Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
7 ಗ್ರಹಗಳು ಒಂದೇ ರೇಖೆಯಲ್ಲಿ ಗೋಚರ..! ಯಾವಾಗ..? ಎಲ್ಲಿ ನೋಡಬಹುದು..!?
ಸೌರ ಮಂಡಲದಲ್ಲಿ ಎಷ್ಟೆಲ್ಲಾ ಕೌತುಕಗಳು, ಕುತೂಹಲ, ಅಚ್ಚರಿಯ ವಿಚಾರಗಳು ನಡೆಯುತ್ತವೆ ಅನ್ನೋದು ನಿಮಗೆಲ್ಲಾ ತಿಳಿದಿರಬಹುದು. ಕೆಲವೊಮ್ಮೆ ವಿಜ್ಞಾನಕ್ಕೂ ಸವಾಲು ಎಸೆಯುವ ಅದೆಷ್ಟೋ ಕೌತುಕಗಳು ನಡೆದಿವೆ. ಹಾಗೆ ಕೆಲವೊಮ್ಮೆ ನಮ್ಮನ್ನು ಮತ್ತಷ್ಟು ಯೋಚಿಸುವಂತೆ ಮಾಡುತ್ತವೆ. ಹಾಗೆ ಈ ವರ್ಷ ಆಗಸದಲ್ಲಿ ಕೆಲವೊಂದು ಅಚ್ಚರಿಯ ವಿಚಾರಗಳು ನಡೆಯುತ್ತಿವೆ.
ಈ ವರ್ಷ ಸೌರ ಮಂಡಲದಲ್ಲಿ ನಡೆಯಲಿರುವ ಅಚ್ಚರಿ ವಿಚಾರದಲ್ಲಿ ಈ ಬಾರಿ ಎಲ್ಲಾ 7 ಗ್ರಹಗಳು ಒಂದೇ ಸಾಲಿನಲ್ಲಿ ಬರುವಂತಹ ಅಪರೂಪದ ವಿದ್ಯಮಾನ ನಡೆಯುತ್ತದೆ. ಇದೇ ಫೆಬ್ರವರಿ 28ರಂದು ಸೌರಮಂಡದಲ್ಲಿ ಅಪರೂಪದ ಘಟನೆಗಳು ನಡೆಯಲಿದೆ. 7 ಗ್ರಹಗಳು ಒಂದೇ ಸಾಲಿನಲ್ಲಿ ಬಂದು ನಿಲ್ಲಲಿವೆ. ಶನಿ, ಬುಧ, ನೆಪ್ಚ್ಯೂನ್, ಶುಕ್ರ, ಯುರೇನೆಸ್, ಗುರು ಮತ್ತು ಮಂಗಳ ಎಲ್ಲವು ಒಂದೇ ಸಾಲಿನಲ್ಲಿ ಬಂದು ನಿಲ್ಲಲಿವೆ.

ಹೀಗಾಗಿ ಈ ವಿದ್ಯಮಾನ ಎಲ್ಲಾ ಖಗೋಳ ತಜ್ಞರಲ್ಲಿ ಕುತೂಹಲ ಮೂಡುವಂತೆ ಮಾಡಿದೆ. ಇನ್ನು ಇದಕ್ಕೂ ಮೊದಲು ಅಂದರೆ ಜನವರಿ 21ರಂದು
ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳಲಿದೆ. ಬುಧ ಗ್ರಹವನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಿಕೊಳ್ಳಲಿದೆ. ಇದು ಸಾಮಾನ್ಯ ಪ್ರಕ್ರಿಯೆ ಅಲ್ಲವೇ ಅಲ್ಲ.
ಸೂರ್ಯನ ಸಮನಾಂತರವಾಗಿ ಎಲ್ಲಾ ಗ್ರಹಗಳು ಸಾಲಿನಲ್ಲಿ ಕಾಣಿಸಿಕೊಳ್ಳುವುದು ಬಲು ಅಪರೂಪ. ಸಾಮಾನ್ಯವಾಗಿ ಮೂರರಿಂದ 8 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸುತ್ತವೆ. ಆದ್ರೆ ಎಲ್ಲಾ ಗ್ರಹಗಳು ಒಂದೇ ಸಾಲಿನಲ್ಲಿ ಬರುವುದು ಅಪರೂಪ. ಹಾಗೆ 5ರಿಂದ 6 ಗ್ರಹಗಳು ಒಂದೇ ಸಾಲಿಗೆ ಬರುವುದು ದೊಡ್ಡ ವಿದ್ಯಮಾನ ಎಂದು ಪರಿಗಣಿಸಲಾಗಿದೆ. 5ಕ್ಕಿಂತ ಕಡಿಮೆ ಸಂಖ್ಯೆಯ ಗ್ರಹಗಳು ಒಂದೇ ಸಾಲಿನಲ್ಲಿ ಬರುವ ಪ್ರಕ್ರಿಯೆ ನಡೆಯುವುದು ಸಾಮಾನ್ಯ ಎಂದು ವರ್ಗೀಕರಿಸಲಾಗಿದೆ.
