Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭೂಮಿಗೆ ಅಪ್ಪಳಿಸಿದ ಉಲ್ಕೆ: ಮೊದಲ ಬಾರಿಗೆ ಶಬ್ದವೂ ಸೆರೆ..! ಅಪರೂಪದ ವಿಡಿಯೋ
ಆಗಸದಲ್ಲಿ ಅದೆಷ್ಟು ಕ್ಷುದ್ರಗ್ರಹಳಿವೆ ಎಂಬುದನ್ನು ಯಾರು ಕೂಡ ಅಂದಾಜಿಸಲಾಗಿಲ್ಲ. ಹಾಗೆ ಎಷ್ಟೊಂದು ದೊಡ್ಡ ಪ್ರಮಾಣದ ಉಲ್ಕೆಗಳು ಭೂಮಿಯ ಮೇಲೆ ಸುತ್ತುತ್ತಿರುತ್ತವೆ. ಹಾಗೆ ಕೆಲವೊಮ್ಮೆ ತಮ್ಮ ಕಕ್ಷೆಯ ಬಿಟ್ಟು ಭೂಮಿಯತ್ತ ವೇಘವಾಗಿ ಬರುತ್ತವೆ. ಇಂತಹ ಹಲವು ಉಲ್ಕೆಗಳು ಭೂಮಿಗೆ ಅಪ್ಪಳಿಸಿರುವ ಉದಾಹರಣೆ ಇದೆ. ಹಾಗೆ ಭೂಮಿ ಮೇಲಿದ್ದ ಡೈನೋಸಾರ್‌ಗಳ ಅಳಿವಿಗೂ ಈ ಉಲ್ಕೆಗಳೇ ಕಾರಣವಾಗಿತ್ತು.
ಆದ್ರೆ ನೀವು ಎಂದಾದರು ಈ ಕುದ್ರಗ್ರಹ ಭೂಮಿ ಮೇಲೆ ಬೀಳುವ ವಿಡಿಯೋ ನೋಡಿದ್ದೀರಾ? ಅಥವಾ ಈ ಉಲ್ಕೆ ಭೂಮಿಗೆ ಅಪ್ಪಳಿಸಿದಾಗ ಯಾವ ರೀತಿಯ ಶಬ್ದ ಬರುತ್ತೆ ಅನ್ನೋದು ನಿಮಗೆ ಗೊತ್ತಾ? ಈ ರೀತಿಯ ದೃಶ್ಯ ನಾವು ನೋಡಿರಲು ಸಾಧ್ಯವಿಲ್ಲ. ಉಲ್ಕೆ ಬೀಳುವುದು ಮೊದಲೇ ತಿಳಿದು ವಿಡಿಯೋ ಮಾಡಲು ಕೂಡ ಸಾಧ್ಯವಿಲ್ಲ. ಆದ್ರೆ ಈಗ ಇದೇ ಮೊದಲ ಬಾರಿಗೆ ಉಲ್ಕೆಯೊಂದು ಅಪ್ಪಳಿಸಿರುವ ವಿಡಿಯೋ ಹಾಗೂ ಅದರ ಶಬ್ದ ಕೂಡ ದಾಖಲಾಗಿದೆ.

ಇದೇ ಮೊದಲ ಬಾರಿಗೆ ಭೂಮಿಗೆ ಈ ಉಲ್ಕೆಯೊಂದು ಅಪ್ಪಳಿಸುವ ಅತ್ಯಂತ ಸಮೀಪದ ದೃಶ್ಯ ಹಾಗೂ ಅದರ ಶಬ್ದವನ್ನು ಸೆರೆ ಹಿಡಿಯಲಾಗಿದೆ. ಅದು ಕೂಡ ಬಾಗಿಲಿಗೆ ಹಾಕುವ ಕ್ಯಾಮರಾದಲ್ಲಿ ಇದು ಸೆರೆಯಾಗಿದೆ. ಕೆನಡಾದ ಪ್ರಿನ್ಸ್ ಎಡ್ವರ್ಡ್ ದ್ವೀಪದಲ್ಲಿ ಈ ಅಪರೂಪದ ವಿದ್ಯಮಾನ ದಾಖಲಾಗಿದೆ. ಇದು ಕಳೆದ ವರ್ಷದ ಜುಲೈನಲ್ಲಿ ಸಂಭವಿಸಿದ್ದು ಎನ್ನಲಾಗಿದೆ. ಮನೆಯ ಮುಂದೆ ನಕ್ಷತ್ರಾಕಾರದ ಗುರುತನ್ನು ಬಿಟ್ಟಿತ್ತು.
