Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ರಸ್ತೆ ಮೇಲೆ ವಾಹನ ಹೋದರೆ ಸಂಗೀತ ಹೊರಹೊಮ್ಮುತ್ತೆ..! ಅಚ್ಚರಿಯ ತಂತ್ರಜ್ಞಾನವಿದು..!
ಜಪಾನ್, ಯಾವಾಗಲು ಭೂಕಂಪ, ಸುನಾಮಿ ಅಂತಹ ನೈಸರ್ಗಿಕ ವಿಕೋಪಗಳಿಗೆ ಒಳಗಾಗುವ ಪುಟ್ಟ ದ್ವೀಪ ರಾಷ್ಟ್ರ. ಆದ್ರೆ ಈ ದೇಶ ಎಷ್ಟು ಬಾರಿ ಬಿದ್ದರೂ ಮತ್ತೆ ಮತ್ತೆ ಪುಟಿದೇಳುವ ಮೂಲಕ ಇಡಿ ವಿಶ್ವಕ್ಕೆ ಅಚ್ಚರಿ ಮೂಡಿಸುತ್ತೆ. ಭೂಕಂಪ ಬರಲಿ ಸುನಾಮಿ ಬರಲಿ ಎಲ್ಲವೂ ನಾಶವಾದರು ಒಂದೇ ತಿಂಗಳ ಒಳಗೆ ಮತ್ತೆ ಎಲ್ಲವನ್ನು ಪುನರ್ ನಿರ್ಮಾಣ ಮಾಡುವ ಶಕ್ತಿ ಹೊಂದಿರುವ ಅಚ್ಚರಿಯ ದೇಶವಿದು.
ಇನ್ನು ಈ ಜಪಾನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಬಹಳಷ್ಟು ಮುಂದೆ ಹೋಗಿದೆ. ನಾವು ನೀವು ಊಹಿಸದಷ್ಟರ ಮಟ್ಟಿಗೆ ಅಲ್ಲಿನ ತಂತ್ರಜ್ಞಾನ ವಲಯ ಬೆಳೆದಿದೆ. ಅಲ್ಲಿ ಪ್ರತಿಯೊಂದು ತಂತ್ರಜ್ಞಾನ ಇಡೀ ವಿಶ್ವಕ್ಕೆ ಮಾದರಿಯಾಗುತ್ತೆ. ಜೊತೆಗೆ ದೊಡ್ಡ ದೊಡ್ಡ ರಾಷ್ಟ್ರಗಳು ಅದನ್ನು ಪಾಲಿಸಲು ಮುಂದಾಗುತ್ತವೆ.

ಈಗ ಇಂತಹ ಜಪಾನ್ ತಂತ್ರಜ್ಞಾನದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದ್ರಲ್ಲಿ ವಾಹನಗಳು ರಸ್ತೆ ಮೇಲೆ ಚಲಿಸಿದರೆ ಸಂಗೀತ ಹೊರಹೊಮ್ಮುತ್ತದೆ. ಹೌದು ಅಲ್ಲಿನ ತಂತ್ರಜ್ಞಾನಕ್ಕೆ ಹಿಡಿದ ಕೈಗನ್ನಡಿ ಇದು. ಅಲ್ಲಿ ರಸ್ತೆ ಮೇಲೆ ವಾಹನ ಹೋದರ ಸಂಗೀತ ಹೊರಬರುತ್ತದೆ.
ನೀವು ಬೇರೆ ಎಲ್ಲೂ ನೋಡಿರದಂತಹ ಟೆಕ್ನಾಲಜಿ ಇದಾಗಿ. ರಸ್ತೆಗಳೆಂದರೆ ಬರಿ ಹೊಂಡ ಗುಂಡಿಗಳಿಂದಲೇ ತುಂಬಿರುತ್ತದೆ ಎಂಬ ಕಲ್ಪನೆ ಹೊಂದಿರುವ ನಾವು ಈ ತಂತ್ರಜ್ಞಾನ ನೋಡಿದರೆ ಅಚ್ಚರಿ ಆಗದೆ ಇರದು. ಈ ರೀತಿ ವಿಡಿಯೋ ಈಗ ವೈರಲ್ ಆಗಿದ್ದು ಜನ ಅಚ್ಚರಿಯಿಂದ ನೋಡುವಂತಾಗಿದೆ.
ಗೌರವ್ ಶರ್ಮಾ ಎಂಬ ಟ್ರಾವೆಲ್ ವ್ಲಾಗರ್ ತಮ್ಮ ಜಪಾನ್ ಪ್ರವಾಸ ನಡುವೆ ಈ ಮ್ಯೂಸಿಕಲ್ ರಸ್ತೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ರಸ್ತೆ ಮೇಲೆ ವಾಹನ ಚಲಿಸುವಾಗ ಸುಮದುರ ಸಂಗೀತ ಹೊರಹೊಮ್ಮುತ್ತೆ. ಇದು ವಾಹನ ಓಡಿಸುವವರಿಗೂ ಕೇಳುತ್ತೆ ಜೊತೆಗೆ ಹೊರಗಿರುವವರಿಗೆ ಕೇಳಿಸುತ್ತದೆ ಎಂದು ಅವರು ವಿವರಿಸುತ್ತಾರೆ.
