Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್‌ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಅಂಬಾನಿ ಜಿಯೋಗೆ ಸರಿಯಾಗಿ ಗುನ್ನಾ ನೀಡಿದ್ದಾರೆ ರತನ್ ಟಾಟಾ, ಇಂಥ ಅಪ್ಪಟ ದೇಶ ಪ್ರೇಮಿ ನಮ್ಮೆಲ್ಲರ ಹೆಮ್ಮೆ
ಜಿಯೋ ಸಿಮ್ ಖರೀದಿಸಿ ನಿಮಗೆ ಫ್ರೀ ಇಂಟರ್‌ನೆಟ್ ನೀಡುತ್ತೇವೆ ಎಂದು ಅಂಬಾನಿ ಹೇಳಿದಾಗ ಯಾರೂ ಅದರ ಹಿಂದಿನ ಸಂಚು ಬಗ್ಗೆ ಯೋಚಿಸಲೇ ಇಲ್ಲ, ನಮಗೆ ಫ್ರೀ ಕಿವಿಗೆ ಬಿದ್ದರೆ ಸಾಕು ಮುಗಿ ಬೀಳುತ್ತೇವೆ.
ಈ ಜಗತ್ತಿನಲ್ಲಿ ಯಾರೂ ಏನನ್ನೂ ಫ್ರೀ ನೀಡುವುದಿಲ್ಲ ಎಂದು ಯೋಚಿಸುವುದೂ ಇಲ್ಲ, ಎಷ್ಟೇ ಬುದ್ಧಿವಂತರಾದರೂ ಈಗ ಫ್ರೀ ಇದೆಯೆಲ್ಲಾ ಅದರ ಸೌಲಭ್ಯ ಈಗ ಪಡೆಯುವ ಮುಂದೆ ನೋಡಿದರೆ ಆಯ್ತು ಎಂದು ಫ್ರೀ ಸಿಕ್ಕಿದ್ದನ್ನು ಖರೀದಿಸುತ್ತೇವೆ, ಹಾಗೆ ಸಿಕ್ಕಿರುವುದೇ ಜಿಯೋ ಸಿಮ್..

ನೋಡು ನೋಡುತ್ತಿದ್ದಂತೆ ಜಿಯೋ ಕ್ರಾಂತಿಯೇ ಉಂಟಾಯಿತು, ತಾನು ಬಯಸಿದಂತೆ ಏಕಸ್ವಾಮ್ಯ ಸಾಧಿಸುವಲ್ಲಿ ಯಶಸ್ವಿಯೂ ಆಯ್ತು, ಈಗ ಅದರ ಅಸಲಿ ಬಣ್ಣ ತೋರಿಸಲು ಶುರು ಮಾಡಿದೆ, ಇದರಿಂದ ಸಾಮಾನ್ಯರಿಗೆ ಆಗುವ ತೊಂದರೆ ಅರಿತ ರತನ್ ಟಾಟಾ ಜಿಯೋಗೆ ಸರಿಯಾಗಿಯೇ ಗುನ್ನಾ ನೀಡಿದ್ದಾರೆ... ಟಾಟಾ ಕಂಪನಿಯ ನಿರ್ಧಾರವನ್ನು ಜನರು ಎರಡು ಕೈಯಿಂದ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತಿದ್ದಾರೆ.
ಜಿಯೋ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಮಧ್ಯಮ ವರ್ಗದ ಜನತೆಗೆ ಒಂದು ಪರ್ಯಾಯ ದಾರಿ ಸಿಕ್ಕಿದೆ, ಈ ಮೂಲಕ ಜಿಯೋಗೆ ಇನ್ಮುಂದೆ ನೀವು ಆಡಿದ್ದೇ ಆಟ ನಡೆಯಲ್ಲ ಎಂಬ ಸೂಚನೆ ಈಗಾಗಲೇ ರವಾನೆಯಾಗಿದೆ.
