Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ನೀತಾ ಅಂಬಾನಿಯ ₹400 ಕೋಟಿ ಆಭರಣ 178 ರೂ.ಗೆ ಸಿದ್ಧ..! ಆದ್ರೆ ಇದು ನಕಲಿಯಂತೆ..!
ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಹೆಸರು ನೀವೆಲ್ಲಾ ಕೇಳುತ್ತೀರಿ. ಪತಿಯಂತೆ ಅವರು ಸಹ ಹತ್ತಾರು ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಭಾರತದ ಅತ್ಯಂತ ಪ್ರಭಾವ ಶಾಲಿ ಮಹಿಳೆಯರ ಸಾಲಿನಲ್ಲೂ ಅವರು ಕಾಣಿಸಿಕೊಂಡಿದ್ದಾರೆ.
ಇನ್ನು ಅಂಬಾನಿ ಕುಟುಂಬದ ಆಸ್ತಿ ಎಷ್ಟಿದೆ ಎಂದು ನಿಮಗೆಲ್ಲಾ ತಿಳಿದಿರುವ ವಿಚಾರ. ಇತ್ತೀಚಿಗೆ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರ ಮೊದಲ ಪ್ರಿ ವೆಡ್ಡಿಂಗ್ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಸಮಾರಂಭ ಮಾಡಲಾಗಿತ್ತು. ಈ ಸಮಾರಂಭಕ್ಕೆ ಉದ್ಯಮಿಗಳು ಆಗಮಿಸಿದ್ದರಲ್ಲದೆ ಇಡೀ ವಿಶ್ವವೇ ಈ ಕಾರ್ಯಕ್ರಮದತ್ತ ತಿರುಗಿ ನೋಡಿತ್ತು.

ಅದರಲ್ಲೂ ಮುಖ್ಯವಾಗಿ ಗಮನ ಸೆಳೆದಿದ್ದು ನೀತಾ ಅಂಬಾನಿ ಅವರು ಧರಿಸಿದ್ದ ಆಭರಣಗಳು, ಹೌದು ಅವರ ಹಸಿರು ಬಣ್ಣದ ಆಭರಣ ಎಲ್ಲರ ಕಣ್ಣು ಕುಕ್ಕಿತ್ತು. ಬರೋಬ್ಬರಿ 400 ಕೋಟಿ ರೂಪಾಯಿ ಆಗಿತ್ತು. ಹೀಗಾಗಿ ಈ 200 ಕ್ಯಾರೆಟ್‌ಗೂ ಅಧಿಕ ಮೌಲ್ಯದ ವಜ್ರದ ಆಭರಣ ಎಲ್ಲರ ಗಮನ ಸೆಳೆದಿತ್ತು.
ಆದರೆ ಇದೀಗ ಜೈಪುರದ ಆಭರಣ ವ್ಯಾಪಾರಿಯೊಬ್ಬರು ಇದೇ ರೀತಿಯ ನೆಕ್ಲೆಸ್ ಅನ್ನು ರಚಿಸಿದ್ದಾರೆ. ಅದರ ಬೆಲೆ ಕೇವಲ 178 ರೂಪಾಯಿ ಮಾತ್ರ. ನೀತಾ ಅಂಬಾನಿಯವರ ಮೂಲ ನೆಕ್ಲೇಸ್ ಹಸಿರು ಪಚ್ಚೆ ಕಲ್ಲುಗಳನ್ನು ಒಳಗೊಂಡಿದ್ದರೆ, ಈ ನಕಲಿ ಆಭರಣವು ಕೆಂಪು, ಕಪ್ಪು ಮತ್ತು ಹಸಿರು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಬರುತ್ತವೆ, ಎಲ್ಲವನ್ನೂ ಬಿಳಿ ಕಲ್ಲುಗಳಿಂದ ಅಲಂಕರಿಸಲಾಗಿದೆ.
