ಗಣರಾಜ್ಯೋತ್ಸವ 2026: ಗಣರಾಜ್ಯೋತ್ಸವಕ್ಕೆ ಅತಿಥಿಗಳ ಆಯ್ಕೆ ಮಾಡೋದು ಹೇಗೆ? ಈವರೆಗೆ ಬಂದಿರುವ ಅತಿಥಿಗಳ ಮಾಹಿತಿ!

ಜನವರಿ 26ರಂದು 77ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಈ ಸಮಯದಲ್ಲಿ ದೆಹಲಿಯ ಕರ್ತವ್ಯ ಪಥದಲ್ಲಿನ ಮೆರವಣಿಗೆ ಎಲ್ಲರ ಗಮನ ಸೆಳೆಯುತ್ತದೆ. ಹಾಗೆ ರಾಷ್ಟ್ರ ನಾಯಕರು ದೇಶದ ನಾಗರಿಕೆ ಉದ್ದೇಶಿಸಿ ಶುಭಾಶಯ ಕೋರುವ ಜೊತೆಗೆ ಭಾಷಣ ಮಾಡುವುದು ನೋಡಬಹುದು. ಭಾರತದ ಗಣರಾಜ್ಯೋತ್ಸವವು 1950 ರಲ್ಲಿ ಸಂವಿಧಾನದ ಅನುಷ್ಠಾನ ಮತ್ತು ದೇಶವು ಸಾರ್ವಭೌಮ ಗಣರಾಜ್ಯವಾಗಿ ಹುಟ್ಟಿದ ದಿನವನ್ನು ಆಚರಿಸುತ್ತದೆ.

ನವದೆಹಲಿಯಲ್ಲಿ ನಡೆಯುವ ವಾರ್ಷಿಕ ಆಚರಣೆಗಳ ಪ್ರಮುಖ ಅಂಶಗಳಲ್ಲಿ ಪರೇಡ್ ಕೂಡ ಒಂದು. ಹಾಗೆ ಬೇರೆ ರಾಷ್ಟ್ರದಿಂದ ಬರುವ ಅತಿಥಿಗಳು ಈ ಸಮಾರಂಭದ ಕೇಂದ್ರ ಬಿಂದು ಆಗಿರುತ್ತಾರೆ. ಪ್ರತಿ ವರ್ಷವೂ ಬೇರೆ ದೇಶದ ಅಧ್ಯಕ್ಷರು, ಪ್ರಧಾನಿಗಳು ಭಾರತದ ಗಣರಾಜ್ಯೋತ್ಸವದ ಅತಿಥಿಗಳಾಗಿರುತ್ತಾರೆ. 1950ರ ಮೊದಲ ಗಣರಾಜ್ಯೋತ್ಸವದಿಂದಲೂ ವಿಶೇಷ ಅತಿಥಿಗಳ ಕರೆಸುವುದು ನಾವು ನೋಡಬಹುದು.

Republic Day 2026

ಮೊದಲ ಆಚರಣೆಯಲ್ಲಿ ಇಂಡೋನೇಷ್ಯಾ ಅಧ್ಯಕ್ಷರಾಗಿದ್ದ ಸುಕರ್ಣೋ ಆಗಮಿಸಿದ್ದರು. ಆದ್ರೆ ನಿಮಗೆ ಗೊತ್ತಾ ಈ ಪ್ರತಿ ಬಾರಿಯ ಗಣರಾಜ್ಯೋತ್ಸವಕ್ಕೆ ಯಾರು ಅತಿಥಿಗಳಾಗಿ ಆಗಮಿಸಬೇಕು ಎಂಬುದನ್ನು ಯಾರು ನಿರ್ಧರಿಸುತ್ತಾರೆ? ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಹೇಗಿರಲಿದೆ. ಹಾಗೆ ಈವರೆಗ ಬಂದಿರುವ ಅತಿಥಿಗಳ ಮಾಹಿತಿ ಈ ಕೆಳಗೆ ನೀಡಲಾಗಿದೆ.

