Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವಜ್ರಕ್ಕಿಂತ ದುಬಾರಿ ಈ 'ಸೂರ್ಯನ ಮೊಟ್ಟೆ'..! ಇದು ವಿಶ್ವದ ದುಬಾರಿ ಮಾವು!
ಬೇಸಿಗೆ ಆರಂಭಗೊಂಡಿದೆ ಎಂದರೆ ಎಲ್ಲಾ ಮಾರುಕಟ್ಟೆಯಲ್ಲೂ ಭರ್ಜರಿ ಮಾವಿನ ಹಣ್ಣುಗಳ ರಾಶಿ ನೋಡಬಹುದು. ಮಾರುಕಟ್ಟೆ ನುಸುಳುವ ಮುನ್ನವೇ ನಮಗೆ ಮಾವಿನಕಾಯಿ ಸುವಾಸನೆ ಮೂಗಿಗೆ ಬಡಿಯಲಿದೆ. ಹಾಗೆ ಹಣ್ಣುಗಳ ರಾಜ ಮಾವಿನ ಹಣ್ಣನ್ನು ಎಲ್ಲರು ಸವಿಯಲು ಇಷ್ಟಪಡುತ್ತಾರೆ. ಬೇಸಿಗೆಯಲ್ಲಿ ದೇಹಕ್ಕೆ ಬಹಳ ಉತ್ತಮ ಹಣ್ಣಾಗಿದೆ. ಮಾವಿನ ಹಣ್ಣು ಎಲ್ಲಾ ಮಾರುಕಟ್ಟೆಯಲ್ಲೂ ನಿಮ್ಮ ಕಣ್ಣಿಗೆ ಬೀಳುವ ಒಂದು ಸಾಮಾನ್ಯ ಹಣ್ಣಾಗಿರಲಿದೆ.
ಅದರಲ್ಲೂ ಬೇಸಿಗೆಯ ಬಿಸಿಯಲ್ಲಿ ನೀವು ಈ ಮಾವಿನ ಹಣ್ಣು ಸವಿದರೆ ರುಚಿಯ ಜೊತೆ ನಿಮಗೆ ಸ್ವಾದಿಷ್ಟ ಎನಿಸಲಿದೆ. ಹಾಗೆ ಇದನ್ನು ಊಟದ ನಂತರ ಸವಿದರೆ ಜೀರ್ಣಕ್ರಿಯೆಗೆ ಬಹಳ ಉಪಯುಕ್ತವಾಗಲಿದೆ. ಹಾಗೆ ನಾವು ಭಾರತದಲ್ಲಿ ದುಬಾರಿ ಬೆಲೆಯ ಮಾವಿನ ಹಣ್ಣುಗಳನ್ನು ಕೂಡ ನೋಡಿದ್ದೇವೆ. ಆದ್ರೆ ನೀವು ಬಹಳ ದುಬಾರಿ ಎಂದು ಜಪಾನ್ ಮಾವಿನ ಹಣ್ಣಿನ ಕುರಿತು ಕೇಳಿರಬಹುದು.

ಮಾವಿನ ಹಣ್ಣುಗಳಲ್ಲೇ ಜಪಾನ್ ತಳಿಯ ಒಂದು ಮಾವು ಲಕ್ಷ ಲಕ್ಷ ರೂಪಾಯಿಗೆ ಮಾರಾಟವಾಗುತ್ತಿದ್ದ ಕುರಿತು ನೀವು ಸಹ ಕೇಳಿರಬಹುದು. ಮಿಯಾಜಾಕಿ, ಆಲ್ಫೋನ್ಸೋಸ್ ಹಣ್ಣುಗಳು ದುಬಾರಿ ಮಾವಿನ ಹಣ್ಣುಗಳು ಎಂದು ನೀವು ಸಹ ಅಂದುಕೊಂಡಿರಬಹುದು. ಮಿಯಾಜಾಕಿ ಮಾವು ವಿಶ್ವದ ದುಬಾರಿ ಮಾವುಗಳಲ್ಲಿ ಮೊದಲ ಸ್ಥಾನದಲ್ಲಿದೆ.
ಈಗ ಜಪಾನ್‌ನಲ್ಲಿ ಕಂಡುಬರುವ ಈ ಮಿಯಾಜಾಕಿ ಮಾವು ಅಥವಾ ಎಗ್ ಆಫ್ ದಿ ಸನ್ (ಸೂರ್ಯನ ಮೊಟ್ಟೆ) ಎಂದು ಕರೆಯಲಾಗುತ್ತಿದೆ. ಈಗ ಈ ಮಾವು ವಜ್ರಕ್ಕಿಂತ ದುಬಾರಿಯಾಗಿದೆ. ಕಡು ಕೆಂಪು ಬಣ್ಣದಿಂದ ಕಾಣಿಸುವ ಈ ಮಾವು ವಿಶ್ವದ ದುಬಾರಿ ಮಾವುಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕೆಂಪು ರತ್ನದಂತೆ ಹಾಗೆ ಸೂರ್ಯನ ಮೊಟ್ಟೆಗೆ ಇದನ್ನು ಹೋಲಿಸಲಾಗಿದೆ. ಇದರ ಬೆಲೆಯನ್ನು ವಜ್ರಕ್ಕೆ ಹೋಲಿಸಲಾಗಿದೆ.
