Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಪಳ ಪಳ ಹೊಳೆಯುವ ಕೆಂಪು ನಾಗರ ನೋಡಿದ್ದೀರಾ..? ವೈರಲ್ ಆಗ್ತಿದೆ ವಿಡಿಯೋ..!
ನಾಗರ ಹಾವುಗಳನ್ನು ಹಿಂದೂ ಧರ್ಮದಲ್ಲಿ ಪೂಜ್ಯನೀಯ ಎಂದು ಪರಿಗಣಿಸಲಾಗಿದೆ. ಪ್ರತಿಯೊಂದು ಊರಿನಲ್ಲೂ ನಾಗರ ದೇವಾಲಯಗಳು, ಗುಡಿಗಳು, ಕಲ್ಲುಗಳನ್ನು ನಾವಿಂದು ಕಾಣಬಹುದು. ಪ್ರಾಚೀನ ಕಾಲದಲ್ಲೂ ನಾಗರ ಹಾವಿಗೆ ಪೂಜೆ ನಡೆಯುತ್ತಿತ್ತು ಎಂಬುದಕ್ಕೆ ಹಲವು ಪುರಾವೆಗಳು ಸಹ ಸಿಕ್ಕಿವೆ.
ಆದ್ರೆ ನಾಗರಹಾವಿನ ಕುರಿತಾಗಿ ಹಲವು ಕಥೆಗಳು, ನಂಬಿಕೆಗಳು ಇಂದಿಗೂ ನಮ್ಮ ನಡುವೆ ಜೀವಂತವಾಗಿವೆ. ಇನ್ನು ನಾಗರ ಹಾವಿನಲ್ಲಿ ನಾವು ಹಲವಾರು ಜಾತಿಯನ್ನು ನೋಡಬಹುದು. ಸಮಾನ್ಯವಾಗಿ ಗಿಡ್ಡ ನಾಗರ, ಕಪ್ಪು ನಾಗರ, ಬಿಳಿ ನಾಗರ ಕಾಳಿಂಗ ಸರ್ಪ, ಹೀಗೆ ಹಲವು ರೀತಿಯ ಜಾತಿಗಳಿವೆ. ಆದ್ರೆ ನೀವೆಂದಾದ್ರು ಕಡು ಕೆಂಪು ಬಣ್ಣದ ನಾಗರ ಹಾವನ್ನೂ ನೋಡಿದ್ದೀರಾ?

ಹೌದು ಇಲ್ಲೊಂದು ವಿಡಿಯೋದಲ್ಲಿ ಕೆಂಪು ಬಣ್ಣದ ನಾಗರಹಾವು ಕಂಡುಬಂದಿದ್ದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಕಡು ಕೆಂಪು ಬಣ್ಣದ ನಾಗರ ಹಾವನ್ನು ಕಂಡ ಜನರು ಅಚ್ಚರಿಗೆ ಒಳಗಾಗಿದ್ದಾರೆ.
ವಿಡಿಯೋದಲ್ಲಿ ಒಬ್ಬ ಹಾವನ್ನು ಹಿಡಿಯುತ್ತಿರುವುದನ್ನು ನಾವು ನೋಡಬಹುದು. ಆದರೆ ಈ ವಿಡಿಯೋ ಯಾವಾಗ ಮತ್ತು ಯಾವ ಸ್ಥಳದಲ್ಲಿ ಚಿತ್ರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಆತ ಹಾವನ್ನು ಎಳೆದು ಹೊರಗೆ ತೆಗೆದಾಗ ಅದು ಸುಂದರ ಕೆಂಪು ಬಣ್ಣದಲ್ಲಿರುವುದು ಕಂಡುಬರುತ್ತದೆ. ನೋಡಲು ಒಮ್ಮೆ ಅಚ್ಚರಿಯಾದರು ಕೆಂಪು ಬಣ್ಣದ ಹಾವು ಬಲು ಅಪರೂಪವಾಗಿದೆ.
ಆ ನಾಗರ ಹಾವು ಹೆಡೆ ಬಿಚ್ಚಿ ಮುಂದಕ್ಕೆ ಸಾಗಲು ಯತ್ನಿಸುತ್ತಿರುವುದು ಸಹ ಕಂಡುಬರುತ್ತದೆ. ಆದರೆ ಆತ ಆ ಕೆಂಪು ಹಾವನ್ನು ಹಿಡಿದು ರಕ್ಷಿಸಿದ್ದಾನೆ. ವಿಡಿಯೋದ ಮೇಲೆ ಸಹ ಹಾವನ್ನು ಹಿಡಿದು ರಕ್ಷಿಸಲಾಗಿದೆ ಎಂದು ಬರೆಯಲಾಗಿದೆ. ಆದ್ರೆ ಈ ವಿಡಿಯೋ ಹಲವರು ಹುಬ್ಬೇರುವಂತೆ ಮಾಡಿದೆ.
