Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರಂಜಾನ್: ಮದುವೆಯಾಗದ ಜೋಡಿ ಪಾಲಿಸಲೇಬೇಕಾದ ಕಟ್ಟುನಿಟ್ಟಿನ ನಿಯಮಗಳಿವು
ಮುಸ್ಲಿಂರ ಪವಿತ್ರ ತಿಂಗಳಾದ ರಂಜಾನ್ ಶುರುವಾಗಿದೆ. ಈ ತಿಂಗಳಿನಲ್ಲಿ ರೋಜಾ ಅಂದರೆ ಉಪವಾಸ ನಿಯಮಗಳನ್ನು ಪಾಲಿಸುವುದರ ಜೊತೆಗೆ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
ಈ ಸಮಯದಲ್ಲಿ ಅವಿವಾಹಿತ ಮುಸ್ಲಿಂ ಜೋಡಿ ಕೆಲವೊಂದು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ, ಅವುಗಳೇನು ಎಂದು ನೋಡುವುದಾದರೆ:

ಅಪ್ಪಿಕೊಳ್ಳುವುದು, ಮುತ್ತಿಕ್ಕುವುದು, ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ: ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಆಚರಿಸಲಾಗುವುದು. ವಿವಾಹಿತರು ಉಪವಾಸ ಸಮಯದಲ್ಲಿ ಪತಿ-ಪತ್ನಿ ರೊಮ್ಯಾನ್ಸ್ ಮಾಡುವಂತಿಲ್ಲ, ಆದರೆ ಉಪವಾಸ ಮುರಿದ ಮೇಲೆ ಒಂದಾಗಬಹುದು. ಆದರೆ ಅವಾಹಿತ ಜೋಡಿ ಹಗಲು, ರಾತ್ರಿಯಲ್ಲಿ ಒಬ್ಬರನ್ನೊಬ್ಬರು ಮುಟ್ಟುವಂತಿಲ್ಲ.
ಮದುವೆಯಾಗದ ಜೋಡಿ ದೈಹಿಕವಾಗಿ ಒಂದಾಗುವುದು ಪಾಪವೆಂದು ಪರಿಗಣಿಸಲಾಗುವುದು.
ಪಾರ್ಟಿ ಮಾಡುವಂತಿಲ್ಲ
ರಂಜಾನ್ ಸಮಯದಲ್ಲಿ ಹರಾಮ್ ಕಾರ್ಯವನ್ನು ಮಾಡುವಂತಿಲ್ಲ. ಅಂದರೆ ಕುಡಿಯುವುದು, ಪಾರ್ಟಿ ಮಾಡುವುದು ಮಾಡುವಂತಿಲ್ಲ. ಈ ಸಮಯದಲ್ಲಿ ಕಟ್ಟುನಿಟ್ಟಿನ ಉಪವಾಸ ನಿಯಮಗಳನ್ನು ಪಾಲಿಸಬೇಕು.
ಈ ಅವಧಿಯಲ್ಲಿ ಇಬ್ಬರು ಜೊತೆಯಾಗಿ ಸುತ್ತುವುದು, ಎಂಜಾಯ್ ಮಾಡುವುದು ಮಾಡುವಂತಿಲ್ಲ.
ಫ್ಲರ್ಟ್ ಮಾಡುವಂತಿಲ್ಲ
ರಂಜಾನ್ ಸಮಯದಲ್ಲಿ ಹೆಣ್ಣಾಗಲಿ, ಗಂಡಾಗಲಿ ಫ್ಲರ್ಟ್ ಮಾಡುವಂತಿಲ್ಲ. ಒಂದು ವೇಳೆ ಮಾಡಿದರೆ ಅವರಿಗೆ ಪಾಪ ಸುತ್ತಿಕೊಳ್ಳುತ್ತದೆ ಎಂದು ಹೇಳಲಾಗುವುದು.
