Latest Updates
-
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ
ಮಧ್ಯದ ಬೆರಳಿಗೆ ಮಾತ್ರ ವಜ್ರ ಉಂಗುರ ಧರಿಸಬೇಕು ಯಾಕೆ ಗೊತ್ತಾ?
ಜ್ಯೋತಿಷ್ಯ ಶಾಸ್ತ್ರದಲ್ಲಿ ವಜ್ರಕ್ಕೆ ತುಂಬಾನೇ ಮಹತ್ವವಿದೆ. ಎಲ್ಲರಿಗೂ ವಜ್ರ ಹಾಕಿಕೊಳ್ಳೋ ಭಾಗ್ಯ ಇರೋದಿಲ್ಲ. ಹೆಚ್ಚಿನವರು ವಜ್ರ ಖರೀದಿಸೋದಕ್ಕೆ ಆಗದೇ ಚಿನ್ನಕ್ಕೆ ತೃಪ್ತಿ ಪಟ್ಟುಕೊಳ್ಳುವವರು ಇದ್ದಾರೆ. ವಜ್ರ ಧರಿಸೋದ್ರಿಂದ ನಾವು ಜೀವನದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯೋದಕ್ಕೆ ಸಾಧ್ಯವಾಗುತ್ತಂತೆ. ಅಷ್ಟಕ್ಕು ಉತ್ತಮ ಆರೋಗ್ಯ, ಅದೃಷ್ಟ, ಯಶಸ್ಸು, ಸಂಪತ್ತು ಮತ್ತು ಸಮೃದ್ಧಿಯ ಪ್ರಯೋಜನಗಳನ್ನು ಪಡೆಯಲು ವಜ್ರದ ಉಂಗುರವನ್ನು ಯಾವ ಕೈಗೆ ಧರಿಸಿದರೆ ಉತ್ತಮ? ಮಧ್ಯದ ಬೆರಳು ವಜ್ರದ ಉಂಗುರ ಧರಿಸೋದಕ್ಕೆ ಸೂಕ್ತನಾ? ಅನ್ನೋದನ್ನು ತಿಳಿಯೋಣ.
ವಜ್ರದ ಉಂಗುರ ಧರಿಸಲು ಮಧ್ಯದ ಬೆರಳು ಉತ್ತಮ ಯಾಕೆ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಧ್ಯದ ಬೆರಳಿಗೆ ಉಂಗುರ ಧರಿಸೋದ್ರಿಂದ ಹಲವು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಂತೆ. ವಜ್ರಗಳು ಶುಕ್ರ ಗ್ರಹವನ್ನು ಪ್ರತಿನಿಧಿಸುತ್ತವೆ. ಹೀಗಾಗಿ ಮಧ್ಯದ ಬೆರಳಿಗೆ ವಜ್ರದ ಉಂಗುರವನ್ನು ಧರಿಸೋದ್ರಿಂದ ಶುಕ್ರನೊಂದಿಗೆ ಸಂಬಂಧಿಸಿರುವ ಕೆಲವೊಂದು ಗುಣಲಕ್ಷಣಗಳು ನಿಮ್ಮಲ್ಲಿ ಹೆಚ್ಚಾಗುತ್ತಂತೆ.

ಶುಕ್ರವು ಭಕ್ತಿ, ಪ್ರೀತಿ ಮತ್ತು ಸಂಬಂಧಗಳಂತಹ ಪ್ರಮುಖ ಅಂಶಗಳನ್ನು ನಿಯಂತ್ರಿಸುವ ಗ್ರಹವಾಗಿರುವುದರಿಂದ, ಅದು ನಿಮ್ಮ ಸಂಪೂರ್ಣ ಜೀವನವನ್ನು ಧನಾತ್ಮಕವಾಗಿ ಪ್ರಭಾವಿಸುವಂತೆ ಮಾಡುತ್ತದೆ. ಹೀಗಾಗಿ ಮಧ್ಯದ ಬೆರಳಿಗೆ ವಜ್ರವನ್ನು ಧರಿಸೋದು ಉತ್ತಮ ಆಯ್ಕೆಯಾಗಿದೆ. ಇನ್ನೂ ಇದರಿಂದ ಯಾವ ರೀತಿ ಪ್ರಯೋಜನಗಳಿದೆ ಅನ್ನೋದನ್ನು ತಿಳಿಯೋಣ.