ಈ ಮಾವು ಕೇವಲ ಹಣ್ಣಲ್ಲ.ಇದು ಜಪಾನ್‌ನ ಮಿಯಾಜಾಕಿ ಪ್ರಾಂತ್ಯದಲ್ಲಿ ಅತ್ಯಂತ ಕಾಳಜಿಯಿಂದ ಬೆಳೆಯುವ ಮಾವು ಇದಾಗಿದೆ. ಇದರ ಮೇಲೆ ಕೆಂಪು ಬಣ್ಣದಿಂದ ಕೂಡಿರುವಂತೆಯೇ ಒಳಗೂ ಕೂಡ ಕೆಂಪು ಬಣ್ಣವನ್ನೇ ಹೊಂದಿರಲಿದೆ, ಹೀಗಾಗಿ ಇದೊಂದು ವಿಶೇಷ ರುಚಿಯ ಮಾವಾಗಿದೆ. ಈ ಮಾವಿನ ಗಿಡವು ಸಣ್ಣದಾಗಿರುವಾಗಲೇ ವಿಶೇಷ ಕಾಳಜಿ ಇಡಲಾಗುತ್ತದೆ. ಹೂವು ಬಿಟ್ಟಾಗಿನಿಂದ ಸಣ್ಣ ಮಾವಿನ ಕಾಯಿ ಬಟ್ಟಾಗ ಪ್ರತಿಯೊಂದು ಹಣ್ಣನ್ನು ಪ್ರತ್ಯೇಕವಾಗಿ ಬಲೆಯನ್ನು ಹಾಕಿ ಬೆಳೆಸಲಾಗುತ್ತದೆ.
ಹೀಗಾಗಿ ಇದರ ಆರೈಕೆ ಮಾಡವುದೇ ದೊಡ್ಡ ಸವಾಲಿನ ಕೆಲಸ. ಇದನ್ನು ಹುಳುಗಳಿಂದ ಕಾಪಾಡುವುದು ಸೂಕ್ತ ಚಿಕಿತ್ಸೆ ನೀಡುವುದು ಸಹ ಮುಖ್ಯವಾಗುತ್ತದೆ. ಹೀಗಾಗಿ ಇದರ ರುಚಿಯಲ್ಲಿಯೂ ಯಾವುದೇ ರಾಜಿ ಇಲ್ಲ. ಅದ್ಭುತ ರುಚಿಯ ಈ ಮಾವು ಸವಿಯಲು ಹಲ್ವಾದಂತೆ ಮೃದುವಾಗಿರಲಿದೆ. ಹಾಗೆ ನಿಗದಿತ ಸಮಯದಲ್ಲಿ ಇದನ್ನು ಧೂಳಿನಿಂದ ರಕ್ಷಿಸಿ ಹಣ್ಣಾಗಲು ಸೂರ್ಯನ ಬೆಳಕು ಕೂಡ ನಿಯಮಿತವಾಗಿ ಹಾಯಿಸಬೇಕು. ಇದು ಬಹಳ ಆರೈಕೆದಾಯಕ ಕೆಲಸವಾಗಲಿದೆ.
ಈ ರೀತಿಯ ಆರೈಕೆಯ ಬಳಿಕವಷ್ಟೇ ಇದು ಅತ್ಯಂತ ವಿಶೇಷ ಬಣ್ಣ ಹಾಗೂ ವಿಶೇಷ ರುಚಿ ನೀಡಲಿದೆ. ಹಾಗೆ ಅತ್ಯುತ್ತಮ ಕೆಂಪು ಬಣ್ಣ ಬರಬೇಕಾದರೆ ಇಷ್ಟೆಲ್ಲಾ ಆರೈಕೆಯ ಅಗತ್ಯವಿದೆ.
ವಜ್ರಕ್ಕಿಂತ ದುಬಾರಿ ಈ ಸೂರ್ಯನ ಮೊಟ್ಟೆ..?
ಮಿಯಾಜಾಕಿ ಮಾವಿನ ಹಣ್ಣು ದುಬಾರಿ ಬೆಲೆಯಿಂದಲೇ ಸುದ್ದಿಯಾಗುತ್ತದೆ. ಅದರಲ್ಲೂ ಈಗ ಸೂರ್ಯನ ಮೊಟ್ಟೆಯಂತಹ ಕೆಂಪು ಬಣ್ಣದ ಮಾವು ಹರಾಜಿನಲ್ಲಿ ಬರೋಬ್ಬರಿ 2.7 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಇದು ಒಂದು ಜೋಡಿ ಮಾವಿನ ಹಣ್ಣಿಗೆ ನೀಡಲಾದ ದುಬಾರಿ ಬೆಲೆ ಎನ್ನಲಾಗಿದೆ. ಇದು ಅತ್ಯುನ್ನತ ದರ್ಜೆ ಹಣ್ಣುಗಳಾಗಿದ್ದವು ಎಂದು ತಿಳಿದುಬಂದಿದೆ.
ಭಾರತದಲ್ಲೂ ಮಿಯಾಜಾಕಿ ಹಣ್ಣು ಬೆಳೆಯಲಾಗಿತ್ತು
2021ಲ್ಲಿ ಬಿಹಾರದ ರೈತನೊಬ್ಬ ಈ ಜಪಾನ್ ತಳಿಯನ್ನು ಬೆಳೆದು ಅಚ್ಚರಿ ಮೂಡಿಸಿದ್ದ. ಜಪಾನ್‌ನಿಂದ ಎರಡು ಸಸಿಯನ್ನ ಆಮದು ಮಾಡಿಕೊಂಡಿದ್ದ ಆಯ ಹಣ್ಣು ಬೆಳೆದಿದ್ದ. 2 ಗಿಡದ ಮೂಲಕ ಆತ ಸುಮಾರು 21 ಹಣ್ಣುಗಳ ಬೆಳೆಯುವಲ್ಲಿ ಯಶಸ್ವಿಯಾಗಿದ್ದ.



Click it and Unblock the Notifications