ಮುಖ್ಯ ಅತಿಥಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯನ್ನು ಗಣರಾಜ್ಯೋತ್ಸವಕ್ಕೆ ತಿಂಗಳುಗಳ ಮೊದಲು ವಿದೇಶಾಂಗ ಸಚಿವಾಲಯ ನಿರ್ವಹಿಸುತ್ತದೆ. ಮುಖ್ಯ ಅತಿಥಿಯ ಆಯ್ಕೆಗೆ ಯಾವುದೇ ಮುಖ್ಯ ಮಾನದಂಡಗಳ ಇಟ್ಟುಕೊಳ್ಳಲಾಗಿಲ್ಲ. ಆದ್ರೆ ಕಾರ್ಯತಂತ್ರದ ಸಹಕಾರ, ರಕ್ಷಣಾ ಸಂಪರ್ಕಗಳು, ಆರ್ಥಿಕ ಸಂಬಂಧಗಳು ಮತ್ತು ಹಂಚಿಕೆಯ ರಾಜತಾಂತ್ರಿಕ ಗುರಿಗಳನ್ನು ಒಳಗೊಂಡಿವೆ.

5 ವರ್ಷ ಯಾವುದೇ ಅತಿಥಿಗಳಿಲ್ಲದೆ ಆಚರಣೆ

ಪ್ರತಿ ವರ್ಷ ಒಬ್ಬರು ಅತಿಥಿಗಳ ಸಮ್ಮುಖದಲ್ಲಿ ಈ ಆಚರಣೆ ನಡೆಯುತ್ತಿತ್ತು. ಆದ್ರೆ ಇತಿಹಾಸದಲ್ಲೇ 5 ವರ್ಷ ಅತಿಥಿಗಳಿಲ್ಲದೆ ಗಣರಾಜ್ಯೋತ್ಸವ ನಡೆದಿದೆ. 1952-53, 1966 ಹಾಗೆ ಕೋವಿಡ್ ಸಮಯದ ಎರಡು ವರ್ಷಗಳಾದ 2021 ಹಾಗೂ 2022ರಲ್ಲಿ ಯಾರು ಕೂಡ ಭಾರತ ಪ್ರವಾಸ ಮಾಡಿರಲಿಲ್ಲ. ಹಾಗೆ ಉಳಿದಂತೆ 75 ಆಚರಣೆಗಳು ಕೂಡ ಅತಿಥಿಗಳ ಸಮ್ಮುಖದಲ್ಲೇ ನಡೆದಿತ್ತು.

ಅಮೆರಿಕದ ಏಕೈಕ ಅಧ್ಯಕ್ಷರು ಭಾಗಿ

ಒಟ್ಟು 77 ವರ್ಷದ ಈ ಗಣರಾಜ್ಯೋತ್ಸವದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕದ ಏಕೈಕ ಅಧ್ಯಕ್ಷರು ಭಾರತದ ಗಣರಾಜ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದಾರೆ. ಭಾರತ ಹಾಗೂ ಅಮೆರಿಕದ ನಡುವೆ ಹಲವು ವರ್ಷಗಳಿಂದ ಉತ್ತಮ ಸಂಬಂಧವಿದ್ದರೂ ಒಬ್ಬರು ಅಧ್ಯಕ್ಷರು ಮಾತ್ರವೇ ಈ ಆಚರಣೆಯ ಭಾಗವಾಗಿದ್ದಾರೆ. 2015ರಲ್ಲಿ ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಮಾಮ ಆವರು ಭಾರತಕ್ಕೆ ಆಗಮಿಸಿದ್ದರು. ಅವರು ಗಣರಾಜ್ಯೋತ್ಸವ ಪರೇಡ್‌ನಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.

