Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಭಾರತದ ಶ್ರೀಮಂತ ಹಾಸ್ಯ ನಟ ಯಾರು ಗೊತ್ತಾ? ಅವರ ಆಸ್ತಿ ಎಷ್ಟು..?
ಭಾರತದ ಯಾವುದೇ ಸಿನಿಮಾರಂಗ ತೆಗೆದುಕೊಳ್ಳಿ ಅದರಲ್ಲಿ ಹಾಸ್ಯ ಕಲಾವಿದರು ಇದ್ದೇ ಇರುತ್ತಾರೆ. ಯಾವ ಭಾಷೆಯ ಸಿನಿಮಾವಾದರು ಅವರಿಲ್ಲದೆ ನಡೆಯುವುದೇ ಇಲ್ಲ. ಈಗಂತು ಈ ಹಾಸ್ಯ ನಟರೇ ಹೀರೋಗಳಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ರೆ ನಿಮಗೆ ಗೊತ್ತಾ ಭಾರತದ ಶ್ರೀಮಂತ ಹಾಸ್ಯ ನಟ ಯಾರು?
ಅವರ್ಯಾರು ಬಾಲಿವುಡ್ ನಟರಲ್ಲ, ಅವರು ತೆಲುಗು, ತಮಿಳು, ಕನ್ನಡ ಸೇರಿ ಬಹುಭಾಷಾ ನಟರಾಗಿರುವ ಹಾಸ್ಯ ನಟ ಬ್ರಹ್ಮಾನಂದಂ. ಹೌದು ನೀವು ಸಹ ಅವರ ನಟನೆಯ ನೋಡಿಬಹುದು. ದಕ್ಷಿಣ ಭಾರತದಲ್ಲಿ ಅವರು ಫೇಮಸ್ ಹಾಸ್ಯನಟ, ಅದರಲ್ಲೂ ಅವರು ಭಾರತದಲ್ಲೇ ಅತೀ ಶ್ರೀಮಂತ ಹಾಸ್ಯ ನಟರಾಗಿದ್ದಾರೆ.

ಆಂಧ್ರಪ್ರದೇಶದ ಸತ್ತೇನಪಲ್ಲಿ ಸಮೀಪದ ಮುಪ್ಪಾಳ ಗ್ರಾಮದವರಾದ ಬ್ರಹ್ಮಾನಂದಂ ಅವರು ಉಪನ್ಯಾಸಕರಾಗಿದ್ದರು. ಆದರೆ ಅಚಾನಕ್ ಆಗಿ ಅವರು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟರು. ನಿರ್ದೇಶಕ ಜಂಧ್ಯಾಲ ಅವರು ಮೊದಲು 1986ರಲ್ಲಿ ಚಂತಬ್ಬಾಯಿ ಚಿತ್ರದಲ್ಲಿ ಅವರಿಗೆ ಒಂದು ಅವಕಾಶ ಮಾಡಿಕೊಟ್ಟಿದ್ದರು. ಇದಾದ ಬಳಿಕ ಅವರು ಸುಮಾರು 1 ಸಾವಿರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಬ್ರಹ್ಮಾನಂದಂ ಅವರ ಆಸ್ತಿ ಎಷ್ಟು?
ಸುಮಾರು 1 ಸಾವಿರ ಸಿನಿಮಾಗಳಲ್ಲಿ ನಟಿಸಿದ ಅವರು, ಅತೀ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಗಿನ್ನೀಸ್ ವಿಶ್ವ ದಾಖಲೆ ಮಾಡಿದ್ದಾರೆ. ಬಹುಬೇಡಿಕೆಯ ನಟರಾದರು. ಅವರು ಇಲ್ಲದೇ ಇರುವ ಸಿನಿಮಾ ಯಾವುದೂ ಇಲ್ಲದಿರುವ ಕಾಲವೂ ಇತ್ತು. ಸ್ಟಾರ್ ಹೀರೋಗಳಿಂದ ಹಿಡಿದು ಹೊಸಬರ ಸಿನಿಮಾದಲ್ಲೂ ಅವರು ಇರಲೇ ಬೇಕಿತ್ತು, ಜೊತೆಗೆ ಅವರಿದ್ದ ಸಿನಿಮಾ ಸೂಪರ್ ಹಿಟ್ ಆಗುವುದು ಸಹ ನಿರ್ಮಾಪಕರ ನಂಬಿಕೆಯಾಗಿತ್ತು.
