Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
9 ಗಂಟೆ ಕೆಲಸದ ಒತ್ತಡ..! ಆತ್ಮಹತ್ಯೆ ಮಾಡಿಕೊಂಡ ರೋಬೋಟ್..!
ಜಗತ್ತು ಮುಂದುವರೆದಂತೆ ತಂತ್ರಜ್ಞಾನವೂ ಸಹ ಮುಂದುವರೆಯುತ್ತಿದೆ. ಮಾನವರ ಬದಲು ಈಗ ಕೆಲಸಗಳಿಗೆ ರೋಬೋಟ್‌ಗಳು, ಮೆಷಿನರಿಗಳು ಬಂದಿವೆ. ಯಾವ ಕೆಲಸ ಮಾಡದೆ ಇರುವ ಯಂತ್ರಗಳು ಇಲ್ಲ ಎನ್ನುವ ಹಾಗಿಲ್ಲ. ಸಣ್ಣ ಸಣ್ಣ ಕೆಲಸದಿಂದ ಹಿಡಿದು ದೊಡ್ಡ ದೊಡ್ಡ ಕೆಲಸಗಳಿಗೆ ಈಗ ರೋಬೋಟ್‌ಗಳು, ಮಷಿನ್‌ಗಳು ರೆಡಿಯಾಗಿವೆ. ಹೀಗಾಗಿ ಮಾನವರ ಕೆಲಸ ಸುಲಭವಾಗಿದೆ ಎಂದು ಹೇಳಬಹುದು.
ಮಾನವರ ಎಲ್ಲಾ ಕೆಲಸಗಳನ್ನು ಈ ರೋಬೋಟ್‌ಗಳು ಮಾಡಲಿವೆ ಎನ್ನಲಾಗಿತ್ತು. ಅಲ್ಲದೆ ಕೆಲವೊಂದು ಕ್ಷೇತ್ರದಲ್ಲಿ ಈಗ ಮಾನವರ ಬದಲು ಈ ರೋಬೋಟ್‌ಗಳೇ ತುಂಬಿವೆ. ಕೆಲವೊಂದು ಕ್ಷೇತ್ರದಲ್ಲಿ ಈಗ ತಾನೆ ರೋಬೋಟ್‌ಗಳು ಹೆಜ್ಜೆ ಇಡುತ್ತಿವೆ. ಆದರೆ ಇಲ್ಲೊಂದು ವಿಚಿತ್ರ ಘಟನೆಯಲ್ಲಿ ಕೆಲಸದ ಒತ್ತಡ ತಾಳಲಾಗದೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.

ನಿಮಗಿದು ಅಚ್ಚರಿಯಾಗಬಹುದು, ಆದರೆ ಈ ಘಟನೆ ನಡೆದಿರುವುದು ಸತ್ಯ. ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿಗೆ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ವರದಿಯಾಗಿದೆ. ರೋಬೋಟ್ 'ಸೂಪರ್‌ವೈಸರ್ ಗುಮಿ' ಸಿಟಿ ಕೌನ್ಸಿಲ್‌ನ ಕಠಿಣ ಕೆಲಸ ಮಾಡುವ ಉದ್ಯೋಗಿಯಾಗಿದ್ದು, ಅದು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತಿತ್ತು ಎಂದು ತಿಳಿದುಬಂದಿದೆ.
ಕೆಲಸದ ಒತ್ತಡವು ರೋಬೋಟ್‌ಗಳ ಮೇಲೂ ಪರಿಣಾಮ ಬೀರಬಹುದೇ? ಎಂದು ನೀವು ಪ್ರಶ್ನಿಸುತ್ತಿರಬಹುದು. ಆದರೆ ಕೆಲಸದ ಒತ್ತಡದಿಂದ ಈ ರೋಬೋಟ್ ಆತ್ಮಹತ್ಯೆ ಮಾಡಿಕೊಂಡಿದೆಯಂತೆ. ಇದು ದೇಶದ ಮೊದಲ "ರೋಬೋಟ್ ಆತ್ಮಹತ್ಯೆ" ಎಂದು ಕರೆಯಲ್ಪಡುತ್ತಿದೆ
ಅಧಿಕಾರಿಗಳ ಪ್ರಕಾರ, ರೋಬೋಟ್ ಕಟ್ಟಡದ ಮೆಟ್ಟಿಲುಗಳಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದೆಯಂತೆ. ರೋಬೋಟ್ ಮೆಟ್ಟಿಲುಗಳ ಮೇಲೆ ಪುಡಿ ಪುಡಿಯಾಗಿ ಬಿದ್ದಿರುವುದು ವರದಿಯಾಗಿದೆ. ಜೂನ್ 26 ರಂದು, ಗುಮಿ ಸಿಟಿ ಕೌನ್ಸಿಲ್, ರೋಬೋಟ್ ಸೂಪರ್‌ವೈಸರ್ ಎಂದು ಹೆಸರಿಸಲಾದ ರೋಬೋಟ್‌ನ ಭಾಗಗಳು ಕೌನ್ಸಿಲ್ ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಗಳ ನಡುವಿನ ಮೆಟ್ಟಿಲುಗಳ ಕೆಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ವರದಿಯಾಗಿದೆ.
