Latest Updates
-
ಶನಿ-ಮಂಗಳನ ಚಲನೆಯಿಂದ ದ್ವಿ ದ್ವಾದಶ ಯೋಗ: ಈ ರಾಶಿಯವರಿಗೆ ಆಶೀರ್ವಾದ, ಹಣ ಲಾಭದ ನಿರೀಕ್ಷೆ -
ವಿಶ್ವದ ದುಬಾರಿ ಬಣ್ಣ ಇದು: 1 ಗ್ರಾಮ್ಗೆ ಬರೋಬ್ಬರಿ 80 ಸಾವಿರ ರೂ.! -
ಎಷ್ಟೇ ಹಠಮಾರಿ ಕಲೆಗಳಿದ್ದರೂ ಚಿಟಿಕೆಯಲ್ಲಿ ಮಾಯ! ಇಲ್ಲಿದೆ ಹಣ ಉಳಿಸುವ ಸಿಂಪಲ್ ಉಪಾಯ -
ಊಟ, ಮುದ್ದೆ ಸವಿಯೋಕೆ ಈ ರೀತಿ ಮಟನ್ ಸಾಂಬಾರ್ ಮಾಡಿ! -
10 ನಿಮಿಷದ ಸ್ನ್ಯಾಕ್ಸ್ ರೆಸಿಪಿ.. 1 ಕಪ್ ರವೆ, 1 ಬಾಳೆಹಣ್ಣು ಇದ್ದರೆ ಸಾಕು! 2 ದಿನ ಇಟ್ಟು ತಿನ್ನಬಹುದು -
ಈ 4 ಬಗೆಯ ಜನರಿಗೆ ಎಂದಿಗೂ ಸಹಾಯ ಮಾಡಬೇಡಿ! ನಿಮ್ಮ ಒಳ್ಳೆಯತನವೇ ಮುಳುವಾಗುತ್ತೆ -
ನಿಶಕ್ತಿ, ಬಲಹೀನತೆ ಇದ್ರೆ ವಾರದಲ್ಲಿ ಈ 2 ಮುದ್ದೆ ತಿನ್ನಿ ಸಾಕು -
ಹೆಸರುಬೇಳೆ ಬಳಸಿ ಪಕೋಡ ಮಾಡಿ ಸವಿಯಿರಿ! ಇಲ್ಲಿವೆ ಶೆಫ್ ಸ್ಟೈಲ್ನ ಈ 2 ಸಿಂಪಲ್ ವಿಧಾನಗಳು -
ಮೀನ ರಾಶಿಯಲ್ಲಿ ಶುಕ್ರ-ಚಂದ್ರನ ಸಮ್ಮಿಲನ; ಅಪರೂಪದ ಕಲಾತ್ಮಕ ಯೋಗ ಸೃಷ್ಟಿ! -
ಬೇಕರಿ ರುಚಿಯ ಆಪಲ್ ಕೇಕ್ ಥಟ್ ಅಂತ ಮನೆಯಲ್ಲಿ ಮಾಡಿ! ಇಲ್ಲಿದೆ ಸುಲಭದ ವಿಧಾನ
4 ಮಹಡಿಯಷ್ಟು ಎತ್ತರಕ್ಕೆ ಹಿಮಪಾತ; ತುರ್ತು ಪರಿಸ್ಥಿತಿ ಘೋಷಣೆ, ಇದಕ್ಕೆ ಕಾರಣವೇನು?
ನಾರ್ಥ್ ಪೋಲ್‌ನಲ್ಲಿ ವಿಪರೀತ ಚಳಿಯ ವಾತಾವರಣ ಇರುವುದು ನಿಮಗೂ ತಿಳಿದಿದೆ. ಅದ್ರಲ್ಲೂ ಹಿಮಪಾತವಾಗುವುದು ಅಲ್ಲಿ ಸಾಮಾನ್ಯ, ಗ್ರೀನ್ ಲ್ಯಾಂಡ್, ಕೆನಡಾ, ರಷ್ಯಾದ ಭಾಗಗಳು, ಸೇರಿದಂತೆ ಹಲವು ಕಡೆಗಳಲ್ಲಿ ವರ್ಷದ ಬಹುತೇಕ ಸಮಯದಲ್ಲಿ ಹಿಮಪಾತವಾಗುತ್ತಲೇ ಇರಲಿದೆ. ಈಗ ರಷ್ಯಾದ ಸಿಟಿಯೊಂದರಲ್ಲಿ ಉಂಟಾಗಿರುವ ಹಿಮಪಾತವು ಎಲ್ಲರನ್ನು ಅಚ್ಚರಿಕೆ ತಳ್ಳಿದೆ.
