Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಬೀದಿ ಬೀದಿಯಲ್ಲಿ ಸಿಗುತ್ತಿವೆ ನೋಟುಗಳು..! ಇಡುತ್ತಿರೋದ್ಯಾರು.? ಇದೇನು ನೋಟು ಪೀಕಲಾಟ..!
ನೀವು ನಿಧಿ ಹುಡುಕುವ ಬಗ್ಗೆ ಕೇಳಿರುತ್ತೀರಿ. ಅಂದ್ರೆ ನಿಮಗೆ ಗೊತ್ತಿಲ್ಲದ ಜಾಗದಲ್ಲಿ ಹಣ ಅಥವಾ ಬಂಗಾರ ಸಿಕ್ಕರೆ ಅದು ನಿಧಿಯಾಗುತ್ತೆ. ಈ ರೀತಿ ನಿಧಿ ಹುಡುಕುವವರಿಗೇನು ಕಡಿಮೆಯಿಲ್ಲ. ಹಳೆಯ ದೇವಾಲಯಗಳು, ರಾಜರ ಕೋಟೆಗಳು ಹೀಗೆ ಹಲವು ಕಡೆಗಳಲ್ಲಿ ನಿಧಿಗಾಗಿ ಶೋಧ ನಡೆಸುವ ಕೃತ್ಯಗಳು ನಡೆಯುವ ಕುರಿತು ವರದಿಯಾತ್ತವೆ.
ಆದ್ರೆ ನಾವಿಲ್ಲಿ ಹೇಳುತ್ತಿರೋದು ಈ ರೀರಿ ನಿಧಿ ಹುಡುಕುವ ಕಥೆಯಲ್ಲ ಬದಲಿಗೆ ನಗರದ ಕೆಲವು ಭಾಗದಲ್ಲಿ ಜನರು ಹಣಕ್ಕಾಗಿ ಹುಡುಕಾಡುತ್ತಿರುವುದು. ಅವರು ಹುಡುಕಿದ ಸ್ಥಳದಲ್ಲಿ ನೋಟುಗಳು ಸಿಗುತ್ತಿರುವುದು. ಈ ರೀತಿಯ ವಿಚಿತ್ರ ಟ್ರೆಂಡ್ ಒಂದು ವೈರಲ್ ಆಗಿದ್ದು, ಜನ ನೋಟುಗಳ ಹುಡುಕಲು ತಲೆ ಕೆಡಿಸಿಕೊಂಡಿದ್ದಾರೆ.

ಹಾಗಾದರೆ ಈ ನೋಟುಗಳನ್ನು ಇಡುತ್ತಿರುವುದು ಯಾರು? ಯಾವ ಸ್ಥಳದಲ್ಲಿ ಇಡುತ್ತಾರೆ? ಯಾರು ನೋಟುಗಳನ್ನು ಇಟ್ಟು ವಿಡಿಯೋ ಮಾಡುತ್ತಿದ್ದಾರೆ. ಈ ರೀತಿಯ ಟ್ರೆಂಡ್ ಹುಟ್ಟಿದ್ದೇಕೆ ಎಂಬೆಲ್ಲಾ ಕುರಿತು ನಾವು ತಿಳಿಯೋಣ
ದೆಹಲಿಯ ಪ್ರಮುಖ ಬೀದಿಗಳಲ್ಲಿ ಈಗ ನೋಟುಗಳ ಹುಡುಕಲು ಮಂದಿ ಓಡಾಡುತ್ತಿದ್ದಾರೆ. ಕೇಳಿದರೆ ನಿಮಗೂ ಇದು ಅಚ್ಚರಿ ಎನಿಸಬಹುದು. ನಗರದ ಬೀದಿಯಲ್ಲಿ ಹಣವನ್ನು ಮುಚ್ಚಿಟ್ಟು ಅದನ್ನು ಯಾರು ಹುಡುಕಿ ತೆಗೆಯುತ್ತಾರೆ ಎನ್ನುವುದೇ ಈ ಟ್ರೆಂಡ್ ಆಗಿದೆ. ಇದೊಂದು ಸವಾಲು ಎಂದರು ತಪ್ಪಾಗಲಾರದು.
ನೋಟುಗಳು ಇಡೋದ್ಯಾರು?
ಟ್ರೆಷರ್ ಹಂಟರ್ ದೆಹಲಿ ಎಂಬ ಇನ್ಸ್‌ಸ್ಟಾಗ್ರಾಮ್ ಪೇಜ್ ಮೊದಲ ಬಾರಿಗೆ ಈ ರೀತಿಯ ಟ್ರೆಂಡ್ ಹುಟ್ಟುಹಾಕಿದೆ ಎನ್ನಲಾಗಿದೆ. ಇವರು ದೆಹಲಿಯ ಹಲವು ಕಡೆಗಳಲ್ಲಿ 500 ರೂಪಾಯಿಯ ನೋಟುಗಳನ್ನು ಇಟ್ಟು ಅದರ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಆ ಜಾಗ ಯಾವುದು ಎಂದು ಗುರುತಿಸಿ ಅಲ್ಲಿಗೆ ತೆರಳಿ ನೋಟು ಹುಡುಕಿ ತೆಗೆಯುತ್ತಾರೆ. ಯಾರಿಗೆ ಈ ನೋಟು ಸಿಗತ್ತೋ ಅವರಿಗೆ ಹಬ್ಬ.
