Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಪರೂಪದ ಬ್ಲಾಂಕೆಟ್ ಆಕ್ಟೋಪಸ್ ಪತ್ತೆ..! ಆಳ ಸಮುದ್ರದಲ್ಲಿ ಕೋಲಾಹಲಕ್ಕೆ ಕಾರಣವೇನು?
ಇತ್ತೀಚಿಗೆ ಸಮುದ್ರದಲ್ಲಿ ವಿಚಿತ್ರ ಜೀವಿಗಳು ಕಾಣಿಸಿಕೊಳ್ಳುವುದು ಹೊಸ ರೀತಿಯ ಆತಂಕ ಹುಟ್ಟಿಸಿರುವುದು ನೋಡಬಹುದು. ಆಳ ಸಮುದ್ರದಲ್ಲಿ ಜೀವಿಸುವ ಹೊಸ ರೀತಿಯ ಹಾಗೆ ಬಹಲ ಅಪರೂಪದ ಜೀವಿಗಳು ಸಮುದ್ರದ ಮೇಲ್ಮೈಯಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿರುವ ಹಲವು ಘಟನೆಗಳು ವರದಿಯಾಗಿವೆ. ಅದರಲ್ಲೂ ವಿಚಿತ್ರವಾಗಿ ಕಾಣಿಸುವ ಜೀವಿಗಳು ಸಮುದ್ರ ತೀರದಲ್ಲಿ ಪತ್ತೆಯಾಗಿರುವುದು ಸಹ ನೋಡಬಹುದು.
ಹಾಗೆ ಈ ವಿಚಿತ್ರ ಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಅಪಾಯದ ಮನ್ಸೂಚನೆ ಎಂಬುದಾಗಿಯೂ ಹೇಳಲಾಗುತ್ತಿದೆ. ಈ ಎಲ್ಲ ಅಚ್ಚರಿಗಳ ನಡುವೆ ಈಗ ಮತ್ತೊಂದು ವಿಚಿತ್ರ ಜೀವಿ ಕಾಣಿಸಿಕೊಂಡಿದೆ. ಅದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಮುದ್ರದ ಮೇಲ್ಭಾಗದಲ್ಲಿ ಕಪ್ಪು ಬಣ್ಣದ ವಿಚಿತ್ರ ಜೀವಿಯಿಂದು ಈಜುತ್ತಿರುವುದು ವಿಡಿಯೋದಲ್ಲಿ ಸರೆಯಾಗಿದೆ.

ಅದು ಬೃಹತ್ ಆಕ್ಟೋಪಸ್ ರೀತಿಯ ತಲೆ ಹೊಂದಿದೆ. ಆದ್ರೆ ಕಾಲುಗಳನ್ನು ಹೊಂದಿಲ್ಲ. ಬಾಲದ ಆಕಾರದಲ್ಲಿ ಉದ್ದನೆಯ ಜೀವಿಯೊಂದು ಈಜುತ್ತಿರುವುದು ನೋಡಬಹುದು. ಆದ್ರೆ ಈ ಜೀವಿ ಯಾವುದು ಎಂಬುದನ್ನು ಉತ್ತರಿಸಲು ನೆಟ್ಟಿಗರು ಹುಡುಕಾಡಿದ್ದಾರೆ. ಹಾಗೆ ಇದೇ ಮೊದಲ ಬಾರಿಗೆ ಈ ರೀತಿಯ ವಿಚಿತ್ರ ಆಕಾರದ ಜೀವಿಯ ನೋಡಿ ಎಲ್ಲರು ಅಚ್ಚರಿಗೆ ಒಳಗಾಗಿದ್ದಾರೆ. ಆದ್ರೆ ಇದನ್ನು ಏಲಿಯನ್ ಆಕ್ಟೋಪಸ್, ಬ್ಲಾಂಕೆಟ್ ಆಕ್ಟೋಪಸ್ ಎಂದು ಹಲವರು ಕರೆಯುತ್ತಾರೆಂದು ನೆಟ್ಟಿಗರು ಹೇಳಿಕೊಂಡಿದ್ದಾರೆ.
ಆದ್ರೆ ಈ ಬ್ಲಾಂಕೆಟ್ ಆಕ್ಟೋಪಸ್ ಕಾಣಿಸಿಕೊಳ್ಳುವುದು ಬಹಳ ಅಪರೂಪದಲ್ಲಿ ಅಪರೂಪದ ಘಟನೆಯಂತೆ ಆಳ ಸಮುದ್ರ ಜೀವಿ ಆಗಿರುವ ಇದು ಮೀನುಗಾರರ ಬಲೆಗಳಿಗೂ ಸಿಕ್ಕಿರುವ ಉದಾಹರಣೆ ಇಲ್ಲವಂತೆ. ಹಾಗೆ ಈ ಜೀವಿ ಕಾಣಿಸಿಕೊಳ್ಳುವುದು ಶುಭ ಸೂಚನೆಯಲ್ಲ ಎಂದು ತಿಳಿದುಬಂದಿದೆ.