ಅದೃಷ್ಟ ಹೆಚ್ಚಾಗುತ್ತದೆ
ವಜ್ರದ ಉಂಗುರವನ್ನು ಮಧ್ಯದ ಬೆರಳಿನಲ್ಲಿ ಧರಿಸಿದಾಗ ಇದರ ಪರಿಣಾಮವಾಗಿ ನಿಮ್ಮ ಜೀವನದಲ್ಲಿ ಉತ್ತಮ ಯಶಸ್ಸು, ಸಂಪತ್ತು ಮತ್ತು ಅದೃಷ್ಟ ಹೆಚ್ಚಾಗುವಂತೆ ಮಾಡುತ್ತದೆ. ನಿಮ್ಮ ಪ್ರೇಮ ಹಾಗೂ ಪ್ರಯಣದ ಜೀವನದಲ್ಲೂ ಕೂಡ ನೀವು ಶುಭ ಫಲಗಳನ್ನು ನಿರೀಕ್ಷೇ ಮಾಡಬಹುದು. ಇತರ ಕ್ಷೇತ್ರಗಳಿಗೂ ಕೂಡ ಆರ್ಥಿಕ ಯಶಸ್ಸು ಮತ್ತು ಅದೃಷ್ಟ ವಿಸ್ತರಣೆಯಾಗುತ್ತದೆ.
ಲೈಂಗಿಕ ಸಾಮರ್ಥ್ಯ ಹೆಚ್ಚಾಗುತ್ತದೆ
ಹೆಚ್ಚಿನವರಿಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಇದ್ದರೂ ಕೂಡ ಅವರಿಗೆ ಬೇರೆ ರೀತಿ ಸಮಸ್ಯೆಗಳು ಇರುತ್ತದೆ. ಮಧ್ಯದ ಬೆರಳಿಗೆ ವಜ್ರದ ಉಂಗುರವನ್ನು ಧರಿಸೋದ್ರಿಂದ ನೀವು ಲೈಂಗಿಕ ಶಕ್ತಿ ಮತ್ತು ಸಾಮರ್ಥ್ಯವನ್ನು ಮರಳಿ ಪಡೆಯಲು ನಿಮಗೆ ಸಹಾಯ ಮಾಡಬಹುದು.
ಉತ್ತಮ ಆರೋಗ್ಯವನ್ನು ಒದಗಿಸುತ್ತದೆ
ಯಾರು ವಜ್ರವನ್ನು ಧರಿಸುತ್ತಾರೆಯೋ ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಿಸುತ್ತದೆ. ಒಂದು ವೇಳೆ ನಿಮ್ಮ ಮೂತ್ರನಾಳ, ಜೀರ್ಣಾಂಗ ವ್ಯವಸ್ಥೆ, ಚರ್ಮ ಅಥವಾ ಸಂತಾನೋತ್ಪತ್ತಿ ಸಮಸ್ಯೆಗಳು ಇದ್ದರೆ ನಿಮ್ಮ ಮಧ್ಯದ ಬೆರಳಿಗೆ ವಜ್ರದ ಉಂಗುರವನ್ನು ಧರಿಸುವುದರಿಂದ ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗುತ್ತದೆ.
ಮನಃಶಾಂತಿ ಹೆಚ್ಚಾಗುತ್ತದೆ
ಕೆಲವೊಂದು ಸಲ ಜೀವನದಲ್ಲಿ ಎಲ್ಲಾ ಇದ್ದರೂ ಕೂಡ ಮನಃಶಾಂತಿ ಇಲ್ಲದೇ ಒದ್ದಾಡುತ್ತಿರುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ಜೀವನದಲ್ಲಿ ಮನಃಶಾಂತಿ ಹೆಚ್ಚಾಗಬೇಕೆಂದರೆ ನಿಮ್ಮ ಮಧ್ಯದ ಬೆರಳಿಗೆ ವಜ್ರದ ಉಂಗುರವನ್ನು ಧರಿಸಬೇಕು. ವಜ್ರಗಳು ಆಂತರಿಕ ಶಾಂತಿಯನ್ನು ಹೆಚ್ಚಿಸಲು ಮತ್ತು ಜೀವನದಲ್ಲಿ ಶಾಂತಿಯನ್ನು ತಂದುಕೊಡುವ ಅಮೂಲ್ಯವಾದ ಹರಳುಗಳಾಗಿದೆ. ಅಷ್ಟೇ ಅಲ್ಲದೇ ಇದು ಮನುಷ್ಯನ ಆತಂಕವನ್ನು ಕೂಡ ಕಡಿಮೆ ಮಾಡುತ್ತದೆ.
ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಇರುತ್ತದೆ
ಸಮಸ್ಯೆಗಳು ಯಾರ ಜೀವನದಲ್ಲಿ ಇಲ್ಲ ಹೇಳಿ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ರೀತಿ ಸಮಸ್ಯೆಗಳು ಇದ್ದೇ ಇರುತ್ತದೆ. ಮಧ್ಯದ ಬೆರಳಿಗೆ ವಜ್ರವನ್ನು ಧರಿಸುವುದರಿಂದ ಜೀವನದಲ್ಲಿ ಎದುರಾಗುವ ವಿವಿಧ ಸಮಸ್ಯೆಗಳನ್ನು ಸಲೀಸಾಗಿ ನಿಭಾಯಿಸಲು ಸಹಾಯ ಮಾಡುತ್ತಂತೆ. ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಲು ನಮ್ಮಲ್ಲಿ ಪ್ರಬುದ್ಧತೆಯನ್ನು ಹೆಚ್ಚು ಮಾಡಲು ಸಹಾಯ ಮಾಡುತ್ತಂತೆ.
ಸಮಾಜದಲ್ಲಿ ಗೌರವ, ಸ್ಥಾನಮಾನ ಹೆಚ್ಚಾಗುತ್ತದೆ
ವಜ್ರದ ಉಂಗುರವನ್ನು ಮಧ್ಯದ ಬೆರಳಿಗೆ ಧರಿಸೋದ್ರಿಂದ ಸಮಾಜದಲ್ಲಿ ನಮ್ಮ ಗೌರವ ಹಾಗೂ ಸ್ಥಾನಮಾನ ಹೆಚ್ಚಾಗುತ್ತದೆ. ಕೆಲವೊಂದು ಸಲ ಎಷ್ಟೇ ದುಡ್ಡಿದ್ದರೂ ಕೂಡ ನಮಗೆ ಸಮಾಜದಲ್ಲಿ ಒಂದು ಗೌರವ ಅನ್ನೋದು ಇರೋದಿಲ್ಲ. ವಜ್ರದ ಉಂಗುರ ಧರಿಸೋದ್ರಿಂದ ಇದನ್ನು ನೀವು ಪಡೆದುಕೊಳ್ಳಬಹುದು.
ಬಲಗೈಗೆ ವಜ್ರದ ಉಂಗುರ ಧರಿಸೋದ್ರಿಂದ ಏನು ಲಾಭ?
ತಮ್ಮ ಜಾತಕದಲ್ಲಿ ಗ್ರಹಗಳು ಸರಿಯಾದ ಸ್ಥಾನದಲ್ಲಿಲ್ಲದಿದ್ದಾಗ ವಜ್ರದ ಉಂಗುರಗಳನ್ನು ಧರಿಸಲು ಜ್ಯೋತಿಷಿಗಳು ಸೂಚಿಸುತ್ತಾರೆ. ನಿರ್ದಿಷ್ಟ ಗ್ರಹವು ದುರ್ಬಲವಾಗಿದ್ದಾಗ ಆ ವ್ಯಕ್ತಿಯು ಗ್ರಹದಿಂದ ಆಳಲ್ಪಡುವ ಅಂಶಗಳ ಮೂಲಕ ಬಳಲುತ್ತಾನೆ. ಆದ್ದರಿಂದ, ವಜ್ರಗಳನ್ನು ಧರಿಸೋದ್ರಿಂದ ಅದು ನಕಾರತ್ಮಕ ಶಕ್ತಿಗಳನ್ನು ದೂರ ಮಾಡುತ್ತಂತೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬಲಗೈಯನ್ನು ಆದರ್ಶ ಕೈ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದನ್ನು ಏನನ್ನಾದರೂ ನೀಡಲು ಬಳಸಲಾಗುತ್ತದೆ. ಮತ್ತು ಎಡಗೈಗಿಂತ ಭಿನ್ನವಾಗಿ ಮತ್ತು ಸಕ್ರಿಯವಾಗಿರುತ್ತದೆ. ವಜ್ರದ ಉಂಗುರಗಳನ್ನು ಬಲಗೈಯ ಮಧ್ಯದ ಬೆರಳಿನಲ್ಲಿ ಧರಿಸಿದಾಗ ಉತ್ತಮ ಫಲಿತಾಂಶ ದೊರೆಯುತ್ತದೆ.
ಗಂಡಾಗಲಿ ಅಥವಾ ಹೆಣ್ಣಾಗಲಿ ಯಾರು ಬೇಕಾದರೂ ಬಲಗೈನ ಮಧ್ಯದ ಬೆರಳಿಲ್ಲಿ ವಜ್ರದ ಉಂಗುರವನ್ನು ಧರಿಸಬಹುದು. ಇದರಿಂದ ನಿಮ್ಮ ಜೀವನದಲ್ಲಿ ಉತ್ತಮ ಫಲಿತಾಂಶ ನಿರೀಕ್ಷೇ ಮಾಡಬಹುದು.



Click it and Unblock the Notifications












