Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಈ ರೀತಿಯ ಭಯಾನಕ ಜೀವಿಯನ್ನ ನೀವು ನೋಡಿದ್ದೀರಾ? ಪ್ರಾಣಿ ಲೋಕದ ವಿಸ್ಮಯವಿದು ..!
ಪ್ರಾಣಿ ಜಗತ್ತಿನಲ್ಲಿ ಎಂತಹ ಚಿತ್ರ ವಿಚಿತ್ರ ವಿದ್ಯಮಾನಗಳು ನಾವು ನೋಡುತ್ತಲೇ ಇರುತ್ತೇವೆ. ಈ ಭೂಮಿ ರಚನೆಯಾಗಿ ಶತಮಾನಗಳೇ ಉರುಳಿದ್ದರು ಈ ಪ್ರಾಣಿಗಳ ಪ್ರಪಂಚದ ಕೌತುಕಗಳು ಇಂದಿಗೂ ಹೊರಬರುತ್ತಲೇ ಇದೆ. ಅದ್ರಲ್ಲೂ ಕೆಲವೊಂದು ಪ್ರಾಣಿಗಳ ಕೌತುಕ ಎಲ್ಲರಲ್ಲೂ ಕುತೂಹಲ ಮೂಡಿಸುತ್ತವೆ.
ನಾವು ಎರೆಹುಳು ಜಾತಿಗೆ ಸೇರಿರುವ ಹಲವು ಅಕಶೇರುಕಗಳ ನೋಡಿರುತ್ತೇವೆ, ಅದ್ರಲ್ಲಿ ಕೆಲವೊಂದು ನಾವು ನೀವು ಅಂದುಕೊಂಡತೆ ಬರಿ ಹುಳುಗಳಾಗಿರದೆ ಅಚ್ಚರಿಗಳನ್ನು ತಮ್ಮಲ್ಲಿಟ್ಟುಕೊಂಡಿರುತ್ತವೆ. ಈ ಮೊದಲು ನಾವು ರಕ್ತ ಹೀರುವಂತಹ ಬ್ಲಡ್ ವರ್ಮ್ ಗಳ ಬಗ್ಗೆ ತಿಳಿದುಕೊಂಡಿದ್ದೆವು. ಇದು ಎರೆಹುಳುದಂತೆ ಕಂಡರೂ ಇವು ಮಾಂಸಹಾರಿ ಪ್ರಾಣಿಗಳಾಗಿದ್ದವು. ಜೊತೆಗೆ ಹಲ್ಲುಗಳ ಹೊಂದಿದ್ದನ್ನು ನಾವು ನೋಡಿದ್ದೆವು.

ಆದರೆ ಇಲ್ಲೊಂದು ಎರೆಹುಳುದಂತಹ ಜೀವಿಯ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸ್ಲಿಮಿ ರಿಬ್ಬನ್ ವರ್ಮ್ ಒಂದು ವ್ಯಕ್ತಿಯ ಕೈ ಮೇಲೆ ಪ್ರೋಬೊಸಿಸ್ ಎಂದು ಕರೆಯಲ್ಪಡುವ ಮರದಂತಹ ರಚನೆಯನ್ನು ಮಾಡಿರುವ ವಿಡಿಯೋ ಇದಾಗಿದ್ದು ನೋಡುಗರದಲ್ಲಿ ಭಯದ ಜೊತೆಗೆ ಅಚ್ಚರಿ ಮೂಡಿಸುವಂತಿದೆ.
ಈ ಭೂಮಿಯ ಮೇಲೆ ಇಂತಹ ಸಾವಿರಾರು ಜೀವಿಗಳು ಸೇರಿವೆ. ಆದ್ರೆ ಇಂದಿಗೂ ನಮಗೆ ಆ ವಿಚಿತ್ರಗಳ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಆ ಸಾಲಿನಲ್ಲಿ ಈ ರಿಬ್ಬನ್ ವರ್ಮ್ ಸಹ ಸೇರಿದೆ. ಈ ಪ್ರೋಬೊಸಿಸ್ ಮರದ ರಚನೆಯನ್ನು ಈ ಹುಳುಗಳು ತಮ್ಮ ಬಾಯಿಯಿಂದ ಹೊರಹಾಕುತ್ತವೆ. ಈ ಮೂಲಕ ಕೀಟಗಳ ಹಿಡಿದು ಸೇವಿಸುತ್ತವೆ. ಈ ಬಲೆಗೊಳಗೆ ಸಿಲುಕುವ ಯಾವುದೇ ಕೀಟ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬಳಿಕ ಇವು ಅವುಗಳು ಹೀವಂತ ಇದ್ದಾಗಲೇ ಅವುಗಳ ರಕ್ತ ಹೀರಲು ಆರಂಭಿಸುತ್ತವೆ.