ಇನ್ನ ಎಂಗೇಜ್ ಆದ ಜೋಡಿ ಈ ಸಮಯದಲ್ಲಿ ರೊಮ್ಯಾಂಟಿಕ್ ಮಾತುಗಳನ್ನಾಡುವಂತಿಲ್ಲ. ಇಬ್ಬರ ಈ ಅವಧಿಯಲ್ಲಿ ಬೇರೆ-ಬೇರೆ ಇದ್ದು ಧರ್ಮದ ಕಟ್ಟುಪಾಡುಗಳನ್ನು ಅನುಸರಿಸಬೇಕು.
ಮೈ ಮುಚ್ಚು ಬಟ್ಟೆ ಧರಿಸಬೇಕು
ಮಹಿಳೆಯರು ಮೈ ಮುಚ್ಚುವ ಬಟ್ಟೆ ಧರಿಸಬೇಕು. ಬಿಗಿಯಾದ ಬಟ್ಟೆ ಧರಿಸಬಾರದು. ಅಭಯ ಅಂದರೆ ಸಡಿಲವಾದ ಬಟ್ಟೆ ಧರಿಸಬೇಕು. ಈ ನಿಯಮಗಳು ಮಹಿಳೆಯರಿಎ ಮಾತ್ರ ಎಂಬುವುದು ತಪ್ಪು ಕಲ್ಪನೆ. ಮುಸ್ಲಿಂ ಧರ್ಮದ ಪುರುಷರು ಸಂಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸಬೇಕು. ಶಾರ್ಟ್ಸ್, ನಿಕ್ಕರ್ ಅಂತ ಧರಿಸಿ ಓಡಾಡುವಂತಿಲ್ಲ.
ಡೇಟಿಂಗ್ ಮಾಡವಂತಿಲ್ಲ
ಅವಾಹಿತ ಜೋಡಿ ಡೇಡಿಂಗ್ ಹೋಗುವಂತಿಲ್ಲ. ಈ ತಿಂಗಳಿನಲ್ಲಿ ಅವಾಹಿತ ಹೆಣ್ಣು-ಗಂಡು ಜೋಡಿಯಾಗಿ ಸುತ್ತುವಂತಿಲ್ಲ,ಡೇಟಿಂಗ್ ಅಂತ ಪ್ಲ್ಯಾನ್ ಮಾಡುವಂತಿಲ್ಲ.
ರಂಜಾನ್ ತಿಂಗಳಿನಲ್ಲಿ ನಮಾಜ್‌ಗೆ ಆದ್ಯತೆ
ರಂಜಾನ್ ತಿಂಗಳಿನಲ್ಲಿ ಸದಾ ಅಲ್ಲಾನ ಸ್ಮರಿಸುತ್ತಿರಬೇಕು. ದಿನಕ್ಕೆ 5 ಬಾರಿ ನಮಾಜ್ ಮಾಡಿದರೆ ಒಳ್ಳೆಯದು. ಈ ತಿಂಗಳಿನಲ್ಲಿ ಯಾವುದೇ ಕೆಟ್ಟ ಕೆಲಸ ಮಾಡಬಾರದು, ಯಾರಿಗೂ ಮೋಸ ಮಾಡಬಾರದು.
ಅನಾವಶ್ಯಕವಾಗಿ ಉಪವಾಸ ಮುಡಿಯಬಾರದು
ರಂಜಾನ್ ತಿಂಗಳಿನಲ್ಲಿ 30 ದಿನ ಉಪವಾಸ ಮಾಡಬೇಕು. ಬೆಳಗ್ಗೆ ಉಪವಾಸ ನಿಯಮ ಕೈಗೊಂಡರೆ ಸುಮ್ಮನೆ ಮುರಿಯುವಂತಿಲ್ಲ, ಸಂಜೆ ಸೂರ್ಯಾಸ್ತವರೆಗೆ ನೀರು ಕೂಡ ಕುಡಿಯದೆ ಉಪವಾಸ ಪಾಲಿಸಬೇಕು.



Click it and Unblock the Notifications

