Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Republic Day 2026: ಗಣರಾಜ್ಯೋತ್ಸವ ಪರೇಡ್ ಟಿಕೆಟ್ ಬುಕಿಂಗ್ ಶುರು! ಎಲ್ಲಿ ಸಿಗುತ್ತೆ? ದರ ಎಷ್ಟು? ಇಲ್ಲಿದೆ ಮಾಹಿತಿ
ಗಣರಾಜ್ಯೋತ್ಸವಕ್ಕೆ ದಿನಗಣನೆ ಶುರು! ಟಿಕೆಟ್ ಬುಕಿಂಗ್ ಶುರುವಾಗಿದೆ.. ಆನ್‌ಲೈನ್‌ನಲ್ಲಿ ಟಿಕೆಟ್ ಪಡೆಯುವುದು ಹೇಗೆ? ಪರೇಡ್ ಟಿಕೆಟ್ ದರ ಎಷ್ಟು? ಇಲ್ಲಿದೆ ಸಂಪೂರ್ಣ ಮಾಹಿತಿ. ಹೌದು, ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋತ್ಸವವನ್ನು (Republic Day 2026) ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಐತಿಹಾಸಿಕ ದಿನದಂದು, ದೆಹಲಿಯ 'ಕರ್ತವ್ಯ ಪಥ'ದಲ್ಲಿ ನಡೆಯುವ ಭವ್ಯ ಪರೇಡ್ (Republic Day Parade 2026) ವೀಕ್ಷಿಸಲು ಸಾವಿರಾರು ಜನರು ಆಗಮಿಸುತ್ತಾರೆ.
2026ರ ಗಣರಾಜ್ಯೋತ್ಸವ ಪರೇಡ್‌ಗೆ ಸಾಕ್ಷಿಯಾಗಲು ಟಿಕೆಟ್ ಬುಕ್ಕಿಂಗ್ (Republic Day Parade Ticket) ಪ್ರಕ್ರಿಯೆಯನ್ನು ರಕ್ಷಣಾ ಸಚಿವಾಲಯವು ಸರಳಗೊಳಿಸಿದೆ. ಇದೀಗ ಟಿಕೆಟ್ ಮಾರಾಟ ಆರಂಭವಾಗಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಗಣರಾಜ್ಯೋತ್ಸವ ಪರೇಡ್ (ಜನವರಿ 26) ಹಾಗೂ ಬೀಟಿಂಗ್ ರಿಟ್ರೀಟ್ ಸಮಾರಂಭಗಳನ್ನು (ಜನವರಿ 29) ನೇರವಾಗಿ ವೀಕ್ಷಿಸಲು ಆಸಕ್ತರು ನಿಗದಿತ ದಿನಾಂಕಗಳಲ್ಲಿ ತಮ್ಮ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು.

ಟಿಕೆಟ್ (Republic Day Parade Tickets 2026) ಖರೀದಿಯ ಕುರಿತು ಆನ್‌ಲೈನ್, ಆಫ್‌ಲೈನ್ ಆಯ್ಕೆಗಳು ಮತ್ತು ಬೆಲೆ ವಿವರಗಳನ್ನು ಈ ಲೇಖನದಲ್ಲಿ ತಿಳಿಸಲಾಗಿದೆ.
2026ರ ಪ್ರಮುಖ ಕಾರ್ಯಕ್ರಮಗಳು
ಗಣರಾಜ್ಯೋತ್ಸವ 2026ರ ಪ್ರಮುಖ ಕಾರ್ಯಕ್ರಮಗಳು ಮತ್ತು ಟಿಕೆಟ್ ಬುಕ್ಕಿಂಗ್ ಕಾರ್ಯಸೂಚಿ ಹೀಗಿದೆ.
- ಜನವರಿ 5 ರಿಂದ ಜನವರಿ 14, 2026ರ ವರೆಗೆ ಟಿಕೆಟ್ ಮಾರಾಟ
- ಜನವರಿ 26, 2026ರಂದು ಗಣರಾಜ್ಯೋತ್ಸವ ಪರೇಡ್
- ಜನವರಿ 28, 2026ರಂದು ಬೀಟಿಂಗ್ ರಿಟ್ರೀಟ್ ಫುಲ್ ಡ್ರೆಸ್ ರಿಹರ್ಸಲ್
- ಜನವರಿ 29, 2026ರಂದು ಬೀಟಿಂಗ್ ರಿಟ್ರೀಟ್ ಸಮಾರಂಭ
ಟಿಕೆಟ್ ದರ ಎಷ್ಟು?
ಪರೇಡ್ ಹಾಗೂ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮಗಳ ಟಿಕೆಟ್ ದರಗಳು ವಿವಿಧ ವರ್ಗಗಳಲ್ಲಿ ಲಭ್ಯವಿದೆ.
• ಗಣರಾಜ್ಯೋತ್ಸವ ಪರೇಡ್ (ಜ. 26): 20 ರೂ. ಮತ್ತು 100 ರೂ.
• ಬೀಟಿಂಗ್ ರಿಟ್ರೀಟ್ ರಿಹರ್ಸಲ್ (ಜ. 28): 20 ರೂ.
