Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗಣರಾಜ್ಯೋತ್ಸವ 2026: ಗಣರಾಜ್ಯೋತ್ಸವಕ್ಕೆ ಖರ್ಚಾಗುವ ಹಣವೆಷ್ಟು? 1950ರಲ್ಲಿ ₹11 ಸಾವಿರ ಖರ್ಚು!
ಇಂದು ನಾವು 77ನೇ ಗಣರಾಜ್ಯೋತ್ಸವ ಆಚರಿಸುತ್ತಿದ್ದೇವೆ. ದೇಶದ ಮೂಲೆ ಮೂಲೆಯಲ್ಲೂ ಗಣರಾಜ್ಯದ ಸಂಭ್ರಮ ಮುಗಿಲು ಮುಟ್ಟಿದೆ. ಅದ್ರಲ್ಲೂ ದೆಹಲಿಯ ಕರ್ತವ್ಯ ಪಥದಲ್ಲಿ ಇಂದು ವಿಶ್ವದ ಗಮನ ಸೆಳೆಯುವಂತಹ ಪರೇಡ್ ನಡೆಯಲಿದೆ. ಇದು ದೇಶದ ಬಲ ಪ್ರದರ್ಶನ, ಮಿಲಿಟರಿ ಪಡೆಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಗಲಿದೆ. ಅಲ್ಲದೆ ನಮ್ಮ ಸಾಂಸ್ಕೃತಿಕ ವೈಭವವನ್ನು ಸಾರಿ ಹೇಳುತ್ತವೆ.
ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೂ ಆಹ್ವಾನ ಇರಲಿದೆ. ಇನ್ನು ಕೇಂದ್ರ ಸರ್ಕಾರವು ಈ ಕಾರ್ಯಕ್ರಮಕ್ಕೆ ಎಷ್ಟು ಕೋಟಿ ಖರ್ಚು ಮಾಡಲಿದೆ ಎಂಬುದು ನಿಮಗೆ ಗೊತ್ತಾ? ಅತಿಥಿಗಳಿಂದ ಹಿಡಿದು, ಅಲ್ಲಿನ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವುದು ಸರ್ಕಾರಕ್ಕೆ ಸವಾಲಿನ ಕೆಲಸ ಆಗಿರಲಿದೆ. ಹಾಗೆ ಕರ್ತವ್ಯ ಪಥದಲ್ಲಿ ಮೆರವಣಿಗೆ ನೋಡಬೇಕಾದರೆ ನೀವು ಟಿಕೆಟ್ ಪಡೆಯಬೇಕಾಗುತ್ತದೆ. ಹೀಗಾಗಿ ಟಿಕೆಟ್ ಮಾರಾಟದಿಂದ ಸರ್ಕಾರಕ್ಕೆ ಹಣವೂ ಸಿಗಲಿದೆ.

ಹಾಗಾದ್ರೆ ಈ ಗಣರಾಜ್ಯೋತ್ಸವ ದಿನಕ್ಕೆ ಸರ್ಕಾರ ಮಾಡುವ ಖರ್ಚು ಎಷ್ಟು? ಹಾಗೆ ಗಳಿಸುವ ಆದಾಯವೆಷ್ಟು ಎಂಬುದನ್ನು ತಿಳಿದುಕೊಳ್ಳೋಣ. ರಕ್ಷಣಾ ಸಚಿವಾಲಯದ ಅಡಿಯಲ್ಲಿ ಸಮಾರಂಭ ವಿಭಾಗವು ಅಧಿಕೃತ ಕಾರ್ಯಕ್ರಮಗಳಿಗೆ ಪ್ರತ್ಯೇಕ ಹಣ ಹಂಚಿಕೆ ಮಾಡಲಿದೆ. 2018-19ರಲ್ಲಿ ಇದರ ಬಜೆಟ್ 1.53 ಕೋಟಿ ರೂ.ಗಳಷ್ಟಿತ್ತು, 2019-20ರಲ್ಲಿ 1.39 ಕೋಟಿ ರೂ.ಗಳಿಗೆ ಇಳಿದು 2020-21 ರಿಂದ 2022-23 ರಲ್ಲಿ ವಾರ್ಷಿಕವಾಗಿ ಸುಮಾರು 1.32 ಕೋಟಿ ರೂ.ಗಳಷ್ಟಿತ್ತು.
ಈ ಹಣದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ಮತ್ತು ಬೀಟಿಂಗ್ ರಿಟ್ರೀಟ್ ಸಮಾರಂಭ ಎರಡನ್ನೂ ಸೇರಿಸಲಾಗಿದೆ. ಆದ್ರೆ ಸಂಪೂರ್ಣ ವೆಚ್ಚವನ್ನು ಭರಿಸುವುದಿಲ್ಲ. ಇಲ್ಲಿ ಭಾಗಿಯಾಗುವ ಪ್ರತ್ಯೇಕ ಏಜೆಂನ್ಸಿಗಳು ತಮ್ಮ ವೆಚ್ಚವನ್ನು ಸ್ವತಂತ್ರವಾಗಿ ಭರಿಸುತ್ತವೆ.
