Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಬದಲಾಗುತ್ತಿದ್ಯಾ ಜೀವ ಸಂಕುಲ..! ಅಪರೂಪದ ಬಿಳಿ ನಾಗರ ಪತ್ತೆ..!!
ನಾವು ನಾಗರಹಾವುಗಳ ಕುರಿತು ಹಲವು ರೀತಿಯ ಅಚ್ಚರಿಗಳ ನೋಡಿದ್ದೇವೆ. ಅದ್ರಲ್ಲೂ ಕೆಲವೊಂದು ವಿಚಿತ್ರ ರೀತಿಯ ಹಾವನ್ನು ಸಹ ನೋಡಿದ್ದೇವೆ. ಕೆಲವು ಎಷ್ಟು ವಿಚತ್ರವಾಗಿರುತ್ತವೆ ಅಂದ್ರೆ ನಾವದನ್ನು ನಂಬಲು ಸಹ ಸಾಧ್ಯವಾಗುವುದಿಲ್ಲ.
ಆದ್ರೆ ಇತ್ತೀಚಿಗೆ ಈ ನಾಗರಹಾವಿನ ಪ್ರಬೇದದಲ್ಲಿ ಹೊಸ ಹೊಸ ರೀತಿಯ ಹಾವುಗಳು ಕಾಣಿಸಿಕೊಳ್ಳುತ್ತಿವೆ. ಇತ್ತೀಚಿಗೆ ಕೆಂಪು ಬಣ್ಣದ ಹಾವು, ಹಳದಿ ಬಣ್ಣದ ಹಾವುಗಳು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದವು. ಆದರೆ ಇದೀಗ ಬಿಳಿ ಬಣ್ಣದ ನಾಗರಹಾವೊಂದು ಕಾಣಿಸಿಕೊಂಡಿದ್ದು, ನೋಡುಗರಲ್ಲಿ ಅಚ್ಚರಿಗೆ ಕಾರಣವಾಗಿದೆ.

ಹೌದು ಇಲ್ಲೊಂದು ವಿಡಿಯೋದಲ್ಲಿ ಬಿಳಿ ಬಣ್ಣದ ನಾಗರಹಾವು ಕಾಣಿಸಿಕೊಂಡಿರುವುದು ಅಚ್ಚರಿ ಹುಟ್ಟಿಸಿದೆ. ಇದು ಜೀವ ವೈವಿದ್ಯತೆಯಲ್ಲಿ ಬದಲಾವಣೆಯಾಗುತ್ತಿದೆಯಾ ಎಂಬ ಅನುಮಾನಕ್ಕೆ ಕಾರಣವಾಗಿದೆ. ವನ್ಯ ಜೀವಿ ಪ್ರಬೇದಗಳು ದಶಕಗಳು ಉರುಳಿದಂತೆ ಬದಲಾವಣೆಯ ಹಾದಿ ಹಿಡಿದಿವೆಯೇ ಎಂಬ ಅನುಮಾನ ಹುಟ್ಟಿಸಿವೆ.
ಉತ್ತರ ಪ್ರದೇಶದ ಜೌಗು ಪ್ರದೇಶದಲ್ಲಿ ಹೊಸ ಜಾತಿಯ ನಾಗರಹಾವು ಕಂಡುಬಂದಿದೆ. ಈ ಹಾವಿಗೆ ಅಲ್ಬಿನೋ ಸ್ಪೆಕ್ಟಾಕಲ್ ಕೋಬ್ರಾ ಎಂದು ಹೆಸರಿಟ್ಟಿರುವುದಾಗಿ ವನ್ಯಜೀವಿ ಸಂಶೋದಕ ರಾಹುಲ್ ನಿಶಾದ್ ಅವರು ಹೇಳಿದ್ದಾರೆ.
ಈ ಆವಿಷ್ಕಾರವು ಜೀವವೈವಿಧ್ಯದ ತಿಳುವಳಿಕೆಯನ್ನು ವಿಸ್ತರಿಸುವುದಲ್ಲದೆ, ಜೌಗು ಪ್ರದೇಶಗಳ ಪರಿಸರ ಆರೋಗ್ಯವನ್ನು ಒತ್ತಿಹೇಳುತ್ತದೆ ಎಂದು ಈ ಹಿಂದೆ ವಿವಿಧ ವನ್ಯಜೀವಿ ಪ್ರಭೇದಗಳನ್ನು ಸಂಶೋಧಿಸಿರುವ ರಾಹುಲ್ ನಿಶಾದ್ ಹೇಳಿದ್ದಾರೆ. ಈ ವಿಡಿಯೋದಲ್ಲಿ ಸರೆಯಾಗಿರುವ ಹಾವು ತಿಳಿ ಬಿಳಿ ಬಣ್ಣ ಹೊಂದಿದೆ. ಜೊತೆಗೆ ಕೆಂಪು ಕಣ್ಣುಗಳ ಹೊಂದಿರುವುದು ಮತ್ತೊಂದು ವಿಶೇಷವಾಗಿದೆ.
