Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ತಮಿಳುನಾಡು ಮೀನುಗಾರರ ಬಲೆಗೆ ಬಿದ್ದ ಡೂಮ್ಸ್‌ಡೇ ಫಿಶ್..! ಆತಂಕ ಹುಟ್ಟಿಸಿರೋದ್ಯಾಕೆ?
2025ನೇ ವರ್ಷ ಆರಂಭವಾಗುತ್ತಿದ್ದಂತೆ ಹಲವು ರೀತಿಯ ದುರಂತಗಳು ನಡೆಯುತ್ತಿದೆ. ಒಂದು ಕಡೆ ಮಾನವ ನಿರ್ಮಿತ ದುರಂತಗಳಾದರೆ ಮತ್ತೊಂದು ಕಡೆ ನೈಸರ್ಗಿಕ ವಿಕೋಪಗಳು ಸಂಭವಿಸುತ್ತಿರುವುದು ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ. ಯುದ್ಧ, ವಿಮಾನ ದುರಂತ ಸೇರಿ ಹಲವು ದುರಂತಗಳು ನಡೆಯುತ್ತಿವೆ. ಇನ್ನೊಂದು ಕಡೆ ಸುನಾಮಿ, ಭೂಕಂಪ, ಪ್ರವಾಹದಂತಹ ಘಟನೆಗಳು ಸಾಮಾನ್ಯ ಎನ್ನುವಂತೆ ನಡೆಯುತ್ತಿದೆ.
ಸದ್ಯ ಈಗ ವಿಶ್ವದ ಹಲವು ಭಾಗದಲ್ಲಿ ಒಂದಲ್ಲಾ ಒಂದು ಘಟನೆಗಳು ವರದಿಯಾಗುತ್ತಿವೆ. ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಲೇ ಇದೆ. ಪ್ರವಾಹ, ಬರಗಾಲ, ಶೀತಗಾಳಿ, ಬಿಸಿಗಾಳಿಯಂತಹ ಹವಾಮಾನ ಸಂಬಂಧಿ ಘಟನೆಗಳು ಹೆಚ್ಚಾಗಿವೆ. ಈ ನಡುವೆ ವಿಚಿತ್ರ ವಿದ್ಯಮಾನಗಳು ನಡೆಯುತ್ತಿರುವುದು ಕೂಡ ನೋಡುತ್ತಿದ್ದೇವೆ.

ಅದರಲ್ಲೂ ಡೂಮ್ಸ್‌ಡೇ ಫಿಶ್ ಎಂದು ಕರೆಯಲ್ಪಡುವ ವಿಚಿತ್ರ ಮೀನು ಈಗ ಸಾಗರದ ಮೇಲ್ಮೈಯಲ್ಲಿ ಕಂಡುಬರುತ್ತಿರುವುದು ಬಹಳಷ್ಟು ಆತಂಕ ಹುಟ್ಟುಹಾಕಿದೆ. ಜಪಾನ್ ಜಾನಪದದಲ್ಲಿ ಓರ್‌ಫಿಶ್ ಎಂದು ಕರೆಯಲ್ಪಡುವ ವಿಚಿತ್ರವಾಗಿ ಕಾಣುವಂತಹ ಆಳಸಾಗರದ ಮೀನು ಈಗ ಸಮುದ್ರದ ಮೇಲೆ ಕಾಣಿಸುತ್ತಿರುವುದು ಅಪಾಯದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ.
ಆಸ್ಟ್ರೇಲಿಯನ್ ಸಮುದ್ರ ತೀರದಲ್ಲಿ ಕಾಣಿಸಿದ್ದ ಈ ಮೀನು ಈಗ ತಮಿಳುನಾಡಿನಲ್ಲೂ ಪತ್ತೆಯಾಗಿದೆ. ತಮಿಳುನಾಡಿನ ಮೀನುಗಾರರಿಗೆ ಈ ಅಪರೂಪದ ಮೀನು ಸಿಕ್ಕಿದೆ. ಅದರಲ್ಲೂ ಸ್ಥಳೀಯ ಮೀನುಗಾರರು ಸುಮಾರು 30 ಅಡಿ (9 ಮೀಟರ್) ಉದ್ದದ ಬೃಹತ್ ಓರ್‌ಫಿಶ್ ಅನ್ನು ಹಿಡಿದಿದ್ದಾರೆ. ಆಳ ಸಮುದ್ರ ಜೀವಿಯನ್ನು ಮೇಲೆ ಎತ್ತಲು 7 ಜನರ ಸಹಾಯ ಬೇಕಾಯಿತು, ಬೃಹತ್ ಗಾತ್ರದ ಈ ಮೀನು ನೋಡಿ ಎಲ್ಲರೂ ಆಘಾತಕ್ಕೊಳಗಾದರು. ಅದರ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲಯಾಣದಲ್ಲಿ ವೈರಲ್ ಆಗುತ್ತಿವೆ.
ಮೀನುಗಾರರ ಬಲೆಗೆ ಬಿದ್ದಿದ್ದ ಅತ್ಯಂತ ದೊಡ್ಡ ಓರ್‌ಫಿಶ್ ಅನ್ನು ಅವರು 7 ಮಂದಿ ಸೇರಿ ಹಿಡಿದಿರುವುದು ನೋಡಬಹುದು. ಈ ಮೀನುಗಳು ಆಳ ಸಮುದ್ರದಲ್ಲಿ ಮಾತ್ರವೇ ನೆಲೆಸಿರುತ್ತವೆ. ಆದ್ರೆ ಈ ಮೀನು ಕಾಣಿಸಿಕೊಂಡರೆ ಅಪಾಯ ಅಥವಾ ದುರಂತಗಳು ಸಂಭವಿಸಲಿದೆ ಎಂದು ನಂಬಲಾಗಿದೆ.
