Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ರಶ್ಮಿಕಾ-ವಿಜಯ್ ದೇವರಕೊಂಡ ಮದುವೆ ಫಿಕ್ಸ್: ಇಬ್ಬರ ಆಸ್ತಿ ಎಷ್ಟು ಕೋಟಿ ಮೀರಿದೆ ಗೊತ್ತಾ?
ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಮದುವೆ ಸುದ್ದಿ ಈಗ ಖಚಿತವಾಗಿದೆ. ಹಲವು ವರ್ಷದಿಂದ ಇಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ತಮ್ಮಿಂಬರ ಸ್ನೇಹವನ್ನು ಗೌಪ್ಯವಾಗಿ ಇಟ್ಟುಕೊಂಡಿದ್ದ ಇಬ್ಬರು ಈಗ ಮದುವೆಯಾಗಲು ನಿಶ್ಚಯಿಸಿದ್ದಾರೆ. ಇದೇ ತಿಂಗಳ ಕೊನೆಯ ವಾರದಲ್ಲಿ ಈ ಜೋಡಿ ಮದುವೆ ನಿಗದಿಯಾಗಿದೆ ಎಂಬ ವದಂತಿ ನಡುವೆಯೇ ಮದುವೆ ಆಮಂತ್ರಣ ಪತ್ರ ವೈರಲ್ ಆಗಿದೆ. ಹೈದರಾಬಾದ್‌ನಲ್ಲಿ ಈ ಜೋಡಿ ಹೊಸ ಜೀವನ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.
ಆಹ್ವಾನ ಪತ್ರಿಕೆಯಲ್ಲಿ, "ಕುಟುಂಬದ ಆಶೀರ್ವಾದದೊಂದಿಗೆ ರಶ್ಮಿಕಾ ಮತ್ತು ನಾನು 26.02.26ರಂದು ಸಣ್ಣ ಮತ್ತು ಆತ್ಮೀಯ ಸಮಾರಂಭದಲ್ಲಿ ಮದುವೆಯಾಗುತ್ತಿದ್ದೇವೆ" ಎಂದು ಉಲ್ಲೇಖಿಸಲಾಗಿದೆ. "ನಮ್ಮ ಜೀವನದ ಈ ಹೊಸ ಅಧ್ಯಾಯವನ್ನು ಆರಂಭಿಸುವ ಸಂದರ್ಭದಲ್ಲಿ, ನಮ್ಮ ಪ್ರಯಾಣದ ಭಾಗವಾಗಿದ್ದ ನಿಮ್ಮಂತಹವರೊಂದಿಗೆ ಈ ಸಂತೋಷವನ್ನು ಹಂಚಿಕೊಳ್ಳಲು ಬಯಸುತ್ತೇವೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ನಮ್ಮಿಗೆ ವಿಶೇಷ" ಎಂದು ಬರೆದಿರುವುದು ಕಾಣಬಹುದು.

ಇನ್ನು ಹಲವು ವರ್ಷದಿಂದ ಇಬ್ಬರು ಸಿನಿಮಾ ರಂಗದಲ್ಲಿದ್ದು, ಕೋಟಿಗೂ ಅಧಿಕ ಆಸ್ತಿ ಹೊಂದಿದ್ದಾರೆ. ಟಾಲಿವುಡ್‌ನಿಂದ ಸಿನಿಮಾ ರಂಗ ಪ್ರವೇಶಿಸಿದ್ದ ವಿಜಯ್ ದೇವರಕೊಂಡ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಹಾಗೆ ಸ್ಯಾಂಡಲ್‌ವುಡ್‌ನಿಂದ ಸಿನಿ ಜೀವನ ಆರಂಭಿಸಿದ್ದ ಕೊಡಗು ಮೂಲದ ರಶ್ಮಿಕಾ ಮಂದಣ್ಣ ಬಹುಭಾಷಾ ನಟಿಯಾಗಿ ಈಗ ಗುರುತಿಸಿಕೊಂಡಿದ್ದಾರೆ. ಹಾಗೆ ದಿಗ್ಗಜರ ಜೊತೆಗೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.
ವಿಜಯ್ ದೇವರಕೊಂಡ ಆಸ್ತಿ ಎಷ್ಟಿದೆ ಗೊತ್ತಾ?