ಮನೆ ಮಾಲಿಕ ತನ್ನ ನಾಯಿಗಳೊಂದಿಗೆ ಬೆಳಗ್ಗೆ ವಾಕಿಂಗ್ ಹೋಗಿ ಮನೆಗೆ ಬಂದಾಗ ಮುಂಭಾಗ ಒಂದು ದೊಡ್ಡ ನಕ್ಷತ್ರದ ಗುರುತು ಮೂಡಿತ್ತು. ಒಂದಿಷ್ಟು ಕಲ್ಲನ ಪುಡಿಗಳು ಅಲ್ಲಿ ಬಿದ್ದಿದ್ದವು. ಈ ಕುರಿತು ಹೆಚ್ಚು ತಲೆ ಕೆಡಿಸಿಕೊಂಡ ಆತ ತಕ್ಷಣ ಡೋಲ್ ಕ್ಯಾಮರಾದಲ್ಲಿ ಏನಾದರು ಸೆರೆಯಾಗಿದೆಯೇ ಎಂದು ಪರೀಕ್ಷಿಸಲು ಮುಂದಾದ. ಈ ವೇಳೆ ಯಾವುದೋ ವಸ್ತು ಮೇಲಿಂದ ಬೀಳುವುದು ದಾಖಲಾಗಿತ್ತು.
ಹಾಗೆ ಅದರ ಶಬ್ದ ಕೂಡ ಪ್ರಬಲವಾಗಿತ್ತು. ಈ ವಿಡಿಯೋವನ್ನು ತೆಗೆದು ಆತ ತಜ್ಞರಿಗೆ ಕಳುಹಿಸಿದ. ಸುಮಾರು 7 ಗ್ರಾಮ್‌ನ ಕಲ್ಲುಗಳನ್ನು ಆತ ಒಟ್ಟು ಮಾಡಿ ಕಳುಹಿಸಿದ್ದ.
ವಿಡಿಯೋದಲ್ಲಿ ಏನಿದೆ?
ಮನೆಯ ಬಾಗಿಲಿಗೆ ಹಾಕಿದ್ದ ಕ್ಯಾಮರಾದಲ್ಲಿ ಈ ಉಲ್ಕೆ ಬಂದು ನೆಲಕ್ಕೆ ಬೀಳುವುದು ಕಾಣಿಸುತ್ತದೆ. ಇದು ಅತ್ಯಂತ ಸಣ್ಣ ಪ್ರಮಾಣದ ಉಲ್ಕೆಯಾಗಿದೆ. ಆದ್ರೆ ಇದರ ಶಬ್ದ ಮಾತ್ರ ಮಂಜು ಗಡ್ಡೆ ಕಲ್ಲಿನ ಮೇಲೆ ಬೀಳುವಂತಹ ಅಥವಾ ಗಾಜು ಬಿದ್ದು ಪಡೆಯುವಂತೆ ಕೇಳಿಸುತ್ತದೆ. ಉಲ್ಕೆ ಬಂದು ನೆಲಕ್ಕೆ ಬೀದ್ದ ರಭಸಕ್ಕೆ ಸಂಪೂರ್ಣ ಪುಡಿಯಾಗಿದೆ.
ಈ ವಿಡಿಯೋ ಇದೇ ಮೊದಲ ಬಾರಿಗೆ ಭೂಮಿಗೆ ಅಪ್ಪಳಿಸುತ್ತಿರುವ ಉಲ್ಕೆಯನ್ನು ಸೆರೆಹಿಡಿದಿದೆ. ಹಾಗೆ ಶಬ್ದದೊಂದಿಗೆ ಸೆರೆ ಹಿಡಿಯಲಾದ ಮೊದಲ ವಿಡಿಯೋ ಇದಾಗಿದೆ. ಹೀಗಾಗಿ ವಿಶೇಷ ಎನಿಸಿದೆ. ಈವರೆಗೆ ಉಲ್ಕಾಪಾತದ ಪ್ರಕರಣಗಳು ತಡವಾಗಿ ಬೆಳಕಿಗೆ ಬಂದಿರುವುದು ಅಥವಾ ದಶಕಗಳ ಹಿಂದೆ ಉಂಟಾಗಿರುವುದು. ಇದೊಂದು ಸಣ್ಣದಾದ ಉಲ್ಕೆಯಾಗಿದೆ. ಹೀಗಾಗಿ ತೀವ್ರತೆ ಕೂಡ ಕಡಿಮೆಯಾಗಿದೆಯೇ ಇದೆ.
Meteorite impact recorded by a doorbell camera pic.twitter.com/FL0VpH2yQL
— curious side of 𝕏 (@curioXities) January 16, 2025
ಈ ಗ್ರಹವು ಮಂಗಳ ಹಾಗೂ ಗುರು ಗ್ರಹದ ನಡುವಿನ ಕಕ್ಷೆಯಿಂದ ಭೂಮಿಯತ್ತ ಹೊರಟು ಸುಮಾರು 330 ಮಿಲಿಯನ್ ಕಿ.ಮೀ ದೂರ ಪ್ರಯಾಣಿಸಿದೆ ಎಂದು ತಿಳಿದುಬಂದಿದೆ. ಇದು ಭೂಮಿಯ ಮೇಲೆ 2 ಸೆಂ.ಮೀ ದೊಡ್ಡದಾಗಿ ರಂಧ್ರಕ್ಕೆ ಕಾರಣವಾಗಿತ್ತು. ಇದು ಗಂಟೆಗೆ 200 ಕಿ.ಮೀ ವೇಗದಲ್ಲಿ ಭೂಮಿಗೆ ಅಪ್ಪಳಿಸಿದೆ.



Click it and Unblock the Notifications
