Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Ration Card: ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯಾ? ಪರಿಶೀಲಿಸೋದು ಹೇಗೆ? ಇಲ್ಲಿದೆ ಮಾಹಿತಿ!
ಪಡಿತರ ಚೀಟಿ ಅಥವಾ ರೇಷನ್ ಕಾರ್ಡ್ ಈಗ ಹಲವು ರೀತಿಯ ಉಪಯೋಗಕ್ಕೆ ಕಾರಣವಾಗುತ್ತದೆ. ಅದ್ರಲ್ಲೂ ಸರ್ಕಾರಿ ಕಚೇರಿ ದಾಖಲೆಗಳು, ಹಲವು ರೀತಿಯ ದಾಖಲೆಗಳ ಪಡೆಯಲು ಕೂಡ ಈ ರೇಷನ್ ಕಾರ್ಡ್ ನೀಡಬೇಕಾಗುತ್ತದೆ. ಅದ್ರಲ್ಲೂ ರೇಷನ್ ಕಾರ್ಡ್ ಬಳಕೆದಾರರಿಗೆ ಈಗ ರಾಜ್ಯದಲ್ಲಿ ಪಡಿತರ ಚೀಟಿ ರದ್ದಾಗುವ ಕುರಿತ ಸುದ್ದಿಗಳು ಹರಿದಾಡುತ್ತಿದೆ. ಇದರಿಂದ ಹಲವರಲ್ಲಿ ಆತಂಕ ಮನೆ ಮಾಡಿದೆ.
ರೇಷನ್ ಕಾರ್ಡ್ ತಿದ್ದುಪಡಿಗೆ ಮತ್ತೆ ಅವಕಾಶ ನೀಡಲಾಗಿದೆ. ಹಾಗೆ ಇದರ ಜೊತೆಗೆ ರಾಜ್ಯದಲ್ಲಿ ಇದೀಗ ನಕಲಿ ಬಿಪಿಎಲ್ ಕಾರ್ಡ್‌ದಾರರ ಪತ್ತೆ ಕಾರ್ಯವನ್ನು ಆಹಾರ ಇಲಾಖೆ ಮುಂದಾಗಿದೆ. ಹೀಗಾಗಿ ಪ್ರತಿ ತಿಂಗಳು ಕೂಡ ಸಾವಿರಾರು ಕಾರ್ಡ್‌ಗಳು ರದ್ದಾಗುತ್ತವೆ. ಈಗಾಗಲೇ ಲಕ್ಷಾಂತರ ಕಾರ್ಡ್‌ಗಳು ರದ್ದಾಗಿವೆ. ಇತ್ತೀಚಿಗೆ ಬಿಪಿಎಲ್ ಕಾರ್ಡ್ ಹೊಂದಿರುವ ಮಂದಿಯ ಅರ್ಹತೆಯನ್ನು ಮರುಪರಿಶೀಲನೆಗೆ ಒಳಪಡಿಸಿ ಮತ್ತೆ ರದ್ದು ಮಾಡುವ ಕಾರ್ಯಕ್ಕೆ ಮುಂದಾಗಲಾಗಿದೆ.

ಹಾಗೆ ಒಂದೇ ಮನೆಯಲ್ಲಿ ಎರಡು ಕಾರ್ಡ್‌ಗಳು ಸದಸ್ಯರ ಹೆಸರು ಬದಲಾಯಿಸಿ ಕಾರ್ಡ್ ಮಾಡಿಕೊಳ್ಳುವುದು ಸಹ ನೋಡಬಹುದು. ಇದೆಲ್ಲಾ ಕಾರ್ಡ್‌ಗಳು ಹಾಗೆ ಸಕ್ರೀಯವಾಗಿಲ್ಲದ ಕಾರ್ಡ್‌ಗಳು ಅರ್ಹತೆಯ ನಿಯಮದಿಂದ ಹೊರಗುಳಿಯುವ ಕಾರ್ಡ್‌ಗಳು ಕೂಡ ರದ್ದಾಗುವ ನಿರೀಕ್ಷೆಯೂ ಇದೆ. ಸದ್ಯ ಈಗ ಯಾವೆಲ್ಲಾ ಕಾರ್ಡ್‌ಗಳು ರದ್ದಾಗುತ್ತವೆ ಯಾವೆಲ್ಲಾ ನಿಯಮಗಳು ಬದಲಾವಣೆ ಆಗಲಿದೆ ಎಂಬುದು ಬಹಳ ಕುತೂಹಲ ಮೂಡಿಸುತ್ತಿದೆ.
ಹಾಗೆ ತಿದ್ದುಪಡಿ ಕಾರ್ಯಗಳು ನಡೆಯುತ್ತಿದೆ. ನೀವು ಕೂಡ ಬೆಂಗಳೂರು ಒನ್, ಗ್ರಾಮ ಒನ್, ಸೈಬರ್ ಸೆಂಟರ್‌ಗಳಲ್ಲಿ ಹೊಸ ಕಾರ್ಡ್ ಅಥವಾ ಹೆಸರು ಸೇರ್ಪಡೆಗೆ ಎಪಿಎಲ್ ಕಾರ್ಡ್ ಪಡೆಯುವವರು ಸಹ ಆನ್‌ಲೈನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಹೊಸ ಸದಸ್ಯರ ಹೆಸರು ಸೆರ್ಪಡೆ, ವಿಳಾಸ ಬದಲಾವಣೆ, ಫೋಟೋ ಬದಲಾವಣೆಯಂತಹ ಕೆಲಸ ಮಾಡಬಹುದು.