1950ರಲ್ಲಿ ಕೇವಲ 11,250ರೂ. ಖರ್ಚು
2015 ರಲ್ಲಿ ಸರ್ಕಾರವು 320 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ವರದಿಗಳು ಹೇಳುತ್ತವೆ. ಆದರೆ 1950 ರಲ್ಲಿ ಭಾರತ ತನ್ನ ಮೊದಲ ಗಣರಾಜ್ಯೋತ್ಸವವನ್ನು ಆಚರಿಸಿದಾಗ ಕೇವಲ 11,250 ರೂ.ಗಳನ್ನು ಖರ್ಚು ಮಾಡಿತ್ತು ಎಂದು ತಿಳಿದುಬಂದಿದೆ. ಆ ಸಮಯದಲ್ಲಿ ಇಂಡೋನೇಷ್ಯಾದ ಅಧ್ಯಕ್ಷರು ಸಹ ವಿಶೇಷ ಅತಿಥಿಗಳಾಗಿ ಗಣರಾಜ್ಯೋತ್ಸದಲ್ಲಿ ಭಾಗಿಯಾಗಿದ್ದರು.
1956 ರ ಹೊತ್ತಿಗೆ ವೆಚ್ಚವು 5.75 ಲಕ್ಷ ರೂ.ಗಳಿಗೆ ಏರಿಕೆ ಕಂಡಿತ್ತು. ಹಾಗೆ 1971 ರಲ್ಲಿ ವೆಚ್ಚವು 17.12 ಲಕ್ಷ ರೂ.ಗಳಷ್ಟಿತ್ತು ಇದು 1973 ರಲ್ಲಿ 23.38 ಲಕ್ಷ ರೂ.ಗಳಿಗೆ ಮತ್ತಷ್ಟು ಏರಿತು. 1988 ರ ಹೊತ್ತಿಗೆ ಮೆರವಣಿಗೆಯ ವೆಚ್ಚವು ಸುಮಾರು 70 ಲಕ್ಷ ರೂ.ಗಳನ್ನು ತಲುಪಿತ್ತು. ಹಾಗೆ 1986ರಲ್ಲಿ ಟಿಕೆಟ್ ಮಾರಾಟದಿಂದ ಸರ್ಕಾರವು 7.47 ಲಕ್ಷ ರೂಪಾಯಿ ಗಳಿಸಿತ್ತು.
2008 ರಲ್ಲಿ ಟಿಕೆಟ್ ಮಾರಾಟದಿಂದ ಸುಮಾರು 17.63 ಲಕ್ಷ ರೂ.ಗಳನ್ನು ಗಳಿಸಿದೆ. 2018 ಮತ್ತು 2020 ರ ನಡುವೆ ಸರ್ಕಾರವು ಟಿಕೆಟ್ ಮಾರಾಟದಿಂದ ವರ್ಷಕ್ಕೆ ಸರಾಸರಿ ರೂ. 34 ಲಕ್ಷ ಗಳಿಸಿತು. ಆದ್ರೆ ಕೋವಿಡ್ ಸಮಯದಲ್ಲಿ ಟಿಕೆಟ್ ಮಾರಾಟ ಕುಸಿಯಿತು. 2021ರಲ್ಲಿ 10.12 ಲಕ್ಷ ರೂಪಾಯಿ ಮಾತ್ರ ಟಿಕೆಟ್ ಮಾರಾಟದಿಂದ ಹಣ ಗಳಿಸಿತ್ತು. ಹಾಗೆ 2022ರಲ್ಲಿ ಇದು ಕೇವಲ 1.14 ಲಕ್ಷಕ್ಕೆ ಇಳಿಯಿತು.
2026ರಲ್ಲಿ ಗರಿಷ್ಠ ಗುರಿ
2023ರಿಂದ ಮತ್ತೆ ಟಿಕೆಟ್ ಮಾರಾಟವು ಚೇತರಿಕೆ ಕಂಡಿದೆ. 2024 ಹಾಗೂ 2025ರಲ್ಲಿಯೂ ಸಹ ಈ ದರ ಏರಿಕೆಯಾಗಿದೆ. ಹಾಗೆ ಈ ವರ್ಷ 2026ರಲ್ಲಿ ಕೂಡ ಟಿಕೆಟ್ ಮಾರಾಟವು ಕೋಟಿ ದಾಟುವ ನಿರೀಕ್ಷೆ ಇದೆ. ಆದರೆ ವೆಚ್ಚ ಇಂದಿಗೂ ದೊಡ್ಡ ಖರ್ಚುಗಳ ಸಾಲಿನಲ್ಲಿದೆ.



Click it and Unblock the Notifications