ಬ್ರಹ್ಮಾನಂದಂ ಅವರ ನಿವ್ವಳ ಆಸ್ತಿ ಮೌಲ್ಯವು 60 ಮಿಲಿಯನ್ ಡಾಲರ್ (ಅಂದಾಜು 500 ಕೋಟಿ ರೂಪಾಯಿ) ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶವು ಅವರನ್ನು ಬಾಲಿವುಡ್‌ನ ಕಪಿಲ್ ಶರ್ಮಾ ಮತ್ತು ಹಾಸ್ಯನಟ ಜಾನಿ ಲಿವರ್‌ರಂತಹ ಇತರ ಪ್ರಮುಖ ಬಾಲಿವುಡ್ ಹಾಸ್ಯನಟರಿಗಿಂತಲೂ ಹೆಚ್ಚು ಎಂಬುದು ತಿಳಿದುಬಂದಿದೆ.
ಕಪಿಲ್ ಶರ್ಮಾ 300 ಕೋಟಿ ಹಾಗೂ ಜಾನಿ ಲಿವರ್ 280 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಇನ್ನು ಬ್ರಹ್ಮಾನಂದಂ ಅವರು ಸಿನಿಮಾದಿಂದ ಮಾತ್ರವಲ್ಲ ಹಲವು ಜಾಹೀರಾತು ಹಾಗೂ ಉದ್ಯಮದಲ್ಲಿ ಅವರು ತೊಡಗಿದ್ದಾರೆ. ಮಾಸಿಕವಾಗಿ ಅವರು ಸುಮಾರು 2 ಕೋಟಿ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಬ್ರಹ್ಮಾನಂದಂ ಅವರನ್ನು ಕಾಮಿಡಿ ಕಿಂಗ್ ಎಂದು ಕರೆಯಲಾಗುತ್ತದೆ. ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಈ ಮನೆಯ ಮೌಲವೇ 5 ಕೋಟಿಗೂ ಅಧಿಕ ಎನ್ನಲಾಗಿದೆ. ಜೊತೆಗೆ ಅವರ ಬಳಿ ಐಷಾರಾಮಿ ಕಾರುಗಳ ದೊಡ್ಡ ಕಲೆಕ್ಷನ್ ಸಹ ಇದೆ. ಆಡಿ ಆರ್ 8, ಆಡಿ ಕ್ಯೂ7, ಮರ್ಸಿಡೀಸ್ ಬೆಂಜ್ ಎನ್ ಕ್ಲಾಸ್ ಸೇರಿ ಹಲವು ಐಷಾರಾಮಿ ಕಾರುಗಳಿವೆ.
ಬ್ರಹ್ಮಾನಂದಂ ಅವರು ಇತ್ತೀಚಿಗೆ ಬಿಡುಗಡೆಯಾದ ಪ್ರಬಾಸ್ ನಟನೆಯ ಕಲ್ಕಿ ಸಿನಿಮಾದಲ್ಲೂ ನಟಿಸಿದ್ದಾರೆ. ಅವರು ಒಂದು ಸಿನಿಮಾಗೆ ಕೋಟಿ ಸಂಭಾವನೆ ಪಡೆದಿರುವುದ ಸಹ ಇದೆಯಂತೆ. ಜೊತೆಗೆ ಒಂದೇ ದಿನ ಹಲವು ಸಿನಿಮಾ ಶೂಟಿಂಗ್‌ನಲ್ಲಿ ಅವರು ಭಾಗಿಯಾಗುತ್ತಾರೆ. ಅವರ ಡೇಟ್ಸ್ ಹೊಂದಿಸಲು ನಿರ್ಮಾಪಕರು ಅಡ್ವಾನ್ಸ್ ಚೆಕ್ ಸಹ ನೀಡಿ, ಪ್ರೈವೆಟ್ ಜೆಟ್ ಮೂಲಕ ಸಿನಿಮಾ ಸೆಟ್‌ಗೆ ಕರೆತಂದ ಉದಾಹರಣೆಯೂ ಇದೆಯಂತೆ. ಅಚ್ಚರಿ ಎಂದರೆ ಬ್ರಹ್ಮಾನಂದಂ ಕನ್ನಡದ ಕೆಲವು ಸಿನಿಮಾದಲ್ಲಿ ನಟಿಸಿದ್ದಾರೆ.
ಈಗ ಅವರು ಭಾರತದ ಶ್ರೀಮಂತ ಹಾಸ್ಯ ನಟ ಎನಿಸಿದ್ದು, ಅತೀ ಹೆಚ್ಚು ಸಂಭಾವನೆ ಪಡೆಯುವ ಹಾಸ್ಯನಟ ಸಹ ಅವರೇ ಆಗಿದ್ದಾರೆ.



Click it and Unblock the Notifications