ರಷ್ಯಾದ ಪೂರ್ವ ಕಮ್ಚಟ್ಕಾ ದ್ವೀಪದಲ್ಲಿ ಕೇವಲ 24 ಗಂಟೆಯಲ್ಲಿ ದಾಖಲೆಯ ಹಿಮಪಾತವಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಾಗೆ ತೀವ್ರ ಹಿಮಪಾತದ ಕಾರಣದಿಂದ ಇಬ್ಬರು ಪ್ರಾಣಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಬೃಹತ್ ಪ್ರಮಾಣದ ಹಿಮದಿಂದ ರಸ್ತೆಗಳು ಮನೆಗಳು ವಾಹನಗಳು ಮುಳುಗಿವೆ. ಹೀಗಾಗಿ ಜನರು ಹೊರಬರಲಾಗದೆ ಸಿಲುಕಿದ್ದಾರೆ.

ಇದರ ನಡುವೆ ಮನೆ ಮೇಲಿನ ಹಿಮ ಬಿದ್ದ ಪರಿಣಾಮವಾಗಿ ಇಬ್ಬರು ಮೃತಪಟ್ಟಿರುವುದು ವರದಿಯಾಗಿದೆ. ದೊಡ್ಡ ಅಪಾರ್ಟ್‌ಮೆಂಟ್‌ನ 4ನೇ ಮಹಡಿಯಷ್ಟು ಎತ್ತರಕ್ಕೆ ಹಿಮ ತುಂಬಿರುವುದು ದಾಖಲೆ ಪ್ರಮಾಣದ ಹಿಮಪಾತಕ್ಕೆ ಸಾಕ್ಷಿಯಾಗಿದೆ. ಈ ಕಾರಣದಿಂದಾಗಿ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಸದ್ಯ ಜನರು ಮನೆಯಿಂದ ಹೊರಬರಲಾಗದ ಸ್ಥಿತಿ ಇದ್ದು, ಇದೇ ಪ್ರಮಾಣದಲ್ಲಿ ಹಿಮಪಾತ ಮುಂದುವರೆದರೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
ಓಖೋಟ್ಸ್ಕ್ ಸಮುದ್ರದಲ್ಲಿ ರೂಪುಗೊಂಡ ಕಡಿಮೆ ಒತ್ತಡದ ಸಮಸ್ಯೆಯೂ ಕಮ್ಚಟ್ಕಾ ಮತ್ತು ರಷ್ಯಾದ ಇತರ ಪೂರ್ವ ಪ್ರದೇಶಗಳನ್ನು ಅಪ್ಪಳಿಸಿ, ಬಲವಾದ ಗಾಳಿ ಮತ್ತು ದಾಖಲೆಯ ಹಿಮಪಾತಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಸದ್ಯ ಅಲ್ಲಿನ ರಸ್ತೆಯೂ ಸೆರಿದಂತೆ ಹಿಮ ಬಿದ್ದಿರುವ ಸ್ಥಳವನ್ನು ತೆರವುಗೊಳಿಸಲು ಹೆಚ್ಚುವರಿ ಸೌಲಭ್ಯಗಳ ಒದಗಿಸಲಾಗಿದೆ.