1950ರಿಂದ ಭಾರತಕ್ಕೆ ಆಗಮಿಸಿದ ಅತಿಥಿಗಳ ಪಟ್ಟಿ ಇಲ್ಲಿದೆ

  • 1950 ಅಧ್ಯಕ್ಷ ಸುಕರ್ಣೋ, ಇಂಡೋನೇಷ್ಯಾ
  • 1951 ರಾಜ ತ್ರಿಭುವನ್ ಬೀರ್ ಬಿಕ್ರಮ್ ಶಾ, ನೇಪಾಳ
  • 1952 ಆಹ್ವಾನವಿಲ್ಲ
  • 1953 ರ ಆಹ್ವಾನವಿಲ್ಲ
  • 1954 ರ ರಾಜ ಜಿಗ್ಮೆ ದೋರ್ಜಿ ವಾಂಗ್‌ಚುಕ್, ಭೂತಾನ್
  • 1955 ಗವರ್ನರ್-ಜನರಲ್ ಮಲಿಕ್ ಗುಲಾಮ್ ಮುಹಮ್ಮದ್, ಪಾಕಿಸ್ತಾನ
  • 1956 ಆರ್. ಎ. ಬಟ್ಲರ್ (ಯುಕೆ) ಮತ್ತು ಕೊಟಾರೊ ಟನಾಕಾ (ಜಪಾನ್)
  • 1957 ರ ಮಾರ್ಷಲ್ ಜಾರ್ಜಿ ಝುಕೋವ್, ಸೋವಿಯತ್ ಒಕ್ಕೂಟ
  • 1958 ರ ಮಾರ್ಷಲ್ ಯೆ ಜಿಯಾನ್ಯಿಂಗ್, ಚೀನಾ
  • 1959 ರಾಜಕುಮಾರ ಫಿಲಿಪ್, ಎಡಿನ್‌ಬರ್ಗ್ ಡ್ಯೂಕ್, ಯುಕೆ
  • 1960 ಅಧ್ಯಕ್ಷ ಕ್ಲಿಮೆಂಟ್ ವೊರೊಶಿಲೋವ್, ಯುಎಸ್‌ಎಸ್‌ಆರ್
  • 1961 ರಾಣಿ ಎಲಿಜಬೆತ್ II, ಯುಕೆ
  • 1962 ರ ಪ್ರಧಾನಿ ವಿಗ್ಗೊ ಕ್ಯಾಂಪ್‌ಮನ್, ಡೆನ್ಮಾರ್ಕ್
  • 1963 ರ ರಾಜ ನೊರೊಡೋಮ್ ಸಿಹಾನೌಕ್, ಕಾಂಬೋಡಿಯಾ
  • 1964ಲಾರ್ಡ್ ಲೂಯಿಸ್ ಮೌಂಟ್‌ಬ್ಯಾಟನ್, ಯುಕೆ
  • 1965 ರಾಣಾ ಅಬ್ದುಲ್ ಹಮೀದ್, ಪಾಕಿಸ್ತಾನ
  • 1966 ರ ಆಹ್ವಾನವಿಲ್ಲ
  • 1967 ರ ರಾಜ ಮೊಹಮ್ಮದ್ ಜಹೀರ್ ಶಾ, ಅಫ್ಘಾನಿಸ್ತಾನ
  • 1968 ರ ಪ್ರಧಾನ ಮಂತ್ರಿ ಅಲೆಕ್ಸಿ ಕೊಸಿಗಿನ್ ಮತ್ತು ಅಧ್ಯಕ್ಷ ಜೋಸಿಪ್ ಬ್ರೋಜ್ ಟಿಟೊ
  • 1969 ಪ್ರಧಾನ ಮಂತ್ರಿ ಟೋಡರ್ ಝಿವ್ಕೋವ್, ಬಲ್ಗೇರಿಯಾ
  • 1970 ಕಿಂಗ್ ಬೌಡೋಯಿನ್, ಬೆಲ್ಜಿಯಂ
  • 1971 ಅಧ್ಯಕ್ಷ ಜೂಲಿಯಸ್ ನೈರೆರೆ, ತಾಂಜಾನಿಯಾ
  • 1972 ಪ್ರಧಾನ ಮಂತ್ರಿ ಸೀವೂಸಗೂರ್ ರಾಮಗೂಲಂ, ಮಾರಿಷಸ್
  • 1973 ಅಧ್ಯಕ್ಷ ಮೊಬುಟು ಸೆಸೆ ಸೆಕೊ, ಜೈರ್
  • 1974 ಅಧ್ಯಕ್ಷ ಜೋಸಿಪ್ ಬ್ರೋಜ್ ಟಿಟೊ; ಪ್ರಧಾನಿ ಸಿರಿಮಾವೋ ಬಂಡರನಾಯಕೆ SFR ಯುಗೊಸ್ಲಾವಿಯ, ಶ್ರೀಲಂಕಾ
  • 1975 ಅಧ್ಯಕ್ಷ ಕೆನ್ನೆತ್ ಕೌಂಡಾ, ಜಾಂಬಿಯಾ
  • 1976 ಪ್ರಧಾನಿ ಜಾಕ್ವೆಸ್ ಚಿರಾಕ್, ಫ್ರಾನ್ಸ್
  • 1977 ಮೊದಲ ಕಾರ್ಯದರ್ಶಿ ಎಡ್ವರ್ಡ್ ಗಿರೆಕ್, ಪೋಲೆಂಡ್
  • 1978 ಅಧ್ಯಕ್ಷ ಪ್ಯಾಟ್ರಿಕ್ ಹಿಲರಿ, ಐರ್ಲೆಂಡ್