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಅಡಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿರುವ ಭಾರತೀಯ ಅರಣ್ಯ ಸಂಶೋಧನಾ ಶಿಕ್ಷಣ ತರಬೇತಿ ಮತ್ತು ಪರಿಸರ ಪುನಃಸ್ಥಾಪನೆ ಕೇಂದ್ರದ ಸಂಶೋಧನಾ ವಿದ್ಯಾರ್ಥಿ ರಾಹುಲ್ ನಿಶಾದ್ ಈ ಆವಿಷ್ಕಾರವನ್ನು ಮಾಡಿದ್ದಾರೆ.
ಈ ಜೀವ ವೈವಿದ್ಯತೆಯ ಬದಲಾವಣೆಯು ಪರಿಸರ ಮೇಲಾಗುತ್ತಿರುವ ಬದಲಾವಣೆಗೆ ಕಾರಣವಾಗಿದೆ. ಉಳಿದ ನಾಗರಹಾವುಗಳಂತೆಯೇ ಈ ಹಾವುಗಳ ಜೀವನ ಶೈಲಿ ಒಂದೇ ಆಗಿದೆ. ಹುಳು, ಕಪ್ಪೆಗಳ ಹಿಡಿದು ತಿನ್ನುತ್ತವೆ ಎಂದು ತಿಳಿದುಬಂದಿದೆ. ಈ ರೀತಿಯ ಹಾವು ಕಂಡುಬಂದಿರುವುದು ಇದೇ ಮೊದಲೇನಲ್ಲ ಆದರೆ ಆ ಕುರಿತ ಅಧ್ಯಯನ ಮಾತ್ರ ಇದೇ ಮೊದಲಾಗಿದೆ.
ಅಲ್ಬಿನೊ ಸ್ಪೆಕ್ಟಾಕಲ್ಡ್ ಕೋಬ್ರಾದ ಆವಿಷ್ಕಾರವು ದೇಶದಲ್ಲಿ ವನ್ಯಜೀವಿ ಸಂಶೋಧನೆ ಮತ್ತು ಸಂರಕ್ಷಣಾ ಪ್ರಯತ್ನಗಳ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ.
ಈ ವಿಡಿಯೋ ನೋಡಿದ ಮಂದಿ ಅಚ್ಚರಿಗೆ ಒಳಗಾಗಿದ್ದಾರೆ. ಈ ಹಾವು ನೋಡಲು ಎಷ್ಟು ಸುಂದರವಾಗಿದೆ ಎಂದು ಆಶ್ಚರ್ಯಗೊಂಡಿದ್ದಾರೆ. ಈ ಮೊದಲು ಕೆಂಪು ಹಾಗೂ ಹಳದಿ, ಕಪ್ಪು ಬಣ್ಣದ ನಾಗರ ನೋಡಿದ್ದ ಮಂದಿ ಬಿಳಿ ಬಣ್ಣದ ಹಾವನ್ನು ಮೊದಲ ಬಾರಿಗೆ ನೋಡಿ ಅಚ್ಚರಿಗೊಂಡಿದ್ದಾರೆ.
ಈ ವಿಡಿಯೋಗೆ ಸಾವಿರಾರು ಮಂದಿ ಪ್ರತಿಕ್ರಿಯಿಸಿದ್ದು, ಕೆಲವರು ಈ ವಿಡಿಯೋ ನೋಡಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಈ ಹಾವಿನ ಪ್ರಬೇಧ ಉಳಿಸಬೇಕು, ಇವುಗಳ ರಕ್ಷಣೆಯಿಂದ ಪರಿಸರ ವ್ಯವಸ್ಥೆಯಲ್ಲಿ ಬದಲಾವಣೆಯ ಕುರಿತು ತಿಳಿಯಬಹುದು ಎಂಬುದು ಜನರ ಸಲಹೆಯಾಗಿದೆ. ಇನ್ನೊಂದೆಡೆ ಹಾವುಗಳು ಜೀವ ವೈವಿದ್ಯದಲ್ಲಿ ಬಹಳ ಮುಖ್ಯ ಪ್ರಾಣಿಗಳು, ಅವುಗಳಿಂದಲ ಆಹಾರ ಸರಪಳಿಯೂ ಸೇರಿ ಪರಿಸರ ಸಮತೋಲನಕ್ಕೆ ತಮ್ಮದೆ ಕೊಡುಗೆ ನೀಡುತ್ತಿವೆ.
ಇನ್ನು ಈ ಬಿಳಿಯ ಕೋಬ್ರಾ ಈ ಮೊದಲು ಕೊಯಂಬತ್ತೂರಿನಲ್ಲಿ ಕಂಡುಬಂದಿತ್ತು, ಆದರೆ ಈ ವೇಳೆ ಇದು ಅನುವಂಶೀಯ ಸಮಸ್ಯೆ ಹಾಗೂ ಡಿಎನ್‌ಎ, ಬಣ್ಣ ಆಧಾರಿತ ನೈಸರ್ಗಿಕ ಸಮಸ್ಯೆಯಿಂದಾಗಿ ಈ ಬಿಳಿಯ ಬಣ್ಣ ಬಂದಿರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗ ಉತ್ತರ ಪ್ರದೇಶದಲ್ಲಿ ಈ ಹಾವು ಪತ್ತೆಯಾಗಿದ್ದು, ಈ ಕುರಿತ ಅಧ್ಯಯನವು ಹೊರಬಿದ್ದಿದೆ.



Click it and Unblock the Notifications