ರಿಬ್ಬನ್ ವರ್ಮ್ ತಮ್ಮ ದೇಹಕ್ಕಿಂತ ಮೂರು ಪಟ್ಟು ದೊಡ್ಡದಾದ ಕೀಟಗಳ ತಿಂದು ಜೀರ್ಣಿಸಿಕೊಳ್ಳುತ್ತವೆ. ಈ ವಿಡಿಯೋವನ್ನ @Rainmaker1973 ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ಮಂದಿ ಈ ರೀತಿ ಕೀಟ, ಪ್ರಾಣಿಯೂ ಇದೆಯೇ ಎಂದು ಅಚ್ಚರಿ ಹೊರಹಾಕಿದ್ದಾರೆ.
ಇದು ಪ್ರಾಣಿಗಳ ಲೋಕದ ವಿಸ್ಮಯದಲ್ಲಿ ಒಂದು ಎಂದು ಬಣ್ಣಿಸಿದ್ದಾರೆ. ಆದರೆ ಕೆಲವರು ಈ ವಿಡಿಯೋ ನೋಡಿ ಶಾಕ್‌ಗೆ ಒಳಗಾಗಿದ್ದಾರೆ. ಯಾಕಂದ್ರೆ ರಿಬ್ಬನ್ ವರ್ಮ್ ಹೊರಹಾಕುವ ಈ ಬಲೆಯಂತಹ ರಚನೆ ನೋಡಿದರೆ ಅದರು ಚರ್ಮಕ್ಕೆ ಹಾನಿ ಮಾಡುವಂತೆ ಕಾಣುತ್ತಿದೆ. ಜೊತೆಗೆ ನೋಡಲು ಭಯಂಕರವಾಗಿದೆ.
ಮಾಹಿತಿ ಪ್ರಕಾರ ಈ ರಿಬ್ಬನ್ ವರ್ಮ್‌ಗಳು ಸಮುದ್ರದಲ್ಲಿ ಜೀವಿಸುತ್ತವೆ. ನೀರಿನ ಮೇಲೆಯೂ ಇವು ಬದುಕುಳಿಯುತ್ತವೆ. ಆದರೆ ನೀರಿನಲ್ಲಿ ವೇಗವಾಗಿ ಈಜುತ್ತವೆ. ಇವು ಬೇಟೆಯಾಡುವುದು ಸೇರಿ ತಮ್ಮನ್ನು ಶತ್ರುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿಯೂ ಬಲೆಯಂತಹ ರಚನೆಯನ್ನು ಪ್ರಯೋಗಿಸುತ್ತವೆ.
ಈ ವಿಡಿಯೋದಲ್ಲೂ ಸಹ ರಿಬ್ಬನ್ ವರ್ಮ್ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗ ವ್ಯಕ್ತಿಯ ಕೈ ಮೇಲೆ ಬಲೆಯನ್ನು ಹರಡಿದೆ. ಈ ಪ್ರೋಬೊಸಿನ್ ಮರದ ರೀತಿಯ ಬಲೆಯಿಂದ ಯಾವ ಹಾನಿಯೂ ಆಗುವುದಿಲ್ಲ. ಜೇಡರ ಬಲೆಯಂತೇಯೇ ಅಂಟು ಹೆಚ್ಚಾಗಿರುವು ಕಾರಣ ಚರ್ಮಕ್ಕೆ ಅಂಟಿಕೊಳ್ಳುತ್ತದೆ. ಇದರಿಂದ ಚರ್ಮಕ್ಕೆ ಹಾನಿಯಾಗುವುದಿಲ್ಲ.
ಆದರೆ ಕೆಲವು ರಿಬ್ಬನ್ ಹುಳುಗಳು ವಿಷಕಾರಿ ಮತ್ತು ಟೆಟ್ರೋಡೋಟಾಕ್ಸಿನ್ ಎಂಬ ರಾಸಾಯನಿಕವನ್ನು ಸಹ ಒಳಗೊಂಡಿರುತ್ತವೆ, ಇದು ಪಾರ್ಶ್ವವಾಯು ಮತ್ತು ಉಸಿರುಕಟ್ಟುವಿಕೆಯಿಂದ ಸಾವಿಗೆ ಕಾರಣವಾಗಬಹುದು. ಪರಭಕ್ಷಕವು ತಮ್ಮ ದೇಹವನ್ನು ಗಾಯಗೊಳಿಸಿದಾಗ ಅಥವಾ ತಮ್ಮ ದೇಹದಿಂದ ಕಚ್ಚಿದಾಗ ಈ ಹುಳುಗಳು ಪುನರುತ್ಪಾದಿಸುವ ಸಾಮರ್ಥ್ಯವನ್ನು ಹೊಂದಿವೆ. ಇವುಗಳಿಗೆ ಬೆನ್ನು ಮೂಳೆ ಇಲ್ಲದ ಕಾರಣ ಸರಾಗವಾಗಿ ಉಪ್ಪು ನೀರು ಹಾಗೂ ಸಿಹಿ ನೀರಿನಲ್ಲಿ ಈಜುತ್ತವೆ.



Click it and Unblock the Notifications
