Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ರಾಖಿಯನ್ನು ಈ ಶುಭ ಮುಹೂರ್ತ ಬಿಟ್ಟರೆ ಬೇರೆ ಯಾವುದೇ ಸಮಯದಲ್ಲಿ ಕಟ್ಟಬೇಡಿ
ಸಹೋದರ- ಸಹೋದರಿಯರ ನಡುವಿನ ಪವಿತ್ರ ಬಾಂಧವ್ಯವನ್ನು ಸಾರುವ ಅಚರಣೆಯೇ ರಕ್ಷಾ ಬಂಧನ. ರಕ್ಷಾ ಬಂಧನ ದಿದದಂದು ತಮ್ಮ ಪ್ರೀತಿ ಅಣ್ಣ-ತಮ್ಮಂದಿರಿಗೆ ರಾಖಿ ಕಟ್ಟಿ ಸಂಭ್ರಮಿಸಲು ತಂಗಿಯರು ಈಗಾಗಲೇ ಶಾಪಿಂಗ್‌ಗಳಲ್ಲಿ ಬ್ಯುಸಿಯಾಗಿರುತ್ತಾರೆ. ರಕ್ಷಾ ಬಂಧನ ದಿನದಂದು ರಾಖಿ ಕಟ್ಟಲು ಶುಭ ಮುಹೂರ್ತ ಎಂಬುವುದಿದೆ, ಹೀಗಾಗಿ ಆ ಶುಭ ಮುಹೂರ್ತದಲ್ಲಿಷ್ಟೇ ರಾಖಿಯನ್ನು ಕಟ್ಟಿ, ನಿಮ್ಮ ಸಹೋದರನಿಗೆ ಶ್ರೇಯಸ್ಸು ಉಂಟಾಗುವುದು.
ರಾಖಿ ಹಬ್ಬದಂದು ರಾಖಿ ಕಟ್ಟಲು ಶುಭ ಮುಹೂರ್ತ ಯಾವಾಗ, ಈ ದಿನ ಆಚರಣೆಗಳೇನು ಎಂದು ನೋಡೋಣ ಬನ್ನಿ:

ರಕ್ಷಾಬಂಧನ 2024
ಈ ಸಾಲಿನಲ್ಲಿ ನಾವು ರಕ್ಷಾ ಬಂಧನವನ್ನು ಹಬ್ಬವನ್ನು ಆಗಸ್ಟ್ 19ರಂದು ಆಚರಿಸುತ್ತಿದ್ದೇವೆ.
ಸಹೋದರನ ಕೈಗೆ ರಾಖಿ ಕಟ್ಟಲು ಶುಭ ಮುಹೂರ್ತ
ಮಧ್ಯಾಹ್ನ 1 ಗಂಟೆ 34 ನಿಮಿಷ 40 ಸೆಕೆಂಡ್‌ನಿಂದ ರಾತ್ರಿ 9 ಗಂಟೆ ಏಳು ನಿಮಿಷ, 24 ಸೆಕೆಂಡ್‌ವರೆಗೆ ಸಮಯವಿದೆ.
ಹೆಚ್ಚಿನವರು ಪ್ರದೋಷ ಮುಹೂರ್ತದಲ್ಲಿ ರಕ್ಷಾ ಬಂಧನ ಆಚರಿಸುತ್ತಾರೆ, ಪ್ರದೋಷ ಮುಹೂರ್ತ:
ಸಂಜೆ 6 ಗಂಟೆ 56 ನಿಮಿಷ 6 ಸೆಕೆಂಡ್‌ನಿಂದ ಶುರುವಾರ ರಾತ್ರಿ 9 ಗಂಟೆ 7 ನಿಮಿಷ, 24 ಸೆಕೆಂಡ್‌ವರೆಗೆ ಇದೆ.
ರಕ್ಷಾ ಬಂಧನ ಸಮಯದಲ್ಲಿ ಪಾಲಿಸಬೇಕಾದ ಆಚರಣೆಗಳು
ರಕ್ಷಾ ಬಂಧನ ದಿನದಂದು ಸಹೋದರ-ಸಹೋದರಿ ಬೇಗ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಬೇಕು,
ಇನ್ನು ರಾಖಿ ಕಟ್ಟುವಾಗ ಸಹೋದರನು ಪೂರ್ವಕ್ಕೆ ಅಥವಾ ಉತ್ತರಕ್ಕೆ ಮುಖಮಾಡಿ ಕೂತಿರಬೇಕು, ಸಹೋದರಿ ಸಹೋದರನಿಗೆ ಆರತಿ ಎತ್ತಿ ಕುಂಕುಮ ಹಚ್ಚಿ ನಂತರ ರಾಖಿ ಕಟ್ಟುತ್ತಾಳೆ, ಸಹೋದರನು ತನ್ನ ಕೈಯಲ್ಲಿದ್ದ ಉಡುಗೊರೆ ಜೊತೆ ಸ್ವಲ್ಪ ಅಕ್ಷತೆ ಹಾಕಿ ಸಹೋದರಿಗೆ ನೀಡಬೇಕು.