ಈಗ ಜನವರಿ 21ರಂದು 6 ಗ್ರಹಗಳು ಒಂದೇ ಸಾಲಿನಲ್ಲಿ ಕಾಣಿಸಲಿದೆ. ಹಾಗೆ ಫೆಬ್ರವರಿ 28ರಂದು ಎಲ್ಲಾ ಗ್ರಹಗಳು ಒಂದೇ ಸಾಲಿನಲ್ಲಿ ಬರುತ್ತಿವೆ. ಹೀಗಾಗಿ ಇದೊಂದು ವಿಶೇಷ ವಿದ್ಯಮಾನವೆಂದು ಪರಿಗಣಿಸಲಾಗಿದೆ. ಆದ್ರೆ ನೀವು ಊಹಿಸಿದಂತೆ ಸೌರ ಮಂಡಲದ ಈ ಗ್ರಹಗಳು ಸಾಲುಗಟ್ಟಿ ಒಂದೇ ಸರಳ ರೇಖೆಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಿಗೆ ಇದು ವಕ್ರ ರೇಖೆಯಲ್ಲಿ ಕಾಣಿಸಲಿದೆ. ನೇರವಾಗಿರದೆ ಸ್ವಲ್ಪ ಬಾಗಿದ ರೇಖೆಯಲ್ಲಿ ಇವು ಕಾಣಿಸಲಿದೆ.
ಸೌರವ್ಯೂಹದ ಎಲ್ಲಾ ಗ್ರಹಗಳು ಸೂರ್ಯನ ಸುತ್ತ ಎಕ್ಲಿಪ್ಟಿಕ್ ಎಂಬ ಸಮತಟ್ಟಾದ ಸಮತಲದಲ್ಲಿ ಸುತ್ತುವುದರಿಂದ ಈ ಪ್ರಕ್ರಿಯೆ ಸಂಭವಿಸುತ್ತದೆ. ಆದ್ರೆ ಎಲ್ಲಾ ಗ್ರಹಗಳು ಒಂದೇ ಕಕ್ಷೆಯಲ್ಲಿ ಕಾಣಿಸುವುದಿಲ್ಲ. ಕೆಲವೊಂದು ಸ್ವಲ್ಪ ಕೆಳಗೆ ಅಥವಾ ಬಾಗಿದ ಕಕ್ಷೆ ಹಾಗೆ ಇನ್ನು ಕೆಲವು ಮೇಲ್ಭಾಗದ ಕಕ್ಷೆಯಲ್ಲಿ ಕಾಣಿಸಲಿದೆ. ಆದ್ರೆ ಓರೆಯಾಗಿ ಎಲ್ಲವು ಒಂದೇ ರೇಖೆಯ ಮೇಲೆ ಮೂಡುತ್ತವೆ.
ವೀಕ್ಷಿಸುವುದು ಹೇಗೆ?
ನಾವಿಲ್ಲಿ ತಿಳಿಸಿರುವ ದಿನಾಂಕ ಅಂತಾರಾಷ್ಟ್ರೀಯ ಸಮಯಕ್ಕೆ ಹೊಂದಿಕೆಯಾಗುತ್ತಿದೆ. ಭಾರತದಲ್ಲಿ ಈ ಸಮಯ ಬದಲಾಗಬಹುದು. ಹಾಗೆ ಈ ವಿದ್ಯಮಾನ ವೀಕ್ಷಿಸಲು ಟೆಲಿಸ್ಕೋಪ್ ಸಾಧನ ಬಹಳ ಮುಖ್ಯ. ಹಾಗೆ ಆಕಾಶದಲ್ಲಿ ಮೋಡಗಳಿಲ್ಲದಿದ್ದರೆ ಬರಿಗಣ್ಣಿಗೆ ಈ ಹೊಳೆಯುವ ನಕ್ಷತ್ರಗಳ ನೋಡಬಹುದು, ಆದ್ರೆ ಯಾವ ಗ್ರಹವೆಂದು ಪತ್ತೆ ಮಾಡುವುದು ಕಷ್ಟವಾಗುತ್ತದೆ. ಹತ್ತಿರದಲ್ಲಿ ವಿಜ್ಞಾನ ಕೇಂದ್ರವಿದ್ದರೆ ಅಲ್ಲಿಗೆ ತೆರಳಿ ವೀಕ್ಷಿಸಬಹುದು.



Click it and Unblock the Notifications