Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಮಕ್ಕಳು ಮೂಲ ನಕ್ಷತ್ರದಲ್ಲಿ ಜನಿಸಿದರೆ ಅಶುಭವಲ್ಲ!
ನಮ್ಮಲ್ಲಿ ಒಂದು ನಂಬಿಕೆಯಿದೆ ಮಕ್ಕಳು ಮೂಲ ನಕ್ಷತ್ರದಲ್ಲಿ ಹುಟ್ಟಿದರೆ ಆ ಮನೆಗೆ ಒಳ್ಳೆಯದಾಗೋದಿಲ್ಲ ಅಂತ ಹೇಳಲಾಗುತ್ತದೆ. ಜೊತೆಗೆ ಆ ಮಕ್ಕಳನ್ನು ತಾತ್ಸಾರ ಮನೋಭಾವದಿಂದ ಕಾಣಲಾಗುತ್ತದೆ. ಸಾಮಾನ್ಯವಾಗಿ ಮೂಲದಲ್ಲಿ ಜನಿಸಿದ ಮಗುವನ್ನು ತಂದೆ ಕುಟುಂಬ ಅಥವಾ ಸ್ವಯಂಗೆ ಭಾರವೆಂದು ಪರಿಗಣಿಸಲಾಗುತ್ತದೆ. ಆದರೆ ನಿಮಗೊತ್ತಾ ಮೂಲ ನಕ್ಷತ್ರದಲ್ಲಿ ಹುಟ್ಟಿದವರು ಯಾವಾಗಲೂ ಅಶುಭವಲ್ಲವಂತೆ.

ಹೌದು, ಬರೀ ನಕ್ಷತ್ರ ನೋಡಿ ಮಕ್ಕಳು ಶುಭನಾ ಅಥವಾ ಅಶುಭನಾ? ಅಂತ ನಾವು ನಿರ್ಧರಿಸೋದಕ್ಕೆ ಸಾಧ್ಯವಿಲ್ಲ. ಮಕ್ಕಳು ಯಾವ ಪಾದದಲ್ಲಿ ಹುಟ್ಟುತ್ತಾರೆ ಅನ್ನೋದು ಕೂಡ ಇಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಇನ್ನೂ ಮಗುವಿನ ಜನ್ಮ ಕುಂಡಲಿಯಲ್ಲಿರುವ ಗ್ರಹಗಳ ಸ್ಥಾನವು ಕೂಡ ಅವರ ಸುಖ ಹಾಗೂ ದುಃಖಗಳಿಗೆ ಕಾರಣವಾಗುತ್ತದೆ.
ಮೂಲ ನಕ್ಷತ್ರದಲ್ಲಿ ಜನಿಸಿದವರಿಗೆ ಕೋಪ ಹೆಚ್ಚು!
ಜ್ಯೋತಿಷ್ಯದ ಪ್ರಕಾರ ಮೂಲ ನಕ್ಷತ್ರದಲ್ಲಿ ಜನಿಸಿದ ಗಂಡು ಮಕ್ಕಳು ಅತಿಯಾಗಿ ಕೋಪ ಮಾಡಿಕೊಳ್ಳುತ್ತಾರಂತೆ. ಆದರೆ ಮೂಲ ನಕ್ಷತ್ರದಲ್ಲಿ ಜನಿಸಿದ ಎಲ್ಲಾ ಮಕ್ಕಳ ಗುಣ ಒಂದೇ ರೀತಿಯಾಗಿ ಇರೋದಿಲ್ಲ. ನಕ್ಷತ್ರಪುಂಜಗಳ ಹಂತಗಳ ಅನುಗುಣವಾಗಿ ಅವರ ಸ್ವಭಾವದಲ್ಲಿ ನಾವು ವ್ಯತ್ಯಾಸವನ್ನು ಕಾಣಬಹುದು. ಅಷ್ಟಕ್ಕು ಈ ಕೆಳಗಿನ ನಕ್ಷತ್ರದಲ್ಲಿ ಹುಟ್ಟಿದರೆ ಯಾವ ರೀತಿಯ ಫಲ ಇರುತ್ತದೆ ಅನ್ನೋದನ್ನು ತಿಳಿಯೋಣ.
ಅಶ್ವಿನಿ ನಕ್ಷತ್ರ
ಅಶ್ವಿನಿ ನಕ್ಷತ್ರದ ಮೊದಲ ಹಂತದಲ್ಲಿ ಮಗು ಜನಿಸಿದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತಂದೆ ಭಯ ಮತ್ತು ದುಃಖವನ್ನು ಎದುರಿಸಬಹುದು. ಹಾಗೆಯೇ ಅಶ್ವಿನಿ ನಕ್ಷತ್ರದ ಎರಡನೇ ಘಟ್ಟದಲ್ಲಿ ಮಗು ಜನಿಸಿದರೆ ಸುಖ, ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಮೂರನೇ ಹಂತದಲ್ಲಿ ಜನಿಸಿದರೆ ಉನ್ನತ ಸ್ಥಾನವನ್ನು ಪಡೆಯುತ್ತಾನೆ. ಮತ್ತು ಅಶ್ವಿನಿ ನಾಲ್ಕನೇ ಹಂತದಲ್ಲಿ ಜನಿಸಿದರೆ ಮಗುವಿಗೆ ಜೀವನದಲ್ಲಿ ಗೌರವ ಸಿಗುತ್ತದೆ.