ಸ್ಪಷ್ಟವಾದ ಪ್ಲಾಸ್ಟಿಕ್ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಲಾದ ಸೆಟ್ ಇದಾಗಿದ್ದು, ಈ ನೆಕ್ಲೆಸ್‌ಗೆ ಮ್ಯಾಚಿಂಗ್ ಕಿವಿ ಓಲೆಗಳನ್ನು ಸಹ ನೋಡಬಹುದು. ಜೈಪುರದ ವಿವಿ ಸನ್ಸ್ ಜ್ಯುವೆಲರ್ಸ್‌ನ ಮುಖ್ಯ ಮಾರಾಟಗಾರರು ಇದನ್ನು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ, "ನೀತಾ ಅಂಬಾನಿ ಧರಿಸಿದ್ದ ನೆಕ್ಲೆಸ್ ಕೇವಲ 178 ರೂ.ಗಳಲ್ಲಿ ಲಭ್ಯವಿದೆ. ನೀವು ದರ ಮತ್ತು ನಾವು ಏನು ಮಾರಾಟ ಮಾಡುತ್ತಿದ್ದೇವೆ ಎಂಬುದರ ಕುರಿತು ನೀವು ತಿಳಿದುಕೊಳ್ಳಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಅವರು ಈ ರೀತಿಯ ಮಾಹಿತಿ ಹಂಚಿಕೊಂಡ ಬಳಿಕ ಈ ನೆಕ್ಲೆಸ್‌ಗೆ ಭರ್ಜರಿ ಬೇಡಿಕೆ ಬಂದಿದ್ಯಾಂತೆ. ಹಲವು ಕಡೆಗಳಿಂದ ಈ ಆಭರಣ ಪೋಸ್ಟ್ ಮಾಡಲು ಆರ್ಡರ್ ಸಹ ಬಂದಿದೆ. ಇದು ಅಸಲಿ ಆಭರಣದಂತೆ ಕಂಡರೂ ಇದರಲ್ಲಿ ಯಾವ ವಜ್ರ, ಚಿನ್ನವನ್ನೂ ಬಳಸಿಲ್ಲ.
ನೀತಾ ಅಂಬಾನಿ ಅವರು ತಮ್ಮ ಹಸಿರು ಬಣ್ಣದ ವಜ್ರದ ನೆಕ್ಲೆಸ್ ಹಾಗೂ ಅದಕ್ಕೆ ಮ್ಯಾಚಿಂಗ್ ಕಿವಿಯೋಲೆ ಧರಿಸಿದ್ದರು. ಜೊತೆಗೆ ಕಾಂಚೀಪುರಂನ ಸೀರೆ ಸಹ ಉಟ್ಟಿದ್ದರು. ಸೀರೆಯನ್ನು ಮನೀಶ್ ಮಲ್ಹೋತ್ರಾ ಮತ್ತು ಸ್ವದೇಶ್ ಆನ್‌ಲೈನ್ ವಿನ್ಯಾಸಗೊಳಿಸಿದ್ದರು. ಅಂಬಾನಿ ಕುಟುಂಬವು ಮಾರ್ಚ್‌ನಲ್ಲಿ ಗುಜರಾತ್‌ನ ಜಾಮ್‌ನಗರದಲ್ಲಿ ತಮ್ಮ ಕಿರಿಯ ಮಗ ಅನಂತ್ ಮತ್ತು ಅವರ ನಿಶ್ಚಿತ ವರ ಪತ್ನಿ ರಾಧಿಕಾ ಮರ್ಚಂಟ್‌ಗಾಗಿ ಮೂರು ದಿನಗಳ ಪೂರ್ವ ವಿವಾಹ ಸಮಾರಂಭವನ್ನು ಆಯೋಜಿಸಿತ್ತು.
ನೀತಾ ಅಂಬಾನಿ ಸೇರಿದಂತೆ ಅಂಬಾನಿ ಕುಟುಂಬ ಧರಿಸಿದ್ದ ಆಭರಣ ಹಾಗೂ ಬಟ್ಟೆಯೂ ಕೋಟಿ ಕೋಟಿ ಬೆಲೆ ದಾಟಿತ್ತು. ಅದರಲ್ಲಿ ನೀತಾ ಅಂಬಾನಿ ಕೋಟಿ ಕೋಟಿ ಬೆಲೆ ಬಾಳುವ ಆಭರಣ ಹಾಗೂ ಸೀರೆ ತೊಟ್ಟಿದ್ದರು.
2ನೇ ಪ್ರಿ ವೆಡ್ಡಿಂಗ್‌ಗೆ ವೇದಿಕೆ ಸಿದ್ದ
ಇನ್ನೊಂದೆಡೆ ಅನಂತ್ ಅಂಬಾನಿ ಹಾಗೂ ರಾಧಿಕ ಮರ್ಚೆಂಟ್ 2ನೇ ಪ್ರಿ ವೆಡ್ಡಿಂಗ್‌ಗೆ ಸಿದ್ಧತೆ ನಡೆಸಿದ್ದಾರೆ. ಇಟಲಿಯಲ್ಲಿ ಈ ಎರಡನೇ ಪ್ರಿ ವೆಡ್ಡಿಂಗ್ ನಡೆಯಲಿದ್ದು, ಬಾಲಿವುಡ್ ತಾರೆಯರು ಸೇರಿ 800 ಮಂದಿ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆಯಂತೆ. ಈ ಬಾರಿಯೂ ಅದ್ದೂರಿತನ ಕಾಣಬಹುದಂತೆ.



Click it and Unblock the Notifications