Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುವುದಕ್ಕೆ ಮಾದರಿ ನಟ ಮಾದವನ್!
ನಟ ಆರ್. ಮಾದವನ್ ಭಾರತದ ಖ್ಯಾತ ನಟರಲ್ಲೊಬ್ಬರು. ಇವರು ದಕ್ಷಿಣ ಭಾರತದವರಾದ್ರೂ ಕೂಡ ಬಾಲಿವುಡ್ ನಲ್ಲೂ ಕೂಡ ಅನೇಕ ಸಿನಿಮಾಗಳಲ್ಲಿ ನಟಿಸಿ ಮಿಂಚಿದ್ದಾರೆ. ಈ ವಯಸ್ಸಿನಲ್ಲೂ ಕೂಡ ಮಾದವನ್ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಅವರ ಸಿನಿಮಾ ರಿಲೀಸ್ ಆದ್ರೆ ಸಾಕು ಥಿಯೇಟರ್ ಮುಂದೆ ಜನ ಮುಗಿ ಬೀಳ್ತಾರೆ. ಇನ್ನೂ ಮಾದವನ್ ಗೆ ಒರ್ವ ಮಗನಿದ್ದಾನೆ. ಅವರ ಹೆಸರು ವೇದಾಂತ್ ಮಾದವನ್. ಸಾಮಾನ್ಯವಾಗಿ ಸ್ಟಾರ್ ಕಿಡ್ ಅಂದ್ಮೇಲೆ ಭವಿಷ್ಯದಲ್ಲಿ ಅವರೂ ಕೂಡ ಒರ್ವ ನಟನಾಗಬಹುದು ಅಂತ ಎಲ್ಲರೂ ಅಂದುಕೊಂಡಿದ್ರು.
ಆದ್ರೆ ಮಾದವನ್ ತಮ್ಮ ಮಗನನ್ನು ಸಿನಿಮಾ ಕ್ಷೇತ್ರಕ್ಕೆ ಕರೆ ತರುವ ಬದಲು ಮಗನನ್ನು ಒರ್ವ ಉತ್ತಮ ಕ್ರೀಡಾಪಟಿವಾಗಿ ಬೆಳೆಸೋದಕ್ಕೆ ನಿರ್ಧರಿಸಿದ್ದಾರೆ. ಅಷ್ಟಕ್ಕು ಮಾದವನ್ ಮಗ ವೇದಾಂತ್ ಮಾದವನ್ ಮಾಡಿರೋ ಸಾಧನೆ ಏನು? ಸ್ಟಾರ್ ಕಿಡ್ ಗಳಿಗೆ ಹೋಲಿಸಿದ್ರೆ ಇವರು ಹೇಗೆ ಭಿನ್ನ? ವೇದಾಂತ್ ಮಾದವನ್ ನಲ್ಲಿ ಇರುವ ಸಂಸ್ಕಾರ ಎಂತಹದ್ದು ಅನ್ನೋದನ್ನು ತಿಳಿಯೋಣ.

ಕ್ರೀಡಾ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ವೇದಾಂತ್!
ಅಪ್ಪ-ಅಮ್ಮನ ಹೆಸರಿನಲ್ಲಿ ಮಿಂಚುವ ಅದೆಷ್ಟೋ ಸ್ಟಾರ್ ಕಿಡ್ ಗಳನ್ನು ನಾವು ನೋಡಿರ್ತೀವಿ. ಅಷ್ಟೇ ಅಲ್ಲ, ಅವರು ಪೋಷಕರ ಹೆಸರು ಇಡ್ಕೊಂಡು ಸಿನಿಮಾ ರಂಗಕ್ಕೆ ಎಂಟ್ರಿ ಕೊಡ್ತಾರೆ. ಕೆಲವೊಂದು ಸಲ ಕಾಂಟ್ರವರ್ಸಿಗಳನ್ನು ಮಾಡ್ಕೊಳ್ತಾರೆ. ಆದ್ರೆ ವೇದಾಂತ್ ಇವರೆಲ್ಲರಿಗಿಂತ ಡಿಫ್ರೆಂಟ್. ಯಾಕಂದ್ರೆ ಮನಸ್ಸು ಮಾಡಿದ್ರೆ ಮಾದವನ್ ತಮ್ಮ ಮಗನನ್ನು ಒರ್ವ ಸ್ಟಾರ್ ಆಗಿ ಸಿನಿ ಇಂಡಸ್ಟ್ರಿಯಲ್ಲಿ ಬೆಳೆಸ್ಬಹುದಿತ್ತು.