ಹಾವಿಗೆ ಕೆಂಪು ಬಣ್ಣ ಬಳಿದರೆ?
ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ಲೈಕ್ಸ್ ಮತ್ತು ವೀವ್ಸ್‌ಗಾಗಿ ಎಂತಹ ಹುಚ್ಚುತನಕ್ಕೆ ಬೇಕಾದರು ಕೈ ಹಾಕುತ್ತಿದ್ದಾರೆ. ಕೆಲವರಂತು ಜೀವಕ್ಕೆ ಹಾನಿ ಮಾಡಿಕೊಳ್ಳಬಹುದಾದ ಕೆಲಸಕ್ಕೂ ಮುಂದಾಗಿ ಅನಾಹುತ ಮಾಡಿಕೊಳ್ಳುತ್ತಾರೆ. ಈ ಕೆಂಪು ನಾಗರದ ವಿಚಾರದಲ್ಲೂ ಈಗ ಇಂತಹ ಪ್ರಶ್ನೆಗಳು ಎದ್ದಿವೆ.
ಹಲ್ಲು ಕಿತ್ತಿರುವ ವಿಷವಲ್ಲದ ಹಾವಿಗೆ ಇವರು ಕೆಂಪು ಬಣ್ಣವನ್ನು ಹಚ್ಚಿ ವಿಡಿಯೋ ವೈರಲ್ ಆಗುವಂತೆ ಮಾಡಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಒಂದು ವೇಳೆ ಕೆಂಪು ನಾಗರ ಇದ್ದರೆ ಇದಕ್ಕೂ ಮೊದಲು ಎಲ್ಲಿಯಾದರು ಕಂಡುಬರಬೇಕಿತ್ತು. ಇದೇ ಮೊದಲು ಸಿಕ್ಕಿದ್ದರೂ ಆತ ಅದನ್ನು ಹಿಡಿಯುವ ಮುನ್ನ ಎಚ್ಚರಿಕೆ ತೆಗೆದುಕೊಳ್ಳುತ್ತಿದ್ದ. ಆದರೆ ಅನಾಯಾಸವಾಗಿ ಸಾಮಾನ್ಯ ಹಾವು ಹಿಡಿದಂತೆ ಅದನ್ನು ಹಿಡಿದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂಬುದು ನೆಟ್ಟಿಗರ ವಾದ.
ದಕ್ಷಿಣ ಆಫ್ರಿಕಾ ಹಾಗೂ ಆಫ್ರಿಕಾ ಖಂಡದಲ್ಲಿ ನಾವು ಹಳದಿ ಬಣ್ಣದ ನಾಗರ ಹಾವನ್ನು ಕಾಣಬಹುದಾಗಿದೆ. ಅತ್ಯಂತ ವಿಷಕಾರಿ ಹಾವಾದ ಈ ಹಳದಿ ನಾಗರ ಆಫ್ರಿಕಾದಲ್ಲಿ ಮಾತ್ರ ಕಂಡುಬರುತ್ತವೆ. ಇದನ್ನು ಕೇಪ್ ಕೋಬ್ರಾ ಅಂತಲೂ ಅವರು ಕರೆಯುತ್ತಾರೆ. ಹೆಚ್ಚಾಗಿ ಹುಲ್ಲುಗಾವಲು ಮತ್ತು ಒಂ ಪ್ರದೇಶದಲ್ಲಿ ಇವು ಕಂಡುಬರುತ್ತದೆ. ಆದರೆ ಭಾರತದಲ್ಲಿ ಕಾಣಸಿಗುವ ಹಾವುಗಳು ಕಂದು ಇಲ್ಲವೆ ಬೂದು ಬಣ್ಣದ್ದಾಗಿವೆ. ಕಾಳಿಂಗ ಸರ್ಪವನ್ನು ಹೊರತುಪಡಿಸಿ ಉಳಿದ ನಾಗರಹಾವುಗಳು ಹೆಚ್ಚು ದೊಡ್ಡದಾಗಿರುವುದಿಲ್ಲ. ಅಲ್ಲದೆ ಒಂದೇ ಬಣ್ಣದಲ್ಲಿರುತ್ತವೆ.
ಹೀಗಾಗಿ ಈ ವಿಡಿಯೋದಲ್ಲಿ ಕಂಡುಬಂದಿರುವ ಕೆಂಪು ನಾಗರದ ಕುರಿತು ಹಲವು ಅನುಮಾನಗಳು ಮೂಡಿವೆ. ಆದರೆ ಉರಗ ತಜ್ಞರು ಈ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ನೀಡುವ ಮೂಲಕ ಜನರಲ್ಲಿರುವ ಕುತೂಹಲಕ್ಕೆ ತೆರೆ ಎಳೆಯಬೇಕಿದೆ.



Click it and Unblock the Notifications