ಇನ್ನೊಂದು ಅಚ್ಚರಿ ಏನೆಂದರೆ ಈ ರಸ್ತೆ ಮೇಲೆ ಕೇವಲ 50 ಕಿ.ಮೀ ವೇಗದಲ್ಲಿ ಹೋಗುವ ವಾಹನಗಳಿಂದ ಮಾತ್ರವೇ ಈ ಸಂಗೀತ ಹೊರಹೊಮ್ಮಲು ಸಾಧ್ಯವಂತೆ. ವೇಗವಾಗಿ ವಾಹನ ಸಲಿಸಿದರೆ ಸಂಗೀತ ಬರುವುದಿಲ್ಲ. ಮೇಲ್ನೋಟಕ್ಕೆ ವಾಹನ ಸವಾರರು ವೇಗವಾಗಿ ವಾಹನಗಳ ಚಲಾಯಿಸಬಾರದು ಎಂಬ ಕಾರಣಕ್ಕೆ ಈ ರೀತಿಯ ತಂತ್ರ ಮಾಡಿದ್ದಾರೆ.
ಆದರೆ ನಿಧಾನವಾಗಿ ಹೋಗುವ ಜೊತೆಗೆ ಕಿವಿಗೆ ಇಂಪಾದ ಸಂಗೀತವೂ ಕೇಳುವುದು ವಾಹನ ಸವಾರರಿಗೆ ಖುಷಿ ನೀಡಲಿದೆ. ಮೆಲೋಡಿ ರೋಡ್ಸ್ ಆಫ್ ಜಪಾನ್. ಜಪಾನ್‌ನಾದ್ಯಂತ 30 ಕ್ಕೂ ಹೆಚ್ಚು ಮೆಲೊಡಿ ರಸ್ತೆಗಳಿವೆ. ಇದು ಪೇಟೆಂಟ್ ಪಡೆದಿರುವ ತಂತ್ರಜ್ಷಾನವಾಗಿದೆ. ರಸ್ತೆಗಳ ಮೇಲೆ ವಾಹನ ಚಲಿಸುವಾಗ ಸಂಗೀತ ಬರುವಂತೆ ಅಲ್ಲಿನ ವಿನ್ಯಾಸ ಮಾಡಲಾಗಿದೆ. ಈ ರಸ್ತೆಗಳು ಮಕ್ಕಳ ನೆಚ್ಚಿನ ರೈಮ್‌ಗಳು, ಜನಪ್ರಿಯ ಗೊಂಬೆಯ ಹಾಡು, ಸೇರಿ ವಿವಿಧ ಸಂಗೀತಗಳ ಒಳಗೊಂಡಿದೆ.
ವಿಡಿಯೋದಲ್ಲಿಯೂ ನಾವು ಕಾರೊಂದು ರಸ್ತೆಯಲ್ಲಿ ಹೋಗುತ್ತಿರುವಾಗ ಸಂಗೀತ ಹೊರಹೊಮ್ಮುತ್ತಿರುವುದು ಗಮನಿಸಬಹುದು. ಈ ವಿಡಿಯೋ ಬರೋಬ್ಬರಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ರೀತಿಯ ಮ್ಯೂಸಿಕಲ್ ರಸ್ತೆಯಲ್ಲಿ ಅಪಘಾತಗಳು ಸಹ ಗಣನೀಯವಾಗಿ ಕಡಿಮೆಯಾಗಿದೆಯಂತೆ.
ಈ ವಿಡಿಯೋ ನೋಡಿದ ಮಂದಿ ಭಾರತದಲ್ಲೂ ಇಂತಹ ರಸ್ತೆಗಳ ಅಗತ್ಯವಿದೆ ಎಂದಿದ್ದಾರೆ. ಅಲ್ಲದೆ ಈ ತಂತ್ರಜ್ಞಾನವನ್ನ ಜಪಾನ್ ಇಡೀ ವಿಶ್ವಕ್ಕೆ ಹಂಚಬೇಕಿದೆ. ಇದರಿಂದ ಇಡೀ ಜಗತ್ತಿನ ರಸ್ತೆಗಳಲ್ಲೆಲ್ಲ ಸಂಗೀತ ಲಹರಿ ಕಿವಿಗೆ ಅಪ್ಪಳಿಸಲಿ. ವಾಹನಗಳ ಶಬ್ದ ಮಾಲೀನ್ಯದ ಬದಲು ಸಂಗೀತ ಸುಧೆ ಹರಿಯಲಿ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.



Click it and Unblock the Notifications