ಮೊದಲು ಈ ವಿಡಿಯೋ ನೋಡಿದ ಮಂದಿ ಅಷ್ಟೇನು ತಲೆ ಕೆಡಿಸಿಕೊಂಡಿರಲಿಲ್ಲ. ಬಳಿಕ ಈ ವಿಡಿಯೋಗಳು ಎಲ್ಲೆಡೆ ಹರಿದಾಡಿದೆ. ದೆಹಲಿಯ ಬೀದಿ ಬೀದಿಯಲ್ಲಿ ನೋಟುಗಳು ಹುಡುಕುತ್ತಿರುವುದು. ಅಡಗಿಸಿ ಇಡುತ್ತಿರುವ ವಿಡಿಯೋಗಳು ಸೆರೆಯಾಗಿವೆ. ಜೊತೆಗೆ ಈ ಲೊಕೇಷನ್ ತಿಳಿದವರು ಮೊದಲು ಹೋಗಿ ಹಣ ಎತ್ತಿಕೊಳ್ಳುತ್ತಿದ್ದಾರೆ. ಇದೆಲ್ಲಾ ಈಗ ಸಿಕ್ಕಾಪಟ್ಟೆ ಟ್ರೆಂಡ್ ಆಗಿದೆ.
ಅವರಿಗೇನು ಲಾಭ
ಟ್ರೆಷರ್ ಹಂಟರ್ ಎಂಬ ಪೇಜ್ ಈ ಟ್ರೆಂಡ್ ಹುಟ್ಟುಹಾಕಿದೆ. ಅವರು ಇಟ್ಟ ನೋಟನ್ನು ಯಾರು ಹುಡುಕುತ್ತಾರೋ ಅವರು ಅದೇ ವಿಡಿಯೋದಲ್ಲಿ ಫೋಟೋ ಮೂಲಕ ಕಮೆಂಟ್ ಹಾಕುವಂತೆ ಮನವಿ ಮಾಡಿದೆ. ಇದರಿಂದ ಆ ಪೇಜ್‌ನ ವಿಡಿಯೋಗಳು ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಾಣುತ್ತಿದೆ.
ಹಣ ಯಾರಿಗೆ ಸಿಗುತ್ತಿದೆ ಎಂಬುದನ್ನು ನೋಡಲು ಜನ ಈ ಪೇಜ್ ಫಾಲೋ ಮಾಡಲು ಆರಂಭಿಸಿದ್ದಾರೆ. ಮುಂದೆ ನೋಟುಗಳನ್ನು ಯಾವ ಸ್ಥಳದಲ್ಲಿ ಇಡುತ್ತಿದ್ದಾರೆ ಎಂದು ತಿಳಿದುಕೊಳ್ಳಲು ಜನ ಕಾತರದಿಂದ ಕಾಯುವಂತೆ ಮಾಡಿದ್ದಾರೆ.
ಹಣ ಸಿಗದಿದ್ದರೆ ಏನು ಕಥೆ?
ಇನ್ನು ಅಡಗಿಸಿಟ್ಟ ಹಣ ಯಾರಿಗೂ ಸಿಗದಿದ್ದರೆ ಇಲ್ಲವೆ ಆ ಸ್ಥಳವನ್ನು ಹುಡುಕಲು ಎಲ್ಲರು ವಿಫಲರಾದರೆ, ಹಣ ಇಟ್ಟ ವ್ಯಕ್ತಿಯೇ ಬಂದು ಅದನ್ನು ತೆಗೆದು ಆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ಏಕೆಂದರೆ ಹಣ ತೆಗೆದ ಮೇಲೆ ಆ ಸ್ಥಳಕ್ಕೆ ಬಂದು ಯಾರು ಹುಡುಕಾಡಬೇಡಿ ಎಂದು ಈ ರೀತಿ ಮಾಡಲಾಗಿದೆ.
ಆದ್ರೆ ದೆಹಲಿ ಮಂದಿಯಂತು ಈ ಟ್ರೆಷರ್ ಹಂಟರ್ ಹಿಂದೆ ಬಿದ್ದಿದ್ದು, ಬೀದಿ ಬೀದಿಯಲ್ಲಿ ನೋಟಿನ ಹುಡುಕಾಟ ನಡೆಸುತ್ತಿದ್ದಾರೆ. ಕೈಗೆ ಸಿಕ್ಕವರು ಅದೃಷ್ಟವಂತರು ಎಂಬಂತೆ ವಿಡಿಯೋ, ಫೋಟೋ ಹಂಚಿಕೊಳ್ಳುತ್ತಿದ್ದಾರೆ. ಸಿಗದವರು ಮುಂದೆ ಯಾವ ಸ್ಥಳದಲ್ಲಿ ನೋಟು ಇಡುತ್ತಾರೆ ಎಂದು ಕಾಯುತ್ತಿದ್ದಾರೆ. ಒಟ್ನಲ್ಲಿ ದೆಹಲಿ ಮಂದಿಗೆ ನಿಧಿ ಹುಡುಕುವ ಕೆಲಸವಂತ ಸಿಕ್ಕಾಪಟ್ಟೆ ಮಜಾ ನೀಡುತ್ತಿದೆ.



Click it and Unblock the Notifications