  • 1979 ಪ್ರಧಾನಿ ಮಾಲ್ಕಮ್ ಫ್ರೇಸರ್, ಆಸ್ಟ್ರೇಲಿಯಾ
  • 1980 ಅಧ್ಯಕ್ಷ ವ್ಯಾಲೆರಿ ಗಿಸ್ಕಾರ್ಡ್ ಡಿ'ಎಸ್ಟೇಯಿಂಗ್, ಫ್ರಾನ್ಸ್
  • 1981 ಅಧ್ಯಕ್ಷ ಜೋಸ್ ಲೋಪೆಜ್ ಪೋರ್ಟಿಲ್ಲೊ, ಮೆಕ್ಸಿಕೊ
  • 1982 ರಾಜ ಜುವಾನ್ ಕಾರ್ಲೋಸ್ I, ಸ್ಪೇನ್
  • 1983 ಅಧ್ಯಕ್ಷ ಶೆಹು ಶಗಾರಿ, ನೈಜೀರಿಯಾ
  • 1984 ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚಕ್, ಭೂತಾನ್
  • 1985 ಅಧ್ಯಕ್ಷ ರೌಲ್ ಅಲ್ಫೊನ್ಸಿನ್, ಅರ್ಜೆಂಟೀನಾ
  • 1986 ಪ್ರಧಾನಿ ಆಂಡ್ರಿಯಾಸ್ ಪಾಪಂಡ್ರಿಯೊ, ಗ್ರೀಸ್
  • 1987 ಅಧ್ಯಕ್ಷ ಅಲನ್ ಗಾರ್ಸಿಯಾ, ಪೆರು
  • 1988 ಅಧ್ಯಕ್ಷ ಜೂನಿಯಸ್ ಜಯವರ್ಧನೆ, ಶ್ರೀಲಂಕಾ
  • 1989 ಪ್ರಧಾನ ಕಾರ್ಯದರ್ಶಿ ನ್ಗುಯೆನ್ ವ್ಯಾನ್ ಲಿನ್ಹ್, ವಿಯೆಟ್ನಾಂ
  • 1990 ಪ್ರಧಾನಿ ಅನೆರೂದ್ ಜುಗ್ನೌತ್, ಮಾರಿಷಸ್
  • 1991 ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್, ಮಾಲ್ಡೀವ್ಸ್
  • 1992 ಅಧ್ಯಕ್ಷ ಮಾರಿಯೋ ಸೋರೆಸ್, ಪೋರ್ಚುಗಲ್
  • 1993 ಪ್ರಧಾನಿ ಜಾನ್ ಮೇಜರ್, ಯುನೈಟೆಡ್ ಕಿಂಗ್‌ಡಮ್
  • 1994 ಪ್ರಧಾನಿ ಗೋ ಚೋಕ್ ಟಾಂಗ್, ಸಿಂಗಾಪುರ
  • 1995 ಅಧ್ಯಕ್ಷ ನೆಲ್ಸನ್ ಮಂಡೇಲಾ, ದಕ್ಷಿಣ ಆಫ್ರಿಕಾ
  • 1996 ಅಧ್ಯಕ್ಷ ಫರ್ನಾಂಡೊ ಹೆನ್ರಿಕ್ ಕಾರ್ಡೋಸೊ, ಬ್ರೆಜಿಲ್
  • 1997 ಪ್ರಧಾನಿ ಬಾಸ್ಡಿಯೊ ಪಾಂಡೆ, ಟ್ರಿನಿಡಾಡ್ ಮತ್ತು ಟೊಬಾಗೊ
  • 1998 ಅಧ್ಯಕ್ಷ ಜಾಕ್ವೆಸ್ ಚಿರಾಕ್, ಫ್ರಾನ್ಸ್
  • 1999 ರಾಜ ಬೀರೇಂದ್ರ ಬಿರ್ ಬಿಕ್ರಮ್ ಶಾ ದೇವ್, ನೇಪಾಳ
  • 2000 ಅಧ್ಯಕ್ಷ ಒಲುಸೆಗುನ್ ಒಬಾಸಾಂಜೊ, ನೈಜೀರಿಯಾ
  • 2001 ಅಧ್ಯಕ್ಷ ಅಬ್ದೆಲಾಜಿಜ್ ಬೌಟೆಫ್ಲಿಕಾ, ಅಲ್ಜೀರಿಯಾ
  • 2002 ಅಧ್ಯಕ್ಷ ಕಸ್ಸಮ್ ಉಟೀಮ್, ಮಾರಿಷಸ್
  • 2003 ಅಧ್ಯಕ್ಷ ಮೊಹಮ್ಮದ್ ಖತಾಮಿ, ಇರಾನ್
  • 2004 ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ, ಬ್ರೆಜಿಲ್
  • 2005 ರಾಜ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್, ಭೂತಾನ್
  • 2006 ದೊರೆ ಅಬ್ದುಲ್ಲಾ ಬಿನ್ ಅಬ್ದುಲಜೀಜ್ ಅಲ್-ಸೌದ್, ಸೌದಿ ಅರೇಬಿಯಾ
