Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ರಣಬೀರ್-ಆಲಿಯಾ ಭಟ್ 250 ಕೋಟಿ ಮೌಲ್ಯ ಭವ್ಯ ಬಂಗಲೆ: ಅದರ ವಿಶೇಷ ಗೊತ್ತಾ?
ಬಾಲಿವುಡ್ ಬ್ಯೂಟಿಫುಲ್ ಜೋಡಿಗಳಲ್ಲಿ ಆಲಿಯಾ ಭಟ್ ಹಾಗೆ ರಣಬೀರ್ ಕಪೂರ್ ಜೋಡಿ ವಿಶೇಷ ಎನಿಸುತ್ತದೆ. ಇಬ್ಬರು ಎಲ್ಲಾ ಕಡೆಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳವುದು ಸಾಮಾನ್ಯ ಎನ್ನುವಂತಾಗಿದೆ. ಹಾಗೆ ಮಗಳಾದ ರಾಹಾ ಕಪೂರ್ ಒಟ್ಟಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಕಾಣಿಸಿಕೊಂಡು ಸುದ್ದಿಯಾಗುತ್ತಿದ್ದರು.
ರಣಬೀರ್ ಕಪೂರ್ ಯಶ್ ಜೊತೆಯಾಗಿ ರಾಮಾಯಣದಲ್ಲಿ ನಟಿಸುತ್ತಿರುವುದರಿಂದ ಈಗ ಅವರ ಕುರಿತಾಗಿ ಹಾಗೆ ಅವರ ಮುಂಬವರು ಸಿನಿಮಾಗಳ ಕುರಿತು ಬಹಳಷ್ಟು ನಿರೀಕ್ಷೆಗಳಿವೆ. ಸದ್ಯ ಈಗ ಮುದ್ದಾದ ಜೋಡಿಯ ಹೊಸ ಐಷಾರಾಮಿ ನಿವಾಸ ಕುರಿತಾಗಿ ಭಾರೀ ಸದ್ದು ಕೇಳಿಬರುತ್ತಿದೆ. ಈ ಇಬ್ಬರು ಸ್ಟಾರ್ಸ್ ಈಗ ಬರೋಬ್ಬರಿ 250 ಕೋಟಿ ಮೌಲ್ಯದ ಐಷಾರಾಮಿ ಬಂಗಲೆಯಲ್ಲಿ ನೆಲೆಸಲಿದ್ದಾರೆ.

ಹೌದು ಒಂದು ಸಿನಿಮಾಗೆ ಇಬ್ಬರು ಜೋಡಿ ಕೋಟಿ ಕೋಟಿ ರೂಪಾಯಿಯ ಸಂಭಾವನೆ ಪಡೆಯುತ್ತಾರೆ. ಹಾಗೆ ಇಬ್ಬರು ಈಗ ಹಿಟ್ ಸಿನಿಮಾಗಳ ನೀಡಿದ್ದಾರೆ. ಈಗ ಬರೋಬ್ಬರಿ 6 ಅಂತಸ್ಥಿನ ಬಂಗಲೆಯಲ್ಲಿ ನೆಲೆಸಲು ಸಿದ್ಧತೆ ನಡೆಸಿದ್ದಾರೆ. ಹಲವು ವರ್ಷದ ಕನಸೊಂದು ಈಗ ನನಸು ಮಾಡಿಕೊಳ್ಳಲು ಅವರು ಮುಂದಾಗಿದ್ದಾರೆ. ಇತ್ತೀಚೆಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಹೊಸ ವಿಡಿಯೋ ಅಭಿಮಾನಿಗಳಿಗೆ ಅದ್ಭುತವಾದ ಮುಂಭಾಗದ ಮೊದಲ ಪೂರ್ಣ ನೋಟವನ್ನು ಸೆರೆ ಹಿಡಿದಿದೆ. ಯಾರು ಊಹಿಸಲಾಗದಷ್ಟು ಭವ್ಯವಾಗಿ ಈ ಬಂಗಲೆಯ ಚಿತ್ರಣ ಮೂಡಿಬಂದಿದೆ.
ಮುಂಬೈನ ಐಶಾರಾಮಿ ಪ್ರದೇಶಗಳಲ್ಲಿ ಒಂದಾಗಿರುವ ಬಾಂದ್ರಾದ ಪಾಲಿ ಹಿಲ್ಸ್‌ನಲ್ಲಿ ಈ ಅರಮನೆ ಎದ್ದು ನಿಂತಿದೆ. ಇದು ಕಪೂರ್ ಫ್ಯಾಮಿಲಿಗೆ ಸೇರಿದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಇದೇ ಜಾಗದಲ್ಲಿ ಕೃಷ್ಣರಾಜ್ ಬಂಗಲೆ ನಿರ್ಮಾಣಗೊಂಡಿತ್ತು, ಇಲ್ಲಿಯೇ ಕಪೂರ್ ಫ್ಯಾಮಿಲಿಯ ನೆನಪುಗಳಿವೆಯಂತೆ. ಈಗ ಹೊಸ ಮನೆಯಲ್ಲಿ ಕಪೂರ್ ಕುಟುಂಬ ಮತ್ತೆ ನೆಲೆಸುತ್ತಿದೆ.
