Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ರಶ್ಮಿಕಾ ಮಂದಣ್ಣ ನಕಲಿ ವೀಡಿಯೋ: ಇದು ಹೆಣ್ಮಕ್ಕಳಿಗೆ ತುಂಬಾನೇ ಮಾರಕ, ಕಠಿಣ ಕಾನೂನು ಬರಬೇಕು
ಕಳೆದ ಒಂದು ವಾರದಿಂದ ರಶ್ಮಿಕಾ ಮಂದಣ್ಣ ವರ್ಕೌಟ್ ಡ್ರೆಸ್‌ನಲ್ಲಿರುವ ವೀಡಿಯೋ ತುಂಬಾನೇ ವೈರಲ್ ಆಗಿತ್ತು. ರಶ್ಮಿಕಾ ಮಂದಣ್ಣ ಡ್ರೆಸ್ಸಿಂಗ್ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದರು, ಆ ವೀಡಿಯೋ ನೋಡುಗರಿಗೆ ಮುಜುಗರ ಉಂಟು ಮಾಡುವಂತಿತ್ತು. ತುಂಬಾ ಜನರು ಇದು ರಶ್ಮಿಕಾ ಮಂದಣ್ಣ ವೀಡಿಯೋನೇ ಎಂದು ಭಾವಿಸಿದ್ದು, ಇನ್ನು ಕೆಲವರು ಇದು ನಕಲಿ ವೀಡಿಯೋ ಇರಬಹುದು ಎಂದು ಭಾವಿಸಿ, ನಂತರ ಇದರ ಒರಿಜಿನಲ್ ವಿಡಿಯೋ ಹುಡುಕಿದರು. ಆವಾಗ ಈ ವೀಡಿಯೋದಲ್ಲಿ ಇರುವ ವ್ಯಕ್ತಿ ರಶ್ಮಿಕಾ ಮಂದಣ್ಣ ಅಲ್ಲ ಎಂಬುವುದು ತಿಳಿದು ಬಂದಿದೆ.

ಈ ಟೆಕ್ನಾಲಾಜಿ ಎಂಬುವುದು ಎಂದು ಉಪಕಾರವೋ ಅಷ್ಟೇ ಮಾರಕವೂ ಹೌದು. ಕೆಲವೊಮ್ಮೆ ಟೆಕ್ನಾಲಾಜಿಯನ್ನು ಕೆಟ್ಟ ಉದ್ದೇಶಕ್ಕೆ ಬಳಸಿ ಬೇರೆಯವರ ಬದುಕಿನಲ್ಲಿ ಆಟ ಆಡುತ್ತಾರೆ ದುರುಳರು. ಈ ಫೋಟೋ ನಕಲಿ ಮಾಡುವುದು ಇದೆಲ್ಲಾ ಗೊತ್ತಿರುವ ವಿಚಾರವೇ.... ಆದರೆ ಕೆಲವೊಮ್ಮೆ ಜನರನ್ನು ಅದು ನಿಜವಾದ ಫೋಟೋ ಅಥವಾ ವೀಡಿಯೋ ಎಂದು ನಂಬುವಂತೆ ಮಾಡುತ್ತಾರೆ. ಇಂಥದ್ದೊಂದು ಕುತಂತ್ರ ನಟಿ ರಶ್ಮಿಕಾ ಮಂದಣ್ಣವನ್ನು ಬಲಿಪಶುವನ್ನಾಗಿ ಮಾಡಿದೆ.
ಆ ವೀಡಿಯೋದಲ್ಲಿ ಇರುವುದು ಜಾರಾ ಪಟೇಲ್ ಎಂಬ ಹುಡುಗಿ. ಈಕೆಗೆ ಇನ್‌ಸ್ಟಾದಲ್ಲಿ 415 ಸಾವಿರ ಪಾಲೋವರ್ಸ್ ಇದ್ದಾರೆ. ಈ ವೀಡಿಯೋವನ್ನು ಅಕ್ಟೋಬರ್ 9ಕ್ಕೆ ಅಪ್‌ಲೋಡ್ ಮಾಡಿದ್ದರು. ಆದರೆ ಈ ವೀಡಿಯೋವನ್ನು ಯಾರೋ ಕಿಡಿಗೇಡಿ ರಶ್ಮಿಕಾ ಮಂದಣ್ಣ ವೀಡಿಯೋ ರೀತಿ ಮಾಡಿ ವೈರಲ್ ಮಾಡಿದ್ದಾರೆ.