ಆಶ್ಲೇಷಾ ನಕ್ಷತ್ರ
ಆಶ್ಲೇಷಾ ನಕ್ಷತ್ರದ ಮೊದಲ ಘಟ್ಟದಲ್ಲಿ ಹುಟ್ಟಿದ ಮಗು ಸುಖ ಶಾಂತಿ ಪಡೆಯುತ್ತದೆ. ಆಶ್ಲೇಷಾ ನಕ್ಷತ್ರದ ಎರಡನೇ ಘಟ್ಟದಲ್ಲಿ ಜನಿಸಿದರೆ ಸಂಪತ್ತು ನಾಶವಾಗುತ್ತದೆ. ಮೂರನೇ ಘಟ್ಟದಲ್ಲಿ ಹುಟ್ಟಿದರೆ ತಾಯಿಗೆ ಸಂಕಟ ಹೆಚ್ಚಾಗುತ್ತದೆ. ಆಶ್ಲೇಷಾ ನಕ್ಷತ್ರದ ನಾಲ್ಕನೇ ಹಂತದಲ್ಲಿ ಮಗು ಜನಿಸಿದರೆ ತಂದೆ ತೊಂದರೆಗೆ ಸಿಲುಕುವ ಸಾಧ್ಯತೆಯಿದೆ.
ಮಾಘ ನಕ್ಷತ್ರ
ಮಾಘ ನಕ್ಷತ್ರದ ಮೊದಲ ಘಟ್ಟದಲ್ಲಿ ಮಗು ಜನಿಸಿದಾಗ ತಾಯಿಗೆ ನೋವಾಗುತ್ತದೆ. ಎರಡನೇ ಹಂತದಲ್ಲಿ ಹುಟ್ಟಿದಾಗ ತಂದೆಗೆ ಕಷ್ಟವಾಗುತ್ತದೆ. ಮಾಘ ನಕ್ಷತ್ರದ ಮೂರನೇ ಘಟ್ಟದಲ್ಲಿ ಮಗು ಜನಿಸಿದ್ರೆ ಮಗು ಸಂತೋಷವಾಗಿರುತ್ತದೆ. ಮಗು ನಾಲ್ಕನೇ ಘಟ್ಟದಲ್ಲಿ ಜನಿಸಿದ್ರೆ ಮಗುವಿಗೆ ಜ್ಞಾನ ಮತ್ತು ಸಂಪತ್ತು ಸಿಗುತ್ತದೆ.
ಜ್ಯೇಷ್ಠ ನಕ್ಷತ್ರ
ಜ್ಯೇಷ್ಠಾ ನಕ್ಷತ್ರದ ಮೊದಲ ಘಟ್ಟದಲ್ಲಿ ಮಗು ಜನಿಸಿದರೆ ಅಣ್ಣನಿಗೆ ತೊಂದರೆ ಉಂಟಾಗುತ್ತದೆ. ಎರಡನೇ ಘಟ್ಟದಲ್ಲಿ ಜನಿಸಿದರೆ ಕಿರಿಯ ಸಹೋದರನಿಗೆ ತೊಂದರೆ. ಮೂರನೇ ಘಟ್ಟದಲ್ಲಿ ಮಗು ಜನಿಸಿದ್ರೆ ತಾಯಿಗೆ ಮತ್ತು ಮಗುವಿಗೆ ತೊಂದರೆಯಾಗುತ್ತದೆ. ಜ್ಯೇಷ್ಠ ನಕ್ಷತ್ರದ ನಾಲ್ಕನೇ ಹಂತದಲ್ಲಿ ಜನಿಸಿದರೆ ಆಗ ಮಗುವಿಗೆ ಹಾನಿಯಾಗುತ್ತದೆ
ಮಾತೃ ನಕ್ಷತ್ರ
ಮಗುವು ಮೂಲ ನಕ್ಷತ್ರದ ಮೊದಲ ಭಾಗದಲ್ಲಿ ಜನಿಸಿದರೆ ತಂದೆ ನೋವು ಮತ್ತು ನಷ್ಟವನ್ನು ಅನುಭವಿಸುತ್ತಾರೆ. ಎರಡನೇ ಹಂತದಲ್ಲಿ ಮಗು ಜನಿಸಿದರೆ ತಾಯಿ ನಷ್ಟ ಮತ್ತು ಸಂಕಟವನ್ನು ಅನುಭವಿಸುತ್ತಾರೆ. ಮೂರನೇ ಹಂತದಲ್ಲಿ ಮಗು ಜನಿಸಿದ್ರೆ ಅದು ಸಂಪತ್ತು ಮತ್ತು ಶಾಂತಿಯ ನಷ್ಟವನ್ನು ಅನುಭವಿಸುತ್ತದೆ.
ರೇವತಿ ನಕ್ಷತ್ರ
ಮಗುವು ರೇವತಿ ನಕ್ಷತ್ರದ ಮೊದಲ ಭಾಗದಲ್ಲಿ ಜನಿಸಿದ್ರೆ ರಾಜ್ಯ ಗೌರವ, ಸಂತೋಷ ದೊರೆಯುತ್ತದೆ. ಎರಡನೇ ಹಂತದಲ್ಲಿ ಜನಿಸಿದ್ರೆ ಮಗು ಉನ್ನತ ಸ್ಥಾನವನ್ನು ಪಡೆಯುತ್ತಾನೆ. ಅದೇ ಮೂರನೇ ಹಂತದಲ್ಲಿ ಜನಿಸಿದ್ರೆ ವ್ಯಕ್ತಿಯು ಸಂಪತ್ತು, ಸಂತೋಷ ಪಡೆಯುತ್ತಾನೆ. ಮತ್ತು ರೇವತಿ ನಕ್ಷತ್ರದ ನಾಲ್ಕನೇ ಹಂತದಲ್ಲಿ ಮಗುವಿನ ಜನನವಾದರೆ ಮಗು ನೋವು ಮತ್ತು ರೋಗಗಳನ್ನು ಎದುರಿಸಬೇಕಾಗುತ್ತದೆ.



Click it and Unblock the Notifications