ಆದ್ರೆ ಮಾದವನ್ ತಮ್ಮ ಮಗನನ್ನು ಒರ್ವ ಅತ್ಯತ್ತಮ ಈಜುಗಾರನಾಗೋದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ತಂದೆ-ತಾಯಿಯ ಪ್ರೋತ್ಸಾಹದಿಂದಾಗಿ ವೇದಾಂತ್ ತಮ್ಮ 17 ನೇ ವಯಸ್ಸಿನಲ್ಲಿ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ದೇಶ ಮಾತ್ರವಲ್ಲದೇ ವಿಶ್ವ ಮಟ್ಟದ ಈಜು ಸ್ಪರ್ಧೆಯಲ್ಲಿ ಭಾಗವಹಿಸಿರುವ ವೇದಾಂತ್ ಅನೇಕ ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಸುರ ಸುಂದರಾಂಗ ವೇದಾಂತ್ ಮಾದವನ್!
ವೇದಾಂತ್ ಮಾದವನ್ ನೋಡೋದಕ್ಕೂ ತುಂಬಾನೇ ಸುಂದರವಾಗಿದ್ದಾರೆ. ಹೈಟ್ ಹಾಗೂ ಪರ್ಸನಾಲಿಟಿ ಕೂಡ ಚೆನ್ನಾಗಿದೆ. ಇಷ್ಟಿದ್ರೂ ಕೂಡ ಮಗನನ್ನು ಒರ್ವ ಉತ್ತಮ ಕ್ರೀಡಾಪಟುವಾಗಿ ಬೆಳೆಸೋದಕ್ಕೆ ಹೊರಟಿರುವ ಮಾದವನ್ ದಂಪತಿಗಳಿಗೆ ಹ್ಯಾಟ್ಸ್ ಆಫ್ ಹೇಳಲೇಬೇಕು. ಮಗನನ್ನು ಸಿನಿ ರಂಗಕ್ಕೆ ತರೋದು ಮಾದವನ್ ದೊಡ್ಡ ವಿಚಾರವೇನಲ್ಲ. ಆದ್ರೆ ವೇದಾಂತ್ ನಲ್ಲಿ ಕ್ರೀಡಾ ಸ್ಫೂರ್ತಿ ತುಂಬಿ, ಮಗ ಈಜು ಸ್ಪರ್ಧೆಯಲ್ಲಿ ಏನಾದ್ರು ಸಾಧನೆ ಮಾಡುತ್ತಾನೆ ಅನ್ನೋ ವಿಶ್ವಾಸ ಇಟ್ಟಿದ್ದಾರೆ ಮಾದವನ್ ದಂಪತಿ.
ಉತ್ತಮ ಸಂಸ್ಕಾರದೊಂದಿಗೆ ಬೆಳೆದ ವೇದಾಂತ್ ಮಾದವನ್!
ವೇದಾಂತ್ ಮಾದವನ್ ಶಿಸ್ತು ಹಾಗೂ ಸಂಸ್ಕಾರವಂತ ಹುಡುಗ. ಮನೆಯಲ್ಲಿ ಶ್ರೀಮಂತಿಕೆ ಇದ್ದರೆ ಮಕ್ಕಳು ಯಾವ ರೀತಿ ದುಡ್ಡು ಖರ್ಚು ಮಾಡಬಹುದು ಅಂತ ಅಲೋಚಿಸುತ್ತಾರೆ. ಆದರೆ ವೇದಾಂತ್ ಮಾದವನ್ ಚಿಕ್ಕವಯಸ್ಸಿನಿಂದಾನೂ ಈಜಿನ ಕಡೆಗೆ ಹೆಚ್ಚು ಫೋಕಸ್ ಮಾಡ್ತಿದ್ರಂತೆ. ಈಗಲೂ ಕೂಡ ಅವರು ತಮ್ಮ ಸಮಯವನ್ನು ಈಜು ಪ್ರಾಕ್ಟೀಸ್ ಹಾಗೂ ಜಿಮ್ ನಲ್ಲಿ ಕಳೆಯುತ್ತಾರೆ. ಇತ್ತೀಚಿಗಷ್ಟೇ ಅವರು ದುಬೈನ ಮರಳುಗಾಡಿನಲ್ಲಿ ಓಡುತ್ತಿದ್ದಂತಹ ವಿಡಿಯೋ ಕೂಡ ವೈರಲ್ ಆಗಿತ್ತು.