ರೋಬೋಟ್ ಸೂಪರ್‌ವೈಸರ್ ಗುಮಿ ಸಿಟಿ ಕೌನ್ಸಿಲ್‌ನ ಕಠಿಣ ಪರಿಶ್ರಮದ ಉದ್ಯೋಗಿಯಾಗಿದ್ದು, ಅವರು ಪ್ರತಿದಿನ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಕೆಲಸ ಮಾಡುತ್ತಿತ್ತು. ಈ ಕೆಲಸದ ಹೊರೆಯ ಕಾರಣ ರೋಬೋಟ್ ಒತ್ತಡಕ್ಕೆ ಒಳಗಾಗಿತ್ತಂತೆ. ಮೆಟ್ಟಿಲಿನಿಂದ ಕೆಳಗೆ ಬೀಳುವ ಮೊದಲು ರೋಬೋಟ್ ಮೆಟ್ಟಿಲುಗಳ ಮೇಲೆ ಓಡಾಡುತ್ತಿರುವುದನ್ನು ಅಲ್ಲಿನ ಸ್ಥಳೀಯರು ನೋಡಿದ್ದರಂತೆ. ಆದರೆ ಹೇಗೆ ಬಿದ್ದಿತು ಎಂಬುದರ ಕುರಿತು ತಿಳಿಯಲು ತನಿಖೆಗೂ ಈಗ ಆದೇಶಿಸಲಾಗಿದೆ.
ವಿಶೇಷ ತನಿಖಾ ತಂಡವು ರೋಬೋಟ್‌ನ ತುಣುಕುಗಳನ್ನು ಸಂಗ್ರಹಿಸಿದೆ ಮತ್ತು ಅವುಗಳನ್ನು ಕಂಪನಿಯು ವಿಶ್ಲೇಷಿಸುತ್ತದೆ. ಸ್ಥಳೀಯ ನಿವಾಸಿಗಳಿಗೆ ವಿವಿಧ ರೀತಿಯ ಸರ್ಕಾರಿ ಪತ್ರಗಳನ್ನು ತಲುಪಿಸುವ ರೋಬೋಟ್ ಉದ್ಯೋಗಿಯನ್ನು ಜನರು ತುಂಬಾ ಇಷ್ಟಪಡುತ್ತಿದ್ದರು. ಇದು ಜನರಿಗೆ ಮಾಹಿತಿಯನ್ನೂ ನೀಡುತ್ತಿತ್ತು. ಜೊತೆಗೆ ಎಲ್ಲ ಮಾಹಿತಿಯನ್ನು ಜನರಿಗೆ ಕ್ಷಣದಲ್ಲಿ ವಿವರಿಸುವ ಕಾರ್ಯ ಮಾಡುತ್ತಿತ್ತು.
ಈ ಕಟ್ಟಡಕ್ಕೆ ಆಗಸ್ಟ್ 2023ರಲ್ಲಿ ಈ ರೋಬೋಟ್ ಅನ್ನು ನೇಮಿಸಲಾಗಿತ್ತು. ಇದು ಸರ್ಕಾರಿ ಕಚೇರಿಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದ ವಿಶ್ವದ ಮೊದಲ ರೋಬೋಟ್ ಎಂಬ ಕೀರ್ತಿ ಗಳಿಸಿತ್ತು. ಇದನ್ನು ಕ್ಯಾಲಿಫೋರ್ನಿಯಾದ ರೋಬೋಟ್ ಸ್ಟಾರ್ಟ್‌ಅಪ್ ಆಗಿರುವ ಬೇರ್ ರೋಬೋಟಿಕ್ಸ್ ಎಂಬ ಸಂಸ್ಥೆ ನಿರ್ಮಿಸಿತ್ತು.
ಸದ್ಯ ಈ ರೋಬೋಟ್ ಆತ್ಮಹತ್ಯೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿಯಾಗಿ ಹರಡುತ್ತಿದ್ದು, ಎಲ್ಲರ ಅಚ್ಚರಿ ಹಾಗೂ ಗಮನ ಸೆಳೆದಿದೆ. ಮಾನವನ ಕೆಲಸ ಕಡಿಮೆ ಮಾಡಲೆಂದು ನಿರ್ಮಿಸಿರುವ ರೋಬೋಟ್‌ಗಳೇ ಕೆಲಸದ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಮಾನವರು ಬೆಳದಿರುವುದು ವಿಪರ್ಯಾಸವೇ ಸರಿ.



Click it and Unblock the Notifications