ನಟ ವಿಜಯ್ ದೇವರಕೊಂಡ ಹೈದರಾಬಾದ್‌ನಲ್ಲಿ ಬಹುಕೋಟಿ ಆಸ್ತಿ ಹೊಂದಿದ್ದಾರೆ. ಇಲ್ಲಿನ ಜುಬ್ಲಿ ಹಿಲ್ಸ್‌ನಲ್ಲಿ 15 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಹೊಂದಿದ್ದಾರೆ. ಹಾಗೆ ಅವರು 55ರಿಂದ 65 ಕೋಟಿ ರೂಪಾಯಿ ನಿವ್ವಳ ಆಸ್ತ ಹೊಂದಿದ್ದಾರೆ. ತಮ್ಮದೆ ಸಿನಿಮಾ ನಿರ್ಮಾಣ ಸಂಸ್ಥೆ ಹಾಗೂ ಬಟ್ಟೆ ಬ್ರಾಂಡ್ ಕೂಡ ಹೊಂದಿದ್ದಾರೆ. ಕಿಂಗ್ ಆಫ್ ದಿ ಹಿಲ್ ಎಂಟರ್‌ಟೈನ್‌ಮೆಂಟ್ ನಿರ್ಮಾಣ ಸಂಸ್ಥೆ ಮೂಲಕವ ಅವರು ಕೋಟಿ ಗಳಿಕೆ ಮಾಡುತ್ತಾರೆ.
ಇದಲ್ಲದೆ ಜಾಹೀರಾತು ಮತ್ತು ಸಿನಿಮಾದಿಂದಲೂ ಕೋಟಿ ಕೋಟಿ ಆದಾಯ ಗಳಿಸುತ್ತಾರೆ. ವಿಜಯ್ ದೇವರಕೊಂಡ ಐಷಾರಾಮಿ ಕಾರುಗಳ ಬೃಹತ್ ಸಂಗ್ರಹವನ್ನು ಹೊಂದಿದ್ದಾರೆ. ನಟನ ಅತ್ಯಂತ ದುಬಾರಿ ಕಾರು ವೋಲ್ವೋ XC90 ಆಗಿದ್ದು ಇದರ ಬೆಲೆ ಸುಮಾರು 85 ಲಕ್ಷ ರೂ. ಆಗಿದೆ. ಇದಲ್ಲದೆ ಅವರು BMW 5 ಸರಣಿ, ರೇಂಜ್ ರೋವರ್ ಮತ್ತು ಫೋರ್ಡ್ ಮಸ್ತಾಂಗ್ ಅನ್ನು ಸಹ ಹೊಂದಿದ್ದಾರೆ, ಇವೆಲ್ಲವೂ ಸುಮಾರು 65-75 ಲಕ್ಷ ರೂ. ಮೌಲ್ಯದಾಗಿದೆ. ಹಾಗೆ ಖಾಸಗಿ ಜೆಟ್ ಸಹ ಹೊಂದಿರುವುದು ತಿಳಿದುಬಂದಿದೆ. ಇದೆಲ್ಲವು 2025ರ ವರದಿಯಾಗಿದೆ.
ರಶ್ಮಿಕಾ ಮಂದಣ್ಣ ಆಸ್ತಿ ಮೌಲ್ಯ ಎಷ್ಟು?
ರಶ್ಮಿಕಾ ಮಂದಣ್ಣ ಪ್ರಸ್ತುತ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅವರು ಸಿನಿಮಾ ಒಂದಕ್ಕೆ ಸುಮಾರು 4 ಕೋಟಿ ರೂ. ಪಡೆಯುತ್ತಾರೆ ಎಂದು ತಿಳಿದುಬಂದಿದೆ. ಹೀಗಾಗಿ ಅವರು 2025ರ ವರದಿಯ ಪ್ರಕಾರ ಸುಮಾರು 65 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅವರು ಹಲವಾರು ರಿಯಲ್ ಎಸ್ಟೇಟ್ ಆಸ್ತಿಗಳನ್ನು ಹೊಂದಿದ್ದಾರೆ. ಬೆಂಗಳೂರಿನಲ್ಲಿ 8 ಕೋಟಿ ರೂ. ಮೌಲ್ಯದ ಮನೆ ಸೇರಿ ಐಷಾರಾಮಿ ಕಾರುಗಳ ಹೊಂದಿದ್ದಾರೆ. ಹಾಗೆ ಹಲವು ಉತ್ಪನ್ನಗಳಿಗೆ ಬ್ರಾಂಡ್ ಅಂಬಾಸಿಡರ್ ಸಹ ಅವರಾಗಿದ್ದಾರೆ.
ಈ ಇಬ್ಬರ ಜೋಡಿಯ ಸ್ನೇಹ ಹಾಗೂ ಮದುವೆ ಕುರಿತು 2019ರಿಂದಲೂ ಸುದ್ದಿಯಾಗುತ್ತಲೇ ಇತ್ತು. ಸದ್ಯ ಇಬ್ಬರು ಜೋಡಿ ಈಗ ಮದುವೆಯಾಗುವುದಾಗಿ ತಿಳಿದುಬಂದಿದೆ.



Click it and Unblock the Notifications