ಇದಕ್ಕೂ ಮೊದಲು ಕಾಣಿಸಿಕೊಂಡಿದ್ದೆಲ್ಲಿ?
ಜೂನ್ 2ರಂದು 3 ಮೀಟರ್ ಉದ್ದದ ಓರ್‌ಫಿಶ್ ಟ್ಯಾಸ್ಮೇನಿಯಾದ ಪಶ್ಚಿಮ ಕರಾವಳಿಯಲ್ಲಿ ಪತ್ತೆಯಾಗಿತ್ತು. ಅಲ್ಲಿನ ನಿವಾಸಿ ಸಿಬಿಲ್ ರಾಬರ್ಟ್‌ಸನ್ ಈ ಮೀನನ್ನು ಕಂಡು ಫೋಟೋ ಕ್ಲಿಕ್ಕಿಸಿದ್ದರು. ಇದು ಅಪಾಯದ ಮುನ್ಸೂಚನೆ ಎಂದು ಎಲ್ಲರು ಊಹಿಸಿದ್ದರು.
ನ್ಯೂಜಿಲೆಂಡ್ ಕಡಲ ತೀರದಲ್ಲೂ ಕಂಡಿತ್ತು ಮೀನು
ನ್ಯೂಜಿಲೆಂಡ್‌ನ ಡ್ಯುನೆಡಿನ್ ಬಳಿ ಜೂನ್ ತಿಂಗಳಲ್ಲಿ ಈ ಮೀನು ಕಾಣಿಸಿಕೊಂಡಿತ್ತು. ಹಾಗೆ ಮತ್ತೊಂದು ತಲೆ ಇಲ್ಲದ ಮೀನು ಕೂಡ ಕ್ರೈಸ್ಟ್ ಚರ್ಚ್ ಬಳಿಯಲ್ಲಿ ಕಾಣಿಸಿಕೊಂಡಿತ್ತು. ಈ ಅಪರೂಪದ ಘಟನೆಗಳು ಜೀವಶಾಸ್ತ್ರಜ್ಞರು ಹಾಗೆ ನಾಗರಿಕರಲ್ಲಿ ಕುತೂಹಲದ ಜೊತೆಗೆ ಆತಂಕಕ್ಕೆ ಕಾರಣವಾಗಿತ್ತು.
ಇದು 2025ರಲ್ಲಿ ಕಾಣಿಸಿಕೊಂಡ ಘಟನೆಗಳಾದರೆ 2024ರಲ್ಲೂ ಕೂಡ ಈ ಮೀನುಗಳು ಕಾಣಿಸಿಕೊಂಡಿದ್ದವು. ಆಗಸ್ಟ್‌ನಲ್ಲಿ ಕ್ಯಾಲಿಫೋರ್ನಿಯಾ ಕಡಲ ತೀರದಲ್ಲಿ 12 ಅಡಿ ಉದ್ದದ ಮೀನು ಕಾಣಿಸಿಕೊಂಡಿತ್ತು, ಇದಾದ ಎರಡು ದಿನಗಳ ಬಳಿಕ ಲಾಸ್ ಏಂಜಲಿಸ್‌ನಲ್ಲಿ 4.4 ತೀವ್ರತೆಯ ಭೂಕಂಪ ಸಂಭವಿಸಿದ್ದು ನಾವು ನೆನಪು ಮಾಡಿಕೊಳ್ಳಬಹುದು. ಕ್ಯಾಲಿಫೋರ್ನಿಯಾದ ಕಡಲ ತೀರದಲ್ಲಿ ಕಾಣಿಸಿಕೊಂಡ ಒಂದು ತಿಂಗಳ ನಂತರ ಆಸ್ಟ್ರೇಲಿಯಾದ ಉತ್ತರ ಭಾಗದ ದ್ವೀಪಗಳ ಬಳಿ ಮತ್ತೊಂದು ಓರ್‌ಫಿಶ್ ಕಾಣಿಸಿಕೊಂಡಿತು.
ಓರ್‌ಫಿಶ್ ಆಳ ಸಮುದ್ರ ಜೀವಿಯಾಗಿದ್ದು, ಅವು 30 ಅಡಿಗಿಂತಲೂ ಹಚ್ಚು ಉದ್ದವಾಗಿ ಬೆಳೆಯಲಿವೆ. ಹಾಗೆ ಅಪರೂಪದಲ್ಲಿ ಅಪರೂಪಕ್ಕೆ ಅವು ಕಣ್ಣಿಗೆ ಕಾಣಸಿಗುತ್ತವೆ. ಆದರೆ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಉದಾಹರಣೆಗಳು ಕಡಿಮೆಯಾಗಿತ್ತು. ಆದ್ರೆ ಕೆಳೆದ ಎರಡು ವರ್ಷದಲ್ಲಿ ಆಗಾಗ ಸಮುದ್ರದ ಮೇಲ್ಮೈಯಲ್ಲಿ ಈ ಮೀನುಗಳು ಕಾಣಸಿಗುತ್ತಿವೆ.



Click it and Unblock the Notifications