ಸಹೋದರಿ ಸಹೋದರನ ಕೈಗೆ ಮೂರು ಗಂಟು ಕಟ್ಟಬೇಕು.
ಸಹೋದರಿ ಹಿರಿಯಳಾದರೆ ಸಹೋದರ ಅವಳ ಪಾದ ಮುಟ್ಟಿ ನಮಸ್ಕರಿಸಬೇಕು.
ರಕ್ಷಾ ಸೂತ್ರ ಕೇಸರಿ ಬಣ್ಣದಲ್ಲಿದ್ದರೆ ಒಳ್ಳೆಯದು
ಅವಳಿಗೆ ಸದಾ ರಕ್ಷಣೆ ನೀಡುತ್ತೇನೆ, ಎಂಥದ್ದೇ ಸಂದರ್ಭದಲ್ಲಿಯೂ ಸಹೋದರನಾಗಿ ನಾನು ನಿನ್ನನ್ನು ರಕ್ಷಿಸುತ್ತೇನೆ ಎಂದು ಭರವಸೆ ನೀಡಬೇಕು.
ಸಹೋದರನ ಹಣೆಗೆ ತಿಲಕವಿಡುವುದಕ್ಕೂ ಶಾಸ್ತ್ರವಿದೆ
ಸಹೋದರಿ ಹಿರಿಯ ಸಹೋದರನಿಗೆ ತಿಲಕ ಹಾಕುವುದಾದರೆ ಬಲಗೈಯ ಉಂಗುರ ಬೆಳಿನಿಂದ ತಿಲುಕ ಹಾಕಬೇಕು. ಅಲ್ಲದೆ ತಿಲಕ ಇಡುವಾಗ ಸರಿಯಾಗಿ ಇಡಬೇಕು, ವಕ್ರವಾಗಿ ಇಡಬಾರದು.
ಇನ್ನು ಎಡಗೈ ಬಳಕೆದಾರರು ಆದರೂ ಕೂಡ ತಿಲಕವನ್ನು ಎಡಗೈಯಿಂದ ಇಡಬಾರದು
ಯಾವ ಸಮಯದಲ್ಲಿ ರಾಖಿಕಟ್ಟಬಾರದು?
ರಾಹುಕಾಲ, ಭದ್ರಕಾಲದ ಸಮಯದಲ್ಲಿ ರಾಖಿ ಕಟ್ಟಬಾರದು. ರಾಖಿ ಕಟ್ಟಲು ಇರುವ ಶುಭ ಮುಹೂರ್ತದಲ್ಲಿ ಮಾತ್ರ ರಾಖಿ ಕಟ್ಟಬೇಕು.
ಮದುವೆಯಾದ ಹೆಣ್ಮಕ್ಕಳಿಗೆ ಸಡಗರ
ಮದುವೆಯಾದ ಹೆಣ್ಮಕ್ಕಳು ರಾಖಿ ಕಟ್ಟಲೆಂದೇ ತವರು ಮನೆಗ ಬರುತ್ತಾರೆ. ಹಾಸ್ಟೆಲ್‌ನಲ್ಲಿ ಇರುವ ಸಹೋದರಿಯರು ಅಣ್ಣನನ್ನು ಮಾತನಾಡಿಸಿ ರಾಖಿ ಕಟ್ಟಿ ಹೋಗಲು ಬರುತ್ತಾರೆ.
ಉಡುಗೊರೆಯೂ ಅಷ್ಟೇ ವಿಶೇಷ
ಇನ್ನು ಈ ದಿನ ತಂಗಿ ರಾಖಿ ಕಟ್ಟಿದಾಗ ಅಣ್ಣ ತಂಗಿಗೆ ಕೆಲ ಉಡುಗೊರೆ ಕೂಡ ವಿಶೇಷವಾಗಿರುತ್ತದೆ, ಅದು ಬರಿ ವಸ್ತುವಾಗಿರದೆ, ಅದು ಭಾವನೆಯಾಗಿರುತ್ತದೆ, ರಕ್ಷಾ ಬಂಧನದ ಶುಭಾಶಯಗಳು.



Click it and Unblock the Notifications