ಈ ರೀತಿ ಮಾಡುವವರ ವಿರುದ್ಧ ಭಾರತದಲ್ಲಿ ಕಠಿಣ ನಿಯಮ ಬರಬೇಕೆಂದ ಅಮಿತಾಬಚ್ಚನ್
ಅಮಿತಾಬಚ್ಚನ್ ಕೂಡ ಈ ವೀಡಿಯೋ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಭಿಷೇಕ್ ಎಂಬುವವರು ಈ ರೀತಿ ವೀಡಿಯೋ ನಕಲಿ ಮಾಡಿ ವ್ಯಕ್ತಿಗಳ ಹೆಸರು ಕೆಡಿಸುವವರಿಗೆ ಕಠಿಣ ಶಿಕ್ಷೆಯಾಗುವ ಕಾನೂನು ಬರಬೇಕಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಹೌದು, ಈ ರೀತಿಯ ವೀಡಿಯೋದಲ್ಲಿ ಅಂಥ ದೊಡ್ಡ ಸೆಲೆಬ್ರಿಟಿಗೆ ಮಾಡಿ ಹೆಸರು ಹಾಳು ಮಾಡಲು ಯತ್ನಿಸಿದ್ದಾರೆ ಅಂದ ಮೇಲೆ ಬಡ ಹೆಣ್ಮಕ್ಕಳ ಗತಿಯೇನು, ನಾವು ಅದಲ್ಲ ಎಂದು ಸಾಬೀತು ಮಾಡಲು ಅವರಿಗೆ ಯಾರು ನೆರವಾಗುತ್ತಾರೆ, ಮನೆಯವರು ಅವರನ್ನು ನಂಬದಿದ್ದರೆ ಆ ಹೆಣ್ಮಕ್ಕಳ ಗತಿಯೇನು? ಆದ್ದರಿಂದ ಈ ಬಗ್ಗೆ ನಿರ್ಲಕ್ಷ್ಯವಹಿಸಲೇಬಾರದು. ಫೋಟೋ ಅಥವಾ ವೀಡಿಯೋ ಮಾಡಿ ನಕಲಿ ಮಾಡುವವರಿಗೆ ಕಠಿಣ ಶಿಕ್ಷೆ ಆಗಬೇಕು. ಈ ರೀತಿ ಮಾಡಿ ಅವಮಾನ ಸಹಿಸೋಕೆ ಆಗದೆ ಹೆಣ್ಮಕ್ಕಳು ಹೆಚ್ಚು ಕಡಿಮೆ ಆದರೆ ಏನು ಗತಿ? ಆದ್ದರಿಂದ ಇದು ತಮಾಷೆಯ ವಿಷಯ ಅಲ್ವೇ ಅಲ್ಲ.
ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
ಈ ಗಾದೆ ಇಂಥ ವಿಷಯದಲ್ಲಿ ತುಂಬಾನೇ ಸೂಕ್ತ ಅನಿಸುತ್ತದೆ. ರಶ್ಮಿಕಾ ಮಂದಣ್ಣ ಮಾಡರ್ನ್ ಡ್ರೆಸ್ ಹಾಕುತ್ತಾರೆ, ಆದರೆ ಈ ರೀತಿ ಎಲ್ಲೂ ಕಂಡಿರಲಿಲ್ಲ, ಆದರೂ ಜನ ಇದರಲ್ಲಿರುವುದು ರಶ್ಮಿಕಾ ಮಂದಣ್ಣವಿರಬಹುದು ಎಂದು ಭಾವಿಸಿದ್ದರು. ಆದ್ದರಿಂದಲೇ ಹೇಳುವುದು ಪ್ರತ್ಯಕ್ಷ ಕಂಡರೂ ಪ್ರಾಮಣಿಸಿ ನೋಡು.....



Click it and Unblock the Notifications