ಆದ್ರೆ ಈಗ ಜನರಲ್ಲಿ ತಮ್ಮ ಪಡಿತರ ಚೀಟಿ ಕೂಡ ರದ್ದಾಗುತ್ತಿದೆಯೇ? ಪರಿಶೀಲನೆ ಮಾಡೋದು ಹೇಗೆ? ಎಂಬ ಗೊಂದಲ ಇದ್ದೇ ಇದೆ. ಹಾಗಾದ್ರೆ ರೇಷನ್ ಕಾರ್ಡ್ ಸ್ಥಿತಿಯ ಕುರಿತು ಪರಿಶೀಲಿಸುವುದು ಹೇಗೆ ಅನ್ನೋದನ್ನು ನಾವಿಲ್ಲಿ ತಿಳಿದುಕೊಳ್ಳೋಣ.
ಆಹಾರ ಇಲಾಖೆಯು ರದ್ದಾದ ರೇಷನ್ ಕಾರ್ಡ್ ಮಾಹಿತಿಯನ್ನು ಹಂಚಿಕೊಳ್ಳುತ್ತಲೇ ಇರುತ್ತದೆ. ಪ್ರತಿ ತಿಂಗಳಲ್ಲಿ ಯಾವ ನಂಬರ್‌ನ ಕಾರ್ಡ್ ಅನ್ನು ರದ್ದು ಮಾಡಲಾಗಿದೆ ಹಾಗೆ ಈ ರೀತಿ ರದ್ದು ಮಾಡಿದ್ದಕ್ಕೆ ಕಾರಣವೇನು ಎಂಬುದನ್ನು ವಿವರಿಸುತ್ತದೆ. ಇದಕ್ಕಾಗಿ ನೀವು https://ahara.kar.nic.in/Home/EServices ಲಿಂಕ್ ಮೇಲೆ ಕ್ಲಿಕ್ ಮಾಡಿ ಪರಿಶೀಲನೆ ನಡೆಸಬಹುದು.
ಈ ಲಿಂಕ್ ಕ್ಲಿಕ್ ಮಾಡಿದ ಬಳಿಕ ಇದು ಅಧಿಕೃತ ವೆಬ್‌ಸೈಟ್ ಆಗಿರಲಿದೆ. ನಂತರ ಈ ಪಡಿತರ ಚೀಟಿ ಎಂಬ ಆಯ್ಕೆಯನ್ನು ಪ್ರೆಸ್ ಮಾಡಿ. ಅನಂತರ ರದ್ದು ಮಾಡಲಾದ ಅಥವಾ ತಡೆ ಹಿಡಿಯಲಾದ ಪಡಿತರ ಚೀಟಿಯ ಪಟ್ಟಿ ಎಂಬ ಆಯ್ಕೆಯನ್ನು ಮಾಡಿಕೊಳ್ಳಿ. ಅದರಲ್ಲಿ ಹಲವು ಆಯ್ಕೆಗಳು ನಿಮಗೆ ಕಾಣಲಿವೆ. ಮುಖ್ಯವಾಗಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿ ನಂತರ ತಾಲೂಕು ಕೂಡ ಆಯ್ಕೆ ಮಾಡಿ ಹಾಗೆ ಯಾವ ತಿಂಗಳಿನಲ್ಲಿ ರದ್ದು ಮಾಡಲಾದ ಮಾಹಿತಿ ಬೇಕು ಎಂಬುದನ್ನು ಆಯ್ಕೆ ಮಾಡಿ. ಅನಂತರ ಕೆಳಗೆ ನೀಡಿರುವ ಕ್ಯಾಪ್ಚಾ ತುಂಬಿಕೊಂಡು ಗೋ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಈಗ ನಿಮ್ಮ ಮುಂದೆ ಆ ತಿಂಗಳಿನಲ್ಲಿ ರದ್ದು ಮಾಡಲಾಗಿರುವ ರೇಷನ್ ಕಾರ್ಡ್ ಮಾಹಿತಿ ಲಭ್ಯವಾಗುತ್ತದೆ. ಅದರಲ್ಲಿ ರೇಷನ್ ಕಾರ್ಡ್ ನಂಬರ್ ಹಾಗೆ ಯಜಮಾನರ ಹೆಸರು, ರದ್ದು ಮಾಡಲು ಕಾರಣವೇನು ಎಂಬುದನ್ನು ವಿವರಿಸಲಾಗಿರುತ್ತದೆ. ನಿಮಗೆ ಯಾವ ತಿಂಗಳಿನ ಮಾಹಿತಿ ಬೇಕೋ ಪಡೆಯಬಹುದು.



Click it and Unblock the Notifications