'AMAZlNGNATURE' ಎಕ್ಸ್ ಹ್ಯಾಂಡಲ್ ಮೂಲಕ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಅನ್ನು ಇಂದು ಹಂಚಿಕೊಳ್ಳಲಾಗಿದೆ ಮತ್ತು ಜನರಿಂದ 56K ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ಮತ್ತೊಬ್ಬರ ಪ್ರಕಾರ ಇದು ವಿಷಕಾರ ಆಕ್ಟೋಪಸ್ ಅಂತೆ, ಇದು ಕುಟುಕಿದರೆ ಜೀವ ಹಾನಿಯಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ. ಹಾಗೆ ಇದೊಂದು ಆಳ ಸಮುದ್ರದ ಜೀವಿಯಾಗಿದ್ದು, ಎಲ್ಲಿಯೂ ನೋಡಲು ಸಾಧ್ಯವಿಲ್ಲ ಎಂಬುದು ಅವರ ಅಭಿಪ್ರಾಯವಾಗಿದೆ.
ಹಾಗೆ ಕೆಲವು ಸಂಸ್ಕೃತಿಯಲ್ಲಿ ಈ ಜೀವಿ ಸಮುದ್ರದ ಮೇಲೆ ಕಾಣಿಸಿಕೊಳ್ಳುವುದು ಶುಭ ಸೂಚನೆಯಲ್ಲ ಎಂದು ಮತ್ತೊಬ್ಬರು ಬರೆದಿದ್ದಾರೆ. ಆದ್ರೆ ಈ ವಿಚಿತ್ರ ಜೀವಿ ಯಾವ ಸಮುದ್ರ ತೀರದಲ್ಲಕಿ ಪತ್ತೆಯಾಗಿದೆ ಎಂಬುದನ್ನು ವಿವರಿಸಲಾಗಿಲ್ಲ. ಹಾಗೆ ಇದು ನಿಜವಾಗಲು ಬ್ಲಾಂಕೆಟ್ ಆಕ್ಟೋಪಸ್ ಜೀವಿಯೇ ಎಂಬುದಕ್ಕೂ ಖಚಿತ ಮಾಹಿತಿ ಇಲ್ಲ.
ಆದ್ರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ವಿಚಿತ್ರ ಸಮುದ್ರ ಜೀವಿಗಳು ಕಾಣಿಸಿಕೊಳ್ಳುತ್ತಿರುವುದು ಮಾತ್ರ ಅಚ್ಚರಿಯ ಜೊತೆಗೆ ಆತಂಕಕ್ಕೂ ಕಾರಣವಾಗಿದೆ. ಈ ಮೊದಲು ಮೆಕ್ಸಿಕೋ ಕಡಲ ತೀರದಲ್ಲಿ ಅಪರೂಪದ ಡೋಮ್ಸ್‌ಡೇ ಓರ್‌ಫಿಶ್ ಪತ್ತೆಯಾಗಿತ್ತು. ಆಳ ಸಮುದ್ರದ ಜೀವಿ ಏಕಾಏಕಿ ಸಮುದ್ರದ ದಡಕ್ಕೆ ಬಂದಿರುವುದು ಕಂಡು ಎಲ್ಲರು ಶಾಕ್ ಆಗಿದ್ದರು. ಇದು ಕಾಣಿಸಿಕೊಳ್ಳುವುದು ಜಪಾನ್ ಸಂಸ್ಕೃತಿಯಲ್ಲಿ ಅತ್ಯಂತ ಕೆಟ್ಟ ದಿನಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ. ಹಾಗೆ ಇತ್ತಿಚಿಗೆ ಇಂಗ್ಲೆಂಡ್‌ನ ಮಾರ್ಗೆಟ್ ಸಮುದ್ರ ತೀರದಲ್ಲಿ ಏಲಿಯನ್ ರೀತಿಯ ಮೀನ ಆಕಾರದ ಜೀವಿ ಕೂಡ ಪತ್ತೆಯಾಗಿತ್ತು. ಅದರ ಅಸ್ಥಿಪಂಜರವು ಜನರಲ್ಲಿ ಆತಂಕ ಹುಟ್ಟಿಸುವಂತೆ ಮಾಡಿತ್ತು.
ಹಾಗೆ ಇತ್ತೀಚಿಗೆ ಆಫಿಕಾದ ಕ್ಯಾನರಿ ದ್ವೀಪಗಳ ಸಾಲಿನಲ್ಲಿ ಮೊದಲ ಬಾರಿಗೆ ಬ್ಲಾಕ್ ಸೀಡೆವಿಲ್ ಫಿಶ್ ಪತ್ತೆಯಾಗಿತ್ತು, ಇದು ಸಮುದ್ರ ಅತ್ಯಂತ ಆಳ ಪ್ರದೇಶದಲ್ಲಿ ವಾಸಿಸುವ ಏಕೈಕ ಮೀನಾಗಿದೆ. ಆದ್ರೆ ಸಮುದ್ರದ ಮೇಲ್ಮೈಯಲ್ಲಿ ಇದು ಕಂಡುಬಂದಿತ್ತು. ಈ ವಿದ್ಯಮಾನ ಕೂಡ ಹಲವರಲ್ಲಿ ಅಚ್ಚರಿಯ ಜೊತೆಗೆ ಆಘಾತಕ್ಕೆ ಕಾರಣವಾಯಿತು.



Click it and Unblock the Notifications