  • 2007 ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾ
  • 2008 ಅಧ್ಯಕ್ಷ ನಿಕೋಲಸ್ ಸರ್ಕೋಜಿ, ಫ್ರಾನ್ಸ್
  • 2009 ಅಧ್ಯಕ್ಷ ನರ್ಸುಲ್ತಾನ್ ನಜರ್ಬಯೇವ್, ಕಝಾಕಿಸ್ತಾನ್
  • 2010 ಅಧ್ಯಕ್ಷ ಲೀ ಮ್ಯುಂಗ್-ಬಾಕ್, ದಕ್ಷಿಣ ಕೊರಿಯಾ
  • 2011 ಅಧ್ಯಕ್ಷ ಸುಸಿಲೋ ಬಂಬಾಂಗ್ ಯುಧೋಯೊನೊ, ಇಂಡೋನೇಷ್ಯಾ
  • 2012 ಪ್ರಧಾನಿ ಯಿಂಗ್ಲಕ್ ಶಿನವಾತ್ರ, ಥೈಲ್ಯಾಂಡ್
  • 2013 ರಾಜ ಜಿಗ್ಮೆ ಖೇಸರ್ ನಮ್ಗೆಲ್ ವಾಂಗ್ಚುಕ್, ಭೂತಾನ್
  • 2014 ಪ್ರಧಾನಿ ಶಿಂಜೊ ಅಬೆ, ಜಪಾನ್
  • 2015 ಅಧ್ಯಕ್ಷ ಬರಾಕ್ ಒಬಾಮಾ, ಯುನೈಟೆಡ್ ಸ್ಟೇಟ್ಸ್
  • 2016 ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡೆ, ಫ್ರಾನ್ಸ್
  • 2017 ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್, ಯುಎಇ
  • 2018 10 ಆಸಿಯಾನ್ ದೇಶಗಳ ನಾಯಕರು
  • 2019 ಅಧ್ಯಕ್ಷ ಸಿರಿಲ್ ರಾಮಫೋಸಾ, ದಕ್ಷಿಣ ಆಫ್ರಿಕಾ
  • 2020 ಅಧ್ಯಕ್ಷ ಜೈರ್ ಬೋಲ್ಸನಾರೊ, ಬ್ರೆಜಿಲ್
  • 2021 ಮುಖ್ಯ ಅತಿಥಿ ಇಲ್ಲ
  • 2022 ಮುಖ್ಯ ಅತಿಥಿ ಇಲ್ಲ
  • 2023 ಅಧ್ಯಕ್ಷ ಅಬ್ದೆಲ್ ಫತ್ತಾ ಎಲ್-ಸಿಸಿ, ಈಜಿಪ್ಟ್
  • 2024 ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಫ್ರಾನ್ಸ್
  • 2025 ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ, ಇಂಡೋನೇಷ್ಯಾ
  • 2026 ಯುರೋಪಿಯನ್ ಒಕ್ಕೂಟದ ನಾಯಕರಾದ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಆಂಟೋನಿಯೊ ಕೋಸ್ಟಾ

English summary

Republic Day 2026: How To Select Guests For Republic Day?

The first celebration was attended by Indonesian President Sukarno. But do you know who decides who should be the guests at each Republic Day?
Story first published: Monday, January 26, 2026, 9:21 [IST]
X
Desktop Bottom Promotion