Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಮುಖೇಶ್ ಅಂಬಾನಿ ಮಗನ ಮದುವೆಯಲ್ಲಿ ರೆಹನಾ ಬರಿಗಾಲಿನಲ್ಲಿ ಕಾರ್ಯಕ್ರಮ ನೀಡಿದ್ದೇಕೆ? ಹರಿದ ಬಟ್ಟೆಯೂ ಟ್ರೋಲ್‌ಗೆ ಆಹಾರವಾಯ್ತು
ಅನಂತ್ ಅಂಬಾನಿ ಮದುವೆ ಕಾರ್ಯಕ್ರಮ ತುಂಬಾನೇ ಅದ್ಧೂರಿಯಾಗಿ ನಡೆಯುತ್ತಿದೆ, ಈ ಮದುವೆಗೆ ಖರ್ಚು ಮಾಡುತ್ತಿರುವುದು ಒಂದಲ್ಲಾ ಎರಡಲ್ಲಾ ಬರೋಬರಿ 1000 ಕೋಟಿ ಎಂದು ಹೇಳಲಾಗುತ್ತಿದೆ. ಈ ಮದುವೆಗೆ ದೇಶ ವಿದೇಶದ ದೊಡ್ಡ-ದೊಡ್ಡ ಸೆಲೆಬ್ರಿಟಿಗಳು ಆಗಮಿಸಿದ್ದಾರೆ.
ಬಾಲಿವುಡ್‌ನ ಸಿನಿ ಸೆಲೆಬ್ರಿಟಿಗಳೆಲ್ಲಾ ಈ ಮದುವೆಯಲ್ಲಿ ಭಾಗಿಯಾಗಿದ್ದಾರೆ, ಫೇಸ್‌ಬುಕ್ ಕಂಡು ಹಿಡಿದ ಜುಕರ್‌ಬರ್ಗ್‌ನಿಂದ ಹಿಡಿದು ಗಣ್ಯಾತ ಗಣ್ಯರು ಈ ಮದುವೆಯಲ್ಲಿ ಅತಿಥಿಗಳಾಗಿ ಬಂದಿದ್ದಾರೆ, ಮುಖೇಶ್ ಅಂಬಾನಿ ಕರೆಸಿರುವ ಸೆಲೆಬ್ರಿಟಿಗಳಲ್ಲಿ ತುಂಬಾನೇ ಸದ್ದು ಮಾಡಿದ ಹೆಸರೆಂದರೆ ಅದು ಪಾಪ್‌ತಾರೆ ರಿಹನಾ.

ನೆನ್ನೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಫೈರಿಂಗ್ ಫರ್ಫಾಮ್ ಮಾಡುವ ಮೂಲಕ ಗಮನ ಸೆಳೆದು ಭಾರತದಿಂದ ಮರಳಿದ್ದಾರೆ, ಆದರೆ ರಿಹನಾ ಸೃಷ್ಟಿಸಿದ ಆ ಸೆಲೆಬ್ರಿಟಿ ಅಲೆ ಈಗಲೂ ಸದ್ದು ಮಾಡುತ್ತಿದೆ. ಮದುಮಗ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್‌ರವರ ಡ್ರೆಸ್ಸಿಂಗ್, ಮದುವೆ ಅರೇಂಜ್‌ಮೆಂಟ್‌ಗಿಂತ ರೆಹನಾ ಎಂಬ ಹೆಸರು ತುಂಬಾನೇ ಸದ್ದು ಮಾಡಿತು. ಹುಬ್ಬೇರಿಸುವ ಸಂಭಾವನೆ ಪಡೆಯುವುದರಿಂದ ಹಿಡಿದು ಡ್ರೆಸ್ ಹರಿದು ಟ್ರೋಲ್‌ನವರೆಗೂ ಎಲ್ಲಿ ನೋಡಿದರೂ ರೆಹನಾ ಹೆಸರು ಕೇಳಿ ಬರುತ್ತಿದೆ, ಇದರ ಜೊತೆಗೆ ಈ ಹಿಂದೆ ಅಂದರೆ 2021ರಲ್ಲಿ ಭಾರತದ ಬಗ್ಗೆ ರಿಹನಾ ಮಾಡಿದ ಟ್ವೀಟ್ ಕೂಡ ಮತ್ತೆ ಸದ್ದು ಮಾಡುತ್ತಿದೆ.
7 ವರ್ಷದ ಬಳಿಕ ಸ್ಟೇಜ್ ಶೋ
ಈ ಪ್ರಸಿದ್ಧ ಬಾರ್ಬಾಡಿಯನ್ ಹಾಡುಗಾರ್ತಿ 7 ವರ್ಷದ ಬಳಿಕ ಸ್ಟೇಜ್ ಶೋ ನೀಡಿದ್ದಾರೆ. ಪ್ರೀವೆಡ್ಡಿಂಗ್ ಕಾರ್ಯಕ್ರಮದಲ್ಲಿ 40 ವರ್ಷದ ಕಾರ್ಯಕ್ರಮಕ್ಕೆ ರೆಹನಾ ಪಡೆದ ಸಂಭಾವನೆ ಬರಬರಿ 53 ಕೋಟಿಯಂತೆ. ತನ್ನ ಅಮೋಘ ಕಂಠದಿಂದ ಹಾಡುತ್ತಾ, ನೃತ್ಯಮಾಡುತ್ತಾ ಅವರು ನಡೆಸಿದ ಕಾರ್ಯಕ್ರಮ ನೆರೆದವರನ್ನು ಮೋಡಿ ಮಾಡಿತು, ಸಭಿಕರು ರೆಹನಾ ಹಾಡನ್ನು ತುಂಬಾನೇ ಆಸ್ವಾದಿಸಿದರು.