ಪ್ರತಿ ವರ್ಷದ ಸಮಯದಲ್ಲಿ ಸುಮಾರು 10 ಅಡಿಯಷ್ಟು ಸಾಮಾನ್ಯ ಹಿಮ ನೋಡಬಹುದು. ಆದ್ರೆ ಈ ವರ್ಷ ಬರೋಬ್ಬರಿ 40 ಅಡಿಗಳಷ್ಟು ಹಿಮ ಬಿದ್ದಿದೆ ಎಂದು ವರದಿಯಾಗಿದೆ. ಹಲವಾರು ದಿನಗಳಿಂದ ನಿರಂತರ ಭಾರೀ ಹಿಮಪಾತ ಮತ್ತು ಬಲವಾದ ಗಾಳಿಯಿಂದಾಗಿ ಕಮ್ಚಟ್ಕಾದಲ್ಲಿ ಜೀವನವು ಬಹುತೇಕ ಸ್ಥಗಿತಗೊಂಡಿದೆ. ರಾಜಧಾನಿಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ, ಸಾರಿಗೆ ವ್ಯವಸ್ಥೆಯಿಲ್ಲದೆ ಜನರು ಸಿಲುಕಿದ್ದಾರೆ.
ನಗರದಲ್ಲಿನ ಅಂಗಡಿಗಳು, ಮನೆಗಳು ಸಹ ಮುಚ್ಚಿ ಹೋಗಿವೆ, ಜನರು ತಮ್ಮ ವಾಹನಗಳನ್ನು ಹಿಮದಿಂದ ಹೊರತೆಗೆಯಲು ಹರಸಾಹಸ ಪಡುವುದು ಸಾಮಾನ್ಯ ದೃಶ್ಯವಾಗಿದೆ. ಇದರ ನಡುವೆ ಹವಾಮಾನ ಇಲಾಖೆಯು ಭಾರೀ ಹಿಮಪಾತ, ಕಡಿಮೆ ಗೋಚರತೆ ಮತ್ತು ಆರ್ದ್ರ ಹಿಮವು ಪೆಟ್ರೋಪಾವ್ಲೋವ್ಸ್ಕ್-ಕಮ್ಚಾಟ್ಸ್ಕಿ ಮತ್ತು ಯೆಲಿಜೋವ್ಸ್ಕಿ ಜಿಲ್ಲೆಗಳ ಭಾಗಗಳಲ್ಲಿ ಅಪಾಯಕಾರಿ ಹಿಮಪಾತದ ಮುನ್ನೆಚ್ಚರಿಕೆ ನೀಡಿದ್ದಾರೆ. ಅಲ್ಲದೆ ತಾಪಮಾನವು 0ಯಿಂದ 2 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹೇಳಿದೆ.
ಇತಿಹಾಸದ ಅತ್ಯಂತ ಕೆಟ್ಟ ಹಿಮಪಾತ ಆಗಿದ್ದು ಯಾವಾಗ?
ಇತಿಹಾಸದಲ್ಲಿ ಅತ್ಯಂತ ಭೀಕರವಾದ ಹಿಮಪಾತವನ್ನು 1972 ರ ಇರಾನ್ ಹಿಮಪಾತ ಎಂದು ಉಲ್ಲೇಖಿಸಲಾಗುತ್ತದೆ. ಈ ವರ್ಷದಲ್ಲಿ ಸುಮಾರು ಹಳ್ಳಿಗಳು ಹಿಮದಡಿ ಹೂತುಹೋಗಿದ್ದವು ಇದರಿಂದ ಸುಮಾರು 4 ಸಾವಿರ ಮಂದಿ ಮೃತಪಟ್ಟಿದ್ದರು ಎಂದು ಹೇಳಲಾಗಿದೆ. ಇದಾದ ಬಳಿಕ 2008ರಲ್ಲಿ ಅಫ್ಗಾನಿಸ್ಥಾನದಲ್ಲಿ ಉಂಟಾಗಿದ್ದ ಹಿಮಪಾತವು ಕೂಡ ಇಂತಹ ಭೀಕರತೆಗೆ ಕಾರಣವಾಗಿತ್ತು. ಈ ಸಮಯದಲ್ಲಿ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹಾಗೆ 1888ರ ಅಮೆರಿಕದಲ್ಲಿ ಸಂಭವಿಸಿದ್ದ ವಿನಾಶಕಾರಿ ಹಿಮಪಾತಮವು ಸುಮಾರು 899 ಜನರಿಗೂ ಹೆಚ್ಚು ಮಂದಿಯ ಪ್ರಾಣ ತೆಗೆದಿತ್ತು.



Click it and Unblock the Notifications