• ಬೀಟಿಂಗ್ ರಿಟ್ರೀಟ್ ಸಮಾರಂಭ (ಜ. 29): 100 ರೂ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಆನ್‌ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಲು, ರಕ್ಷಣಾ ಸಚಿವಾಲಯದ ಅಧಿಕೃತ ಪೋರ್ಟಲ್ www.aamantran.mod.gov.in ಗೆ ಭೇಟಿ ನೀಡಿ. ಅಲ್ಲಿ ಹೆಸರನ್ನು, ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಾಯಿಸಿಕೊಳ್ಳಬೇಕು. ನಂತರ, ನಿಮ್ಮ ಮೊಬೈಲ್‌ಗೆ ಬರುವ OTP ಬಳಸಿ ಲಾಗಿನ್ ಆಗಿ.
ಮುಂದಿನ ಹಂತವಾಗಿ, ನೀವು ವೀಕ್ಷಿಸಲು ಬಯಸುವ ಕಾರ್ಯಕ್ರಮವನ್ನು (ಪರೇಡ್ ಅಥವಾ ಬೀಟಿಂಗ್ ರಿಟ್ರೀಟ್) ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆಧಾರ್ ಅಥವಾ ಯಾವುದೇ ಅಧಿಕೃತ ಗುರುತಿನ ಚೀಟಿಯ ವಿವರಗಳನ್ನು ಅಪ್‌ಲೋಡ್ ಮಾಡಿ. ಆನ್‌ಲೈನ್ ಮೂಲಕ ಹಣ ಪಾವತಿಸಿದ ಬಳಿಕ ನಿಮ್ಮ ಇ-ಟಿಕೆಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಆಫ್‌ಲೈನ್ ಟಿಕೆಟ್ ಎಲ್ಲಿ ಸಿಗುತ್ತೆ?
ನೇರವಾಗಿ ಟಿಕೆಟ್ ಖರೀದಿಸಲು ಬಯಸುವವರು ದೆಹಲಿಯ ಕೆಳಗಿನ ಸ್ಥಳಗಳಲ್ಲಿ ಆಫ್‌ಲೈನ್ ಕೌಂಟರ್‌ಗಳಿಗೆ ಭೇಟಿ ನೀಡಬಹುದು. ಕೌಂಟರ್‌ಗಳು ಬೆಳಗ್ಗೆ 10:00 ರಿಂದ ಮಧ್ಯಾಹ್ನ 1:00 ರವರೆಗೆ ಮತ್ತು ಮಧ್ಯಾಹ್ನ 2:00 ರಿಂದ ಸಂಜೆ 5:00 ರವರೆಗೆ ತೆರೆದಿರುತ್ತವೆ.
- ಸೇನಾ ಭವನ (ಗೇಟ್ ನಂ. 5)
- ಶಾಸ್ತ್ರಿ ಭವನ (ಗೇಟ್ ನಂ. 3)
- ಜಂತರ್ ಮಂತರ್ (ಮುಖ್ಯ ದ್ವಾರ)
- ಸಂಸತ್ ಭವನ (ಸ್ವಾಗತ ಕೌಂಟರ್)
- ರಾಜೀವ್ ಚೌಕ್ ಮೆಟ್ರೋ ನಿಲ್ದಾಣ (ಗೇಟ್ ನಂ. 3 ಮತ್ತು 4)
- ಕಾಶ್ಮೀರಿ ಗೇಟ್ ಮೆಟ್ರೋ ನಿಲ್ದಾಣ (ಗೇಟ್ ನಂ. 8)
ಈ ವಿಷಯ ನೆನಪಿಡಿ..!
• ಆಫ್‌ಲೈನ್ ಟಿಕೆಟ್ ಪಡೆಯಲು, ಮೂಲ ಆಧಾರ್ ಕಾರ್ಡ್ ಅಥವಾ ಯಾವುದೇ ಸರ್ಕಾರಿ ಗುರುತಿನ ಚೀಟಿ ಕಡ್ಡಾಯ.
• ಟಿಕೆಟ್‌ಗಳು ಪ್ರತಿದಿನ ಬೆಳಗ್ಗೆ 9 ಗಂಟೆಯಿಂದ ಲಭ್ಯವಿರುತ್ತವೆ. ಆದರೆ, ನಿಗದಿತ ಕೋಟಾ ಮುಗಿಯುವವರೆಗೆ ಮಾತ್ರ ಇವು ಸಿಗುತ್ತವೆ.
• ಕಾರ್ಯಕ್ರಮದ ದಿನದಂದು ಬುಕಿಂಗ್ ಸಮಯದಲ್ಲಿ ಬಳಸಿದ ಅದೇ ಗುರುತಿನ ಚೀಟಿಯನ್ನು ಜೊತೆಯಲ್ಲಿ ಕೊಂಡೊಯ್ಯುವುದು ಕಡ್ಡಾಯ.
• ಭದ್ರತಾ ಕಾರಣಗಳಿಗಾಗಿ, ಕ್ಯಾಮೆರಾ, ಬ್ಯಾಗ್ ಮತ್ತು ಆಹಾರ ಪದಾರ್ಥಗಳನ್ನು ಪರೇಡ್ ಸ್ಥಳಕ್ಕೆ ಕೊಂಡೊಯ್ಯಲು ಅವಕಾಶವಿರುವುದಿಲ್ಲ.
• ಪ್ರೇಕ್ಷಕರು ಸೂಕ್ತ ಸಿದ್ಧತೆಗಳೊಂದಿಗೆ ಕಾರ್ಯಕ್ರಮಕ್ಕೆ ಆಗಮಿಸಲು ಸೂಚಿಸಲಾಗಿದೆ.



Click it and Unblock the Notifications