ಈಜುಗಾರನಿಗೆ ಫಿಟ್ನೆಸ್ ಅನ್ನೋದು ತುಂಬಾನೇ ಮುಖ್ಯವಾಗುತ್ತೆ. ಹೀಗಾಗಿ ಅವರು ಹೆಚ್ಚಿನ ಸಮಯ ಫಿಟ್ ನೆಸ್ ಆಕ್ಟಿವಿಟಿಗಳನ್ನು ಮಾಡುತ್ತಿರುತ್ತಾರೆ. ಇನ್ನೂ ಮನೆಯಲ್ಲಿ ಪೂಜೆ-ಪುನಸ್ಕಾರಗಳನ್ನು ಕೂಡ ಮಾಡ್ತಾರೆ.
ಮಕ್ಕಳು ಸಾಧನೆ ಮಾಡ್ಬೇಕಂದ್ರೆ ಅಲ್ಲಿ ಪೋಷಕರ ಶ್ರಮ ಇದ್ದೇ ಇರುತ್ತದೆ. ವೇದಾಂತ್ ಈ ಸಾಧನೆಯ ಹಿಂದೆ ಅಪ್ಪ ಮಾದವನ್ ಜೊತೆಗೆ ಅಮ್ಮ ಸರಿತಾ ಅವರು ತುಂಬಾನೇ ಕಷ್ಟ ಪಟ್ಟಿದ್ದಾರೆ. ಅದ್ರಲ್ಲೂ ಮಾದವನ್ ಪತ್ನಿ ಸರಿತಾ ಮಗನ ಜೊತೆಯಲ್ಲಿಯೇ ಇದ್ದು ಆತನ ಬೇಕು-ಬೇಡಗಳನ್ನು ವಿಚಾರಿಸಿಕೊಂಡು, ಅವನ ಹೆಜ್ಜೆಗೆ ಹೆಜ್ಜೆಯಾಗಿದ್ದಾರೆ ಅಂದ್ರೆ ತಪ್ಪಾಗೋದಿಲ್ಲ.
ಮಗನ ಬಗ್ಗೆ ಹೆಮ್ಮ ಪಡೋ ಮಾದವನ್!
ಮಗ ಅಷ್ಟೊಂದು ದೊಡ್ಡ ಸಾಧನೆ ಮಾಡಿದಾಗ ಪೋಷಕರಿಗೆ ಖಂಡಿತ ಹೆಮ್ಮೆ ಇದ್ದೇ ಇರುತ್ತದೆ. ಮಾದವನ್ ತಮ್ಮ ಮಗನ ಸಾಧನೆಯ ಬಗ್ಗೆ ಆಗಾಗ್ಗೆ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ವೇದಾಂತ್ ಯಾವಾಗಲೂ ಒಳ್ಳೆ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ ಹೊರತು ಕೆಟ್ಟ ವಿಚಾರಕ್ಕೆ ಟ್ರೋಲ್ ಆಗಿಲ್ಲ.
ಮಕ್ಕಳಿಗೆ ನಾವು ಮನೆಯಲ್ಲಿ ಯಾವ ರೀತಿ ಸಂಸ್ಕಾರ ಕೊಟ್ಟು ಬೆಳೆಸುತ್ತೇವೆ ಅನ್ನೋದ್ರ ಮೇಲೆ ಮಕ್ಕಳ ಭವಿಷ್ಯ ನಿರ್ಧಾರವಾಗಿರುತ್ತೆ. ಅದಕ್ಕೆ ಬೆಸ್ಟ್ ಉದಾಹರಣೆ ಅಂದ್ರೆ ವೇದಾಂತ್ ಮಾದವನ್. ಇಷ್ಟು ದಿನ ಅಪ್ಪನ ಹೆಸರಿನಲ್ಲಿ ಮೆರೆಯುತ್ತಿದ್ದ ಸ್ಟಾರ್ ಕಿಡ್ ಗಳನ್ನು ನಾವು ನೋಡಿದ್ವಿ. ಆದ್ರೆ ವೇದಾಂತ್ ತನ್ನ ಸಾಧನೆಯಿಂದ ಅಪ್ಪನ ಹೆಸರನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾನೆ.



Click it and Unblock the Notifications