ಫ್ರೀ ನೆಟ್ ನೀಡಿ ನಿಧಾನಕ್ಕೆ ಬೆಲೆ ಏರಿಸುತ್ತಾ ಹೋದ ಜಿಯೋ
ಜಿಯೋ ಬರುವ ಮೊದಲು, ಏರ್‌ಟೆಲ್ , ಬಿಎಸ್‌ಎನ್‌ಎಲ್ ಸೇರಿದಂತೆ ಅಂತರ್ಜಾಲ ಲೋಕದಲ್ಲಿ ಸದ್ದು ಮಾಡಿತ್ತು, ಅದರಲ್ಲಿಯೂ ಏರ್‌ಟೆಲ್ ಮುಂಚೂಣಿಯಲ್ಲಿತ್ತು, ಆದರೆ ಯಾವಾಗ ಜಿಯೋ ಮಾರುಕಟ್ಟೆಗೆ ಬಂತೋ ಬಹುತೇಕ ಕಂಪನಿಗಳು ಮಂಕಾಯ್ತು, ಅದರಲ್ಲಿಯೂ ಬಿಎಸ್‌ಎನ್‌ಎಲ್ ಅಂತೂ ಮಕಾಡೆ ಮಲಗಿ ಬಿಡ್ತು, ನೆಟ್ ಸ್ಪೀಡ್ ಇಲ್ಲ ಎಂಬ ದೂರು ಬೇರೆ, ಹೀಗಾಗಿ ಜಿಯೋಗೆ ತನ್ನ ಸಾಮ್ರಾಜ್ಯ ಸ್ಥಾಪಿಸುವುದೇನೂ ಅಷ್ಟೊಂದು ದೊಡ್ಡ ಕಷ್ಟವಾಗಲಿಲ್ಲ, ಎಲ್ಲರೂ ಜಿಯೋ ಸೂಪರ್ ಅಂದ್ರು, ಸ್ವಲ್ಪ ಬೆಲೆ ನಿಗದಿ ಮಾಡುವಾಗ ಮತ್ತೆ ಎಷ್ಟು ಕಾಲ ಫ್ರೀ ನೀಡುವುದಕ್ಕೆ ಸಾಧ್ಯ? ಎಂದು ಜಿಯೋವನ್ನು ಸಮರ್ಥಿಸಿಕೊಂಡಿದ್ದರು, ಆದರೆ ಜಿಯೋ ಮಾತ್ರ ನಿಧಾನಕ್ಕೆ ಬೆಲೆ ಏರಿಕೆ ಮಾಡುತ್ತಲೇ ಇತ್ತು 299 ರುಪಾಯಿ ರೀಚಾರ್ಜ್ 400 ರುಪಾಯಿ ಅಂತ ಮಾಡಿದರೂ ಆಗಲೂ ಸುಮ್ಮನಿದ್ದರು, ಈಗ ಮತ್ತಷ್ಟು ದುಬಾರಿ, ಮೊದಲು 3 ಜಿಬಿ ಡಾಟಾ ಕೊಡ್ತಾ ಇತ್ತು ಈಗ ಆ ದುಡ್ಡಿಗೆ ಕೊಡ್ತಾ ಇರುವುದು 2.5 ಜಿಬಿ ಡಾಟಾ, ಅಷ್ಟು ನೆಟ್ ಬೇಕಿದ್ದವರು ಇನ್ನಷ್ಟು ರೀಚಾರ್ಜ್ ಮಾಡಿಕೊಳ್ಳಬೇಕು, ನೋಡಿ ಹೇಗೆಲ್ಲಾ ಪಾಕೆಟ್‌ಗೆ ಬರೆ ಬೀಳುತ್ತಿದೆ.
ಸಡ್ಡು ಹೊಡೆಯಲು ಸಿದ್ದವಾಗಿದೆ ಬಿಎಸ್‌ಎನ್‌ಎಲ್
ಬಿಎಸ್‌ಎನ್‌ಎಲ್ ಇದೀಗ ಜಿಯೋಗೆ ಸಡ್ಡು ಹೊಡೆದಿದೆ, ಜಿಯೋದ 1 ಲಕ್ಷದ ಅಧಿಕ ಬಳಕೆದಾರರು ಒಂದೇ ದಿನದಲ್ಲಿ ತಮ್ಮ ಜಿಯೋ ಸಿಮ್ ಕಾರ್ಡ್ ಅನ್ನು ಬಿಎಸ್‌ಎನ್‌ಎಲ್ ಪೋರ್ಟ್ ಮಾಡಿಸಿ ಜಿಯೋಗೆ ನಡುಕ ಹುಟ್ಟಿಸಿದೆ. ಟಾಟಾ ಯಾವಾಗಲೂ ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟು ಇಟ್ಟುಕೊಂಡು ಕೆಲಸ ಮಾಡುತ್ತದೆ. ಇದೀಗ ಟಾಟಾ ಬಿಎಸ್‌ಎನ್‌ಎಲ್ ಜೊತೆಗೆ ಕೈ ಜೋಡಿಸಿ ಅದನ್ನು ಮೇಲಕ್ಕೆ ಎತ್ತಿಲು ನೋಡುತ್ತಿದೆ.
4ಜಿಯಿಂದ 5ಜಿಗೆ ಬದಲಾದರೆ ಬಿಎಸ್‌ಎನ್‌ಎಲ್ ಮುಂದೆ ಇತರ ಯಾವುದೇ ಕಂಪನಿ ನಿಲ್ಲುವುದು ಕಷ್ಟವಾಗುವುದು
ಬಿಎಸ್‌ಎನ್‌ಎಲ್ ಇನ್ನೂ 5 ಜಿಗೆ ಬಂದಿಲ್ಲ, ಆದರೆ ದೈತ್ಯ ಕಂಪನಿ ಟಾಟಾ ಇದರ ಜೊತೆಗೆ ಕೈ ಜೋಡಿಸಿದರೆ ಬೇಗನೆ 5ಜಿಗೆ ಅಪ್‌ಡೇಟ್ ಆಗಲಿದೆ, ರೀಚಾರ್ಜ್ ಪ್ಲ್ಯಾನ್‌ಗಳನ್ನು ಮಧ್ಯಮವರ್ಗದವರನ್ನು ಗಮನದಲ್ಲಿಟ್ಟುಕೊಂಡು ಇಟ್ಟರೆ ಬಿಎಸ್‌ಎನ್‌ಎಲ್ ಮತ್ತೊಂದು ತಾನು ಮೊದಲಿದ್ದ ಅಗ್ರಸ್ಥಾನ ಪಡೆದುಕೊಳ್ಳುವುದರಲ್ಲಿ ನೋ ಡೌಟ್... ಇದಕ್ಕೆ ಜನರು ಹೇಳುವುದು ವಿ ಲವ್ ಯೂ ರತನ್ ಟಾಟಾ, ನೀವು ಯಾವಾಗಲೂ ಗ್ರೇಟ್...



Click it and Unblock the Notifications