ಬರಿಗಾಲಿನಲ್ಲಿ ಸ್ಟೇಜ್‌ಮೇಲೆ ಹಾಡು, ನೃತ್ಯ
ನೀವು ಗಮನಿಸಿರಬಹುದು ರೆಹನಾ ಬರಿಗಾಲಿನಲ್ಲಿ ಹಾಡುತ್ತಿದ್ದರು, ಅವರು ಬರಿಗಾಲಿನಲ್ಲಿ ಹಾಡುವುದನ್ನು ನೋಡಿದವರಿಗೂ ಶಾಕ್ ಆಗಿತ್ತು, ಭಾರತದ ನೆಲೆದಲ್ಲಿ ಭಾರತದ ಸಂಸ್ಕೃತಿಗೆ ಗೌರವ ಸೂಚಿಸಲು ಅವರು ಬರಿಗಾಲಿನಲ್ಲಿ ಮನ ರಂಜಿಸಿದರು.
ಹರಿದ ಉಡುಪು
ಅಷ್ಟೆಲ್ಲಾ ಕೋಟಿ ಹಣ ಪಡೆದ ರೆಹನಾ ತನ್ನ ಟೀಂನವರಿಗೆ ಉಡುಪಿನ ಗುಣಮಟ್ಟದ ಬಗ್ಗೆ ಗಮನಕೊಡಲು ಸೂಚಿಸಬೇಕಾಗಿತ್ತು, ಏಕೆಂದರೆ ಕಾರ್ಯಕ್ರಮ ನಡೆಸುತ್ತಿರುವಾಗ ಅವರ ಡ್ರೆಸ್ ಕೈ ಬಳಿ ಹರಿದು ಹೋಗಿದ್ದು ಇದೀಗ ಟ್ರೋಲ್‌ಗೆ ಆಹಾರವಾಗಿದೆ. ಅಷ್ಟೊಂದು ದೊಡ್ಡ ಸೆಲೆಬ್ರಿಟಿಗೆ ಡ್ರೆಸ್ ರೆಡಿ ಮಾಡುವಾಗ ರೆಹನಾ ಟೀಂನವರು ಅಷ್ಟೂ ಗಮನ ಕೊಡದೆ ಹೋದರೆ?
ಸರಳತೆಯಿಂದಲೂ ಗಮನ ಸೆಳೆದ ರೆಹನಾ
ಏರ್‌ಫೋರ್ಟ್‌ನಲ್ಲಿ ಪೊಲೀಸರಿಗೆ ಹಗ್ ನೀಡಿ, ಸೆಲೆಬ್ರಿಟಿಗಳಿಗೆ ಫೋಟೋ ನೀಡುವ ಮೂಲಕ ತುಂಬಾ ಸರಳತೆಯಿಮದ ನಡೆದುಕೊಂಡ ರೆಹನಾ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ರೆಹನಾ ಹಳೆಯ ಟ್ವೀಟ್ ಮತ್ತೆ ಸದ್ದು ಮಾಡುತ್ತಿದೆ
2021ರಲ್ಲಿ ಭಾರತದಲ್ಲಿ ರೈತರು ಪ್ರತಿಭಟನೆ ಮಾಡುತ್ತಿದ್ದಾಗ ಭಾತದ ವಿರುದ್ಧ ಟ್ವೀಟ್ ಮಾಡಿದ್ದರು ರೆಹನಾ.. ಅದಕ್ಕೆ ಕಂಗನಾ ರಣಾವತ್ ರೆಹನಾ ಈ ರೀತಿ ಟ್ವೀಟ್ ಮಾಡಲು 100 ಕೋಟಿ ಪಡೆದಿರಬಹುದು ಎಂದು ಮಾತಿನ ಛಾಟಿ ಬೀಸಿದ್ದರು... ಒಟ್ಟಿನಲ್ಲಿ ಅನಂತ್ ಅಂಬಾನಿ ಮದುವೆಯಲ್ಲಿ ರೆಹನಾ ಸೆನ್ಸೇಷನ್ ಆದರು.
ಒಟ್ಟಿನಲ್ಲಿ ರೆಹನಾ ಎಂಬ ಪಾಪ್ ತಾರೆ ಭಾರತಕ್ಕೆ ಬಂದಿರುವುದು ತುಂಬಾನೇ ಸದ್ದು ಮಾಡಿತು, ಹೊಸ ಜೋಡಿಗೆ ಹರಿಸಿ ರೆಹನಾ ಮರಳಿದ್ದಾರೆ. ದೊಡ್ಡ ಸೆಲೆಬ್ರಿಟಿಗಳು ಭಾರತಕ್ಕೆ ಬರುವಂತೆ ಮಾಡಿ ಭಾರತದ ಸಂಸ್ಕೃತಿಯನ್ನು ಅವರಿಗೆ ಪರಿಚಯಿಸಲಾಗಿದೆ, ಏಕೆಂದರೆ ಈ ಮದುವೆ ತುಂಬಾನೇ ಸಾಂಪ್ರದಾಯಕವಾಗಿ ಭಾರತೀಯ ಸಂಸ್ಕೃತಿಯನ್ನು ಬಿಂಬಿಸಸುತ್ತಿದೆ.



Click it and Unblock the Notifications