ಈ ವಿಶೇಷ ಮನೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಸೇರಿದಂತೆ ಐಷಾರಾಮಿ ಒಳಾಂಗಣ, ತಂತ್ರಜ್ಞಾನವನ್ನು ಹೊಂದಿವೆಯಂತೆ. ವಿಶ್ವದ ಅತ್ಯುತ್ತಮ ವಸ್ತುಗಳನ್ನು ಬಳಸಿ ಈ ಮನೆಯ ರಚನೆಯನ್ನು ಸುಂದರವಾಗಿಸಲಾಗಿದೆಯಂತೆ. ಅಲಂಕಾರಿಕ ವಸ್ತುಗಳಿಂದ ಹಿಡಿದು ಪ್ರತಿಯೊಂದು ವಸ್ತುವನ್ನ ಖುದ್ದು ಈ ಜೋಡಿಯೇ ಆಯ್ಕೆ ಮಾಡಿದ್ದಾರಂತೆ.
ಈ ಮನೆಯ ವಿಶೇಷಗಳೇನು?
ಈ ಐಷಾರಾಮಿ 6 ಅಂತಸ್ತಿನ ಮನೆಯಲ್ಲಿ ಒಬ್ಬ ವ್ಯಕ್ತಿಗೆ ಏನೆಲ್ಲಾ ಅವಶ್ಯಕತೆ ಇದೆ ಇದೆಯೋ ಅದೆಲ್ಲಾ ಬೆರಳ ತುದಿಯಲ್ಲೇ ಸಿಗಲಿದೆಯಂತೆ. ಅತ್ಯಾಧುನಿಕ ಜಿಮ್, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಆಟದ ಕೋಣೆ, ಲಿವಿಂಗ್ ರೂಮ್, ಗೇಮ್ ಝೋನ್ ಏರಿಯಾ, ಖಾಸಗಿ ಬಾರ್, ಪಾರ್ಕಿಂಗ್, ಗ್ಯಾರೇಜ್, ಲೈಬ್ರೆರಿ ಸೇರಿ ಹಲವು ವಿಶೇಷತೆಗಳಿಂದ ತುಂಬಿದೆ.
ಹಾಗೆ ಮನೆಯ ಲಿವಿಂಗ್ ರೂಮ್ ವರೆಗೂ ಕಾರುಗಳು ಚಲಿಸಬಹುದು. ಲಿಫ್ಟ್ ಮುಖಾಂತರವಾಗಿ ಕಾರು ಮನೆಯೊಳಗೆ ತೆಗೆದುಕೊಂಡು ಹೋಗಬಹುದಾದ ತಂತ್ರಜ್ಞಾನ ಕೂಡ ಬಳಕೆ ಮಾಡಲಾಗಿದೆ.
ಅವರ ಈ ಹೊಸ ಬಂಗಲೆಯು ಈ ವರ್ಷವೇ ಭವ್ಯ ಸಮಾರಂಭದ ಬಳಿ ವಾಸಯೋಗ್ಯವಾಗಲಿದೆಯಂತೆ, ಈಗಾಗಲೇ ಎಲ್ಲಾ ಕೆಲಸಗಳು ಅಂತ್ಯಗೊಂಡಿದೆ ಎನ್ನಲಾಗಿದೆ. ಹಾಗೆ ಈ ಬಂಗಲೆಯ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನೋಡಬಹುದು. ಇನ್ನು ಈ ಬಂಗಲೆಯ ಫೋಟೋಗಳು, ವಿಡಿಯೋಗಳನ್ನು ಹಂಚಿಕೊಳ್ಳಬೇಡಿ ಎಂದು ಆಲಿಯಾ ಭಟ್ ಈ ಮೊದಲು ಪ್ರತಿಕ್ರಿಯಿಸಿದ್ದರು. ಒಬ್ಬರ ಖಾಸಗಿತನವನ್ನು ಅವರ ಅನುಮತಿಯಿಲ್ಲದೆಯೇ ಪ್ರಸಾರ ಮಾಡುವುದು ಕಾನೂನು ಬಾಹಿರ ಎಂದು ಅವರು ಹೇಳಿದ್ದರು.
ರಣಬೀರ್ ಕಪೂರ್ ಒಂದು ಸಿನಿಮಾಗೆ ಬರೋಬ್ಬರಿ 150 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ರಾಮಾಯಣದ ಮೊದಲ ಪಾರ್ಟ್‌ಗೆ 150 ಕೋಟಿ ರೂ ಸಂಭಾವನೆ ಪಡೆಯುತ್ತಿದ್ದಾರೆ. ಈ ಹಿಂದಿನ ಅನಿಮಲ್ ಸಿನಿಮಾಗೆ ಅವರು ಸುಮಾರು 30 ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.



Click it and Unblock the Notifications
