹೊರಹಾಕಲಾಗಿದೆ.
ಕಪ್ಪು ಹಂಸಗಳು ಹಾಗೆ ಬಿಳಿಯ ಹಂಸಗಳನ್ನು ಅವುಗಳ ಶಾಂತ ಸ್ವಭಾವ ಹಾಗೆ ನೋಡಲು ಸುಂದರವಾಗಿರುವ ಕಾರಣ ಸಾಕಲಾಗುತ್ತದೆ. ಸಾರ್ವಜನಿಕವಾಗಿ ಸಣ್ಣಪುಟ್ಟ ಸರೋವರಗಳು, ಕೆರೆಗಳು, ಕೃತಕವಾಗಿ ನಿರ್ಮಿಸಲಾದ ಸರೋವರಗಳಲ್ಲಿ ನೋಡಬಹುದು. ಇವು ಪ್ರವಾಸಿಗರನ್ನು ಸೆಳೆಯುವ ಪಕ್ಷಿಗಳು ಕೂಡ ಹೌದು.

ಆದ್ರೆ ಲಂಡನ್‌ನಲ್ಲಿ ನೆಲೆಸಿದ್ದ ಈ ಕಪ್ಪು ಹಂಸವೊಂದನ್ನು ನಗರದಿಂದ ಹೊರಹಾಕಲಾಗಿದೆ. ಇದೊಂದು ವಿಚಿತ್ರ ಘಟನೆಯಾಗಿದ್ದು, ಕಪ್ಪು ಹಂಸವನ್ನು ಹೊರಹಾಕಲಾಗಿದೆ. ಮಿಸ್ಟರ್ ಟರ್ಮಿನೇಟರ್ ಎಂದು ಕರೆಯಲಾಗುತ್ತಿದ್ದ ಈ ಕಪ್ಪು ಹಂಸವು ಉಳಿದ ಹಂಸಗಳನ್ನು ಹಾಗೆ ಪ್ರವಾಸಿಗರನ್ನು ಭಯಪಡಿಸುತ್ತಿತ್ತು ಎಂದು ಆರೋಪಿಸಲಾಗಿತ್ತು. ಹೀಗಾಗಿ ಈ ಹಂಸವನ್ನು ಡೆವೊನ್‌ನಲ್ಲಿರುವ ಡಾವ್ಲಿಷ್ ವಾಟರ್‌ಫೌಲ್ ಸೆಂಟರ್‌ಗೆ ಸ್ಥಳಾಂತರಿಸಲಾಗುತ್ತಿದೆ.
ರೆಗ್ಗಿ ಎಂಬ ಅಡ್ಡ ಹೆಸರಿನಿಂದಲೂ ಈ ಕಪ್ಪು ಹಂಸವನ್ನು ಕರೆಯಲಾಗಿದೆ. ಈ ಕಪ್ಪು ಹಂಸವು ಇಂಗ್ಲೆಂಡ್‌ನ ಪಕ್ಷಿಯಲ್ಲ ಬದಲಿಗೆ ಇದನ್ನು ಪ್ರವಾಸಿಗರ ಆಕರ್ಷಿಸುವ ಉದ್ದೇಶದಿಂದ ಮಾತ್ರಕ್ಕೆ ಉದ್ದೇಶಿತ ಸ್ಥಳದಲ್ಲಿ ಬಿಡಲಾಗಿತ್ತು. ಆದ್ರೆ ಈಗ ನಗರದಿಂದ ಹೊರಹಾಕಲಾಗುತ್ತದೆ.
ಕಪ್ಪು ಹಂಸ ಡೇಜರಸ್ ಆಗಿದ್ದೇಗೆ?
ಈ ಕಪ್ಪು ಹಂಸವು ಉಳಿದ ಹಂಸಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿತ್ತು. ಹಾಗೆ ಉಳಿದ 60ಕ್ಕೂ ಹೆಚ್ಚು ಹಂಸಗಳನ್ನು ಹೆದರಿಸಿ ಓಡಿಸುವ ಕೆಲಸ ಮಾಡುತ್ತಿತ್ತು. ಹೀಗಾಗಿ ಇದನ್ನು ಸ್ಥಳೀಯರು ಮಿಸ್ಟರ್ ಟರ್ಮಿನೇಟರ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಹಾಗೆ ಹಂಸಗಳ ವೀಕ್ಷಿಸಲೆಂದು ಸೇರುತ್ತಿದ್ದ ಪ್ರವಾಸಿಗರನ್ನು ಕೂಡ ಹೆದರಿಸುತ್ತಿತ್ತು. ಹೀಗಾಗಿ ಇದನ್ನು ರೌಡಿ ಹಂಸವೆಂದು ಪರಿಗಣಿಸಲಾಗಿತ್ತು.
ಇತರ ಹಂಸಗಳ ಕುತ್ತಿಗೆಯ ಕಚ್ಚುವುದು, ಆಹಾರ ನೀಡಿದಾಗ ಅವುಗಳನ್ನು ಓಡಿಸಿ ತಿನ್ನುವುದು, ಪ್ರವಾಸಿಗರು ಫೋಟೊ ತೆಗೆಯಲು ಹತ್ತಿರ ಬಂದಾಗ ಅವರ ಮೇಲೆ ದಾಳಿಗೆ ಮುಂದಾಗುವುದು ಇಂತಹ ವಿಚಿತ್ರ ನಡವಳಿಕೆಯಿಂದಲೇ ಸುದ್ದಿಯಾಗಿತ್ತು. ಪ್ರವಾಸಿಗರೊಟ್ಟಿಗೆ ಮಕ್ಕಳಿದ್ದರೆ ಅವರ ಮೇಲೆಯೂ ದಾಳಿಗೆ ಮುಂದಾಗುತ್ತಿತ್ತು, ಹೆಚ್ಚು ಸಮಯ ಅದನ್ನು ನೋಡುತ್ತಾ ನಿಂತ ಮಂದಿಯತ್ತ ಅದು ಮುನ್ನುಗ್ಗುತ್ತಿತ್ತು. ಈ ಕಾರಣದಿಂದಾಗಿಯೂ ಕಪ್ಪು ಹಂಸವು ಬಹಳ ಫೇಮಸ್ ಆಗಿತ್ತು.
ಈ ಹಂಸದ ಕಾಟದಿಂದ ಬೇಸತ್ತಿದ್ದ ಉಳಿಸದ ಹಂಸಗಳು ಇದರ ಸುತ್ತ ಮುತ್ತ ಸುಳಿಯುವುದನ್ನೇ ಬಿಟ್ಟಿದ್ದವು ನೀರಿನ ಮೂಲೆವೊಂದರಲ್ಲಿ ತೆರಳಿ ಅಲ್ಲಿಯೇ ಇರುತ್ತಿದ್ದವು. ಇದನ್ನು ಗಮನಿಸಿದ್ದ ಅಲ್ಲಿನ ಸಿಬ್ಬಂದಿ ಈ ಹಂಸವನ್ನು ಬೇರೆಡೆ ಸ್ಥಳಾಂತರಿಸಲು ಮುಂದಾದರು. ಆದ್ರೆ ಇದು ಅಷ್ಟು ಸುಲಭವಾಗಿರಲಿಲ್ಲ.
ಹಾಗೆ ಈ ಟರ್ಮಿನೇಟರ್ ಹಂಸವು ನೀರಿನಲ್ಲಿ ಗೂಡು ಕಟ್ಟುತ್ತಿದ್ದ ಬೇರೆ ಹಂಸಗಳಿಗೆ ಅಡ್ಡಿಯಾಗಿತ್ತು. ಆ ಹಂಸಗಳನ್ನು ಗೂಡು ಕಟ್ಟುವಿಕೆಯಿಂದ ದೂರ ಮಾಡಿತ್ತು. ಇದರಿಂದ ಹಂಸಗಳ ಸಂತಾನೋತ್ಪತ್ತಿಗೂ ಅಡ್ಡಗಾಲು ಹಾಕಿತ್ತು. ಹೀಗಾಗಿಯೇ ಇದನ್ನು ಸ್ಥಳಾಂತರಿಸುವುದು ಸರಿಯಾದ ಮಾರ್ಗ ಎಂದು ಪರಿಗಣಿಸಲಾಗಿತ್ತು.
ಹೀಗಾಗಿ ರೆಗ್ಗಿಯನ್ನು ಪಟ್ಟಣದಿಂದ ಹೊರಹಾಕಲು ನಿರ್ಧರಿಸಲಾಯಿತು. ಕಪ್ಪು ಹಂಸವನ್ನು ಸ್ಥಳಾಂತರ ಪ್ರಕ್ರಿಯೆ ಸುಲಭವಾಗಿರಲಿಲ್ಲ. ಮೊದಲು ಹಂಸವನ್ನು ಶಾಂತಗೊಳಿಸಲು ಮುಂದಾಗಲಾಗಿತ್ತು, ನಂತರ ಸಿಬ್ಬಂದಿ ಈ ಹಂಸವನ್ನು ಟ್ರಾಪಿಂಗ್ ವಿಧಾನದ ಮೂಲಕ ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಿದರು ಎಂದು ತಿಳಿದುಬಂದಿದೆ. ಹಾಗೆ ಈಗ ಮೊದಲಿದ್ದ ಸ್ಥಳಕ್ಕಿಂತ 150 ಕಿ. ಮೀ ದೂರಕ್ಕೆ ಸ್ಥಳಾಂತರಿಸಲಾಗುತ್ತಿದೆ. ಸದ್ಯ ಈಗ ಪ್ರವಾಸಿಗರಿಂದ ದೂರಾಗಿರುವ ಕಪ್ಪು ಹಂಸವು ಮತ್ತೊಂದು ಕಡೆ ನೆಲೆಯಾಗಲಿದೆ. ಅಲ್ಲದೆ ತರಬೇತಿ ಶಿಬಿರದಲ್ಲಿ ಅದರ ಸ್ವಭಾವವನ್ನು ಬದಲಾಯಿಸಲು ಪ್ರಯತ್ನಿಸಲಾಗುತ್ತಿದೆ.



Click it and Unblock the Notifications
